ವಿಷಯಕ್ಕೆ ಹೋಗು

ಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಡಲವು (ಅಕ್ಷರಶಃ "ವರ್ತುಲ") ಭಾರತೀಯ ಧರ್ಮಗಳಾದ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಬ್ರಹ್ಮಾಂಡವನ್ನು ಪ್ರತಿನಿಧಿಸುವ ಆಧ್ಯಾತ್ಮಿಕ ಹಾಗೂ ಧರ್ಮಾಚರಣೆಯ ಸಂಕೇತವಾಗಿದೆ. ಸಾಮಾನ್ಯ ಬಳಕೆಯಲ್ಲಿ, "ಮಂಡಲ" ಶಬ್ದವು ತತ್ತ್ವ ಮೀಮಾಂಸಕದ ರೀತಿಯಲ್ಲಿ ಅಥವಾ ಸಾಂಕೇತಿಕವಾಗಿ ಅಂತರಿಕ್ಷವನ್ನು ಪ್ರತಿನಿಧಿಸುವ ಯಾವುದೇ ರೇಖಾಚಿತ್ರ, ನಕ್ಷೆ ಅಥವಾ ಜ್ಯಾಮಿತೀಯ ವಿನ್ಯಾಸಕ್ಕೆ ಜಾತಿವಿಶಿಷ್ಟವಾದ ಪದವಾಗಿದೆ; ಅಂದರೆ ಬ್ರಹ್ಮಾಂಡದ ಅಣುರೂಪ.

ಕೇಂದ್ರಬಿಂದುವಿನೊಂದಿಗೆ ಒಂದು ವರ್ತುಲವನ್ನು ಹೊಂದಿರುವ ನಾಲ್ಕು ದ್ವಾರಗಳಿರುವ ಚೌಕವು ಬಹುತೇಕ ಮಂಡಲಗಳ ಮೂಲ ರೂಪವಾಗಿದೆ. ಪ್ರತಿ ದ್ವಾರವು ಆಂಗ್ಲ ಟಿ ಅಕ್ಷರದ ಸಾಮಾನ್ಯ ಆಕಾರದಲ್ಲಿರುತ್ತದೆ.[] ಹಲವುವೇಳೆ ಮಂಡಲಗಳು ತ್ರಿಜ್ಯೀಯ ಸಮತೋಲನವನ್ನು ಹೊಂದಿರುತ್ತವೆ.

ಋಗ್ವೇದದಲ್ಲಿ ಈ ಪದವು ಕೃತಿಯ ವಿಭಾಗಗಳ ಹೆಸರಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಇಂದಿನವರೆಗೂ ವೈದಿಕ ಕ್ರಿಯಾವಿಧಿಗಳು ನವಗ್ರಹ ಮಂಡಲದಂತಹ ಮಂಡಲಗಳನ್ನು ಬಳಸುತ್ತವೆ. ಮಂಡಲಗಳನ್ನು ಬೌದ್ಧ ಧರ್ಮದಲ್ಲಿಯೂ ಬಳಸಲಾಗುತ್ತದೆ.

Mandala of Vishnu

ಉಲ್ಲೇಖಗಳು

[ಬದಲಾಯಿಸಿ]
  1. "Kheper,The Buddhist Mandala – Sacred Geometry and Art". Archived from the original on 2011-05-14. Retrieved 2019-05-29.
"https://kn.wikipedia.org/w/index.php?title=ಮಂಡಲ&oldid=1064757" ಇಂದ ಪಡೆಯಲ್ಪಟ್ಟಿದೆ