ಭಾರತ-ಅಮೇರಿಕ ಅಣುಶಕ್ತಿ ಒಪ್ಪಂದ

ವಿಕಿಪೀಡಿಯ ಇಂದ
Jump to navigation Jump to search

ಭಾರತ-ಅಮೇರಿಕ ಅಣುಶಕ್ತಿ ಒಪ್ಪಂದವು ಭಾರತ ಮತ್ತು ಅಮೇರಿಕ ದೇಶಗಳ ನಡುವೆ ೨೦೦೬ರಲ್ಲಿ ಭಾರತದ ಅಣುಶಕ್ತಿಯ ಬಗ್ಗೆ ನಿರೂಪಿಸಲಾದ ಒಂದು ಒಪ್ಪಂದ. ಈ ಒಪ್ಪಂದದ ಚೌಕಟ್ಟನ್ನು ಜುಲೈ ೧೮, ೨೦೦೫ ರಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೇರಿಕಾದ ಅಧ್ಯಕ್ಷ ಜಾರ್ಜ್ ಡಬ್ಯೂ. ಬುಷ್ ಜಂಟಿ ಹೇಳಿಕೆಯನ್ನು ನೀಡಿದ್ದಾರೆ. ಇದರ ಪ್ರಕಾರ ಭಾರತವು ಶಸ್ತ್ರಸ್ತ್ರಕ್ಕೆ ಬಳಸಲಾಗುವ ಅಣುಶಕ್ತಿ ಮೂಲಗಳನ್ನು ಮತ್ತು ನಾಗರೀಕ ಕಾರ್ಯಗಳಿಗೆ ಬಳಸುವ ಮೂಲಗಳನ್ನು ಪ್ರತ್ಯೇಕಿಸಲು ಒಪ್ಪಿಕೊಂಡಿತು. ಇದಕ್ಕೆ ಬದಲಾಗಿ ಇಲ್ಲಿಯವರೆಗೆ ನಿರ್ಭಂದಿತವಾಗಿದ್ದ ಅಣುಶಕ್ತಿ ಪೂರೈಸುವ ಗುಂಪಿನಿಂದ ನಾಗರೀಕ ಉದ್ದೇಶಗಳಿಗೆ ವಾಣಿಜ್ಯವನ್ನು ಪುನಃ ಪ್ರಾರಂಭಿಸಲು ಅನುಮತಿ ದೊರೆಯಿತು. ಭಾರತ ಈ ಒಪ್ಪಂದವನ್ನು ಜಾರಿಗೆ ತಂದ ನಂತರ, ೩೫ ನಾಗರಿಕ ಪರಮಾಣು ಅನುಸ್ಥಾಪನೆಗಳ ಪರಿಶೀಲನೆಗಳನ್ನು ಭಾರತವು ತನ್ನ ಪ್ರತ್ಯೇಕಿಸುವಿಕೆ ಯೋಜನೆಯಿಂದ ಗುರುತಿಸಿದ ಮೇಲೆ ಹಂತ ಹಂತವಾಗಿ ಆರಂಭಿಸಿದರು.