ವಿಷಯಕ್ಕೆ ಹೋಗು

ಭಾಭಾ ಅಣು ಸಂಶೋಧನಾ ಕೇಂದ್ರ

Coordinates: 19°00′28″N 72°55′07″E / 19.00778°N 72.91861°E / 19.00778; 72.91861
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಭಾ ಅಣು ಸಂಶೋಧನಾ ಕೇಂದ್ರ (ಬಿಎಆರ್‌ಸಿ) ಭಾರತದ ಪ್ರಮುಖ ಪರಮಾಣು ಸಂಶೋಧನಾ, ಅಧ್ಯಯನ-ತರಬೇತಿಗಾಗಿ ಸೌಕರ್ಯಗಳನ್ನೊಳಗೊಂಡ ಕೇಂದ್ರ. ಇದು ಮುಂಬಯಿ ನಗರದಲ್ಲಿದೆ. ಇಲ್ಲಿ ಹಲವು ಪರಮಾಣು ಕಾರ್ಯಾಗಾರಗಳಿವೆ. ಇವೆಲ್ಲವನ್ನೂ ಭಾರತದ ಪರಮಾಣು ಶಕ್ತಿ ಉತ್ಪಾದನೆ ಮತ್ತು ಸಂಶೋಧನಾ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ.

ಇತಿಹಾಸ

[ಬದಲಾಯಿಸಿ]
1966ರ ಫೆಬ್ರವರಿ 19ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಉಪಗ್ರಹವೊಂದು ಸೆರೆಹಿಡಿದ ಭಾರತದ ಮೊದಲ ಪರಮಾಣು ಕ್ರಿಯಾಗಾರ 'ಅಪ್ಸರಾ' ಹಾಗೂ ಪ್ಲುಟೊನಿಯಮ್‌ ಮರುಸಂಸ್ಕರಣಾ ಘಟಕದ ಛಾಯಾಗ್ರಹಣ.

ಬಿಎಆರ್‌ಸಿ ಸಂಸ್ಥೆಯನ್ನು 1954ರಲ್ಲಿ, ಟ್ರೊಂಬೆಯ ಪರಮಾಣು ಶಕ್ತಿ ಸಂಸ್ಥೆ (ಎಇಇಟಿ) ಎಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು. ಇದು ಭಾರತದ ಪ್ರಮುಖ, ಪ್ರಾಥಮಿಕ ಪರಮಾಣು ಸಂಶೋಧನಾ ಕೇಂದ್ರವಾಯಿತು. ಟಾಟಾ ಮೂಲಭೂತ ಸಂಶೋಧನಾ ಕೇಂದ್ರದಲ್ಲಿ ಉದ್ಯೋಗಿಗಳಾಗಿದ್ದ ಎಲ್ಲಾ ವಿಜ್ಞಾನಿಗಳು ಭಾರತದ ವೈಜ್ಞಾನಿಕ ಸಂಶೋಧನಾ ತಜ್ಞರಲ್ಲದೇ ಈ ಕೇಂದ್ರದ ಉದ್ಯೋಗಿಗಳೂ ಆಗಿದ್ದಾರೆ. ಅಂದು 1966ರಲ್ಲಿ ಭಾರತದ ಖ್ಯಾತ ಪರಮಾಣು ವಿಜ್ಞಾನಿಯಾಗಿದ್ದ ಹೊಮಿ ಜಹಾಂಗೀರ್‌ ಭಾಭಾ ಅದೇ ವರ್ಷ 1966ರಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರಾದರು. ನಂತರ ಅವರ ನೆನಪಿನಲ್ಲಿ ಪರಮಾಣು ಸಂಶೋಧನಾ ಕೇಂದ್ರವನ್ನು ಭಾಭಾ ಅಣು ಸಂಶೋಧನಾ ಕೇಂದ್ರ ಎಂದು ಮರುನಾಮಕರಣ ಮಾಡಲಾಯಿತು.

ಬಿಎಆರ್‌ಸಿ ಹಾಗೂ ಅದರ ಅಂಗಸಂಸ್ಥೆಗಳಲ್ಲಿನ ಮೊದಲ ಕೆಲವು ಪರಮಾಣು (ರಿಯಾಕ್ಟರ್ ಗಳು)ಕ್ರಿಯಾಗಾರಗಳು ಪಶ್ಚಿಮ ದೇಶಗಳಿಂದ ಆಮದಾಗಿದ್ದವು. ತಾರಾಪುರ ಅಣು ಶಕ್ತಿ ಘಟಕದಲ್ಲಿ ಸ್ಥಾಪಿಸಲಾದ, ಭಾರತದ ಮೊಟ್ಟಮೊದಲ ಕ್ರಿಯಾಗಾರಗಳು ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ ಆಮದಾಗಿದ್ದವು.

ಬಿಎಆರ್‌ಸಿ ಪ್ರಾಥಮಿಕವಾಗಿ ಸಂಶೋಧನಾ ಕೇಂದ್ರವಾಗಿ ಪ್ರಾಮುಖ್ಯ ಪಡೆದಿದೆ. ಪರಮಾಣು ಕ್ರಿಯಾಗಾರಗಳನ್ನು ಸಂಶೋಧನಾ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿದೆ ಎಂದು ಬಿಎಆರ್‌ಸಿ ಮತ್ತು ಭಾರತ ಸರ್ಕಾರ ನಿರಂತರವಾಗಿ ಪ್ರಕಟಿಸಿ, ಅದನ್ನೇ ಮುಂದುವರಿಸಿಕೊಂಡು ಬಂದಿವೆ. ಈ ಕ್ರಿಯಾಗಾರಗಳ ಹೆಸರುಗಳು ಇಂತಿವೆ: (1) ಅಪ್ಸರಾ (1956ರಲ್ಲಿ ಸ್ಥಾಪಿತ, ಈ ಹೆಸರನ್ನು ಭಾರತದ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಸೂಚಿಸಿದ್ದರು, ಏಕೆಂದರೆ ಅವರು ನೀಲಿ ಬಣ್ಣದ ಸೆರೆಂಕೊವ್‌ ವಿಕಿರಣಗಳನ್ನು ಇಂದ್ರನ ಆಸ್ಥಾನದ ನರ್ತಕಿಯರಾದ ಅಪ್ಸರೆಯರ ಸೌಂದರ್ಯಕ್ಕೆ ಹೋಲಿಸಿದ್ದರು.) (2) ಸಿರಸ್‌ (CIRUS) (1960; ಕೆನಡಾ ದೇಶದ ಸಹಯೋಗ ಮತ್ತು ತಾಂತ್ರಿಕ ನೆರವಿನೊಂದಿಗೆ ಸ್ಥಾಪಿಸಲಾದ ಕೆನಡಾ-ಭಾರತ ಕ್ರಿಯಾಗಾರ), (3) ಇಂದು ನಿಷ್ಕ್ರಿಯ ಸ್ಥಿತಿಯಲ್ಲಿರುವ ಝರ್ಲಿನಾ (ZERLINA) (1961; ಜಾಲಕ ವಿಶ್ಲೇಷಣೆ ಮತ್ತು ಶೂನ್ಯಕಣ ವಿಶ್ಲೇಷನೆಯ ಶೂನ್ಯ ಶಕ್ತಿ ಕ್ರಿಯಾಗಾರ (Zero Energy Reactor for Lattice Investigations and Neutron Assay)), ಪೂರ್ಣಿಮಾ I (1972), ಪೂರ್ಣಿಮಾ II (1984), ಧ್ರುವ (1985), ಪೂರ್ಣಿಮಾ III (1990) ಮತ್ತು ಕಾಮಿನಿ].

1974ರಲ್ಲಿ ಭಾರತ ರಾಜಸ್ಥಾನದ ಥಾರ್‌ ಮರುಭೂಮಿಯ ಪೊಖ್ರಾನ್‌ನಲ್ಲಿ ಮೊದಲ ಬಾರಿಗೆ ಪರಮಾಣು ಪರೀಕ್ಷೆ (ಶಾಂತಿಪರ ಉದ್ದೇಶಗಳಿಗಾಗಿ ಬಳಸುವ ಪರಮಾಣು ಪರೀಕ್ಷೆ) ನಡೆಸಿತು. ಈ ಪರೀಕ್ಷೆಯಲ್ಲಿ ಬಳಸಲಾದ ಪ್ಲುಟೊನಿಯಮ್‌ ಸಿರಸ್‌ ಕ್ರಿಯಾಗಾರದಿಂದ ಲಭ್ಯವಾಗಿತ್ತು. 1974 ಹಾಗೂ 1998ರಲ್ಲಿ ನಡೆಸಲಾದ ಈ ಪರಮಾಣು ಪರೀಕ್ಷೆಗಳಿಂದ, ಪರಮಾಣು ಇಂಧನವನ್ನು ವಿದ್ಯುತ್‌ ಉತ್ಪಾದನೆ ಮತ್ತು ಸಂಶೋಧನಾ ಕಾರ್ಯಗಳಿಗೆ ಮಾತ್ರವಲ್ಲ, ಇದೇ ಇಂಧನವನ್ನು ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಬಳಸಲಾಗುವ ಇಂಧನವನ್ನಾಗಿ ಪರಿವರ್ತಿಸಬಹುದು ಎಂಬ ವಿಶ್ವಾಸ ವಿಜ್ಞಾನಿಗಳಲ್ಲಿ ಮೂಡಿಸಿತು.

ಭಾರತ ಮತ್ತು ಪರಮಾಣು ಪ್ರಸರಣಾ-ವಿರೋಧಿ ಒಪ್ಪಂದ

[ಬದಲಾಯಿಸಿ]

ಭಾರತವು ಪರಮಾಣು ಪ್ರಸರಣ-ವಿರೋಧ ಒಪ್ಪಂದದ ಭಾಗವಾಗಿಲ್ಲ. ಈ ಒಪ್ಪಂದವು ಪರಮಾಣು ಕ್ಷಮತೆಯುಳ್ಳ ರಾಷ್ಟ್ರಗಳ ಪರವಾಗಿ ಪಕ್ಷಪಾತ ಧೋರಣೆ ತೋರುತ್ತದೆಯಲ್ಲದೇ, ಇದರಿಂದ ಪರಮಾಣು ಸಂಪೂರ್ಣ ನಿರಸ್ತ್ರೀಕರಣ ಉದ್ದೇಶ ಈಡೇರದು ಎಂಬುದು ಭಾರತದ ನಿಲುವಾಗಿದೆ. ಭಾರತವು ಈ ಒಪ್ಪಂದಕ್ಕೆ ಏಕೆ ಸಹಿ ಹಾಕುವುದಿಲ್ಲ ಎಂಬುದಕ್ಕೆ ಭಾರತೀಯ ಅಧಿಕಾರಿಗಳು ಈ ಕಾರಣಗಳನ್ನಿಟ್ಟು ವಾದಿಸಿದ್ದಾರೆ - ಈ ಒಪ್ಪಂದವು ಮೂಲತಃ ಪಕ್ಷಪಾತ ತೋರುತ್ತದೆ. ಪರಮಾಣು ಶಕ್ತಿ ಮೂಲಗಳನ್ನು ಹೊಂದಿರದ ಶಸ್ತ್ರಾಸ್ತ್ರಗಳುಳ್ಳ ರಾಷ್ಟ್ರಗಳ ಮೇಲೆ ಇಲ್ಲ-ಸಲ್ಲದ ನಿರ್ಬಂಧಗಳನ್ನು ಹೇರುತ್ತದೆ. ಆದರೆ, ಪರಮಾಣು ಶಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಗಳ ಆಧುನೀಕರಣ ಮತ್ತು ಅಭಿವೃದ್ಧಿಯನ್ನು ತಡೆಯುವುದೇ ಇಲ್ಲ ಎಂದು ವಾದಿಸಿದ್ದಾರೆ.

ಇನ್ನಷ್ಟೂ ಇತ್ತೀಚೆಗೆ, ಎರಡೂ ದೇಶಗಳ ನಡುವೆ ಪರಮಾಣು ಶಕ್ತಿ ಸಹಕಾರ ಬಲಪಡಿಸಲು, ಹಾಗೂ, ಭಾರತವು ಪರಮಾಣು ಒಕ್ಕೂಟದ ಸಂಶೋಧನೆ (ಐಟಿಇಆರ್‌ - ಅಂತರರಾಷ್ಟ್ರೀಯ ಉಷ್ಣ-ಪರಮಾಣು ಪ್ರಾಯೊಗಿಕ ಕ್ರಿಯಾಗಾರ) ಬಗೆಗಿನ ಅಂತರರಾಷ್ಟ್ರೀಯ ಸಹಕಾರ ಕೂಟದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ, ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದವು. ಪಾಶ್ಚಾತ್ಯ ಜಗತ್ತು ಭಾರತವನ್ನು ಪರಮಾಣು ಮಖ್ಯವಾಹಿನಿಗೆ ಕರೆತರಲು ಯತ್ನಿಸುವ ಸಂಕೇತವಿದು. ಪರಮಾಣು ಶಸ್ತ್ರಾಸ್ತ್ರ ಪ್ರಸರಣ-ವಿರೋಧ ನಿಲುವು ತಾಳಿ, ಅದರಂತೆ ನಡೆದುಕೊಂಡಿರುವ ಕಾರಣ, ಭಾರತ ಇಂತಹ ಸ್ಥಾನಮಾನ ಪಡೆದ ಏಕೈಕ ರಾಷ್ಟ್ರವಾಗಿದೆ.

ನಾಗರಿಕ ಸಂಶೋಧನೆ

[ಬದಲಾಯಿಸಿ]

ಬಿಎಆರ್‌ಸಿಯ ಗ್ಯಾಮಾ ಗಾರ್ಡನ್ಸ್‌ನಲ್ಲಿ ಜೈವಿಕತಂತ್ರಜ್ಞಾನದಲ್ಲಿಯೂ ಸಹ ಸಂಶೋಧನೆ ನಡೆಯುತ್ತದೆ. ಜೊತೆಗೆ ಹಲವು ರೋಗ-ನಿರೋಧಕ ಹಾಗೂ ಹೆಚ್ಚು ಇಳುವರಿಯ ಫಸಲುಗಳು, ಅದರಲ್ಲೂ ವಿಶಿಷ್ಟವಾಗಿ ಕಡಲೆಕಾಯಿ ಫಸಲನ್ನು ಬೆಳೆಸಿದೆ. ವಿದ್ಯುತ್‌ ಉತ್ಪಾದನೆಗಾಗಿ ದ್ರವಲೋಹ-ಆಯಸ್ಕಾಂತೀಯ-ದ್ರವಬಲ-ವಿಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಸಂಶೋಧನೆ ನಡೆದಿದೆ.

2005ರ ಜೂನ್‌ 4ರಂದು, ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯವನ್ನು ಪ್ರೋತ್ಸಾಹಿಸಲು, ಬಿಎಆರ್‌ಸಿ ಹೊಮಿ ಭಾಭಾ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಿತು. ಬಿಎಅರ್‌ಸಿ (ಭಾಭಾ ಅಣು ಸಂಶೋಧನಾ ಕೇಂದ್ರ)ಕ್ಕೆ ಸೇರಿದ ಸಂಶೋಧನಾ ಸಂಸ್ಥೆಗಳಲ್ಲಿ ಐಜಿಸಿಎಆರ್‌ (ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರ), ಆರ್‌ಆರ್‌ಸಿಎಟಿ (ರಾಜಾ ರಾಮಣ್ಣ ಉನ್ನತ ತಂತ್ರಜ್ಞಾನ ಕೇಂದ್ರ) ಹಾಗೂ ವಿಇಸಿಸಿ (ವಿಭಿನ್ನ ಶಕ್ತಿ ಸೈಕ್ಲೊಟ್ರಾನ್‌ ಕೇಂದ್ರ) ಸೇರಿವೆ.

ಬಿಎಆರ್‌ಸಿಯ ಪರಿಣತಿ ಸಂಪನ್ಮೂಲದಿಂದ ಲಾಭ ಪಡೆದು ಎನ್‌ಪಿಸಿಐಎಲ್ (ಭಾರತೀಯ ಪರಮಾಣು ವಿದ್ಯುತ್ ನಿಗಮ) ವ್ಯಾಪ್ತಿಯಲ್ಲಿರುವ ವಿದ್ಯುತ್‌ ಯೋಜನೆಗಳೆಂದರೆ ಕೆಎಪಿಪಿ (ಕಾಕ್ರಪಾರ ಅಣು ವಿದ್ಯುತ್‌ ಯೋಜನೆ), ಆರ್‌ಎಪಿಪಿ (ರಾಜಸ್ಥಾನ ಅಣು ವಿದ್ಯುತ್‌ ಶಕ್ತಿ ಯೋಜನೆ) ಹಾಗೂ ಟಿಎಪಿಪಿ (ತಾರಾಪುರ ಅಣು ಶಕ್ತಿ ಯೋಜನೆ).

ಆಯವ್ಯಯದಲ್ಲಿನ ಹಂಚಿಕೆ ಪಾಲು(ಕೋಟಿ ರೂಪಾಯಿಗಳಲ್ಲಿ)

! colspan="2" style="background:#efefef;" | ಹೂಡಿಕೆ ! colspan="2" style="background:#efefef;" | ಆದಾಯ ! rowspan="2" style="background:#efefef;" | ಒಟ್ಟು |-

! style="background:#efefef;" | ! style="background:#efefef;" | ಯೋಜನೆ ! style="background:#efefef;" | ಯೋಜನೆ-ಇತರೆ ! style="background:#efefef;" | ಯೋಜನೆ ! style="background:#efefef;" | ಯೋಜನೆ-ಇತರೆ |- | 2007-2008ರ ಸಾಲಿನ ಆಯವ್ಯಯ ಅಂದಾಜುಗಳು | 629.10 | 0.00 | 13.66 | 632.29 | ೧,೨೭೫.೦೫ ಕೋಟಿ (ಯುಎಸ್$೨೮೩.೦೬ ದಶಲಕ್ಷ) |- | ಅಂತಿಮ ಅನುದಾನ 2007-2008 | 610.00 | 0.00 | 21.04 | 693.02 | ೧,೩೨೪.೦೬ ಕೋಟಿ (ಯುಎಸ್$೨೯೩.೯೪ ದಶಲಕ್ಷ) |- | ವಾಸ್ತವಿಕ ವೆಚ್ಚಗಳು 2007-2008 | 599.61 | 0.00 | 19.33 | 683.16 | ೧,೩೦೨.೧೦ ಕೋಟಿ (ಯುಎಸ್$೨೮೯.೦೭ ದಶಲಕ್ಷ) |- | ಆಯವ್ಯಯ ಅಂದಾಜುಗಳು 2008-2009 | 630.10 | 0.00 155–170 | 707.60 | ೧,೩೬೧.೧೫ ಕೋಟಿ (ಯುಎಸ್$೩೦೨.೧೮ ದಶಲಕ್ಷ) |- | ವಾಸ್ತವಿಕ ವೆಚ್ಚಗಳು (ಮೇ 2008ರ ವರೆಗೆ) 2008-2009 (Up to May 2008) | 55.53 | 0.00 | 4.63 | 154.54 | ೨೧೪.೭೦ ಕೋಟಿ (ಯುಎಸ್$೪೭.೬೬ ದಶಲಕ್ಷ) |}

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

19°00′28″N 72°55′07″E / 19.00778°N 72.91861°E / 19.00778; 72.91861