ಭಾರತದಲ್ಲಿ ಸಂಪತ್ತು ತೆರಿಗೆ

ವಿಕಿಪೀಡಿಯ ಇಂದ
Jump to navigation Jump to search

ಸಂಪತ್ತು ತೆರಿಗೆ 2014-15[ಬದಲಾಯಿಸಿ]

ಸಂಪತ್ತು ತೆರಿಗೆ ಕಾಯ್ದೆ 1957ರಿಂದ ಜಾರಿಯಲ್ಲಿದೆ.
ಭಾರತದ ಪ್ರಜೆಗಳು ತಮ್ಮ ಸಂಪತ್ತಿನ ಮೌಲ್ಯವನ್ನು ಲೆಕ್ಕಹಾಕಿ ನಿಯಮದಂತೆ ಸಂಪತ್ತು ತೆರಿಗೆಯನ್ನು ಪಾವತಿಸಬೇಕು.
ವ್ಯಕ್ತಿಯು ತಾನು ಸಂಪಾದಿಸಿದ /ಹೊಂದಿರುವ ಆಸ್ತಿಗಳಿಗೆ ವರ್ಷಾಂತ್ಯದಲ್ಲಿ ಸಂಪತ್ತು ತೆರಿಗೆ ಪಾವತಿಸಬೇಕಾಗುತ್ತದೆ. ಸಂಪತ್ತು ತೆರಿಗೆಗಳ ನಿರ್ವಹಣೆ ಹಾಗೂ ಪ್ರತಿ ವರ್ಷದ ತೆರಿಗೆ ವಸೂಲಿ ಜವಾಬ್ದಾರಿಯು ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.
ಸಂಪತ್ತು ತೆರಿಗೆಯನ್ನೂ ಸಹ ಆದಾಯ ತೆರಿಗೆ ಪಾವತಿಸುವ ಹಾಗೆಯೇ ತೆರಿಗೆ ಇಲಾಖೆಗೆ ವರ್ಷಕ್ಕೊಮ್ಮೆ ತೆರಿಗೆ ಪಾವತಿಸಬೇಕಾಗುತ್ತದೆ. ಆಸ್ತಿಯ ವಿವರಗಳನ್ನು ಒಳಗೊಂಡ ಲೆಕ್ಕಪತ್ರವನ್ನೂ (ರಿಟರ್ನ್) ಜುಲೈ 31ರಂದು ಆದಾಯ ತೆರಿಗೆ ಇಲಾಖೆ ಸಲ್ಲಿಸಬೇಕಾಗುತ್ತದೆ.

ಸಂಪತ್ತು[ಬದಲಾಯಿಸಿ]

ಈ ಕೆಳಕಂಡ ಸ್ವತ್ತುಗಳನ್ನು ಸಂಪತ್ತು ಎಂದು ಪರಿಗಣಿಸಲಾಗುತ್ತದೆ.

 • 1. ಕಟ್ಟಡ ಹಾಗೂ ಮನೆಗಳು.
ವಿನಾಯತಿಗಳು
ಸ್ವಂತ ವಾಸಕ್ಕಾಗಿ ಒಂದು-ವಾಸದ ಮನೆಗೆ ಮಾತ್ರಾ; ಹೆಚ್ಚುವವರಿ ಇರುವಮನೆ ಬಾಡಿಗೆಗೆ ಕೊಡದೆ ಸ್ವಂತಕ್ಕೆ ಇಟ್ಟುಕೊಂದರೆ ಅದರ ಮೌಲ್ಯ ಸಂಪತ್ತು ತರಿಗೆಗೆ ಒಳಪಡುತ್ತದೆ.
ಬಾಡಿಗೆಗೆ ನೀಡಿರವ ಮನೆಗಳು;
ವಾಣಿಜ್ಯ ಕಟ್ಟಡಗಳು;
 • 2.ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಮುತ್ತುಗಳಿಂದ ತಯಾರಿಸಿದ ಆಭರಣಗಳು
 • ೩.ಕಾರುಗಳು; ಆದರೆ (ಬಾಡಿಗೆಗೆ ನೀಡುವ ಕಾರು ಹಾಗೂ ಟ್ಯಾಕ್ಸಿಗಳಿಗೆ ಈ ತೆರಿಗೆಯಿಂದ ವಿನಾಯ್ತಿ ಇದೆ)ದೋಣಿ, ಹಡಗು ಮತ್ತು ಹೆಲಿಕಾಪ್ಟರ್‌, ವಿಮಾನ ಮೊದಲಾದ ಸಂಚಾರದ ವಾಹನಗಳು.
 • 4.ನಗರ ಪ್ರದೇಶದಲ್ಲಿನ ನಿವೇಶನ :ನಗರ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳು ಸಂಪತ್ತು ತೆರಿಗೆಗೆ ಗುರಿಯಾಗುತ್ತವೆ.(500 ಚ.ಮೀ.ಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಸಂಪತ್ತು ವಿನಾಯಿತಿ ಇದೆ, ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನ ಹಾಗೂ ಕೃಷಿ ಭೂಮಿಗೆ ಸಂಪತ್ತು ತೆರಿಗೆ ಇಲ್ಲ.)
 • 5.ಒಬ್ಬ ವ್ಯಕ್ತಿಯು ರೂ50 ಸಾವಿರಕ್ಕಿಂತ ಹೆಚ್ಚು ನಗದು ಹಣವನ್ನು ಹೊಂದಿದ್ದರೆ ಸಂಪತ್ತು ತೆರಿಗೆ ನೀಡಬೇಕಾಗುತ್ತದೆ. ಆದರೆಬ್ಯಾಂಕ್ ಖಾತೆಯಲ್ಲಿ ಜಮಾ ಆಗಿರುವ ಹಣಕ್ಕೆ ವಿನಾಯಿತಿ ಇರುತ್ತದೆ.
 • 6.ಟ್ರಸ್ಟ್‌ ಮತ್ತು ಸೇವಾ ಸಂಸ್ಥೆಗಳು (ಸಹಕಾರ ಸಂಘಗಳು) ಸಂಪತ್ತು ತೆರಿಗೆಗೆ ಒಳಪಡುವುದಿಲ್ಲ. ಆದ್ದರಿಂದ ಮುಂಬಯಿ ಕ್ರಿಕೆಟ್ ಮಂಡಳಿಯ ಆಸ್ತಿಗಳು ಸಂಪತ್ತು ತೆರಿಗೆಗೆ ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಲಾಗಿದೆ.

ಸಂಪತ್ತು ತೆರಿಗೆ ಪ್ರಮಾಣ[ಬದಲಾಯಿಸಿ]

 • ಸಂಪತ್ತು ಮೌಲ್ಯ ರೂ30 ಲಕ್ಷ ಮೀರಿದರೆ, ರೂ30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ತೆರಿಗೆ ವಿಧಿಸಲಾಗುತ್ತದೆ
 • ವರ್ಷಾಂತ್ಯದ ಮೊದಲು ಸಂಪತ್ತು ಮಾರಾಟ ಮಾಡಿದರೆ, ಆ ಆಸ್ತಿಯು ತೆರಿಗೆಗೆ ಒಳಪಡುವುದಿಲ್ಲ' ಆದರೆ ಕೊಂಡರೆ ಉಂಟು.

|-

 • ವ್ಯಕ್ತಿಯ ಮಾಲೀಕತ್ವದಲ್ಲಿರುವ ಎಲ್ಲ ಸಂಪತ್ತುಗಳ (ರೂ30 ಲಕ್ಷಕ್ಕಿಂತ ಅಧಿಕ) ಮೌಲ್ಯಕ್ಕೆ ಶೇ 1ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಲಾಗುತ್ತದೆ.
 • ವ್ಯಕ್ತಿಯ ಮಾಲೀಕತ್ವದಲ್ಲಿರುವ ಎಲ್ಲ ಸಂಪತ್ತುಗಳ ಒಟ್ಟು ಮೌಲ್ಯ,ರೂ30 ಲಕ್ಷಕ್ಕಿಂತ ಅಧಿಕ ಇದ್ದರೆ, ಅಧಿಕ ಮೌಲ್ಯಕ್ಕೆ ಶೇ 1ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಲಾಗುತ್ತದೆ
 • ಕುಟುಂಬದಲ್ಲಿ ವರ್ಗಾವಣೆಯಾದ ಸ್ವತ್ತುಗಳೂ ಸೇರಿ ಸಂಪತ್ತು ತೆರಿಗೆಗೆ ಗುರಿಯಾಗುತ್ತವೆ.(ವರ್ಗಾವನೆ ಮಾಡಿ ತೆರಿಗೆ ಉಳಿಸುವಂತಿಲ್ಲ.)
 • ಪ್ರತಿ ಸದಸ್ಯರ ಹೆಸರಿನಲ್ಲಿ ನೇರವಾಗಿ ಖರೀದಿಸಿದ ಆಸ್ತಿಗಳಿಗಾದರೆ ರೂ30 ಲಕ್ಷ ಮೌಲ್ಯ ದಾಟುವವರೆಗೂ ಆ ವ್ಯಕ್ತಿಯ ಆಸ್ತಿಗಳಿಗೆ ಸಂಪತ್ತು ತೆರಿಗೆ ಹೊರೆ ಬೀಳುವುದಿಲ್ಲ.
ಸಂಪತ್ತು ತೆರಿಗೆ ಲೆಕ್ಕ
ಸ್ವತ್ತುಗಳ ಮೌಲ್ಯ ಮೂಲ ರಿಯಾಯತಿ ತೆರಿಗೆಗೆ ಒಳಪಡುವ ಸ್ವತ್ತು ಸಂಪತ್ತು ತೆರಿಗೆ:ಶೇ.1ರಷ್ಟು
90 ಲಕ್ಷ ರೂ. 30 ಲಕ್ಷ ರೂ. 60 ಲಕ್ಷ ರೂ. 60.000ರೂ.
 • ಸಂಪತ್ತು ತೆರಿಗೆಯನ್ನು ಪ್ರತಿ ಹಣಕಾಸು ವರ್ಷದ ಅಂತ್ಯದಲ್ಲಿ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ ನಿವೇಶನ ಮೌಲ್ಯಕ್ಕೆ ಈ ವರ್ಷ ತೆರಿಗೆ ನೀಡಿದರೆ, ಅದೇ ನಿವೇಶನಕ್ಕೆ ಮುಂದಿನ ವರ್ಷ ಮತ್ತೆ ಸಂಪತ್ತು ತೆರಿಗೆ ನೀಡಬೇಕು.

ಆದರೆ, ತೆರಿಗೆಗೆ ಒಳಪಡುವ ಸ್ವತ್ತುಗಳ ಸಂಬಂಧಿಸಿದ ಸಾಲದ ಮೊತ್ತವನ್ನು, ಸ್ವತ್ತಿನ ಮೌಲ್ಯದಿಂದ ಕಳೆದು ಉಳಿದ ಮೌಲ್ಯಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.

ಈ ಸಂಪತ್ತು ತೆರಿಗೆಗೆ ಸೆಸ್ ಹಾಗೂ ಸರ್ಚಾರ್ಜ್ ವಿಧಿಸಲಾಗುವುದಿಲ್ಲ

ಭಾರತ ಸರ್ಕಾರದ ಸಂಪತ್ತು ತೆರಿಗೆಯ ಆದಾಯ[ಬದಲಾಯಿಸಿ]

ವರ್ಷ/ಸಾಲು ರೂಪಾಯಿ/ಕೋಟಿಗಳಲ್ಲಿ
2014-15 : ಅಂದಾಜು 950
2013-14 : ಅಂದಾಜು 950
2012-13 : 844.12
2011-12 : 787
2010-11 687
Wealth tax accounts for less than 0.25% of total direct taxes and is minuscule in the total revenue collection. Last year (2013-2014)?, it contributed 866 crore to the total revenue collection of 1,038,036 crore.

ಆಧಾರ[ಬದಲಾಯಿಸಿ]

|-

ವರ್ಗಗಳು[ಬದಲಾಯಿಸಿ]