ಭೂಮಿಕಾ ಶೆಟ್ಟಿ

ವಿಕಿಪೀಡಿಯ ಇಂದ
Jump to navigation Jump to search
ಭೂಮಿಕಾ ಶೆಟ್ಟಿ
ಹುಟ್ಟು೧೯ ಫೆಬ್ರವರಿ ೧೯೯೮
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಭೂಮಿ ಶೆಟ್ಟಿ , ರಾಯಲ್ ಶೆಟ್ಟಿ
ಶಿಕ್ಷಣ
ವೃತ್ತಿನಟಿ, ಮಾಡೆಲ್
ಖ್ಯಾತಿಕಿನ್ನರಿ , ಬಿಗ್ ಬಾಸ್ ಸೀಸನ್ ೭
ಪೋಷಕರು(s)ಭಾಸ್ಕರ್ ಶೆಟ್ಟಿ(ತಂದೆ) , ಬೇಬಿ ಶೆಟ್ಟಿ (ತಾಯಿ)

ಭೂಮಿಕಾ ಶೆಟ್ಟಿ (ಭೂಮಿ ಶೆಟ್ಟಿ) , ಇವರು ಭಾರತೀಯ ಟೆಲಿವಿಷನ್ ನಟಿ, ಮಾಡೆಲ್ ಮತ್ತು ಡಿಸ್ಕ್ ಜಾಕಿ. ಇವರು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ೨೦೧೯ ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ -೭ ನಲ್ಲಿ ಭಾಗವಹಿಸಿದ್ದು ಟಾಪ್ ೫ ಫೈನಲಿಸ್ಟ್ ಗಳಲ್ಲಿ ಬಬ್ಬರಾಗಿದ್ದರೆ.[೧]

ಜನನ , ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಭೂಮಿ ಶೆಟ್ಟಿ ಇವರು ೧೯ ಫೆಬ್ರವರಿ ೧೯೯೮ ರಂದು ಕುಂದಾಪುರದಲ್ಲಿ ಭಾಸ್ಕರ್ ಮತ್ತು ಬೇಬಿ ಶೆಟ್ಟಿ ದಂಪತಿಗೆ ಜನಿಸಿದರು.[೨] ಇವರು ಕುಂದಾಪುರದಲ್ಲಿ ಹುಟ್ಟಿ ಬೆಳೆದುದರಿಂದ ಅಲ್ಲಿಂದಲೇ ಶಾಲಾ ಶಿಕ್ಷಣವನ್ನು ಪಡೆದರು . ಕುಂದಾಪುರದ ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜ್‌ನಿಂದ ಪ್ರೌಢ ಶಾಲಾ ಶಿಕ್ಷಣವನ್ನು ಪಡೆದ ನಂತರ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡು ಎ.ಎಂ.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪಡೆದರು .ಅಂತಿಮವಾಗಿ ಇವರು ೨೦೧೯ ರಲ್ಲಿ ಬಿ.ಟೆಕ್ ಪದವಿ ಪಡೆದರು.

ವೃತ್ತಿಜೀವನ[ಬದಲಾಯಿಸಿ]

ಬಾಲ್ಯದಿಂದಲೂ ಇವರು ಯಕ್ಷಗಾನ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರಿಂದ ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ನಿರ್ಧರಿಸಿದರು.[೩] ಇವರು ೨೦೧೮ ರಲ್ಲಿ ಕನ್ನಡ ಟೆಲಿವಿಷನ್ ಸರಣಿ ಕಿನ್ನರಿಯಲ್ಲಿ 'ಮಣಿ' ಪಾತ್ರಕ್ಕಾಗಿ ಆಡಿಷನ್ ನೀಡಿದರು. ಅವರ ಅಭಿನಯಕ್ಕಾಗಿ ಅವರು ಹೆಚ್ಚು ಮೆಚ್ಚುಗೆ ಪಡೆದರು . ನಂತರ ನಿನ್ನೆ ಪೆಳ್ಳಾಡತಾ ಎಂಬ ತೆಲುಗು ಧಾರವಾಹಿಯಲ್ಲಿ ನಟಿಸಿದರು. ಇವರು ಆಗಸ್ಟ್ ೨೦೧೮ ರಲ್ಲಿ ಈ ಪ್ರದರ್ಶನಕ್ಕೆ ಸೇರಿಕೊಂಡರು ಮತ್ತು ಅಕ್ಟೋಬರ್ ೨೦೧೯ ರವರೆಗೆ ಕೆಲಸ ಮಾಡಿದರು. ಅಭಿ ಪ್ರತಾಪ್, ಕ್ರಾಂತಿ ಬಲಿವಾಡಾ, ಸರಾಯು ಮತ್ತು ಅನುಶೌಮೇಶ್ ಹೆಗ್ಡೆ ಅವರೊಂದಿಗೆ ಇವರು ನಟಿಸಿದ್ದು , ೮ ತಿಂಗಳವರೆಗೆ ಈ ಧಾರವಾಹಿಯಲ್ಲಿ ನಟಿಸಿ ನಂತರ ತನ್ನ ಪಾತ್ರವನ್ನು ತೊರೆದರು ಮತ್ತು ಅವರ ಸ್ಥಾನವನ್ನು ನಟಿ ಮಧುಬಾಲಾ ಎಂಬವರು ವಹಿಸಿಕೊಂಡರು.[೪]
೨೦೧೯ ರಲ್ಲಿ, ಇವರು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ೭ ರಲ್ಲಿ ಭಾಗವಹಿಸಿ ಟಾಪ್ ೫ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು.

ನಟನಾ ಜೀವನ[ಬದಲಾಯಿಸಿ]

ಅಭಿನಯಿಸಿದ ಧಾರವಾಹಿಗಳು[ಬದಲಾಯಿಸಿ]

ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೮ ಕಿನ್ನರಿ ಮಣಿ(ನಾಯಕಿ) [೫]
೨೦೧೮ ನಿನ್ನೆ ಪೆಳ್ಳಾಡತಾ ಮೃದುಳಾ [೬]

ಅಭಿನಯಿಸಿದ ಚಲನಚಿತ್ರಗಳು[ಬದಲಾಯಿಸಿ]

ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೯ ಲಂಬೋದರ [೭]

ಗೌರವಗಳು[ಬದಲಾಯಿಸಿ]

  • ೨೦೧೮ ನೇ ಸಾಲಿನ ಹೈದರಬಾದ್ ಟೈಮ್ಸ್ ವತಿಯಿಂದ ಮೋಸ್ಟ್ ಡಿಸೈರೇಬಲ್ ವಿಮೆನ್ ಗೌರವ.[೮]

ಉಲ್ಲೇಖಗಳು[ಬದಲಾಯಿಸಿ]

  1. "bhoomi shetty: Latest News, Videos and Photos of bhoomi shetty | Times of India". The Times of India. Retrieved 16 May 2020.
  2. "Bhoomi Shetty (Bigg Boss Kannada) Wiki, Age, Biography, Boyfriend, Family & More". www.celebrityborn.com. Retrieved 16 May 2020.
  3. "ಯಕ್ಷಗಾನ ಲೋಕದ ಗಟ್ಟಿಗಿತ್ತಿ ಭೂಮಿಕಾ - Prajavani". Dailyhunt (in ಇಂಗ್ಲಿಷ್). Retrieved 16 May 2020.
  4. "Ninne Pelladutha actress Bhoomi Shetty gets replaced in the show; here's why - Times of India". The Times of India (in ಇಂಗ್ಲಿಷ್). Retrieved 16 May 2020.
  5. "Kinnari fame Bhoomi Shetty looks unrecognisable in this retro pic; See picture - Times of India". The Times of India (in ಇಂಗ್ಲಿಷ್). Retrieved 16 May 2020.
  6. "Ninne Pelladatha Serial Actress Bhoomi Shetty Photos". www.telugunestam.com. Retrieved 16 May 2020.
  7. "Lambodara Movie: Showtimes, Review, Trailer, Posters, News & Videos | eTimes". Retrieved 16 May 2020.
  8. "Most desirable woman on TV: Bhoomi Shetty - Times of India". The Times of India (in ಇಂಗ್ಲಿಷ್). Retrieved 19 May 2020.