ಭಾರತ ಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭಾರತ ಮಾರ್ಗ
ಲೇಖಕರುE.M. ಫಾರ್ಸ್ಟರ್
ಮೂಲ ಹೆಸರುಎ ಪ್ಯಾಸೇಜ್ ಟು ಇಂಡಿಯಾ
ಅನುವಾದಕಜಿ.ಬಿ.ಜೋಶಿ
ಭಾಷೆಕನ್ನಡ
ವಿಷಯಇತಿಹಾಸ, ಭಾರತದ ಸ್ವಾತಂತ್ರ ಚಳುವಳಿ,
ಪ್ರಕಾಶಕರುಮನೋಹರ ಗ್ರಂಥ ಪ್ರಕಾಶನ ಸಮಿತಿ
ಪ್ರಕಟವಾದ ದಿನಾಂಕ
೧೯೨೦

ಎ ಪ್ಯಾಸೇಜ್ ಟು ಇಂಡಿಯಾ - ಬ್ರಿಟಿಷ್ ಆಳಿಕೆ ಮತ್ತು ೧೯೨೦ ರಲ್ಲಿನ ಭಾರತದ ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ E.M. ಫಾರ್ಸ್ಟರ್ ಅವರು ಬರೆದಿರುವ ಒಂದು ಕಾದಂಬರಿ. ಇದು ೧೯೨೪ ರಲ್ಲಿ ಪ್ರಕಟವಾಯಿತು. ಇದನ್ನು ಮಾಡರ್ನ್ ಲೈಬ್ರರಿಯು ಇಂಗ್ಲೀಷ್ ಸಾಹಿತ್ಯದ ೧೦೦ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ಆಯ್ಕೆ ಮಾಡಿದೆ. ೧೯೨೪ರ ಜೇಮ್ಸ್ ಟೈಟ್ ಬ್ಲಾಕ್ ಸ್ಮಾರಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಟೈಮ್ ನಿಯತಕಾಲಿಕೆಯ "೧೯೨೩ ರಿಂದ ೨೦೦೫ ರವರೆಗಿನ ಟೈಮ್ ೧೦ ಇಂಗ್ಲೀಷ್ ಭಾಷೆಯ ಉತ್ತಮ ಕಾದಂಬರಿಗಳ"ಲ್ಲಿ ಇದನ್ನು ಸೇರಿಸಿದೆ. ಕಾದಂಬರಿಯು ಭಾರತದಲ್ಲಿನ ಫಾರ್ಸ್ಟರ್ ಅವರ ಅನುಭವಗಳನ್ನು ಆಧರಿಸಿದೆ. ಪುಸ್ತಕದ ಶೀರ್ಷಿಕೆಯನ್ನು ಫಾರ್ಸ್ಟರ್ ಅವರು ಹುಲ್ಲಿನ ವಾಲ್ಟ್ ವಿಟ್ಮನ್‌ರ ಹುಲ್ಲಿನ ದಳಗಳು ( ಇಂಗ್ಲೀಶಿನಲ್ಲಿ Leaves of Grass) ಕೃತಿಯಿಂದ ಎರವಲು ಪಡೆದಿದ್ದಾರೆ.

ಕಥೆಯು ಡಾ ಅಜೀಜ್, ಆತನ ಬ್ರಿಟಿಷ್ ಸ್ನೇಹಿತ ಶ್ರೀ ಸಿರಿಲ್ ಫೀಲ್ಡಿಂಗ್, ಶ್ರೀಮತಿ ಮೂರ್ ಮತ್ತು ಮಿಸ್ ಅಡೆಲ ಕ್ವೆಸ್ಟೆಡ್ - ಈ ನಾಲ್ಕು ಪಾತ್ರಗಳ ಸುತ್ತ ಸುತ್ತುತ್ತದೆ. ಗುಹೆಗಳ ವೀಕ್ಷಣೆಯ ಒಂದು ಪ್ರವಾಸದ ಸಮಯದಲ್ಲಿ, ಅಡೆಲ ಮೇಲೆ ಆಕ್ರಮಣದ ಪ್ರಯತ್ನವನ್ನು ಮಾಡಿದನೆಂದು ಡಾ ಅಜೀಜ್ ರನ್ನು ಆರೋಪಿಸಲಾಗುತ್ತದೆ. ಅಜೀಜ್ ನ ವಿಚಾರಣೆಯ, ಮುಂಚಿನ ಮತ್ತು ನಂತರದ ಘಟನಾವಳಿಗಳು ಭಾರತೀಯರ ಮತ್ತು ಭಾರತವನ್ನು ಆಳುತ್ತಿರುವ ಬ್ರಿಟಿಷ್ ವಸಾಹತುಗಾರರ ನಡುವಿನ ಎಲ್ಲಾ ಜನಾಂಗೀಯ ಉದ್ವೇಗಗಳನ್ನು ಪೂರ್ವಾಗ್ರಹಗಳನ್ನು ಬಯಲಿಗೆ ತರುತ್ತವೆ.

ಈ ಕಾದಂಬರಿಯು "ಭಾರತಮಾರ್ಗ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಮನೋಹರ ಗ್ರಂಥಮಾಲೆಯ ಜಿ.ಬಿ.ಜೋಶಿಯವರು ಅನುವಾದ ಮಾಡಿದ್ದಾರೆ . ಈ ಪುಸ್ತಕವು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಲ್ಲಿದ್ದು ಅದನ್ನು ಇಲ್ಲಿ[ಶಾಶ್ವತವಾಗಿ ಮಡಿದ ಕೊಂಡಿ] ಓದಬಹುದು


ಇದೇ ಹೆಸರಿನ ಚಲನಚಿತ್ರವನ್ನು ಡೇವಿಡ್ ಲೀನ್ ಅವರು ೧೯೮೪ರಲ್ಲಿ ನಿರ್ಮಿಸಿದ್ದಾರೆ. ಇದು ಅವರ ಕೊನೆಯ ಚಿತ್ರವಾಗಿದೆ.