ಭಾರತ್ ಸಂಚಾರ್ ನಿಗಮ್ ಲಿಮಿಟೆಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bharat Sanchar Nigam Limited
ಸಂಸ್ಥೆಯ ಪ್ರಕಾರಸರ್ಕಾರಿ ಸ್ವಾಮ್ಯದ
ಸ್ಥಾಪನೆ15 ಸೆಪ್ಟೆಂಬರ್ 2000 (2000-09-15)
ಮುಖ್ಯ ಕಾರ್ಯಾಲಯನವ ದೆಹಲಿ, ಭರತ
ಪ್ರಮುಖ ವ್ಯಕ್ತಿ(ಗಳು)ಅನುಪಮ್ ಶ್ರೀವಾಸ್ತವ (ಅಧ್ಯಕ್ಷರು ಮತ್ತು MD)
ಉದ್ಯಮದೂರಸಂಪರ್ಕ
ಸೇವೆಗಳುಸ್ಥಿರ ಲೈನ್ ಮತ್ತು ಮೊಬೈಲ್ ಟೆಲಿಫೋನಿ, ಇಂಟರ್ನೆಟ್ ಸೇವೆಗಳು, ಡಿಜಿಟಲ್ ಟೆಲಿವಿಷನ್, ಐಪಿಟಿವಿ
ಆದಾಯ೩೨,೯೧೮ ಕೋಟಿ (ಯುಎಸ್$೭.೩೧ ಶತಕೋಟಿ) (2016)[೧]
ನಿವ್ವಳ ಆದಾಯ೩,೮೫೫ ದಶಲಕ್ಷ (ಯುಎಸ್$]೮೫.೫೮ ದಶಲಕ್ಷ) (2016)[೨]
ಒಟ್ಟು ಆಸ್ತಿ  ೮೯೩ ಶತಕೋಟಿ (ಯುಎಸ್$೧೯.೮೨ ಶತಕೋಟಿ) (2014)[೧]
ಮಾಲೀಕ(ರು)ಭಾರತ ಸರ್ಕಾರ
ಉದ್ಯೋಗಿಗಳು211,086 (2016)
ಜಾಲತಾಣwww.bsnl.co.in

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್ ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ) ಭಾರತನವದೆಹೆಲಿಯಲ್ಲಿ ಮುಖ್ಯ ಕಛೇರಿಯನ್ನು ಹೊ೦ದಿರುವ ಭಾರತೀಯ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ. ಇದು ೧೫ ಸೆಪ್ಟೆಂಬರ್೨೦೦೦ ರಂದು ಸಂಘಟಿತವಾಯಿತು ಮತ್ತು ಅಕ್ಟೋಬರ್ ೨೦೦೦ ೧ ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರದ ಇಲಾಖೆಗಳಾದ ಟೆಲಿಕಾಂ ಸೇವೆಗಳು(ಡಿಟಿಎಸ್) ಮತ್ತು ಟೆಲಿಕಾಂ ಕಾರ್ಯಾಚರಣೆ (ಡಿಟಿಒ)ಯಿಂದ ದೂರಸಂಪರ್ಕ ಸೇವೆಗಳು ಮತ್ತು ನೆಟ್ವರ್ಕ್ ನಿರ್ವಹಣೆಯ ಒದಗಿಸುವ ವ್ಯಾಪಾರವನ್ನು ಸ್ವಾಧೀನಪಡಿಸಿಕೊಂಡಿತು. ಇದು ಭಾರತದಲ್ಲಿ ಶೇ.೬೦% ಮಾರುಕಟ್ಟೆ ಪಾಲನ್ನುಹೊ೦ದಿಕೊ೦ಡು, ಸ್ಥಿರ ದೂರವಾಣಿಯ ಅತಿದೊಡ್ಡ ಪೂರೈಕೆದಾರರಾಗಿ, ಅತಿದೊಡ್ಡ ಬ್ರಾಡ್ಬ್ಯಾಂಡ್ ಸೇವೆಯನ್ನು ನೀಡುವ, ಮತ್ತು ಭಾರತದಲ್ಲಿ ನಾಲ್ಕನೇ ದೊಡ್ಡ ಮೊಬೈಲ್ ದೂರವಾಣಿಸಂಪರ್ಕ ಒದಗಿಸುವ ಕ೦ಪನಿಯಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ದೂರಸಂಪರ್ಕ ವಲಯದಲ್ಲಿ ತೀವ್ರ ಸ್ಪರ್ಧೆಯಿಂದಾಗಿ ಕಂಪನಿಯ ಆದಾಯ ಮತ್ತು ಮಾರುಕಟ್ಟೆ ಪಾಲು ಭಾರಿ ಕಡಿಮೆಯಾಗಿದೆ .

ಬಿಎಸ್ಎನ್ಎಲ್ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಸಂವಹನ ಸೇವೆ ಒದಗಿಸುವವ (ಸಿಎಸ್ಪ್) ಕ೦ಪನಿಯಾಗಿದೆ. ಇದು ಜನವರಿ ೨೦೧೪ರ೦ತೆ ೧೧೭ ಮಿಲಿಯನ್ ಗ್ರಾಹಕ ಮೂಲವನ್ನು ಹೊಂದಿದೆ. ಇದು ಮುಂಬಯಿ ಮತ್ತು ದಹಲಿ ಮೆಟ್ರೋಪಾಲಿಟನ್ ನಗರಗಳನ್ನು ಹೊರತುಪಡಿಸಿ ಭಾರತದಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಹೊಂದಿದೆ. ಮಹಾನಗರ್ ಟೆಲಿಫೋನ್ ನಿಗಮ (ಎಂಟಿಎನ್ಎಲ್) ಮುಂಬಯಿ ಮತ್ತು ದಹಲಿ ಮೆಟ್ರೋಪಾಲಿಟನ್ ನಗರಗಳಿಗೆ ದೂರಸಂಪರ್ಕವನ್ನು ಒದಗಿಸುತ್ತದೆ.

ಬಿಎಸ್‍ಎನ್‍ಎಲ್ ಖಾಸಗಿಗೆ[ಬದಲಾಯಿಸಿ]

 • 'ಬಿಎಸ್‌ಎನ್‌ಎಲ್‌ನ್ನು ಮುಗಿಸ್ತಾ ಇದ್ದೀವಿ. ಮುಂಬರುವ ದಿನಗಳಲ್ಲಿ ಆ ಸ್ಥಾನವನ್ನು ಖಾಸಗಿ ಸಂಸ್ಥೆಗಳನ್ನು ತುಂಬಲು ತೀರ್ಮಾನ ಮಾಡಿದೆ. ಇಡೀ ದೇಶದಲ್ಲಿ 85,000 ಜನರನ್ನು ತೆಗೀತಾ ಇದ್ದೀವಿ. ಮುಂದಿನ ದಿನಗಳಲ್ಲಿ ಇನ್ನಷ್ಟು ತೆಗೆಯಬೇಕಾದ ಅಗತ್ಯ ಬರಬಹುದು. ಏನಾದರೂ ಸರಿ, ಮೇಜರ್ ಸರ್ಜರಿ ಆದರೂ ಸರಿ. ಅದನ್ನು ಬಿಎಸ್‌ಎನ್‌ಎಲ್‌ನ್ನು ಸರಿ ಮಾಡಲು ಖಾಸಗೀಕರಣ ಮಾಡುತ್ತೀವಿ. ಇದೊಂದೇ ದಾರಿ, ಮತ್ತೆ ಬೇರೆ ದಾರಿ ಇಲ್ಲ.' ಎಂದು ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಹೇಳಿದರು. ಬಿಎಸ್‍ಎನ್‍ಎಲ್‍ ಸುಮಾರು ಎಂಟು ಲಕ್ಷ ಕೋಟಿ ರುಗಳ ಆಸ್ತಿಯನ್ನು ಹೊಂದಿದೆ.[೩]

ನಷ್ಟದಲ್ಲಿ[ಬದಲಾಯಿಸಿ]

 • ಮಾಧ್ಯಮ ವರದಿಗಳ ಪ್ರಕಾರ, 2018-19ನೇ ಆರ್ಥಿಕ ವರ್ಷದಲ್ಲಿ ಬಿಎಸ್ಎನ್ಎಲ್ ರೂ. 14 ಸಾವಿರ ಕೋಟಿ ಹಾಗೂ ಎಂಟಿಎನ್ಎಲ್ ರೂ. 10 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಿವೆ. ಎರಡೂ ಸಂಸ್ಥೆಗಳು ಕ್ರಮವಾಗಿ 1.67 ಲಕ್ಷ ಹಾಗೂ 22 ಸಾವಿರ ಸಿಬ್ಬಂದಿಯನ್ನು ಹೊಂದಿವೆ. ಮಾರುಕಟ್ಟೆ ಹಾಗೂ ಬ್ಯಾಂಕುಗಳಲ್ಲಿ ಅವು ಹೊಂದಿರುವ ಒಟ್ಟು ಸಾಲದ ಮೊತ್ತ ರೂ.40 ಸಾವಿರ ಕೋಟಿ. ಸರ್ಕಾರವು ಘೋಷಿಸಿದ ಪರಿಹಾರ ಕ್ರಮದ ಭಾಗವಾಗಿ, ನವೆಂಬರ್ 2019 ಎರಡನೇ ವಾರದ ಅಂತ್ಯದಲ್ಲಿ ಸ್ವಯಂ ನಿವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಿಎಸ್‌ಎನ್‌ಎಲ್‌ ಸಿಬ್ಬಂದಿಯ ಸಂಖ್ಯೆ 70,000.[೪]
 • ಕಾರಣ:ಎಲ್ಲಖಾಸಗಿ ಟೆಲಿಕಾಂ ಕಂಪನಿಗಳು ತೀವ್ರ ವೇಗದ ತರಂಗಾಂತರ ಪಡೆದು ಮಾರುಕಟ್ಟೆಯಲ್ಲಿ ಉತ್ತಮ ಸ್ಪರ್ಧೆ ನೀಡುತ್ತಿದ್ದರೆ, ಬಿಎಸ್ಸೆನ್ನೆಲ್‌ ಸ್ವತಃ ಹಿಂದೆ ಬೀಳುವಂತೆ ಕೇಂದ್ರ ಸರಕಾರವೇ ಮಾಡಿದೆ. ಸರಕಾರ "4ಜಿಯನ್ನು ಬಿಎಸ್ಸೆನ್ನೆಲ್‌ಗೆ ತಡೆಹಿಡಿದಿದೆ" ಎಂಬ ಆರೋಪ ಬಿಎಸ್ಸೆನ್ನೆಲ್‌ನ ಹಿರಿಯ ಉದ್ಯೋಗಿಗಳದ್ದು.[೫]
 • 2015ರಲ್ಲಿ ಮಾರುಕಟ್ಟೆಗೆ ರಿಲಯನ್ಸ್‌ ಜಿಯೊ ಪ್ರವೇಶ ಮಾಡಿತು. ಟೆಲಿಕಾಂನಲ್ಲಿ ಯಾವ ಹಿನ್ನೆಲೆಯೂ ಇಲ್ಲದ ಈ ಸಂಸ್ಥೆಗೆ ಸರಕಾರ 3ಜಿ ಹಾಗೂ 4ಜಿಯನ್ನು ಧಾರಾಳವಾಗಿ ನೀಡಿತು. ಅತ್ಯಂತ ಅಗ್ಗದ ದರಗಳ ಸ್ಪರ್ಧೆಯನ್ನು ಜಿಯೊ ಒಡ್ಡಿತು. ಮಾರುಕಟ್ಟೆಯಲ್ಲಿ ಆರೋಗ್ಯಕರ ಪೈಪೋಟಿ ಕಾಪಾಡಲು ಟೆಲಿಕಾಂ ನಿಯಂತ್ರಣ ಸಂಸ್ಥೆ (ಟ್ರಾಯ್‌) ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಈಗ ಬಹುತೇಕ ಎಲ್ಲ ಟೆಲಿಕಾಂ ಸಂಸ್ಥೆಗಳೂ ನಷ್ಟದಲ್ಲಿವೆ; ಒಂದು ಕಾಲದಲ್ಲಿ ದೇಶದ ಟೆಲಿಕಾಂ ವಲಯದಲ್ಲಿಕ್ರಾಂತಿ ಮಾಡಿದ ಬಿಎಸ್‌ಎನ್‌ಎಲ್‌, ಗ್ರಾಮೀಣ ಭಾರತದಲ್ಲಿ ಇಂದಿಗೂ ಬಲಿಷ್ಠವಾದ ಜಾಲವನ್ನು ಹೊಂದಿದೆ. ಗುಡ್ಡಗಾಡು, ಮರುಭೂಮಿ ಎಲ್ಲೆಲ್ಲೂಇದೆ. ಗ್ರಾಮೀಣ ಪ್ರದೇಶದಲ್ಲಿಯೂ ಅದಕ್ಕೆ ಸಿಬ್ಬಂದಿಗಳಿದ್ದಾರೆ. ಇದೊಂದು ಸೇವೆ ಎಂದು ತಿಳಿದಿರುವವರು ಸಾಕಷ್ಟಿದ್ದಾರೆ. [೬]

ಬಿಎಸ್‍ಎನ್‍ಎಲ್‍ ಸಂಕಷ್ಟಕ್ಕೆ ಕಾರಣ[ಬದಲಾಯಿಸಿ]

 • ‘ಬಿ.ಎಸ್.ಎನ್.ಎಲ್.ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ’ ಎಂಬ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆಯನ್ನು ಬಿ.ಎಸ್.ಎನ್.ಎಲ್ನ ಎಲ್ಲ ಒಕ್ಕೂಟಗಳು ಮತ್ತು ಸಂಘದ (ಎ.ಯು.ಎ.ಬಿ) ಪದಾಧಿಕಾರಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ದೇಶದಲ್ಲಿ ಪ್ರವಾಹ, ಚಂಡಮಾರುತ ಮುಂತಾದ ಪ್ರಾಕೃತಕ ವಿಕೋಪ ಉಂಟಾದಾಗ ಖಾಸಗಿ ದೂರವಾಣಿ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸುವ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್. ಸೇವೆ ನೀಡಿದೆ. ಪರಿಹಾರ ಕಾರ್ಯಗಳಿಗೆ ನೆರವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಬಿ.ಎಸ್.ಎನ್.ಎಲ್.ಗೆ ಸರ್ಕಾರವು ಹಣಕಾಸು ಮತ್ತು ತಂತ್ರಜ್ಞಾನ ನೀಡಿದೆ ಎಂದು ಸಂಸದರು ಹೇಳಿದ್ದಾರೆ. ಆದರೆ, ಸರ್ಕಾರದಿಂದ ಒಂದು ಏನೂ ಸಿಕ್ಕಿಲ್ಲ’ ಎಂದರು. ‘ಸರ್ಕಾರವು ಬಿ.ಎಸ್.ಎನ್.ಎಲ್.ಗೆ 4ಜಿ ಸ್ಪೆಕ್ಟ್ರಂ ಅನ್ನು ಹಂಚಿಕೆ ಮಾಡಿತ್ತು. ಇದರ ಆಧಾರದಲ್ಲಿ ಸೇವೆ ನೀಡಲು ಪರಿಕರಗಳನ್ನು ಪೂರೈಕೆಗೆ ಈ ವರ್ಷ ಮಾರ್ಚ್‌ನಲ್ಲಿ ರೂ. 9 ಸಾವಿರ ಕೋಟಿ ಮೌಲ್ಯದ ಟೆಂಡರ್ ಅನ್ನು ಸಂಸ್ಥೆ ಪ್ರಕಟಿಸಿತ್ತು. ಆದರೆ, ಮರುಕ್ಷಣವೇ ಸರ್ಕಾರವು ಈ ಟೆಂಡರ್ ಅನ್ನು ರದ್ದು ಮಾಡಿತ್ತು. ಇದರಿಂದ 4ಜಿ ಸ್ಪೆಕ್ಟ್ರಂನಿಂದ ಬಿಎಸ್‍ಎನ್‍ಎಲ್‍ ವಂಚಿತವಾಗಬೇಕಾಯಿತು’ ಎಂದು ಹೇಳಿದ್ದಾರೆ.[೭]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ "Balance Sheet and Profit & Loss" (PDF). BSNL. Retrieved 10 June 2014.
 2. http://www.thehindu.com/business/Industry/BSNL’s-operating-profit-jumps-six-fold-to-Rs-3855-cr-in-FY16/article16720236.ece. {{cite web}}: Missing or empty |title= (help)
 3. ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ್ ಕುಮಾರ್ ಹೆಗಡೆ- 12 ಆಗಸ್ಟ್ 2020
 4. ಬಿಎಸ್‌ಎನ್‌ಎಲ್‌: ಕಾಯಕಲ್ಪ ಮತ್ತು ಬದ್ಧತೆ;ಮಂಜುನಾಥ ಸ್ವಾಮಿ ಕೆ.ಎಂ.d: 15 ನವೆಂಬರ್ 2019,
 5. BSNL ಸ್ಪೀಡ್ ಟೆಸ್ಟ್
 6. ದೇಶಸೇವೆಯ ಬಿಎಸ್‌ಎನ್‌ಎಲ್‌ ‘ದೇಶದ್ರೋಹಿ’ ಆದದ್ದು ಹೇಗೆ?! ಇದರಲ್ಲಿ ಕೇಂದ್ರದ ಪಾಲೆಷ್ಟು?;Banuprasada N | Vijaya KarnatakaUpdated: 11 Aug 2020,
 7. ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಆಘಾತಕಾರಿ, ಖಂಡನೀಯ’;ಪ್ರಜಾವಾಣಿ;d: 12 ಆಗಸ್ಟ್ 2020