ವಿಷಯಕ್ಕೆ ಹೋಗು

ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಬ್ರಹ್ಮಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಬ್ರಹ್ಮಾಪುರ
ಸ್ಥಾಪನೆ೨೦೧೬
ಪ್ರಕಾರಸಾರ್ವಜನಿಕ
ಸ್ಥಳಬ್ರಹ್ಮಾಪುರ, ಒರಿಸ್ಸಾ, ಭಾರತ
19°18′38″N 84°49′39″E / 19.310653°N 84.827539°E / 19.310653; 84.827539(transit campus)
ಅಂತರಜಾಲ ತಾಣwww.iiserbpr.ac.in

ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಬ್ರಹ್ಮಾಪುರ (ಐಐಎಸ್ಇಆರ್ ಬ್ರಹ್ಮಾಪುರ) ಭಾರತದ ಒಡಿಶಾದ ಬ್ರಹ್ಮಾಪುರದಲ್ಲಿರುವ ಸಾರ್ವಜನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. ಉನ್ನತ ಪದವಿ ಮತ್ತು ಸ್ನಾತಕೋತ್ತರ ಹಂತದ ಶಿಕ್ಷಣದಲ್ಲಿ ವೈಜ್ಞಾನಿಕ ಕಲಿಕೆ ಮತ್ತು ಸಂಶೋಧನೆಯನ್ನು ಉತ್ತೇಜಿಸಲೂ, ಉನ್ನತ ಗುಣಮಟ್ಟದ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರನ್ನು ರಚಿಸುವ ಸಲುವಾಗಿ ಇದನ್ನು ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸ್ಥಾಪಿಸಿತು. ಐಐಎಸ್ಇಆರ್ ಬ್ರಹ್ಮಾಪುರವನ್ನು ಭಾರತ ಸರ್ಕಾರವು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಗುರುತಿಸಿದೆ. ಈ ಸಂಸ್ಥೆಯು ೨೦೧೬–೧೭ರ ಶೈಕ್ಷಣಿಕ ಸಾಲಿನ ಆಗಸ್ಟ್ ತಿಂಗಳಿನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದು ಭಾರತದ ೭ ಐಐಎಸ್ಇಆರ್ಗಳಲ್ಲಿ ಒಂದಾಗಿದೆ.

ಇತಿಹಾಸ

[ಬದಲಾಯಿಸಿ]

ಮೂಲಭೂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ವಿಭಾಗದಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೦೬ರಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು (ಐಐಎಸ್ಇಆರ್) ರಚಿಸಿತು. ಮೊದಲ ಎರಡು ಸಂಸ್ಥೆಗಳನ್ನು ೨೦೦೬ರಲ್ಲಿ ಪುಣೆ ಮತ್ತು ಕೋಲ್ಕತ್ತಾದಲ್ಲಿ ಪ್ರಾರಂಭಿಸಲಾಯಿತು. ಇದರ ನಂತರ ಮೊಹಾಲಿ (೨೦೦೭), ಭೋಪಾಲ್ ಮತ್ತು ತಿರುವನಂತಪುರ (೨೦೦೮), ತಿರುಪತಿ (೨೦೧೫) ಮತ್ತು ಬ್ರಹ್ಮಾಪುರ (೨೦೧೬) ಸಂಸ್ಥೆಗಳನ್ನು ಪ್ರಾರಂಭಿಸಲಾಯಿತು. ಪ್ರತಿ ಐಐಎಸ್ಇಆರ್ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮುಖ್ಯ ಗುರಿಯನ್ನು ಹೊಂದಿರುವ ಸ್ವಾಯತ್ತ ಸಂಸ್ಥೆಗಳಾಗಿವೆ.[]

ಕ್ಯಾಂಪಸ್

[ಬದಲಾಯಿಸಿ]

ಐಐಎಸ್ಇಆರ್ ಬ್ರಹ್ಮಾಪುರವು ಸರ್ಕಾರಿ ಐಟಿಐ ಬ್ರಹ್ಮಾಪುರದ ಕ್ಯಾಂಪಸ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಬ್ರಹ್ಮಾಪುರ ಬಳಿಯ ಲಾಡಿಗ್ರಾಮ್‌ನಲ್ಲಿ ಶಾಶ್ವತ ಕ್ಯಾಂಪಸ್ ನಿರ್ಮಾಣ ಹಂತದಲ್ಲಿದೆ.

ಶೈಕ್ಷಣಿಕ ಕಾರ್ಯಕ್ರಮಗಳು

[ಬದಲಾಯಿಸಿ]
  • ಐಐಎಸ್ಇಆರ್ ಬ್ರಹ್ಮಾಪುರ ಆರಂಭದಲ್ಲಿ ಇಂಟಿಗ್ರೇಟೆಡ್ ಬಿಎಸ್-ಎಂಎಸ್ ಪ್ರೋಗ್ರಾಂ, ಇಂಟಿಗ್ರೇಟೆಡ್ ಪಿಎಚ್‌ಡಿ ಮತ್ತು ಪಿಎಚ್‌ಡಿ ನೀಡುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶವು ಜಂಟಿ ಪ್ರವೇಶ ಕಾರ್ಯಕ್ರಮದ ಮೂಲಕ ಇತರ ಐಐಎಸ್ಇಆರ್‌ಗಳೊಂದಿಗೆ ಸಮನ್ವಯದಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Background". Archived from the original on 2016-11-12. Retrieved 2021-03-18.

ಹೊರಗಿನ ಕೊಂಡಿಗಳು

[ಬದಲಾಯಿಸಿ]