ಮಂಗೇಶ್ ಕೇಶವ ಪಡ್ನಾಂವ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಗೇಶ್ ಕೇಶವ ಪಡ್ನಾಂವ್ಕರ್
मंगेश पाडगावकर
Born(೧೯೨೯-೦೩-೧೦)೧೦ ಮಾರ್ಚ್ ೧೯೨೯
Died30 December 2015(2015-12-30) (aged 86)
Cause of deathಕಾರ್ಡಿಯಾಕ್ ಅರೆಸ್ಟ್(ಸ್ಟ್ರೋಕ್)
Nationalityಭಾರತೀಯ
Occupation(s)ಮರಾಠಿ ಕವಿತೆಗಳು, ಲೇಖಕ
Awardsಪದ್ಮ ಭೂಷಣ – ೨೦೧೩, ಮಹಾರಾಷ್ಟ್ರ ಭೂಷಣ – ೨೦೦೮, ಸಾಹಿತ್ಯ ಅಕಾಡೆಮಿ ಪ್ರಶಸ್ತಿ– ೧೯೮೦, ಎಂ.ಪಿ ಸಾಹಿತ್ಯ ಪ್ರಶಸ್ತಿ – ೧೯೫೬, ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ – '೫೩/'೫೫

ಮಂಗೇಶ್ ಕೇಶವ ಪಡ್ನಾಂವ್ಕರ್ [೧](ದೇವನಾಗರಿ: मंगेश केशव पाडगांवकर; ೧೦ ಮಾರ್ಚ್ ೧೯೨೯ – ೩೦ ಡಿಸೆಂಬರ್ ೨೦೧೫) ಮಹಾರಾಷ್ಟ್ರ ಮರಾಠಿ ಲೇಖಕರಾಗಿದ್ದರು.[೨]

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ಮಂಗೇಶ್ ಪಡ್ನಾಂವ್ಕರ್ ೧೯೨೯ ಮಾರ್ಚ್ ೧೦ ರಂದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾದಲ್ಲಿ ಜನಿಸಿದ್ದರು. ಕಾಲೇಜಿನ ವಿದ್ಯಾಭ್ಯಾಸದ ಸಮಯದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಂಗೇಶ್, ಮುಂಬಯಿ ವಿಶ್ವವಿದ್ಯಾಲಯದಿಂದ ಮರಾಠಿ ಹಾಗೂ ಸಂಸ್ಕೃತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.

 1. ಸ್ವಲ್ಪ ಸಮಯ, ಮುಂಬಯಿನಗರದ ಮಾಟುಂಗಾ ಜಿಲ್ಲೆಯ ರುಯಾಕಾಲೇಜಿನಲ್ಲಿ ಅಧ್ಯಾಪಕರಾಗಿ ದುಡಿದರು.
 2. ಪುಣೆನಗರದ ಸಾಧನ ಎಂಬ ವಾರ ಪತ್ರಿಕೆಯ ಜಂಟಿ ಸಂಪಾದಕರಾಗಿ ೧೯೫೩-೧೯೫೫ ರವರೆಗೆ,
 3. ಮುಂಬಯಿ ಆಕಾಶವಾಣಿ ನಿಲಯದಲ್ಲಿ ೧೯೬೪-೭೦ ಕಾರ್ಯಕ್ರಮ ನಿರ್ಮಾಪಕರಾಗಿ,
 4. ೧೯೮೯ ರಲ್ಲಿ ಸೇವಾನಿವೃತ್ತರಾಗುವವರೆಗೆ ಭಾರತದಲ್ಲಿ ಅಮೆರಿಕ ದೇಶದ ಮಾಹಿತಿ ಸೇವೆಯಲ್ಲಿ(USIS)ಕಲಸಮಾಡಿದರು.

ಪಡ್ಗಾಂಕರ್ ಪ್ರೇಮಗೀತೆಗಳ ರಚನೆಗೆ ಪ್ರಸಿದ್ಧರು. ೧೯೬೦-೭೦ ರಲ್ಲಿ ವಿಂದಾ ಕರಂಡೀಕರ್, ವಸಂತ್ ಬಾಪಟ್ ರೊಂದಿಗೆ ಸೇರಿ, ಮರಾಠಿ ಭಾಷೆಯಲ್ಲಿ ಕವನಗಳನ್ನು ಪ್ರಸಿದ್ಧಿಪಡಿಸಲು ಮರಾಠಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಒಟ್ಟಾರೆ, ಮಂಗೇಶ್ ರವರ ೪೦ ಕೃತಿಗಳು ಪ್ರಕಟವಾಗಿವೆ. ಅದರಲ್ಲಿ ಅಮೆರಿಕದ ಲೈಬ್ರೆರಿ ಆಫ್ ಕಾಂಗ್ರೆಸ್, ೩೧ ಪ್ರಕಟಣೆಗಳನ್ನು ವಹಿಸಿಕೊಂಡಿದೆ.

ಕೃತಿ ರಚನೆ[ಬದಲಾಯಿಸಿ]

ಮಂಗೇಶ್, ಶೋಧ್ ಕವಿತೇಚಾ ಮೊದಲಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಸಾಹಿತ್ಯ ಮತ್ತು ಕೃತಿಗಳು ಹಲವಾರು ಯುವ ಲೇಖಕರಿಗೆ ಪ್ರಭಾವ ಬೀರಿತ್ತು. ೨೦೦೮ ರಲ್ಲಿ 'ದ ನ್ಯೂ ಟೆಸ್ಟಮೆಂಟ್' ಎಂಬ ಬೈಬಲ್ ಅನುವಾದ ಕೃತಿರಚನೆ ಮಾಡಿದ್ದಾರೆ.

 • ಧರನೃತ್ಯ (೧೯೫೦)
 • ಷರ್ಮಿಷ್ಟ (೧೯೬೦)
 • ಕಾವ್ಯ ಸದರ್ಶನ್ (೧೯೬೨)
 • ಜಿಪ್ಸಿ (೧೯೯೪)
 • ಚೋರಿ,
 • ಉತ್ಸವ್, (೧೯೬೨)
 • ಸಲಾಂ (೧೯೮೦)
 • ತುಝ ಗೀತ ಗಾನ್ಯಾಸಾಠಿ (೧೯೮೯)
 • ನವ ದಿವಸ್ (೧೯೯೩)
 • ಸುತ್ತಿ ಏಕಾ ಸುತ್ತಿ (೧೯೯೩)
 • ತ್ರಿವೇಣಿ (೧೯೯೫)
 • ವಿದೂಶಕ್ (೧೯೯೯)
 • ಸಲಾಮ್,
 • ಗಝಾಲ (೧೯೮೧,
 • ಭಟ್ಕೆ ಪಕ್ಷಿ (೧೯೮೪)
 • ಬೋಲ್ ಗಾನಿ,(೧೯೯೦)[೩]

”’ಮರಾಠಿಭಾಷೆಗ ತರ್ಜುಮೆ ಕೆಲಸ,

 • ಮೀರಾ, (೧೯೯೫)
 • ಉದಾಸಬೋಧ್ (೧೯೯೬)
 • ಕಬೀರ (೧೯೯೭)
 • ಸೂರ್ದಾಸ್ (೧೯೯೯)
 • ತುಳಸಿದಾಸ್
 • ಬೈಬಲ್
 • ಕವಿತ ಮನಸಾಂಚ್ಯ, ಮನಸಾಸಾಠಿ (೧೯೯೯)
 • ಮೋರು (೧೯೯೯)
 • ವತ್ರತಿಕ (೧೯೯೯)
 • ರಾಧ (೨೦೦೦)

ಮಕ್ಕಳಿಗಾಗಿ ಬರೆದ ಪದ್ಯದ ಪುಸ್ತಕಗಳು[ಬದಲಾಯಿಸಿ]

 • ಭೋಲಾನಾಥ್,
 • ಬಬಲ್ ಗಮ್,
 • ಚಂದೋಮಾಮ

ಶೇಕ್ಸ್ ಪಿಯರ್ ಮಹಾಕವಿಯ ಇಂಗ್ಲೀಷ್ ನಾಟಕಗಳನ್ನು ಮರಾಠಿಭಾಷೆಗೆ[ಬದಲಾಯಿಸಿ]

 1. ದ ಟೆಂಪೆಸ್ಟ್,
 2. ಜೂಲಿಯಸ್ ಸೀಸರ್,
 3. ರೋಮಿಯೋ ಅಂಡ್ ಜ್ಯೂಲಿಯೆಟ್

ಮರಾಠಿ ಚಲನಚಿತ್ರಗಳಿಗೆ ಚಿತ್ರಗೀತೆಗಳನ್ನು ಬರೆದಿದ್ದಾರೆ[ಬದಲಾಯಿಸಿ]

 1. ಅರುಣ್ ದಾತೆ ಹಾಡಿದ 'ಯಾಜನ್ಮಾವಾರ್ ಯಾಜಗನ್ಯಾವರ್ ಪ್ರೇಮ್ ಕರಾವೆ',
 2. 'ಭಾತುಕಲೀಛ್ಯಾ ಖೇಳಾ ಮಧ್ ಲೇ ರಾಜಾ ಆಣಿ ರಾಣಿ',
 3. 'ಶುಕ್ರ ತಾರಾ ಮಂದ್ ವಾರಾ', ಮೊದಲಾದ ಜನಪ್ರಿಯ ಗೀತೆ ರಚಿಸಿದ್ದರು.

ಪುಣೆ ವಿಶ್ವವಿದ್ಯಾಲಯದ ಧ್ಯೇಯ ಗೀತೆ[ಬದಲಾಯಿಸಿ]

 • ೧೯೮೩-೮೪ ರಲ್ಲಿ ಪುಣೆ ವಿಶ್ವವಿದ್ಯಾಲಯದ ಧ್ಯೇಯಗೀತೆ,'ಪುಣ್ಯಮಯೀ ದೇ ಅಮ್ಹಾಳಾ ಅಕ್ಷರ್ ವರದಾನ್', ಭಾಸ್ಕರ್ ಚಂದಾವರ್ಕರ್ ಸಂಗೀತ ನಿರ್ದೇಶದೊಂದಿಗೆ ದ್ವನಿಮುದ್ರಿಸಲಾಯಿತು.

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

 • ೧೯೫೩ ಮತ್ತು ೧೯೫೫ ರಲ್ಲಿ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ.
 • ೧೯೫೬ ರಲ್ಲಿ ಮಧ್ಯಪ್ರದೇಶ್ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ
 • ೧೯೬೫ ರಲ್ಲಿ ಮೀರಾಬಾಯಿಯವರ ಗೀತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ; ಮತ್ತು ಸಂತ ಕಬೀರ್, ಹಾಗೂ ಸಂತ ಸೂರ್ದಾಸರ ಕೃತಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ.
 • ೧೯೮೦ ರಲ್ಲಿ, ಸಲಾಮ್ ಎಂಬ ಕವಿತಾ ಸಂಕಲನಕ್ಕೆ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ
 • ೨೦೦೮ ರಲ್ಲಿ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ವಿಜೇತರು.
 • ೨೦೧೦ ರಲ್ಲಿ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಲವು ದುಬಾಯ್ ನಲ್ಲಿ ಆಯೋಜಿಸಿದ್ದ ನೇ ವಿಶ್ವಮರಾಠಿ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
 • ೨೦೧೨ ರಲ್ಲಿ ಪಡ್ನಾಂವ್ಕರ್ ರಿಗೆ ಪುಣೆ ವಿಶ್ವವಿದ್ಯಾಲಯ ಜೀವನ್ ಸಾಧನಾ ಪುರಸ್ಕಾರ ನೀಡಿ ಗೌರವಿಸಿತ್ತು.[೪]
 • ಪದ್ಮ ಭೂಷಣ ಪುರಸ್ಕೃತರು.[೫]

ಪರಿವಾರ[ಬದಲಾಯಿಸಿ]

ಮಂಗೇಶ್ ಕೇಶವ ಪಡ್ನಾಂವ್ಕರ್, ರು, ಯಶೋದ ಪಡ್ಗಾಂವ್ಕರ್ ರನ್ನು ಲಗ್ನವಾದರು. ಈ ದಂಪತಿಗಳಿಗೆ ೩ ಜನ ಮಕ್ಕಳು. ಡಾ.ಅಜಿತ್ ಪಡ್ನಾಂವ್ಕರ್, ಅಭಯ್ ಪಡ್ನಾಂವ್ಕರ್, ಹಾಗೂ ಅಂಜಲಿ ಕುಲಕರ್ಣಿ.

ನಿಧನ[ಬದಲಾಯಿಸಿ]

೮೬ ವರ್ಷ ವಯಸ್ಸಿನ ಮಂಗೇಶ್ ಪಂಡ್ನಾಂವ್ಕರ್ [೬] ೨೦೧೫ ರ, ೩೦, ಡಿಸೆಂಬರ್, ಬುಧವಾರ, ಮುಂಬಯಿನಲ್ಲಿ ನಿಧನರಾಗಿದ್ದಾರೆ. ಆವರು ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು.

ಉಲ್ಲೇಖಗಳು[ಬದಲಾಯಿಸಿ]

 1. Biography of Mangesh Padgaonkar Poem Hunter.com
 2. "Veteran Marathi poet and Padma award recipient Mangesh Padgaonkar passes away". The Indian Express. Retrieved 31 ಡಿಸೆಂಬರ್ 2015.
 3. http://lcweb2.loc.gov/mbrs/master/salrp/00813.mp3 ಮಂಗೇಶ್ ಪಡ್ಗಾಂವ್ಕರ್ ಸ್ವತಃ ಹಾಡಿದ ಧ್ವನಿಮುದ್ರಿತ ಗೀತೆ.
 4. http://www.loksatta.com/pune-news/senior-poet-mangesh-padgaonkar-honoured-by-ma-sa-pa-reward-119987/
 5. "Padma Awards Directory (1954–2013)" (PDF). Ministry of Home Affairs (India). Archived from [http://mha.nic.in/sites/upload_files/mha/files/LST-PDAWD-2013.pdf the original (PDF) on 2015-10-15. Retrieved 2015-12-31. 2013: 14: Shri Mangesh Padgaonkar {{cite web}}: External link in |publisher= (help); Text "Ministry of Home Affairs]" ignored (help)
 6. Marathi poet Mangesh Padgaonkar passes away, The Hindu news paper, December 30, 2015

ಇತರೆ[ಬದಲಾಯಿಸಿ]

 1. ಕರ್ನಾಟಕ ಮಲ್ಲ, ಮುಂಬಯಿ, ೨೦೧೫, ಡಿಸೆಂಬರ್, ೩೧, ಪ್ರಸಿದ್ಧ ಮರಾಠಿ ಕವಿ, ಮಂಗೇಶ್ ಪಡ್ಗಾಂಕರ್ ಇನ್ನಿಲ್ಲ. ಪುಟ : ೧ ಮತ್ತು ೨