ಮಂಗೇರಿರ ಚಿನ್ನಪ್ಪ ಮುತ್ತಣ್ಣ
ಎಂ. ಸಿ. ಮುತ್ತಣ್ಣ ಶೌರ್ಯ ಚಕ್ರ | |
---|---|
ಜನನ | ೨೧ ಏಪ್ರಿಲ್ ೧೯೬೪ ಚೆಟ್ಟಿಮನಿ, ಭಾಗಮಂಡಲ, ಕೊಡಗು ಜಿಲ್ಲೆ, ಕರ್ನಾಟಕ |
ಮರಣ | ೧೨ ಜನವರಿ ೨೦೦೦ (೩೫ರ ವಯಸ್ಸು) ಅನಂತ್ನಾಗ್, ಜಮ್ಮು ಮತ್ತು ಕಾಶ್ಮೀರ |
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಭಾರತೀಯ ಸೇನೆ |
ಶ್ರೇಣಿ(ದರ್ಜೆ) | ಮೇಜರ್ |
ಮೇಜರ್ ಮಂಗೇರಿರ ಚಿನ್ನಪ್ಪ ಮುತ್ತಣ್ಣ ಭಾರತದ ಓರ್ವ ಯುದ್ಧ ವೀರ.
ಆರಂಭಿಕ ಜೀವನ
[ಬದಲಾಯಿಸಿ]ಮಂಗೇರಿರ ಚಿನ್ನಪ್ಪ ಮುತ್ತಣ್ಣ ಅವರು ೨೧ ಏಪ್ರಿಲ್ ೧೯೬೪ ರಲ್ಲಿ ಕೊಡಗು ಜಿಲ್ಲೆಯ ( ಭಾಗಮಂಡಲದ ಬಳಿ) ಚೆಟ್ಟಿಮನಿ ಗ್ರಾಮದಲ್ಲಿ ಜನಿಸಿದರು.
ಸೇನಾ ಸೇವೆ
[ಬದಲಾಯಿಸಿ]ಅವರು ಅಕ್ಟೋಬರ್ ೧೯೮೪ ರಲ್ಲಿ ಚೆನ್ನೈನ ಒಟಿಎಗೆ ಸೇರಿದರು ಮತ್ತು ೨೪ ಅಕ್ಟೋಬರ್ ೧೯೮೫ ರಲ್ಲಿ ೫ ನೇ ಬೆಟಾಲಿಯನ್ ದಿ ಸಿಖ್ ಲೈಟ್ ಇನ್‌ಫಾಂಟ್ರಿಗೆ ನಿಯೋಜಿಸಲ್ಪಟ್ಟರು. ಅವರು ೫ ಸಿಖ್ ಲೈಟ್ ಇನ್‌ಫಾಂಟ್ರಿ-ಎಚ್‌ಕ್ಯೂ - ೧ ಸೆಕ್ಟರ್ ರಾಷ್ಟ್ರೀಯ ರೈಫಲ್ಸ್‌ಗೆ ಸೇವೆ ಸಲ್ಲಿಸಿದರು. ಅವರು ೧೨ ಜನವರಿ ೨೦೦೦ ರಲ್ಲಿ, ತಮ್ಮ ೩೬ ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವಾಗ ಮೃತರಾದರು.
ಮರಣೋತ್ತರ ಗೌರವ
[ಬದಲಾಯಿಸಿ]ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. [೧] ಅವರ ಸ್ಮರಣಾರ್ಥ ಮಡಿಕೇರಿ ನಗರದ ಪುರಸಭೆಯ (ಸಿಎಂಸಿ) ಮುಂಭಾಗದಲ್ಲಿ ಹುತಾತ್ಮರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು ಮತ್ತು ಟೌನ್ ಹಾಲ್ ಮುಂಭಾಗದ ಪುರಸಭೆಯ ವೃತ್ತಕ್ಕೆ ೯ ಡಿಸೆಂಬರ್ ೨೦೧೦ ಗುರುವಾರದಂದು ಅವರ ಹೆಸರನ್ನು ಇಡಲಾಯಿತು. ಶಿಲ್ಪಿ ಮಂಜುನಾಥ ಆಚಾರ್ಯ ಅವರಿಂದ ೮ ಲಕ್ಷ ರೂ . ವೆಚ್ಚದಲ್ಲಿ ಈ ಮೂರ್ತಿಯನ್ನುಸೋಮವಾರಪೇಟೆಯ ಬೀಟಿಕಟ್ಟೆಯಲ್ಲಿ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಯಿತು. ಆನಂತರದಲ್ಲಿ, ಯೋಧನನ್ನು ನೇಮಿಸಿದ ಅನಂತನಾಗ್ ಜಿಲ್ಲಾ ಕೇಂದ್ರದ ೧ ಸೆಕ್ಟರ್ ಆರ್‌ಆರ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದ ಪ್ರೌಢಶಾಲೆಯನ್ನು ಮುತ್ತಣ್ಣ ಆರ್ಮಿ ಸದ್ಭಾವನಾ ಶಾಲೆ ಎಂದು ಮುತ್ತಣ್ಣ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲಾಯಿತು.[೨] [೩] [೪]
ಉಲ್ಲೇಖಗಳು
[ಬದಲಾಯಿಸಿ]- ↑ "School and Road, in memory of a Martyr". Coorg.com. Retrieved 16 April 2014.
- ↑ "Brave heart's statue to be unveiled on Dec. 9". Coorg.com. Retrieved 16 April 2014.
- ↑ Dinesh, B C (20 December 2010). "Dedicated to nation's defence". Archived from the original on 17 April 2014. Retrieved 16 April 2014.
- ↑ Staff Correspondent (22 November 2010). "Statue to be installed for Muthanna". The Hindu. Archived from the original on 17 April 2014. Retrieved 16 April 2014.
{{cite news}}
:|last=
has generic name (help)