ಭುಜಂಗ ಪಾರ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭುಜಂಗ ಪಾರ್ಕ್ ಅನ್ನು ರೇಡಿಯೋ ಪಾರ್ಕ್ ಎಂದು ಕರೆಯುತ್ತಾರೆ. ಇದು ಉಡುಪಿ ಜಿಲ್ಲೆಯ ಅಜ್ಜರಕಾಡು ಎಂಬಲ್ಲಿದೆ. ಈ ಉದ್ಯಾನವನದ ವಿಸ್ತೀರ್ಣ ಒಂದು ಎಕರೆ. ಪಾರ್ಕ್ ನ ಮಧ್ಯದಲ್ಲಿನ ಬಂಡೆಯಲ್ಲಿ ರೇಡಿಯೋ ಟವರ್ ಇರುವುದರಿಂದ ರೇಡಿಯೋ ಪಾರ್ಕ್ ಎಂದು ಹೆಸರು ಬಂದಿದೆ. ಈ ರೇಡಿಯೋ ಪಾರ್ಕ್ ನ್ನು ಅಕ್ಟೋಬರ್ ೨, ೨೦೨೦ ರಂದು ಕೆ. ರಘುಪತಿ ಭಟ್ (ಉಡುಪಿ ಶಾಸಕ)[೧] ಅವರು ನವೀಕರಿಸಿದ್ದಾರೆ. ಈಗ ಪಾರ್ಕ್ ಬಳಕೆದಾರರು ಪ್ರತಿದಿನ ಸಂಜೆ ೫:೩೦ ರಿಂದ ೮ರವರೆಗೆ ರೇಡಿಯೋವನ್ನು ಕೇಳಬಹುದು. ಉದ್ಯಾನವನದ ಸುತ್ತಲೂ ಇರುವ ಕಲ್ಲಿನ ರಚನೆಗಳು ಮತ್ತು ಕಲ್ಲಿನ ಬೆಂಚುಗಳು ನೈಸರ್ಗಿಕ ಆಸನಗಳಾಗಿ ಕಾರ್ಯನಿರ್ವಹಿಸತ್ತದೆ. ರೇಡಿಯೋ ಟವರ್ ಈಗ ಪಿಎ ಸಿಸ್ಟಮ್ ಮತ್ತು ರೇಡಿಯೋ ಸೆಟ್‍ ಅನ್ನು ಹೊಂದಿದೆ. ರೇಡಿಯೋ ಕಾರ್ಯಕ್ರಮದ ಧ್ವನಿಯು ಉದ್ಯಾನವನದೊಳಗೆ ಪ್ರತಿಧ್ವನಿಸುವಂತೆ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ಪಿಎ ಸಿಸ್ಟಮ್ ವಾಲ್ಯೂಮ್ ಅನ್ನು ಹೊಂದಿಸಲಾಗಿದೆ. ಉದ್ಯಾನದಲ್ಲಿರುವ ರೇಡಿಯೋ ಟವರ್ ನ್ನು ೧೯೩೮ ರಲ್ಲಿ ನಿರ್ಮಿಸಲಾಯಿತು. ಫೆಬ್ರವರಿ ೨೫, ೧೯೩೪ ರಂದು ಮಹಾತ್ಮ ಗಾಂಧಿಯವರು[೨]ಭಾಷಣ ಮಾಡಿದ್ದರಿಂದ ಗೋಪುರ ಪ್ರದೇಶವು ಪ್ರಸಿದ್ಧಿಯನ್ನು ಪಡೆದಿದೆ. ೧೯೩೮ ರಲ್ಲಿ ಭುಜಂಗ ನಿಲಯ ಎಂದಿದ್ದ ಈ ಪಾರಂಪರಿಕ ಕಟ್ಟಡವನ್ನು ಡಾ.ಯು.ಎಲ್. ನಾರಾಯಣ ರಾವ್ ಮದ್ರಾಸ್ ಅವರು ತಮ್ಮ ತಂದೆ ಯು.ಭುಜಂಗ ರಾವ್ ಅವರ ನೆನಪಿಗಾಗಿ ನೀಡಿದ ಕೊಡುಗೆ ಎಂದು ಕಟ್ಟಡದಲ್ಲಿನ ನಾಮ ಫಲಕ ಮಾಹಿತಿ ನೀಡುತ್ತದೆ.

ರೇಡಿಯೋ ಪ್ರಸಾರ[ಬದಲಾಯಿಸಿ]

ಈ ರೇಡಿಯೋ ಟವರ್ ನಲ್ಲಿ ಅಳವಡಿಸಿದ ಲೌಡ್ ಸ್ಪೀಕರ್ ನಿಂದ ರೇಡಿಯೋ ಕಾರ್ಯಕ್ರಮವನ್ನು ಜನರು ಕೇಳುತ್ತಾರೆ. ಮೊದಲಿನ ಕಾಲದಲ್ಲಿ ರೇಡಿಯೋ ಕೊಳ್ಳಲು ಕಾಸಿಲ್ಲದ ಮಂದಿ ಈ ಟವರ್ ಬಳಿಗೆ ಬಂದು ರೇಡಿಯೋ ಆಲಿಸುತ್ತಿದ್ದರು. ರೇಡಿಯೋ ಪ್ರಸಾರ ಅಲ್ಲದೆ ಬೆಳಗ್ಗೆ ೭ಕ್ಕೆ, ಮಧ್ಯಾಹ್ನ ೧೨ ಗಂಟೆಗೆ ಟವರ್ ನಿಂದ ಅಲರಾಂ ಕೇಳಿಸುತ್ತಿತ್ತು. ಅಜ್ಜರಕಾಡು, ಅಂಬಲಪಾಡಿ ಪರಿಸರದವರೆಗೆ ಈ ಟವರ್ ನಿಂದ ನಿನಾದ ಕೇಳಿಸುತ್ತಿತ್ತು.

ಟವರ್ ನ ಬಗ್ಗೆ[ಬದಲಾಯಿಸಿ]

ಹಿರಿಯ ನಾಗರಿಕ, ಪ್ರತ್ಯಕ್ಷ ದರ್ಶಿ ಶ್ರೀನಿವಾಸ ಶೆಟ್ಟಿ ತೋನ್ಸೆ ಪ್ರಕಾರ ನಿತ್ಯ ೫೦ ಕ್ಕಿಂತಲೂ ಅಧಿಕ ಮಂದಿ ಇಲ್ಲಿ ನೆರೆದು ರೇಡಿಯೋ ಪ್ರಸಾರವನ್ನು ಕೇಳುತ್ತಾರೆ. ಟವರ್ ಪರಿಸರದಲ್ಲಿದ್ದ ಸರಕಾರಿ ವಸತಿ ನಿಲಯಗಳ ಮಂದಿಯೂ ಇಲ್ಲಿ ನೆರೆಯುತ್ತಾರೆ.[೩]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. https://kannada.oneindia.com/news/karnataka/an-exclusive-interview-with-udupi-bjp-mla-raghupati-bhat-145083.html
  2. https://vijaykarnataka.com/news/vk-special/most-inspiring-mahatma-gandhi-quotes-of-all-time/articleshow/78422644.cms
  3. https://vijaykarnataka.com/news/udupi/request-to-resurrect-the-building-radio-tower-at-bhujanga-park/articleshow/68289129.cms