ವಿಷಯಕ್ಕೆ ಹೋಗು

ಭಾರತದಲ್ಲಿ ಹುಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಹುಲಿಗಳ ಸಂತತಿಯಲ್ಲಿ ಏರಿಕೆ

[ಬದಲಾಯಿಸಿ]
ಭಾರತದ ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಬಂಗಾಳದ ಹುಲಿ.
.
  • ವೈಜ್ಞಾನಿಕ ವಿವರಣೆ

-

  • Kingdom: ಅನಿಮೇಲಿಯಾ
  • Phylum: ಕಾರ್ಡೇಟಾ
  • Class: ಸಸ್ತನಿ
  • Order: ಕಾರ್ನಿವೋರಾ
  • Family: ಫೆಲಿಡೇ
  • Genus: ಪ್ಯಾಂಥೆರಾ
  • Species: ಪ್ಯಾಂಥೆರಾ ಟೈಗ್ರಿಸ್
ವಿಶ್ವದ ಹುಲಿಗಳ ಪೈಕಿ ಶೇ 70 ರಷ್ಟು ಭಾರತದ­ಲ್ಲಿವೆ. ವಿಶೇಷ ಎಂದರೆ ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಕರ್ನಾಟಕ. 2014ರ ಗಣತಿ ಪ್ರಕಾರ ದೇಶದ­ಲ್ಲಿನ ಹುಲಿಗಳ ಸಂಖ್ಯೆ 2,226. ಈ ಹಿಂದೆ 2010ರಲ್ಲಿ ನಡೆಸಿದ ಗಣತಿ­ಯಲ್ಲಿ 1,706 ಹುಲಿಗಳು ಪತ್ತೆ­ಯಾ­ಗಿ­ದ್ದವು. ಅಂದರೆ ಇದು ಶೇ 30 ರಷ್ಟು ಹೆಚ್ಚಳ.2014ರಲ್ಲಿ ದೇಶದಾದ್ಯಂತ ನಡೆಸ­ಲಾದ ಗಣತಿ ವರದಿ­­ 20/1/2015 ರಂದು ಬಿಡುಗಡೆಯಾಯಿತು. ವಿಶ್ವದಾದ್ಯಂತ ಹುಲಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ.
2006ರಲ್ಲಿ 1,411ರಷ್ಟಿದ್ದ ಹುಲಿಗಳ ಸಂಖ್ಯೆ 2010ರಲ್ಲಿ 1,706ಕ್ಕೆ ಏರಿತ್ತು. 18 ರಾಜ್ಯಗಳ 3.78 ಲಕ್ಷ ಚದರ ಕಿ.ಮೀ.ಗಳಲ್ಲಿ ಹುಲಿ­ಗಣತಿ ನಡೆಸ­ಲಾಯಿತು. ಒಟ್ಟು 1,540 ಹುಲಿಗಳ ವಿಶೇಷ ಚಿತ್ರ­ಗಳನ್ನು ತೆಗೆಯಲಾಯಿತು. ಭಾರತದ ಶೇ 80 ರಷ್ಟು ಹುಲಿಗಳ ಚಿತ್ರಗ­ಳನ್ನು ತೆಗೆಯ­ಲಾಯಿತು. ಇದಕ್ಕಾಗಿ 9,735 ಕ್ಯಾಮೆರಾ­ಗಳನ್ನು ಬಳಸಲಾಯಿತು. ವಿಶ್ವದ ಯಾವುದೇ ದೇಶದಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳನ್ನು ಸೆರೆ­ಹಿಡಿಯಲಾಗಿಲ್ಲ.

ಏರಿಕೆ ಕಾರಣ

[ಬದಲಾಯಿಸಿ]
ಬೇಟೆ ನಿಯಂತ್ರಣ, ಮಾನವ –ಪ್ರಾಣಿ ಸಂಘರ್ಷ ಕಡಿಮೆ­ಯಾಗಿ­ರುವು­ದರಿಂದ ಹುಲಿಗಳ ಸಂಖ್ಯೆಯಲ್ಲಿ ಏರಿಕೆ­ಯಾಗಿದೆ ಎಂದು -ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.
ಪಶ್ಚಿಮ ಘಟ್ಟ
ವಿಶ್ವದ ಹುಲಿ ಕೇಂದ್ರ
ಜೀವ ವೈವಿಧ್ಯ ಸಮೃದ್ಧ ಪಶ್ಚಿಮ ಘಟ್ಟ ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದನ್ನು ಈ ಗಣತಿ ದೃಢಪಡಿಸಿದೆ.
ಮುದುಮಲೈ, ಬಂಡೀಪುರ, ನಾಗರಹೊಳೆ, ವಯನಾಡು, ಗೋವಾ ಸೇರಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವಿಶ್ವದಲ್ಲೇ ಅತ್ಯಧಿಕ ಹುಲಿಗಳು ಪತ್ತೆಯಾಗಿವೆ. 2014 ರ ಗಣತಿ ಪ್ರಕಾರ ಇಲ್ಲಿ 776 ಹುಲಿಗಳಿವೆ. ಇದರಲ್ಲಿ ಕರ್ನಾಟಕ ಭಾಗದಲ್ಲಿ 406, ಕೇರಳದಲ್ಲಿ 136 ಮತ್ತು ತಮಿಳುನಾಡಿನಲ್ಲಿ 229 ಹುಲಿಗಳಿವೆ. ಕಳೆದ ಬಾರಿಯ ಗಣತಿಯಲ್ಲಿ ಗೋವಾದಲ್ಲಿ ಒಂದೂ ಹುಲಿ ಸಿಕ್ಕಿರಲಿಲ್ಲ. ಈ ಬಾರಿ 5 ಪತ್ತೆಯಾಗಿವೆ.

ಭಾರತದಲ್ಲಿ ಹುಲಿಗಣತಿ ವಿವರ

[ಬದಲಾಯಿಸಿ]
ರಾಜ್ಯ ಇಸವಿ ಇಸವಿ ರಾಜ್ಯ ಇಸವಿ ಇಸವಿ
ಪಶ್ಚಿಮಘಟ್ಟ 2010 2014 .. 2010 2014
ಪಶ್ಚಿಮಘಟ್ಟ ಹುಲಿ ಸಂಖ್ಯೆ ಹುಲಿಸಂಖ್ಯೆ ಶಿವಾಲಿಕ್ ಗಂಗಾನದಿ ಪ್ರದೇಶ ಹುಲಿ ಸಂಖ್ಯೆ ಹುಲಿ ಸಂಖ್ಯೆ
ಕರ್ನಾಟಕ 300 406 ಉತ್ತರಾಖಂಡ 227 347
ಕೇರಳ 71 136 ಉತ್ತರ ಪ್ರದೇಶ 118 117
ತಮಿಳುನಾಡು 163 229 ಬಿಹಾರ 7 28
ಗೋವಾ .. 5 .. ..
ಮಧ್ಯ ಭಾರತ ಪೂರ್ವಘಟ್ಟ .. .. ಈಶಾನ್ಯ ಪ್ರದೇಶ ..
ಆಂಧ್ರ ಪ್ರದೇಶ 72 68 ಅಸ್ಸಾಂ 143 167
ಛತ್ತೀಸಗಡ 26 46 ಅರಣಾಚಲ ಪ್ರದೇಶ 0 28
ಮಧ್ಯಪ್ರದೇಶ 257 308 ಮಿಜೋರಾಂ 5 3
ಮಹಾರಾಷ್ಟ್ರ 169 190 ಪಶ್ಚಿಮ ಬಂಗಾಳ(ಉ) 0 3
ಒಡಿಶಾ 32 28 ಈಶಾನ್ಯ ಬೆಟ್ಟ-ಬ್ರಹ ಪುತ್ರ 148 201
ರಾಜಸ್ಥಾನ 36 45 ಸುಂದರಬನ್ 69 76
ಝಾರ್ಕಂಡ್ 10 3 .. ..
ಇಸವಿ:ಸಂಖ್ಯೆ> 2006>> 1411 2010>> 1706 2014>> 2226

ಭಾರತದ ಹುಲಿಗಳು

[ಬದಲಾಯಿಸಿ]

ಹೊರ ಸಂಪರ್ಕ

[ಬದಲಾಯಿಸಿ]
  • ಹುಲಿ ಸಂರಕ್ಷಣೆ:[೧]ಕೆಲವು ಫೋಟೊಗಳು.

ಉಲ್ಲೇಖ

[ಬದಲಾಯಿಸಿ]
  • ೧).21/1/2015/prajavani