ವಿಷಯಕ್ಕೆ ಹೋಗು

ಭಾರತ ಸರ್ಕಾರದ ಬಜೆಟ್ ೨೦೨೧- ೨೦೨೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ತಮ್ಮ ಮೂರನೇ ಕೇಂದ್ರ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಹಲವು ಘೋಷಣೆ ಮಾಡಿದ್ದು, 2021-22ರ ಬಜೆಟ್‌ನ ಒಟ್ಟು ಗಾತ್ರ 34.83 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
  • ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ತತ್ತರಿಸಿರುವ ದೇಶದ ಅರ್ಥವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಮಹತ್ವದ ಹೊಣೆ ಹೊತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಉದ್ಯೋಗ ಸೃಷ್ಟಿಗೆ ದಾರಿಯಾಗುವ ಮೂಲ ಸೌಕರ್ಯ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸಿ 2021–ಫೆ.1 ಸೋಮವಾರ ಲೋಕಸಭೆಯಲ್ಲಿ 2021–22ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ.
  • ಒಟ್ಟು ಆರು ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಆರ್ಥಿಕತೆಯನ್ನು ಸರಿದಾರಿಗೆ ತರುವ ಮುನ್ನೋಟವನ್ನು ದೇಶದ ಮುಂದಿರಿಸಿದ್ದಾರೆ. ಆರೋಗ್ಯ ಕ್ಷೇತ್ರದ ಮೇಲೆ ಗಣನೀಯ ಮೊತ್ತವನ್ನು ವೆಚ್ಚ ಮಾಡಬೇಕಾದ ಅನಿವಾರ್ಯವನ್ನು ಕೋವಿಡ್‌–19 ಮನದಟ್ಟು ಮಾಡಿದೆ. ಹಾಗಾಗಿಯೇ, ಆರೋಗ್ಯ ಕ್ಷೇತ್ರದ ಮೇಲೆ ಒಟ್ಟು ರೂ. 2.23 ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ನಿರ್ಮಲಾ ಅವರು ಬಜೆಟ್‌ನಲ್ಲಿ ಭರವಸೆ ನೀಡಿದ್ದಾರೆ. ಕಳೆದ ವರ್ಷ ಈ ವಲಯದಲ್ಲಿ ಸರ್ಕಾರ ಮಾಡಿದ್ದ ವೆಚ್ಚಕ್ಕೆ ಹೋಲಿಸಿದರೆ ಇದು ಶೇಕಡ 137ರಷ್ಟು ಜಾಸ್ತಿ.

ಉದ್ಯೋಗ ಸೃಷ್ಟಿಗೆ ಇರುವ ಬಹುದೊಡ್ಡ ಅಸ್ತ್ರ ಎಂದು ಅರ್ಥಶಾಸ್ತ್ರಜ್ಞರು ಮತ್ತೆ ಮತ್ತೆ ಹೇಳಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಈ ಬಜೆಟ್‌ನಲ್ಲಿ ಪ್ರಾಧಾನ್ಯ ಪಡೆದಿವೆ. 2021–22ರಲ್ಲಿ ಕೇಂದ್ರ ಸರ್ಕಾರದ ಒಟ್ಟು ಬಂಡವಾಳ ವೆಚ್ಚವು ಒಟ್ಟು ರೂ. 5.54 ಲಕ್ಷ ಕೋಟಿ ಆಗಿರಲಿದೆ. ‘ಇದು 2020–21ರ ಬಜೆಟ್‌ಗೆ ಹೋಲಿಸಿದರೆ ಶೇ 34.5ರಷ್ಟು ಜಾಸ್ತಿ’ ಎಂದು ನಿರ್ಮಲಾ ಅವರು ಹೇಳಿದ್ದಾರೆ

ಆದಾಯ ಮತ್ತು ವೆಚ್ಚ (ಶೇಕಡಾವಾರು)

[ಬದಲಾಯಿಸಿ]
  • ಕೇಂದ್ರ ಸರಕಾರದ ಆದಾಯ ಮೂಲಗಳು, ಹಾಗೂ ಯಾವ ಕ್ಷೇತ್ರವಾರು ಹಣ ವಿನಿಯೋಗದ ವಿವರ. ರೂಪಾಯಿ ಲೆಕ್ಕದಲ್ಲಿ (ಅಥವಾ ಶೇಕಡಾವಾರು) ಆದಾಯ ವೆಚ್ಚಗಳು.
  • 2021-22ರಲ್ಲಿ ಭಾರಿ ಹಣಕಾಸಿನ ಕೊರತೆ ಎದುರಾಗಿದೆ. ಇದನ್ನು ಹೋಗಲಾಡಿಸಲು ಸರಕಾರ 12.05 ಲಕ್ಷ ಕೋಟಿ ರೂ. ಸಾಲ ಪಡೆಯಲು ಉದ್ದೇಶಿಸಿದೆ. ಸರಕಾರದ ಒಟ್ಟು ಆದಾಯವನ್ನು ರೂಪಾಯಿ ಮಟ್ಟಕ್ಕೆ ಇಳಿಸಿದರೆ ಇದರಲ್ಲಿ ಸಾಲದ ಪಾಲೇ 36 ಪೈಸೆಗಳಾಗುತ್ತವೆ.
  • ದೇಶದ ಮೊದಲ ಡಿಜಿಟಲ್ ಬಜೆಟ್‌ನಲ್ಲಿ ಗಮನಸೆಳೆದ 10 ಅಂಶಗಳು:
ಆದಾಯ ವೆಚ್ಚ ರೂಪಾಯಿ ಮಟ್ಟಕ್ಕೆ ಇಳಿಸಿದಾಗ -ಆದಾಯ ಮತ್ತು ವೆಚ್ಚ
ಕ್ರ.ಸಂ. ಆದಾಯ ವಿವರ ಪೈಸೆ ಲೆಕ್ಕದಲ್ಲಿ (ಅಥವಾ ಶೇಕಡಾವಾರು) ವೆಚ್ಚ> ವೆಚ್ಚದ ವಿವರ ಪೈಸೆಲೆಕ್ಕದಲ್ಲಿ (ಆಥವಾ ಶೇಕಡಾವಾರು}
ಸಾಲ ಮತ್ತು ಇತರ ಋುಣಗಳು(ಸಾಲ ಮತ್ತು ಇತರ ಹೊಣೆಗಾರಿಕೆ) 36 ಪೈಸೆ ವೆಚ್ಚ> ಕೇಂದ್ರ ಪ್ರಾಯೋಜಿತ ಯೋಜನೆಗಳು 9 ಪೈಸೆ
ಕಾರ್ಪೊರೇಟ್‌ ತೆರಿಗೆ 14 ಪೈಸೆ ವೆಚ್ಚ> ಕೇಂದ್ರ ವಲಯದ ಯೋಜನೆಗಳು 13 ಪೈಸೆ
ಆದಾಯ ತೆರಿಗೆ 14 ಪೈಸೆ ವೆಚ್ಚ> ಬಡ್ಡಿ ಪಾವತಿ 20 ಪೈಸೆ
ಆಮದು ಸುಂಕ 3 ಪೈಸೆ ವೆಚ್ಚ> ರಕ್ಷಣೆ 8 ಪೈಸೆ
ಅಬಕಾರಿ ಸುಂಕ 8 ಪೈಸೆ ವೆಚ್ಚ> ಸಹಾಯಧನ 9 ಪೈಸೆ
ಜಿಎಸ್‌ಟಿ 15 ಪೈಸೆ 15 ಪೈಸೆ ವೆಚ್ಚ> ಹಣಕಾಸು ಆಯೋಗ ಮತ್ತುಇತರ ವರ್ಗಾವಣೆ 10 ಪೈಸೆ
ತೆರಿಗೆಯೇತರ ಆದಾಯ 6 ಪೈಸೆ ವೆಚ್ಚ> ರಾಜ್ಯಗಳ ಪಾಲು 16 ಪೈಸೆ
ಸಾಲವಲ್ಲದ ಬಂಡವಾಳ ಸ್ವೀಕೃತಿ 5 ಪೈಸೆ ವೆಚ್ಚ> ಇತರೆ ವೆಚ್ಚ 10 ಪೈಸೆ

ಹೆಚ್ಚಿನ ವಿವರ ವೆಚ್ಚ- 2021-22

[ಬದಲಾಯಿಸಿ]
  • ವಿತ್ತೀಯ ಕೊರತೆಯಲ್ಲಿ ಭಾರಿ ಏರಿಕೆ, 2021-22ರಲ್ಲಿ ಕೇಂದ್ರದಿಂದ 12.05 ಲಕ್ಷ ಕೋಟಿ ರೂ. ಸಾಲ!
  • ಕೇಂದ್ರ ಸರಕಾರದ ವೆಚ್ಚ (2021-21ರ ಬಜೆಟ್‌ ಅಂದಾಜು, ಕೋಟಿ ರೂಪಾಯಿಗಳಲ್ಲಿ)
  1. • ಪಿಂಚಣಿ 1,89,328
  2. • ರಕ್ಷಣೆ 3,47,088
  3. • ಸಹಾಯಧನ 3,35,361
  4. • ಕೃಷಿ ಮತ್ತು ಸಂಬಂಧಿತ ಚಟುವಟಕೆ 1,48,301
  5. • ವಾಣಿಜ್ಯ ಮತ್ತು ಕೈಗಾರಿಕೆ 34,623
  6. • ಈಶಾನ್ಯ ಭಾರತದ ಅಭಿವೃದ್ಧಿ 2,658
  7. • ಶಿಕ್ಷಣ 93,224
  8. • ಇಂಧನ 42,824
  9. • ವಿದೇಶಾಂಗ ವ್ಯವಹಾರ 18,155
  10. • ಹಣಕಾಸು 91,916
  11. • ಆರೋಗ್ಯ 74,602
  12. • ಗೃಹ ಸಚಿವಾಲಯ 1,13,521
  13. • ಬಡ್ಡಿ ಪಾವತಿ 8,09,701
  14. • ಐಟಿ ಮತ್ತು ದೂರ ಸಂಪರ್ಕ 53, 108
  15. • ಯೋಜನೆ ಮತ್ತು ಸಾಂಖ್ಯಿಕ 2,472
  16. • ಗ್ರಾಮೀಣಾಭಿವೃದ್ಧಿ 1,94,633
  17. • ವಿಜ್ಞಾನಕ್ಕೆ ಸಂಬಂಧಿಸಿದ ಇಲಾಖೆಗಳು 30,640
  18. • ಸಮಾಜ ಕಲ್ಯಾಣ 48,460
  19. • ತೆರಿಗೆ ಆಡಳಿತ 1,31,100
  20. • ರಾಜ್ಯಗಳಿಗೆ ವರ್ಗ 2,93,302
  21. • ಸಾರಿಗೆ 2,33,083
  22. • ಕೇಂದ್ರಾಡಳಿತ ಪ್ರದೇಶ 53,026
  23. • ನಗರಾಭಿವೃದ್ಧಿ 53,581
  24. • ಇತರೆ 87,528
  25. • ಒಟ್ಟು 34,83,236
  • 2021-22ರಲ್ಲಿ ಭಾರಿ ಹಣಕಾಸಿನ ಕೊರತೆ ಎದುರಾಗಿದೆ. ಇದನ್ನು ಹೋಗಲಾಡಿಸಲು ಸರಕಾರ 12.05 ಲಕ್ಷ ಕೋಟಿ ರೂ. ಸಾಲ ಪಡೆಯಲು ಉದ್ದೇಶಿಸಿದೆ. ಸರಕಾರದ ಒಟ್ಟು ಆದಾಯವನ್ನು ರೂಪಾಯಿ ಮಟ್ಟಕ್ಕೆ ಇಳಿಸಿದರೆ ಇದರಲ್ಲಿ ಸಾಲದ ಪಾಲೇ 36 ಪೈಸೆಗಳಾಗುತ್ತವೆ.[]

[]

  1. ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)
  2. ಭಾರತದಲ್ಲಿ ನೀರಾವರಿ
  3. ಭಾರತದಲ್ಲಿ ಕೃಷಿ
  4. ಬಜೆಟ್ ಸಿದ್ಧವಾಗುವುದು ಹೇಗೆ?
  5. ಭಾರತ ಸರ್ಕಾರದ ಬಜೆಟ್ ೨೦೨೧- ೨೦೨೨- ಭಾರತ ಸರ್ಕಾರದ ಬಜೆಟ್ 2021-22
  6. ಭಾರತ ಸರ್ಕಾರದ ಬಜೆಟ್ ೨೦೧೭-೧೮ ; (.2017-18ರ ಭಾರತ ಸರ್ಕಾರದ ಬಜೆಟ್)
  7. ಭಾರತದ ಕೇಂದ್ರ ಸರ್ಕಾರದ ಬಜೆಟ್ 2016-17
  8. ಭಾರತ ಸರ್ಕಾರದ ಆದಾಯ ತೆರಿಗೆ (ಮುಂಗಡ ಪತ್ರ)==ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ
  9. ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ;2015-2016
  10. ಭಾರತ ಸರ್ಕಾರದ ರೈಲ್ವೆ ಬಜೆಟ್ 2015-2016
  11. ಭಾರತದಲ್ಲಿ ಸಂಪತ್ತು ತೆರಿಗೆ
  12. ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ;2014-2015
  13. ಭಾರತ ದೇಶದ ಪಂಚ ವಾರ್ಷಿಕ ಯೋಜನೆಗಳು

ಉಲ್ಲೇಖ

[ಬದಲಾಯಿಸಿ]
  1. -‘ರೂಪಾಯಿ ಆದಾಯ’ದಲ್ಲಿ ಸಾಲದ್ದೇ ದೊಡ್ಡ ಪಾಲು, ಖರ್ಚಿನಲ್ಲೂ ಸಾಲದ್ದೇ ದರ್ಬಾರ್‌!;;Sachhidananda N | Vijaya KarnatakaUpdated: 01 Feb 2021
  2. ಕೇಂದ್ರ ಬಜೆಟ್ 2021-2022: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?Published: 01st February 2021