ಮಂಡಗಳಲೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಇದು ಶಿವಮೊಗ್ಗ ಜಿಲ್ಲೆಸಾಗರ ತಾಲ್ಲೂಕಿನ ಒಂದು ಪುಟ್ಟ ಹಳ್ಳಿ. 'ಉಳುವವನೆ ಹೊಲದೊಡೆಯ ನೀತಿ 'ಜಾರಿ ಬರಲು ಕಾರಣವಾದ ಕಾಗೂಡು ಸತ್ಯಾಗ್ರಹ ದಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಊರಿನ ಹಿರಿಯರು ಸ್ವಾತಂತ್ರ ಹೋರಾಟದಲ್ಲೂ ಸಕ್ರಯರಾಗಿದ್ದರೆಂದು ಇತಿಹಾಸದ ಪುಟಗಳಿಂದ ತಿಳಿದು ಬಂದಿದೆ.ಜೋಗಕ್ಕೆ ಇಲ್ಲಿಂದ ಹತ್ತಿರ , ಸುಮಾರು ೧೨ ಕಿ.ಮಿ ಆಗುತ್ತದೆ. ಇಲ್ಲಿ ದೀವರು ಜನಾಂಗದ ಈಡಿಗ ಸಮಾಜದವರೆ ಅಧಿಕವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮುಂದಿದೆ. ಸುಶಿಕ್ಷಿತರ ಗ್ರಾಮವಾಗಿದೆ. ವರದಾ ನದಿ ಕನ್ನೆಹೊಳೆ, ಇಲ್ಲಿ ಹರಿಯುತ್ತದೆ. ಬೆಂಗಳೂರು -ತಾಳಗುಪ್ಪ ರೈಲು ಈ ಊರಿನ ಮೂಲಕವೇ ಸಾಗುತ್ತದೆ. ಶಿಕ್ಷಕರು ಈ ಊರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ನೌಕರರ ಸಂಖ್ಯೆ ಅಧಿಕವಾಗಿದ್ದು ಮುಂದುವರಿದ ಹಳ್ಳಿಯಾಗಿದೆ. ಬಸ್ ಸೌಲಬ್ಯವಿದ್ದು ಜುಲೈ, ಆಗಷ್ಟ ನಲ್ಲಿ ಇಲ್ಲಿ ವರದಾ ನದಿ ಉಕ್ಕಿ ಹರಿದು ನೆರೆ ತರುತ್ತಾ ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತದೆ. ಈ ಬಗ್ಗೆ ಸರಕಾರಗಳು ಹೆಚ್ಚಿನ ಗಮನ ಹರಿಸಿಲ್ಲ. .ಮಾರಿಕಾಂಬ ಜಾತ್ರೆಯು ಐದು ವರುಷಕೊಮ್ಮೆ ಸಡಗರ ಸಂಭ್ರಮದಿಂದ ನಡೆಯುತ್ತದೆ.

"https://kn.wikipedia.org/w/index.php?title=ಮಂಡಗಳಲೆ&oldid=637796" ಇಂದ ಪಡೆಯಲ್ಪಟ್ಟಿದೆ