ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ;2014-2015

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಂದ್ರ ಮುಂಗಡ ಪತ್ರ-ಬಜೆಟ್`2014-2015[ಬದಲಾಯಿಸಿ]

 • 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಬಹುಮತ ಗಳಿಸಿ ಮೇ,2014 ರಲ್ಲಿ ಸರ್ಕಾರ ರಚನೆ ಮಾಡಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಹೊಸದಾಗಿ 2014-2015ರ ಮುಂಗಡ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಿತು.ಅದರ ಕೆಲವು ಅಂಶಗಳನ್ನು ಕೆಳಗೆ ಕೊಟ್ಟಿದೆ:

ಮುಂಗಡ ಪತ್ರ ಮತ್ತು ಫಂಡ್`ಗಳು[ಬದಲಾಯಿಸಿ]

ಗ್ರಾಸ್ ಬಜೆಟರಿ ಸಪೋರ್ಟ್
 • ಕೇಂದ್ರ ಸರ್ಕಾರದ ಮುಂಗಡ ಪತ್ರವೆಂದರೆ ಪ್ರತಿ ವರ್ಷಕ್ಕೆ ಸಂಬಂಧಿಸಿದ ಯೋಜನೆ.ಮುಂದಿನ ವರ್ಷದ ಆದಾಯ ವೆಚ್ಚಗಳ ಅಂದಾಜು ಪಟ್ಟಿ. ಸರ್ಕಾರ ಪಾರ್ಲಿಮೆಂಟನ ಒಪ್ಪಿಗೆ ಇಲ್ಲದೆ ಒಂದು ಪೈಸೆಯನ್ನೂ ಖರ್ಚು ಮಾಡುವಂತಿಲ್ಲ.ಭಾರತದಲ್ಲಿ ಹಣಕಾಸು ವರ್ಷವು ಏಪ್ರಿಲ್`1 ರಿಂದ ಆರಂಭವಾಗಿ ಮಾರ್ಚಿ 31 ಕ್ಕೆ ಕೊನೆಗಳ್ಳುತ್ತದೆ. ಇದಕ್ಕೆ ಹಣ-ಕಅಸು ವರ್ಷವೆಂದು ಹೇಳುತ್ತಾರೆ.ಸರ್ಕಾರದ ಬಜೆಟ್ ಅಥವಾ ಮುಂಗಡ ಪತ್ರದಲ್ಲಿ ಮುಖ್ಯವಾಗಿ ಯೋಜನೆಗಳಿಗಾಗಿ ವೆಚ್ಚ ಮತ್ತು ಆಡಳತ ನಿರ್ವಹಣೆಗಾಗಿ ವೆಚ್ಚವೆಂದು ಬೇರೆ ಬೇರೆ ವಿಂಗಡಣೆ ಮಾಡಲಾಗುತ್ತದೆ. ಕೇಂದ್ರದ ಯೋಜನೆಗಳಿಗೆ ಸಂಬಂಧಿಸಿದಂತೆ ಅದಕ್ಕೆ ಅದರದ್ದೇ ಆದ ಖಾತೆಗಳಿಂದ ಹಣ ವಿನಿಯೋಗ ಮಾಡುತ್ತದೆ. ಅದಕ್ಕಾಗಿ ಅದರದ್ದೇ ಆದ ಸಂಪನ್ಮೂಲಗಳನ್ನು ಹೊಂದಿದೆ. ಕೇಂದ್ರೀಯ ಯೋಜನೆಗಳಿಗೆ ಅದು ಹೊಂದಿರುವ ಯೋಜನೆಯನ್ನು ಗ್ರಾಸ್ ಬಜೆಟರಿ ಸಪೋರ್ಟ್ ಎನ್ನುತ್ತಾರೆ.
 • ಯೋಜನಾ ಆಯೋಗ ಮತ್ತು ಹಣಕಾಸು ಸಚಿವಾಲಯ ಅದನ್ನು ನಿರ್ಧರಿಸುತ್ತದೆ. 4,64, 934 ಕೋಟಿ 2014-15ನೇ ವಿತ್ತೀಯ ವರ್ಷಕ್ಕಾಗಿ ಕೇಂದ್ರ ಸರ್ಕಾರ ತೆಗೆದಿರಿಸಿದ ಮೊತ್ತ (ಹಿಂದಿನ ಪ್ರಧಾನಿ ಶ್ರೀ ಮನಮೋಹನ ಸಿಂಗ್ ಸರ್ಕಾರದಲ್ಲಿ ಕಳೆದ ಬಾರಿಯ (ಫೆಬ್ರವರಿ 2014) ಮಧ್ಯಂತರ ಬಜೆಟ್ ಪ್ರಕಾರ.
ರೆವೆನ್ಯೂ ಎಕ್ಸ್‌ಪೆಂಡಿಚರ್
 • ಸರ್ಕಾರದ ದೈನಂದಿನ ಖರ್ಚು ವೆಚ್ಚಗಳು, ವಿವಿಧ ವಿಭಾಗಗಳಿಗೆ ಅಗತ್ಯವಾಗಿರುವ ವೆಚ್ಚಗಳನ್ನು ನಿಭಾಯಿಸುವ ಫಂಡ್. ಇದರ ಜತೆಗೆ ಬಡ್ಡಿ ಪಾವತಿ, ಸಬ್ಸಿಡಿಗಳ ಮೇಲೂ ಸರ್ಕಾರ ವೆಚ್ಚ ಮಾಡುತ್ತದೆ. 15,50,054 ಕೋಟಿ ಇದು 2014-15ನೇ ಸಾಲಿಗೆ ನಿಗದಿಪಡಿಸಲಾಗಿರುವ ರೆವೆನ್ಯೂ ಎಕ್ಸ್‌ಪೆಂಡಿಚರ್ (ಕಳೆದ ಬಾರಿಯ ಮಧ್ಯಂತರ ಬಜೆಟ್ ಪ್ರಕಾರ). ;ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ :
 • ಕೇಂದ್ರ ಸರ್ಕಾರ ತನ್ನದೇ ಆದ ಉದ್ದೇಶಕ್ಕಾಗಿ ಭೂಮಿ, ಕಟ್ಟಡ, ಹಲವು ಯಂತ್ರೋಪಕರಣಗಳು ಮತ್ತು ಇತರ ಅಗತ್ಯಗಳಿಗಾಗಿ ವೆಚ್ಚ ಮಾಡುತ್ತದೆ.
 • ಇದಲ್ಲದೆ ಷೇರುಗಳು, ಸಾಲ ಮತ್ತು ಮುಂಗಡ ನೀಡಿಕೆಗಾಗಿ ಹಣ ವೆಚ್ಚ ಮಾಡುತ್ತದೆ. <
ಹಿಂದಿನ ಸಾಲುಗಳ ಬಜೆಟ್ ಮೊತ್ತ :
 • ವಿತ್ತೀಯ ವರ್ಷ == ಮೊತ್ತ ( ಕೋಟಿಗಳಲ್ಲಿ)
 • 2004-05 ==5,05,791
 • 2005-06== 5,08,705
 • 2006-07 ==5,81,637
 • 2007-08 ==7,09,373
 • 2008-09== 9,00,953
 • 2009-10== 10,21,547
 • 2010-11 ==12,16,576
 • 2011-12 ==13,18,720
 • 2012-13 ==14,10,367
 • 2013-14 ==15,90,434
 • 2014-15== 17,63,214
 • ಮಧ್ಯಂತರ ಮುಂಗಡ ಪತ್ರ ( ಕೋಟಿಗಳಲ್ಲಿ) -
 • ದೇಶದ ಬಜೆಟ್ ಅನ್ನು ಯೋಜನೆ ಮತ್ತು ಯೋಜನೇತರ ಎಂದು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು.

ಯೋಜನಾ ವೆಚ್ಚ ಮತ್ತು ಯೋಜನೇತರ ವೆಚ್ಚ[ಬದಲಾಯಿಸಿ]

 • ಇದರಲ್ಲಿ ಮೌಲ್ಯಯುತವಾದ ಆಸ್ತಿ ಸೃಷ್ಟಿಸಲಾಗುತ್ತದೆ ಅಥವಾಅದಕ್ಕಾಗಿ ಮೀಸಲಿಡಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳಾಗಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಮೂಲಕ ಕೆಲಸದ ಮೂಲಕ ಗ್ರಾಮೀಣ ಭಾಗದ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಲಾಗುತ್ತದೆ. ಶೇ.31.4ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಯೋಜನಾ ವೆಚ್ಚಗಳಿಗೆ ವೆಚ್ಚ ಮಾಡುತ್ತದೆ. 5,55,322 ಕೋಟಿ. ಇದು ಕಳೆದ ವರ್ಷ ಮಂಡಿಸಲಾಗಿದ್ದ ದೇಶದ ಮಧ್ಯಂತರ ಬಜೆಟ್ ಮೊತ್ತ.; ಶ್ರೀ ಮೋದಿ ಸರ್ಕಾರಲ್ಲಿ 2014-15 ರ ಬಜೆಟ್`ನಲ್ಲಿ ಅದನ್ನು ಕೈಬಿಟ್ಟಿದೆ.
ಯೋಜನೇತರ ವೆಚ್ಚ

ಇದರಲ್ಲಿ ರಕ್ಷಣೆ, ಸಬ್ಸಿಡಿ, ಬಡ್ಡಿ ಪಾವತಿ ವಿಚಾರಗಳು ಒಳಗೊಂಡಿವೆ. ಶೇ.68.5 ಮೊತ್ತವನ್ನು ಸರ್ಕಾರ ಯೋಜನೇತರ ವೆಚ್ಚಕ್ಕೆ ವಿನಿಯೋಗ ಮಾಡುತ್ತದೆ. ಕಳೆದ ಬಾರಿಯ ಮಧ್ಯಂತರ ಬಜೆಟ್ ಪ್ರಕಾರ;ರೂ.12,07,892 ಕೋಟಿ 2014-15ರಲ್ಲಿ ಕೇಂದ್ರ ಸರ್ಕಾರ ಯೋಜನೇತರ ವೆಚ್ಚಕ್ಕೆ ನಿಗದಿ ಮಾಡಿದ ಮೊತ್ತ. ಕೇಂದ್ರ ಸರ್ಕಾರದ ಮುಂಗಡ ಪತ್ರವೆಂದರೆ ಪ್ರತಿ ವರ್ಷಕ್ಕೆ ಆಡಳಿತ ಮತ್ತು ಇತರೆ ದೈನಂದಿನ ವೆಚ್ಚ.

ಗ್ರಾಸ್ ಬಜೆಟರಿ ಸಪೋರ್ಟ್
 • ಕೇಂದ್ರೀಯ ಯೋಜನೆಗಳಿಗೆ ಅದು ಹೊಂದಿರುವ ಯೋಜನೆಯನ್ನು ಗ್ರಾಸ್ ಬಜೆಟರಿ ಸಪೋರ್ಟ್ ಎನ್ನುತ್ತಾರೆ. ಯೋಜನಾ ಆಯೋಗ ಮತ್ತು ಹಣಕಾಸು ಸಚಿವಾಲಯ ಅದನ್ನು ನಿರ್ಧರಿಸುತ್ತದೆ. 4,64, 934 ಕೋಟಿ 2014-15ನೇ ವಿತ್ತೀಯ ವರ್ಷಕ್ಕಾಗಿ ಕೇಂದ್ರ ಸರ್ಕಾರ ತೆಗೆದಿರಿಸಿದ ಮೊತ್ತ (ಕಳೆದ ಬಾರಿಯ ಮಧ್ಯಂತರ ಬಜೆಟ್ ಪ್ರಕಾರ).
 • ರೆವೆನ್ಯೂ ಎಕ್ಸ್‌ಪೆಂಡಿಚರ್ ಸರ್ಕಾರದ ದೈನಂದಿನ ಖರ್ಚು ವೆಚ್ಚಗಳು, ವಿವಿಧ ವಿಭಾಗಗಳಿಗೆ ಅಗತ್ಯವಾಗಿರುವ ವೆಚ್ಚಗಳನ್ನು ನಿಭಾಯಿಸುವ ವಿಚಾರವಿದು. ಇದರ ಜತೆಗೆ ಬಡ್ಡಿ ಪಾವತಿ, ಸಬ್ಸಿಡಿಗಳ ಮೇಲೂ ಸರ್ಕಾರ ವೆಚ್ಚ ಮಾಡುತ್ತದೆ.
ಕ್ಯಾಪಿಟಲ್ ಎಕ್ಸ್‌ಪೆಂಡಿರ್
 • ರೂ.15,50,054 ಕೋಟಿ ಇದು 2014-15ನೇ ಸಾಲಿಗೆ ನಿಗದಿಪಡಿಸಲಾಗಿರುವ ರೆವೆನ್ಯೂ ಎಕ್ಸ್‌ಪೆಂಡಿಚರ್ (ಕಳೆದ ಬಾರಿಯ ಮಧ್ಯಂತರ ಬಜೆಟ್ ಪ್ರಕಾರ).ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ಕೇಂದ್ರ ಸರ್ಕಾರ ತನ್ನದೇ ಆದ ಉದ್ದೇಶಕ್ಕಾಗಿ ಭೂಮಿ, ಕಟ್ಟಡ, ಹಲವು ಯಂತ್ರೋಪಕರಣಗಳು ಮತ್ತು ಇತರ ಅಗತ್ಯಗಳಿಗಾಗಿ ವೆಚ್ಚ ಮಾಡುತ್ತದೆ.

ಇದಲ್ಲದೆ ಷೇರುಗಳು, ಸಾಲ ಮತ್ತು ಮುಂಗಡ ನೀಡಿಕೆಗಾಗಿ ಹಣ ವೆಚ್ಚ ಮಾಡುತ್ತದೆ

ರೈಲ್ವೇ ಬಜೆಟ್[ಬದಲಾಯಿಸಿ]

ಕೇಂದ್ರ ಸರ್ಕಾರ ದ ಸ್ವಾಮ್ಯದಲ್ಲಿರುವ ದೊಡ್ಡ ಉದ್ಯಮವಾದ ರೈಲ್ವೇ ಇಲಾಖೆಗೆ ಪ್ರತ್ಯೇಕ ಬಜೆಟ್` ಮಂಡಿಸುವ ಪದ್ದತಿ ಮೊದಲಿಂದಲೂ ಬಂದಿದೆ. ಈ ಬಾರಿ,ಕರ್ನಾಟಕ ಮೂಲದ ಡಿವಿ ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಸಚಿವರಾಗಿ ಮಂಗಳವಾರ , ಜು.8,2014 ರಂದು 2014-2015 ರ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. 27 ಏಕ್ಸ್ ಪ್ರೆಸ್ ರೈಲು, 5 ಹೊಸ ಜನ ಸಾಧಾರಣ ರೈಲ್ವೆ, 9 ಹೈ ಸ್ಪೀಡ್, ಬುಲೆಟ್ ರೈಲು ಘೋಷಣೆಯೊಂದಿಗೆ ಮೋದಿ ಸರ್ಕಾರದ ಬಜೆಟ್ ಸಮತೋಲನ ಬಜೆಟ್ ಎಂದೆನಿಸಿಕೊಳ್ಳುವ ಆಶಯ ಹೊಂದಿದೆ. ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರದ ಮೊಟ್ಟ ಮೊದಲ ರೈಲ್ವೆ ಬಜೆಟ್ ನ್ನು ಮಂಡಿಸಿದ್ದಾರೆ. ಕನ್ನಡದ ದಾರ್ಶನಿಕ ಸಾಹಿತಿ ಡಿವಿ ಗುಂಡಪ್ಪ ಅವರ ಸಾಲುಗಳನ್ನು ಹೇಳುವ ಮೂಲಕ ಗದ್ದಲ ಮಾಡುವವರಿಗೆ ಚಾಟಿ ಬೀಸಿದ ಸದಾನಂದ ಗೌಡ ಅವರು ಬಜೆಟ್ ಮಂಡನೆ ಮುಕ್ತಾಯಗೊಳಿಸಿದರು.

 • ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ |
 • ಇಂದು ನಂಬಿಹುದೆ ಮುಂದೆಂದುಮೆಂದಲ್ಲ ||
 • ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು |
 • ಇಂದಿಗೀ ಮತವುಚಿತ-ಮಂಕುತಿಮ್ಮ
ರೈಲ್ವೆ ಬಜೆಟ್ ಮುಖ್ಯಾಂಶ,
 • 27 ಏಕ್ಸ್ ಪ್ರೆಸ್ ರೈಲು, 5 ಹೊಸ ಜನ ಸಾಧಾರಣ ರೈಲ್ವೆ, 9 ಹೈ ಸ್ಪೀಡ್ಮ್, 1 ಬುಲೆಟ್ ರೈಲು ಘೋಷಣೆ. *ಜಾಗತಿಕ ಗುಣಮಟ್ಟವಿರುವ 10 ನಿಲ್ದಾಣಗಳ ಅಭಿವೃದ್ಧಿ, ಬೆಂಗಳೂರನ್ನು ಸಬ್ ಅರ್ಬನ್ ಕೆಟಗೆರಿಗೆ ಸೇರಿಸಲು ಚಿಂತನೆ.
 • ಬೆಂಗಳೂರು -ಮಂಗಳೂರು ಹೊಸ ಎಕ್ಸ್ ಪ್ರೆಸ್ ರೈಲು, ಶಿವಮೊಗ್ಗ-ಶೃಂಗೇರಿ- ಮಂಗಳೂರು ಹೊಸ ರೈಲು, ಬೆಂಗಳೂರು-ಪ್ಯಾಸೆಂಜರ್ ರೈಲು ಘೋಷಣೆ.
 • ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಾಕಿ ಇರುವ 29 ರೈಲ್ವೆ ಯೋಜನೆಗಳನ್ನ ಪೂರ್ಣಗೊಳಿಸಲು 20,680 ಕೋಟಿ ರು.

ಹೊಸ ಮಾರ್ಗ, ಗೇಜ್ ಪರಿವರ್ತನೆ,

 • ಮುಂದಿನ ಐದು ವರ್ಷಗಳಲ್ಲಿ ಕಾಗದ ರಹಿತ ಕಚೇರಿಯಾಗಿ ಪರಿವರ್ತನೆ.
 • ಕರ್ನಾಟಕ: ಬೀರೂರು-ಅಜ್ಜಂಪುರ ಜೋಡಿ ಮಾರ್ಗ, ಬೆಳಗಾವಿ-ಹುಬ್ಬಳ್ಳಿ ವಯಾ ಕಿತ್ತೂರು ಹೊಸ ಮಾರ್ಗ, ಬೀದರ್-ಯಶವಂತಪುರ ಪ್ರತಿದಿನ, ತಿಪಟೂರು-ದುದ್ದ ಹೊಸ ಮಾರ್ಗ(ಹುಳಿಯೂರು, ಕೆಬಿಕ್ರಾಸ್)
 • ದೇಶದ 50 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹೊರಗುತ್ತಿಗೆ ವ್ಯವಸ್ಥೆ ತರಲಾಗುವುದು. ಎಲ್ಲಾ ನಿಲ್ದಾಣಗಳಲ್ಲೂ ವಿಶ್ರಾಂತಿ ಕೊಠಡಿ ಸೌಲಭ್ಯ. *ಎಲ್ಲಾ ಎ1, ಎ ಕೆಟಗೆರಿ ಸ್ಟೇಷನ್ ಗಳಲ್ಲಿ ವೈ ಫೈ ಸೌಲಭ್ಯ ನೀಡಲಾಗುವುದು.
 • ಮಾನವ ರಹಿತ ಲೆವೆಲ್ ಕ್ರಾಸಿಂಗ್ ನಿರ್ಮೂಲನೆಗೆ 1,780 ಕೋಟಿ ರು ವೆಚ್ಚದ ಯೋಜನೆ ರೂಪಿಸಲಾಗಿದೆ.
 • ಪದವಿಪೂರ್ವ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ internship ಪ್ರಾಜೆಕ್ಟ್ ಮಾಡಲು ಅವಕಾಶ. ರೈಲ್ವೆ ಸಿಬ್ಬಂದಿ ಮಕ್ಕಳಿಗೆ ವಿಶೇಷ ವಿದ್ಯಾಭ್ಯಾಸ ಸೌಲಭ್ಯ.
 • ವಾಜಪೇಯಿ ಕನಸಾದ Diamond Quadrilateral network ಜಾರಿಗೆ ತರಲು ಬದ್ಧ. ಪ್ರಮುಖ ಮೆಟ್ರೋ ನಗರಗಳನ್ನು ಹೈಸ್ಪೀಡ್ ರೈಲು ಮೂಲಕ ಹೆಣೆಯಲಾಗುವುದು.
 • ಬೆಂಗಳೂರು -ವಾರಣಾಸಿ ಮಾರ್ಗವಾಗಿ ಹರಿದ್ವಾರಕ್ಕೆ ರೈಲು, ಪ್ರಮುಖ ಧಾರ್ಮಿಕ ತಾಣಗಳಿಗೆ ಪ್ಯಾಕೇಜ್ ಟೂರ್ ವ್ಯವಸ್ಥೆ.
 • ಯಶವಂತಪುರ-ಜೈಪುರ ನಡುವೆ ಎಸಿ ಎಕ್ಸ್ ಪ್ರೆಸ್, ಬಾಗಲಕೋಟೆಯಿಂದ ಪಂಡರಾಪುರಕ್ಕೆ ರೈಲು
 • ದೇಶದ 9 ಕಡೆ ಹೈಸ್ಪೀಡ್ ರೈಲು ಓಡಲಿದೆ., ರೈಲಿನ ವೇಗ 160 ರಿಂದ 200ಕ್ಕೇರಿಸಲು ಚಿಂತನೆ.
 • ಇ ಟಿಕೆಟಿಂಗ್ ವ್ಯವಸ್ಥೆ ಇನ್ನಷ್ಟು ವಿಸ್ತರಣೆಗೊಳ್ಳಲಿದೆ. ಐಆರ್ ಸಿಟಿಸಿ ವೆಬ್ ತಾಣವಲ್ಲದೆ ಅಂಚೆ ಕಚೇರಿ, ಮೊಬೈಲ್ ಫೋನ್ ನಲ್ಲೂ ಟಿಕೆಟ್ ಲಭ್ಯವಾಗಲಿದೆ
 • ಮುಂಬಯಿ-ಅಹಮದಾಬಾದಿನ ಸೆಕ್ಟರ್ ಗೆ ಮೊದಲ ಬುಲೆಟ್ ರೈಲು ಓಡಿಸಲು ಇಲಾಖೆ ಚಿಂತಿಸಿದೆ.
ಈ ವರ್ಷದ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಗೆ ಬಂದಿರುವ ವರಮಾನ 1.39 ಲಕ್ಷ ಕೋಟಿ ರೂ.
 • ರೈಲ್ವೆ ವಿವಿ ಸ್ಥಾಪನೆ ತಾಂತ್ರಿಕ ಹಾಗೂ ತಾಂತ್ರಿಕೇತರ ಕೋರ್ಸ್ ಬೋಧನೆಗೆ ಒತ್ತು.
 • 4000 ಮಹಿಳಾ ಆರ್ ಪಿಎಫ್ ಸಿಬ್ಬಂದಿ ನೇಮಕಾತಿ, ನಿಯೋಜನೆ.
 • ಜೈವಿಕ ಶೌಚಾಲಯಗಳನ್ನು ಬಳಸಲು ಯೋಜಿಸಲಾಗಿದೆ. ಇದರಿಂದ ಸ್ಟೇಷನ್ ಹಾಗೂ ರೈಲ್ವೆ ಹಳಿ ಸ್ವಚ್ಛತೆ ಕಾಯ್ದುಕೊಳ್ಳಲಾಗುವುದು. *ಶುದ್ಧ ನೀರು RO ಕುಡಿಯುವ ನೀರು ನೀಡಲು ನಿರ್ದೇಶಿಸಲಾಗಿದೆ., ಎಲ್ಲಾ ಸ್ಟೇಷನ್ ಗಳಲ್ಲು ಸಿಸಿಟಿವಿ ಅಳವಡಿಕೆ ಕಡ್ಡಾಯ.
 • ರೆಡಿ ಟು ಈಟ್ ಮಾದರಿ ಊಟ. ಶುದ್ಧ ಆಹಾರ ನೀಡಲು ಇಲಾಖೆ ಬದ್ಧವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳು ಪಿಪಿಪಿ ಮಾದರಿಯಲ್ಲಿ ನಡೆಯಲಿವೆ. ಹಿರಿಯ ನಾಗರಿಕರಿಗೆ ಸ್ಟೇಷನ್ನಲ್ಲಿ ಸಂಚಾರ ಸುಗುಮಗೊಳಿಸಲಾಗುತ್ತದೆ.ವಿತ್ತ ಸಚಿವಾಲಯದಿಂದ ಹೆಚ್ಚುವರಿಯಾಗಿ 1100 ಕೋಟಿ ರು ಅನುದಾನ ಇಲಾಖೆಗೆ ಸಿಕ್ಕಿದೆ.ಕಳೆದ 10 ವರ್ಷಗಳಿಂದ ರೈಲ್ವೆ ಪ್ರಯಾಣದರ ಏರಿಕೆ ಕಂಡಿರಲಿಲ್ಲ. ದರ ಏರಿಕೆಯಿಂದ ಶೇ 130 ರಷ್ಟು ನಷ್ಟ. ಬುಲೆಟ್ ರೈಲು ಸಾಗಲು 60 ಸಾವಿರ ಕೋಟಿ ರು ಬೇಕು. ಕಾರ್ಯಗತಗೊಳ್ಳಲು 5-7 ವರ್ಷ ಬೇಕಾಗುತ್ತದೆ. .ಭಾರತೀಯ ರೈಲ್ವೆ ಪ್ರತೀ ದಿನ 2.3 ಕೋಟಿ ಪ್ರಯಾಣಿಕರನ್ನ ಸಾಗಿಸುತ್ತದೆ; ಪ್ರತೀ ವರ್ಷ 100 ಕೋಟಿ ಟನ್ ಗಳಿಗೂ ಹೆಚ್ಚು ಸರಕುಗಳನ್ನ ಸಾಗಿಸುತ್ತದೆ. ರೈಲ್ವೆ ಇಲಾಖೆಯಲ್ಲಿ ನಾವು ಒಂದು ರುಪಾಯಿ ಗಳಿಸಿದರೆ, 94 ಪೈಸೆ ಖರ್ಚು ಮಾಡುತ್ತೇವೆ. ಆಸ್ಟ್ರೇಲಿಯಾದ ಇಡೀ ಜನಸಂಖ್ಯೆಯನ್ನ ಒಂದೇ ದಿನ ಸಾಗಿಸುವಷ್ಟು ಸಮರ್ಥ ಭಾರತೀಯ ರೈಲ್ವೆಗಿದೆ. ರೈಲ್ವೆ ಇಲಾಖೆಗೆ ಮುಂದಿನ 10 ವರ್ಷ ಕಾರ್ಯ ನಿರ್ವಹಣೆಗೆ ಸುಮಾರು 50,000 ಕೋಟಿ ರು ಪ್ರತಿ ವರ್ಷಬೇಕಾಗುತ್ತದೆ. ರೈಲ್ವೆ ಇಲಾಖೆ ಭಾರತದ ಆರ್ಥಿಕತೆಯ ಆತ್ಮವಿದ್ದಂತೆ, ಸದಾನಂದ ಗೌಡ,ಇಂಗ್ಲೀಷ್ ಭಾಷೆ ಭಾಷಣದ ಜತೆಗೆ ಚಾಣಕ್ಯನ ನೀತಿಯುಳ್ಳ ಸಂಸ್ಕೃತ ಶ್ಲೋಕ ಉಲ್ಲೇಖಿಸಿದರು.

ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಕೊಡಿಗೆ[ಬದಲಾಯಿಸಿ]

ಕರ್ನಾಟಕದವರಾದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು 2014-15ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದ್ದು ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.

ಬೆಂಗಳೂರು ನಗರದ ಸುತ್ತಲಿನ ಊರುಗಳಿಗೆ ಸಂಪರ್ಕ ಕಲ್ಪಿಸಲು ಬೆಂಗಳೂರು ರೈಲು ವಿಕಾಸ ನಿಗಮ ಸ್ಥಾಪಿಸುವ ಚಿಂತನೆ ಇದೆ ಎಂದು ಹಿಂದೆ ರೈಲ್ವೆ ಖಾತೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು. ಬೆಂಗಳೂರಿಗೆ ಸಬ್​​ ಅರ್ಬನ್​ ಉಪನಗರಿ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಸದಾನಂದ ಗೌಡರು, ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.--

ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗ, ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ, ಬೆಂಗಳೂರಿಗೆ ಸಬ್ ಅರ್ಬನ್ ರೈಲು, ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಕೋಚಿಂಗ್‌ ಟರ್ಮಿನಲ್‌ ಸ್ಥಾಪನೆ ಸೇರಿದಂತೆ ಸದಾನಂದ ಗೌಡರು ಹಲವಾರು ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ.
 • ಎಕ್ಸ್‌ಪ್ರೆಸ್ ರೈಲುಗಳು * ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ (ಪ್ರತಿದಿನ) * ಬೆಂಗಳೂರು-ಶಿವಮೊಗ್ಗ ಎಕ್ಸ್‌ಪ್ರೆಸ್ (2 ವಾರಕ್ಕೊಮ್ಮೆ) * ಬೀದರ್-ಮುಂಬಯಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) * ಟಾಟಾನಗರ ಬೈಯಪ್ಪನಹಳ್ಳಿ (ಬೆಂಗಳೂರು) ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) * ಬೆಂಗಳೂರು-ಮೈಸೂರು-ಚೆನ್ನೂ ನಡುವೆ ಹೈಸ್ಪೀಡ್ ರೈಲು

[೧]

ಹೊಸ ತೆರಿಗೆಮತ್ತು ರಿಯಾಯತಿ[ಬದಲಾಯಿಸಿ]

 • 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಬಹುಮತ ಗಳಿಸಿ ಮೇ,2014 ರಲ್ಲಿ ಸರ್ಕಾರ ರಚನೆ ಮಾಡಿತು. ಶ್ರೀ ಅರಣ್` ಜೇಟ್ಲಿಯವರು ಹಣಕಾಸು ಮಂತ್ರಿಯಾಗಿ ನೇಮಕವಅದರು. ಶ್ರೀ ನರೇಂದ್ರ ಮೋದಿಯವರ ಸರ್ಕಾರ ಹೊಸದಾಗಿ 2014-2015ರ ಮುಂಗಡ ಪತ್ರವನ್ನು ತಯಾರಿಸಿ ಕೇಂದ್ರ ಮಂತ್ರಿಮಂಡಲ ಸಭೆಯಲ್ಲಿ,10-7-2014 ಬೆಳಗ್ಗೆ ಮಂಜೂರಾತಿ ಪಡೆದು, ಲೋಕಸಭೆಯಲ್ಲಿ ಮಂಡಿಸಿತು.ಅದರ ಕೆಲವು ಅಂಶಗಳನ್ನು ಕೆಳಗೆ ಕೊಟ್ಟಿದೆ.

10-7-2014 ಬಜೆಟ್`(budget) :

ತೆರಿಗೆ ಮತ್ಉ ರಿಯಾಯತಿ
 • ಅಗ್ಗವಾದ ವಸ್ತುಗಳು ಸಿಆರ್‌ಟಿ ಟಿವಿಗಳು ಎಲ್‌ಇಡಿ, ಎಲ್ಸಿಡಿ ಟಿವಿಗಳು (ವಿಶೇಷವಾಗಿ 19 ಇಂಚಿಗಿಂತ ಕಡಿಮೆಯಲವು ಪಾದರಕ್ಷೆಗಳು (500ರಿಂದ 1000 ರೂ. ಒಳಗಿನವು) ಸೋಪು ಇ-ಬುಕ್ ರೀಡರ್‌ಗಳು ಡೆಸ್ಕ್‌ಟಾಪ್, ಲ್ಯಾಪ್‌ಲಾಪ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರುಗಳು ಆರ್‌ಒ ಆಧಾರಿತ ವಾಟರ್ ಪ್ಯೂರಿಫೈಯರ್‌ಗಳು ಎಲ್‌ಇಡಿ ಬಲ್ಬುಗಳು, ದೀಪಗಳು ಅಮೂಲ್ಯ ರತ್ನಗಳ ಕಚ್ಚಾ ರೂಪ ಕ್ರೀಡಾ ಉಪಕರಣಗಳಾದ ಗ್ಲೋವ್ಸ್ ಬ್ರ್ಯಾಂಡೆಡ್ ಪೆಟ್ರೋಲ್ ಬೆಂಕಿಪೊಟ್ಟಣ ಮೈಕ್ರೋ ಇನ್ಶೂರೆನ್ಸ್ ಪಾಲಿಸಿಗಳು ಹೆಚ್‌ಐವಿ/ಏಡ್ಸ್ ಔಷಧಿ ಮತ್ತು ಪರೀಕ್ಷಾ ಉಪಕರಣಗಳು ಡಿಡಿಟಿ ಕೀಟನಾಶಕಗಳು
 • ದುಬಾರಿಯಾದವು ಸಿಗರೇಟುಗಳು ಲಘುಪಾನೀಯಗಳು ಪಾನ್ ಮಸಾಲ ಗುಟ್ಕಾ ಮತ್ತು ತಂಬಾಕು ಜರ್ದಾ, ಪರಿಮಳಯುಕ್ತ ತಂಬಾಕು ರೇಡಿಯೋ ಟ್ಯಾಕ್ಸಿ ಆಮದಿತ ಎಲೆಕ್ಟ್ರಾನಿಕ್ ಉಪಕರಣಗಳು ಪೋರ್ಟೆಬಲ್ ಎಕ್ಸ್‌-ರೇ ಯಂತ್ರಗಳು ಕತ್ತರಿಸಿದ ವಜ್ರ

ವೈಯುಕ್ತಕ ಆದಾಯ ತೆರಿಗೆ[ಬದಲಾಯಿಸಿ]

 • ವೇತನದಾರರಿಗೆ ಕೊಂಚ ನಿರಾಳ ನೀಡಿರುವ ಹಣಕಾಸು ಸಚಿವ ಅರುಣ್‌ ಜೇಟ್ಲಿ, ವಾರ್ಷಿಕ ಆದಾಯ ತೆರಿಗೆ (ಐಟಿ) ವಿನಾಯ್ತಿ ಮಿತಿಯನ್ನು ರೂ. 2 ಲಕ್ಷದಿಂದ ರೂ. 2.50 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಈ ರೂ. 50 ಸಾವಿರ ಹೆಚ್ಚಳದಿಂದಾಗಿ ವೇತನದಾರರಿಗೆ ರೂ. 5 ಸಾವಿರ ತೆರಿಗೆ ಉಳಿತಾಯ ಆಗಲಿದೆ.
 • ಹಿರಿಯ ನಾಗರಿಕರ (60 ವರ್ಷ ಮೇಲ್ಪಟ್ಟು) ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ. 3 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಉಪತೆರಿಗೆಯಲ್ಲಿ (ಸರ್ಚಾರ್ಜ್‌) ಯಾವುದೇ ಬದಲವಾಣೆ ಇಲ್ಲ. ಶೇ 3ರಷ್ಟು ಶಿಕ್ಷಣದ ಮೇಲಿನ ಸರ್ಚಾರ್ಜ್‌ ಎಲ್ಲ ತೆರಿಗೆದಾರರಿಗೂ ಅನ್ವಯ¬ವಾಗಲಿದೆ.
 • ಉಳಿತಾಯದ ಮಿತಿ ಏರಿಕೆ: ಆದಾಯ ತೆರಿಗೆಯಿಂದ ವಿನಾಯ್ತಿ ಪಡೆಯಲು (ಆದಾಯ ತೆರಿಗೆ ಕಾಯ್ದೆಯ 80ಸಿ ಕಲಂ ಅನ್ವಯ) ಮಾಡುವ ಉಳಿತಾಯದ ಮಿತಿಯನ್ನು ರೂ. 1 ಲಕ್ಷದಿಂದ ರೂ. 1.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
 • ಗೃಹ ಸಾಲ ಪಡೆದ ಆದಾಯ ತೆರಿಗೆದಾರರು ಆ ಮನೆಯಲ್ಲೇ ವಾಸವಿದ್ದರೆ ಅಂತಹವರ ಗೃಹ ಸಾಲದ ಮೇಲಿನ ಬಡ್ಡಿಗೆ ನೀಡುತ್ತಿರುವ ತೆರಿಗೆ ವಿನಾಯ್ತಿ ಮಿತಿಯನ್ನು ರೂ. 1.50 ಲಕ್ಷದಿಂದ ರೂ. 2 ಲಕ್ಷಕ್ಕೆ ಏರಿಸಲಾಗಿದೆ.

ಉಳಿತಾಯಕ್ಕೆ ತೆರಿಗೆ ವಿನಾಯ್ತಿ

 • ವೇತನದಾರರು ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ, 80ಸಿಸಿ ಮತ್ತು 80ಸಿಸಿಸಿ ಅನ್ವಯ ವಿವಿಧ ಯೋಜನೆಗಳಲ್ಲಿ ಉಳಿತಾಯ ಮಾಡಿ ತೆರಿಗೆ ವಿನಾಯ್ತಿ ಪಡೆಯಬಹುದಾದ ಸೌಲಭ್ಯದ ಮಿತಿಯನ್ನು ರೂ. 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
 • ಹಿಂದಿನ ಹಣಕಾಸು ವರ್ಷಗಳಲ್ಲಿ ರೂ. 1 ಲಕ್ಷದವರೆಗಿನ ಉಳಿತಾಯಕ್ಕೆ ಮಾತ್ರವೇ ತೆರಿಗೆ ವಿನಾಯ್ತಿ ಸೌಲಭ್ಯವಿತ್ತು.
ಯಾವುದು ಉಳಿತಾಯ?
 • ನೌಕರರ ಭವಿಷ್ಯ¬ನಿಧಿ(ಇಪಿಎಫ್‌), ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್‌), ಜೀವ ವಿಮಾ ಕಂತು, ರಾಷ್ಟ್ರೀಯ ಉಳಿತಾಯ ಪತ್ರಗಳು (ಎನ್‌ಎಸ್‌ಸಿ), ಗೃಹ¬ಸಾಲದ ಅಸಲಿಗೆ ಜಮಾ ಆಗುವ ಮೊತ್ತ, ಮ್ಯೂಚು¬ವಲ್‌ ಫಂಡ್‌ ಸಂಸ್ಥೆಗಳು ವಿತರಿಸುವ ಷೇರುಪೇಟೆ ಆಧರಿಸಿದ ಉಳಿತಾಯ ಯೋಜನೆ¬ಗಳು (ಯು¬ಲಿಪ್‌) ಹಾಗೂ ಬ್ಯಾಂಕ್‌ಗಳು ತೆರಿಗೆ ಉಳಿತಾಯಕ್ಕೆಂದೇ ನಿಗದಿಪಡಿಸಿದ ಐದು ವರ್ಷಗಳ ಅವಧಿಯ ‘ಎಫ್‌ಡಿ’ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ, 80ಸಿಸಿ ಮತ್ತು 80ಸಿಸಿಸಿ ಅಡಿಯಲ್ಲಿ ತೆರಿಗೆ ವಿನಾಯ್ತಿಗೆ ಅರ್ಹವಾದ ಉಳಿತಾಯ ಕ್ರಮಗಳಾಗಿವೆ.
ಮಿತಿ ಹೆಚ್ಚಳಕ್ಕೆ ಕಾರಣ
 • 2008ರಲ್ಲಿ ದೇಶದ ಉಳಿತಾಯ ಪ್ರಮಾಣ ‘ಒಟ್ಟಾರೆ ಆಂತರಿಕ ಉತ್ಪಾದನೆ’ಯ (ಜಿಡಿಪಿ) ಶೇ 38ರಷ್ಟಿದ್ದುದು, 2012; 13ನೇ ಹಣ¬ಕಾಸು ವರ್ಷದ ವೇಳೆಗೆ ಶೇ 30ಕ್ಕೆ ಕುಸಿದಿತ್ತು.

ಈ ಅಂಶವನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ವೇತನ¬ದಾರರನ್ನು ಇನ್ನಷ್ಟು ಹಣ ಉಳಿತಾಯಕ್ಕೆ ಉತ್ತೇಜಿಸಲೆಂದೇ 2014; 15ನೇ ಹಣಕಾಸು ವರ್ಷದ ಮುಂಗಡ¬ಪತ್ರದಲ್ಲಿ ತೆರಿಗೆ ವಿನಾಯ್ತಿ ಸೌಲಭ್ಯ ಮಿತಿ¬ಯನ್ನು ಹೆಚ್ಚಿಸಿದೆ.

ಕಿಸಾನ್‌ ವಿಕಾಸ ಪತ್ರ
 • ಕಿಸಾನ್‌ ವಿಕಾಸ ಪತ್ರ ಯೋಜನೆಗೆ ಕೇಂದ್ರ ಸರ್ಕಾರ ಮತ್ತೆ ಚಾಲನೆ ನೀಡಿದೆ.

ಸಾರ್ವಜನಿಕ ಭವಿಷ್ಯ ನಿಧಿ ಅಡಿ ವೈಯಕ್ತಿಕವಾಗಿ ರೂ. 1.5 ಲಕ್ಷವರೆಗೆ ಉಳಿತಾಯ ಮಾಡಿದರೂ ತೆರಿಗೆ ವಿನಾಯಿತಿ ದೊರೆಯ¬ಲಿದೆ. ಇದುವರೆಗೆ ಒಂದು ಲಕ್ಷ ರೂಪಾಯಿ¬ವರೆಗಿನ ಉಳಿತಾಯಕ್ಕೆ ಮಾತ್ರ ಈ ಸೌಲಭ್ಯ ದೊರೆಯು¬ತ್ತಿತ್ತು.

ರಕ್ಷಣಾ ವೆಚ್ಚ[ಬದಲಾಯಿಸಿ]

 • ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯುವ ನಿಟ್ಟಿನಲ್ಲಿ ರಕ್ಷಣಾ ಹಾಗೂ ವಿಮಾ ಕ್ಷೇತ್ರದಲ್ಲಿನ ಎಫ್‌ಡಿಐ ಮಿತಿಯನ್ನು ಶೇ 26ರಿಂದ ಶೇ 49ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ರಕ್ಷಣಾ ಸಾಮಗ್ರಿಗಳ ದೇಶೀಯ ಉತ್ಪಾದನೆ ಹೆಚ್ಚಿ, ಉದ್ಯೋಗ ಸೃಷ್ಟಿಯಾಗುವ ಜತೆಗೆ ದೀರ್ಘಾವಧಿಯಲ್ಲಿ ವಿದೇಶಿ ವಿನಿಮಯದ ಹೊರೆಯೂ ತಗ್ಗುತ್ತದೆಂದು ನಿರೀಕ್ಷಿಸಲಾಗಿದೆ. ಅಲ್ಲದೇ ರಕ್ಷಣಾ ಇಲಾಖೆ ಮೇಲಿನ ವೆಚ್ಚವನ್ನು ಶೇ 12.5ರಷ್ಟು ಹೆಚ್ಚಿಸಲಾಗಿದ್ದು ಈಗ ಇದು ರೂ2.29 ಲಕ್ಷ ಕೋಟಿಗೆ ಮುಟ್ಟಿದೆ. ರಕ್ಷಣಾ ಅನುದಾನದಲ್ಲಿ ರೂ 1,000 ಕೋಟಿ ರೂಪಾಯಿಗಳನ್ನು ‘ಒಂದು ಒಂದು ದರ್ಜೆ– ಒಂದೇ ಪಿಂಚಣಿ’ ನೀತಿ ಜಾರಿಗಾಗಿ ಮೀಸಲಿಡಲಾಗಿದೆ.
ಹಣದುಬ್ಬರ ತಗ್ಗಿಸುವುದೇ ನಮ್ಮ ಗುರಿ
 • ಕಳೆದ ಎರಡು ವರ್ಷಗಳಿಂದ ಆಹಾರ ಹಣದುಬ್ಬರ ಮಿತಿಮೀರಿದೆ. ಹಣದುಬ್ಬರ ತಗ್ಗಿಸುವುದೇ ನಮ್ಮ ಗುರಿಯಾಗಿದೆ ಎಂದು ಜೇಟ್ಲಿ ಹೇಳಿದರು. ಉತ್ಪಾದನಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯ ಅವಕಾಶವಿದೆ. ವಿತ್ತೀಯ ಕೊರತೆಯನ್ನು ಶೇ. 4.1(%) ಕ್ಕೆ ಇಳಿಸುವ ಗುರಿ ಹೊಂದಿದ್ದೇವೆ. ಜಾಗತಿಕ ವಿದ್ಯಮಾನಗಳು ಮತ್ತು ಮಳೆ ನಮಗೆ ತೊಡಕು ಉಂಟುಮಾಡಿವೆ ಎಂದು ಜೇಟ್ಲಿ ಹೇಳಿದರು.(Target of 4.1 per cent fiscal deficit is daunting but accepting it as a challenge)
ಒಟ್ಟು ಆದಾಯ ವೆಚ್ಚ

ಒಟ್ಟು ಆದಾಯ ವೆಚ್ಚ ದ ವಿವರವನ್ನು ಯಾವ ಪತ್ರಿಕೆಯೂ ಪ್ರಕಟಿಸಿಲ್ಲ. ಆದರೆ ರಕ್ಷಣಾ ವೆಚ್ಚ ೧೨.೫ % ಇದ್ದು ಅದು ೨.೨೯ಲಕ್ಷ ಕೋಟಿಯಾಗುವುದೆಂದು ಹೇಳಿರುವುದರಿಂದ ಒಟ್ಟು ವೆಚ್ಚ ರೂ.೧೮,೩೨,೦೦೦/18,32,000 ಕೋಟಿಯೆಂದು ಅಂದಾಜು/ಲೆಖ್ಖಹಾಕಬಹುದು. (Aim to achieve 7-8 per cent economic growth rate in next 3–4 years Budget proposes Phttps://en.wikipedia.org/wiki/2014_Union_budget_of_Indiaan expenditure of INR5.75 trillion (US$97 billion) for the current fiscal year)[೨]

ರೂಪಾಯಿ ಲೆಖ್ಖದಲ್ಲಿ ಕೇಂದ್ರದ ಆದಾಯ ಮತ್ತು ವೆಚ್ಚ[ಬದಲಾಯಿಸಿ]

ಒಟ್ಟು ವೆಚ್ಚ ರೂ.೧೮,೩೨,೦೦೦/18,32,000 ಕೋಟಿಯೆಂದು ಅಂದಾಜು/ಲೆಖ್ಖಹಾಕಬಹುದು.
 • ಹೆಚ್ಚಿನ ವಿವರಕ್ಕೆ - ಕೊಡಿಗೆಗೆ ಇದರ ಚರ್ಚೆ ಪುಟ ನೋಡಿ.
ಆದಾಯ ಪೈಸೆಗಳಲ್ಲಿ/1 ರೂಪಾಯಿಯಲ್ಲಿ
 1. ಸಾಲ ಮತ್ತು ಇತರೆ ಹೊಣೆ ---24
 2. ಸಾಲರಹಿತ ವರಮಾನ -------03
 3. ತೆರಿಗೆಯೇತರ ವರಮಾನ -----10
 4. ಸೇವಾ ಮತ್ತು ಇತರೆ ತೆರಿಗೆ ---10
 5. ಕಾರ‍್ಪೋರೇಶನ್‘ ತೆರಿಗೆ -----21
 6. ಆದಾಯ ತೆರಿಗೆ ----------13
 7. ಕಸ್ಟಮ್ಸ್‘ --------------೦9
 8. ಕೇಂದ್ರ ಅಬಕಾರಿ ಸುಂಕ -----10
ವೆಚ್ಚ ಪೈಸೆಗಳಲ್ಲಿ/1 ರೂಪಾಯಿಯಲ್ಲಿ
 1. ಕೇಂದ್ರೀಯ ಯೋಜನೆಗಳು- ------------------------11
 2. ರಾಜ್ಯ ಮತ್ತುಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನಾ ನೆರವು ----15
 3. ರಾಜ್ಯ ಮತ್ತುಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೇತರ ನೆರವು --03
 4. ತೆರಿಗೆಯಲ್ಲಿ ರಾಜ್ಯಗಳ ಪಾಲು ಹಂಚಿಕೆ ------------------18
 5. ಬಡ್ಡಿ ಪಾವತಿ ---------------------------------20
 6. ಸಬ್ಸಿಡಿ -------------------------------------12
 7. ಇತರೆ ಯೋಜನೇತರ ವೆಚ್ಚಗಳು ----------------------11
 • ಒಟ್ಟು--------------------------------------10೦ ಪೈಸೆ
 • --೦೦--

ಆಧಾರ[ಬದಲಾಯಿಸಿ]

ನೋಡಿ—ಇಂಗ್ಲಿಷ್`ವಿಭಾಗ [೩]

 • ಲೋಕಸಭೆಯಲ್ಲಿ ಹಣಕಾಸು ಮಂತ್ರಿ ಅರಣ್`ಜೇಟ್ಲಿಯವರ ಬಜೆಟ್`ಮಂಡನೆ.
 • ಕನ್ನಡ ಪ್ರಭ; ಟೈಮ್ಸ ಆಫ್ ಇಂಡಿಯಾ ವರದಿ ; ವಿಜಯ ವಾಣಿ ದಿನ ಪತ್ರಿಕೆ; ಪ್ರಜಾವಾಣಿ ದಿನ ಪತ್ರಿಕೆ ೧೦-೭-೨೦೧೪