ಮಂಗಳೂರು ಹಂಚು
ಮಂಗಳೂರು ಹಂಚುಗಳು' ಕರ್ನಾಟಕದ ಮಂಗಳೂರಿನಲ್ಲಿ ತಯಾರಿಕೆಯಾಗುವ ಹಂಚಿನ ಒಂದು ವಿಧ. ಈ ಹಂಚುಗಳನ್ನು ಜರ್ಮನ್ ಮಿಷನರಿಗಳು ೧೮೬೫ರಲ್ಲಿ ಮೊದಲಿಗೆ ಪರಿಚಯಿಸಿದರು. ಮಂಗಳೂರು ಹಂಚುಗಳು ಸ್ಪ್ಯಾನಿಶ್ ಮತ್ತು ಇಟಾಲಿಯನ್ ವಾಸ್ತುಶೈಲಿಯ ಭಾಗವಾಗಿದೆ.[೧]
ವ್ಯುತ್ಪತ್ತಿ
[ಬದಲಾಯಿಸಿ]ಈ ಹಂಚುಗಳು ಭಾರತದ ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಕ್ಕೆ ಸೇರಿದವು. ಆದ್ದರಿಂದ ಅವುಗಳನ್ನು ಟೈಲ್ ಫ್ಯಾಕ್ಟರಿ ತಯಾರಕರು ಮಂಗಳೂರು ಹಂಚುಗಳೆಂದು ಹೆಸರಿಸಿದರು.
ಇತಿಹಾಸ
[ಬದಲಾಯಿಸಿ]೧೮೬೫ರಲ್ಲಿ ಬಾಸೆಲ್ ಮಿಷನ್ ಸಂಸ್ಥೆಯ ಜರ್ಮನ್ ಮಿಷನರಿ ಪ್ಲೆಬ್ಸ್ಟ್ ಮೊದಲ ಟೈಲ್ ಕಾರ್ಖಾನೆಯನ್ನು ಸ್ಥಾಪಿಸಿದರು. ಸ್ಥಳೀಯವಾಗಿ ಬಾಸೆಲ್ ಮಿಷನ್ ಟೈಲ್ ಫ್ಯಾಕ್ಟರಿ ಎಂದು ಉಲ್ಲೇಖಿಸಲಾಗುತ್ತದೆ.[೨] ಇದು ಭಾರತದ ಮೊದಲ ಟೈಲ್ ಫ್ಯಾಕ್ಟರಿಯಾಗಿದೆ. ಇದು ಮಂಗಳೂರಿನ ಮೋರ್ಗಾನ್ಸ್ ಗೇಟ್ ಬಳಿಯ ನೇತ್ರಾವತಿ ನದಿಯ ದಡದಲ್ಲಿದೆ. ಇದಕ್ಕೆ ಈಗ "ಕಾಮನ್ವೆಲ್ತ್ ಟ್ರಸ್ಟ್ ಲಿಮಿಟೆಡ್" ಎಂಬ ಹೆಸರಿದೆ. ಉಳ್ಳಾಲ ಸೇತುವೆಯಿಂದ ೧೦೦ಮೀ(೦.೧೦ ಕಿಮೀ) ದೂರದಲ್ಲಿದೆ. ಈ ಹಂಚುಗಳು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿನ ಸರ್ಕಾರಿ ಕಟ್ಟಡಗಳಿಗೆ ಶಿಫಾರಸು ಮಾಡುತ್ತಿದ್ದ ಏಕೈಕ ಹಂಚುಗಳು.[೩][೪] ವಿಶ್ವ ಪಾರಂಪರಿಕ ತಾಣವಾದ ಛತ್ರಪತಿ ಶಿವಾಜಿ ಟರ್ಮಿನಸ್ ಮಂಗಳೂರು ಹಂಚುಗಳನ್ನು ಹೊಂದಿದೆ. ಆಲ್ಬುಕರ್ಕ್ ಟೈಲ್ ಫ್ಯಾಕ್ಟರಿ ಪ್ರಾರಂಭವಾದ ನಂತರ ಮಂಗಳೂರಿಗರು ಮಂಗಳೂರು ಹಂಚುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಈ ಕಾರ್ಖಾನೆಯಲ್ಲಿ ಉತ್ಪಾದಿಸಿದ ಹಂಚುಗಳಿಗೆ ಭಾರತೀಯ ಉಪಖಂಡ ಮತ್ತು ಪೂರ್ವ ಆಫ್ರಿಕಾದಾದ್ಯಂತ ಹೆಚ್ಚಿನ ಬೇಡಿಕೆಯಿತ್ತು. ೧೯೦೦ರ ದಶಕದಲ್ಲಿ ಮಂಗಳೂರಿನಲ್ಲಿ ಸುಮಾರು ೨೫ಟೈಲ್ ಕಾರ್ಖಾನೆ ಆರಂಭಗೊಂಡವು. ೧೯೯೪ರರಲ್ಲಿ ೭೫ ಟೈಲ್ ಕಾರ್ಖಾನೆಗಳು ಮಂಗಳೂರಿನಲ್ಲಿದ್ದವು. ಈ ಹಂಚುಗಳ ಜೊತೆಗೆ ಕಾರ್ಖಾನೆಗಳು ಸುತ್ತುಗಳು, ಸುಣ್ಣಕಲ್ಲು ಮತ್ತು ಇಟ್ಟಿಗೆಗಳಂತಹ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು.
ಮಂಗಳೂರಿನ ಪ್ರಮುಖ ಟೈಲ್ ಕಾರ್ಖಾನೆಗಳು:
- ಬಾಸೆಲ್ ಮಿಷನ್ ಟೈಲ್ಸ್ (೧೮೬೫) ೧೯೧೪ ನಂತರ ಕಾಮನ್ವೆಲ್ತ್ ಟ್ರಸ್ಟ್ ಲಿಮಿಟೆಡ್
- ಆಲ್ಬುಕರ್ಕ್ ಮತ್ತು ಸನ್ಸ್ (೧೮೬೮)
- ಅಲ್ವಾರೆಸ್ ಟೈಲ್ ಫ್ಯಾಕ್ಟರಿ (೧೮೭೮)
- ಹ್ಯಾಮರ್ ಟೈಲ್ಸ್ (೧೮೮೯)
- ಹಮಿದ್ಯಾ ಟೈಲ್ (೧೯೦೫)
- ಕಿಂಗ್ ಜಾರ್ಜ್ ಟೈಲ್ಸ್ (೧೯೦೫)
- ಜೆ.ಹೆಚ್ ಮೊರ್ಗಾನ್ ಆಂಡ್ ಸನ್ಸ್
- ರೀಗೊ ಆಂಡ್ ಸನ್ಸ್
- ಬಿಕೆ ಟೈಲ್ಸ್
ತಯಾರಿಸುವ ವಿಧಾನ
[ಬದಲಾಯಿಸಿ]ಮಣ್ಣನ್ನು ಸಂಗ್ರಹಿಸಿದ ಬಳಿಕ ಒಂದು ಅಚ್ಚು ಇರಿಸಲಾಗುತ್ತದೆ ಮತ್ತು ಅದನ್ನು ನಿಖರವಾಗದ ಮಾಪನಕ್ಕೆ ಕತ್ತರಿಸಲಾಗುತ್ತದೆ. ಆಕಾರ ಹೊಂದಿರುವ ಮಣ್ಣಿನ ಭಾಗವನ್ನು ಕಾರ್ಖಾನೆಯ ಲೋಗೋ ಇರುವ ಮತ್ತೊಂದು ಯಂತ್ರದ ಮೇಲೆ ಇರಿಸಲಾಗುತ್ತದೆ. ಕೊನೆಗೆ ಆ ಯಂತ್ರವು ಅದನ್ನು ಟೈಲ್ ಆಗಿ ಆಕಾರಗೊಳಿಸುತ್ತದೆ.
ಗುಣಮಟ್ಟ ಮತ್ತು ಉಪಯೋಗ
[ಬದಲಾಯಿಸಿ]ಬೇಸಿಗೆಯಲ್ಲಿ ಈ ಹಂಚಗಳು ತಂಪಾಗಿರುತ್ತವೆ. ಇವುಗಳನ್ನು ಅಡುಗೆಕೋಣೆಗಳ ಛಾವಣಿಗೆ (ಹೊಗೆಯಿಂದ ತಪ್ಪಿಸಿಕೊಳ್ಳಲು) ಮತ್ತು ಸ್ನಾನಗೃಹಗಳಿಗೆ ಬಳಸುತ್ತಾರೆ. ಈ ಮಣ್ಣಿನ ಹಂಚುಗಳನ್ನು ತೀವ್ರ ಶಾಖದ ಅಡಿಯಲ್ಲಿ ಜೋಡಿಸಲಾಗಿರುವುದರಿಂದ, ಬೆಂಕಿಯ ಹಾನಿಯ ನಿಯಂತ್ರಣವನ್ನು ಬಮಾಡುತ್ತದೆ. ಜೇಡಿಮಣ್ಣಿನ ಹಂಚುಗಳು ಸಾಮಾನ್ಯವಾಗಿ ಬಿಳಿ, ಹಳದಿ, ಕಿತ್ತಳೆ ಅಥವಾ ಕಂದು ಬಣ್ಣದಲ್ಲಿರುತ್ತವೆ. ಈ ಹಂಚುಗಳನ್ನು ಆದ್ಯತೆಗೆ ತಕ್ಕಂತೆ ಶೈಲಿ ಹಾಗೂ ಬಣ್ಣಗಳಲ್ಲಿ ಬದಲಾಯಿಸಬಹುದು.ಮಣ್ಣಿನ ಹಂಚುಗಳು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಹಂಚುಗಳಲ್ಲಿರುವ ಇತರ ವಸ್ತುಗಳನ್ನು ಕೈಯಿಂದ ತೆಗೆದುಹಾಕಲಾಗುತ್ತದೆ. ಇದನ್ನು ಒಂದು ಗೂಡಿನಲ್ಲಿ ಜೇಡಿಮಣ್ಣಿನ ಹಂಚಿನ ಸಾಂದ್ರತೆ ಸಮಯ ಮತ್ತು ತಾಪಮಾನಕ್ಕೆ ಸರಿಯಾಗಿ ಬಿಸಿ ಮಾಡಲಾಗುತ್ತದೆ. .[೫]
ಉಲ್ಲೇಖಗಳು
[ಬದಲಾಯಿಸಿ]- ↑ https://books.google.co.in/books?id=k8j7tyiCAFkC&printsec=frontcover&redir_esc=y#v=onepage&q&f=false
- ↑ http://kanaja.in/?p=115640[ಶಾಶ್ವತವಾಗಿ ಮಡಿದ ಕೊಂಡಿ]
- ↑ https://books.google.co.in/books?id=k8j7tyiCAFkC&printsec=frontcover&redir_esc=y#v=onepage&q&f=false
- ↑ https://books.google.co.in/books?id=8WNEcgMr11kC&printsec=frontcover&redir_esc=y#v=onepage&q&f=false
- ↑ https://www.thehindu.com/features/homes-and-gardens/the-beauty-of-red-tiled-roofs/article2229930.ece