ಭಾಗ್ಯಶ್ರೀ
ಕನ್ನಡ ಕಿರುತೆರೆಯ 'ಬದುಕು' ಧಾರಾವಾಹಿಯಲ್ಲಿ 'ದೀಪಿಕಾ' ಪಾತ್ರವಹಿಸಿ ಕನ್ನಡಿಗರ ಪ್ರೀತಿಗೆ ಪಾತ್ರವಾಗಿರುವ 'ಭಾಗ್ಯಶ್ರೀ' ಒಬ್ಬ ನೃತ್ಯಕಲಾವಿದೆ. ಅಭಿನಯ ಅವರಿಗೆ ದೊರೆತ ಒಂದು ಉಪಹಾರ.
ಪರಿವಾರ
[ಬದಲಾಯಿಸಿ]'ಭಾಗ್ಯಶ್ರೀ', ಬೆಂಗಳೂರಿನಲ್ಲಿ ಬೆಳೆದವಳು. ತಂದೆ, 'ವೆಂಕಟರಾಮ್', ತಾಯಿ, 'ಲಕ್ಷ್ಮಿ'. ಭಾಗ್ಯಶ್ರೀ, ಬಿ.ಎಸ್ಸಿ ಪದವೀಧರೆ. ಸಿನಿಮಾಗಳಲ್ಲಿ ಸಹನಿರ್ದೇಶಕರಾಗಿ ಕೆಲಸಮಾಡುತ್ತಿರುವ ಭರತ್ ಇವರ ಪತಿ. ಭಾಗ್ಯಶ್ರೀಗೆ ಟೆಲಿವಿಶನ್ ಅತಿ ಪ್ರಿಯ ಮಾಧ್ಯಮ. ಸಿನಿಮಾದಲ್ಲಿ ಪಾತ್ರವಹಿಸಲು ಇಚ್ಚಿಸುವುದಿಲ್ಲ. ಗ್ಲಾಮರಸ್ ಪಾತ್ರಗಳು ಅವರಿಗೆ ಹಿಡಿಸುವುದಿಲ್ಲ ಕಿರು ತೆರೆಯ ಧಾರಾವಾಹಿಗಳಲ್ಲಿ ಒಳ್ಳೆಯ ಪಾತ್ರಗಳು ದೊರೆಯುತ್ತವೆ. ಬೆಂಗಳೂರಿನಲ್ಲಿ ಧಾರಾವಾಹಿಗಳಲ್ಲಿ ಸುಮಾರು ೧೫-೨೦ ದಿನ ಇದ್ದು, ಭಾಗವಹಿಸಬೇಕು; ನಂತರ ಬೇರೆಕಡೆ ಮನಸ್ಸು ಹಾಯಿಸುವಷ್ಟು ವ್ಯವಧಾನ ವಿಲ್ಲ. ವಿವಾಹವಾದ ಬಳಿಕ, ಸಂಸಾರದ ಕಡೆ ಹೆಚ್ಚು ಆಸಕ್ತಿ ಬಂದಿದೆ. ಬೆಂಗಳೂರಿನವರೇ ಆದ ವಜ್ರಪ್ಪನವರು ಭಾಗ್ಯಶ್ರೀಯ ಗುರುಗಳು. ಅವರು, ಸುಮಾರು ೬೦ ವರ್ಷಗಳಿಂದ ನಾಟಕಗಳಲ್ಲಿ ನಟನೆ, ಮತ್ತು ಪಟ್ಕಥಾ ಬರೆಯುವ ಕೆಲಸಮಾಡುತ್ತಾ ಬಂದಿದ್ದಾರೆ. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ವಜ್ರಪ್ಪ ನಿರ್ದೆಶಿಸಿದ ಬಬ್ರುವಾಹನ ನಾಟಕದಲ್ಲಿ ಪ್ರಮೀಳೆಯ ಪಾತ್ರ ದೊರೆಯಿತು. ನಂತರ ತೊಘಲಕ್ ನಲ್ಲಿ ಪಾತ್ರಾಭಿನಯ.
ನೃತ್ಯದಿಂದ ನಟನೆಗೆ
[ಬದಲಾಯಿಸಿ]ಭಾಗ್ಯಶ್ರೀ ಮೊದಲಿನಿಂದಲೂ ನೃತ್ಯದಲ್ಲಿ ಪರಿಣಿತೆ. ಉಷಾ ದಾತಾರ್ ಶಿಷ್ಯೆ. ಭರತನಾಟ್ಯದಲ್ಲಿ ಸೀನಿಯರ್ ಪರೀಕ್ಷೆ ಆಗಿದೆ. ಕೆಲವು ಕನ್ನಡ ಧಾರಾವಾಹಿಗಳ ಶೀರ್ಷಿಕೆಗಳಿಗೆ ಗೀತನೃತ್ಯ ಮಾಡಿದ್ದಾರೆ. ಬದುಕು ಧಾರಾವಾಹಿಯಲ್ಲಿ ದೀಪಿಕಾ ಪಾತ್ರ ಅವರಪಾಲಿಗೆ ದೊರಕಿತು. ಆದರ್ಶ ಫಿಲ್ಮ್ ಸಂಸ್ಥೆಯಲ್ಲಿ ಅಭಿನಯಯದ ತರಪೇತಿ ಕೊಡುತ್ತಾರೆ, ಎಂದು ತಿಳಿದಾಗ ಅವರು, ಅಲ್ಲಿಗೆ ಹೋದಾಗ, ಭಗವಾನ್ ಸರ್, ಅಭಿನಯದ ಬಗ್ಗೆ ವಿವರಿಸಿ ಹೇಳಿದರು. ಫಣಿ ರಾಮಚಂದ್ರ ತಮ್ಮ ಧಾರಾವಾಹಿ 'ದರಿದ್ರ ಲಕ್ಷ್ಮಿಯರು ನೃತ್ಯದ ದೃಶ್ಯಗಳ ಚಿತ್ರೀಕರಣ'ಕ್ಕೆ ಬಂದಾಗ, ಭಾಗ್ಯಶ್ರೀಯವರ ನೃತ್ಯವನ್ನು ನೋಡಿ ಮೆಚ್ಚಿಕೊಂಡರು. ಹೀಗೆ ನೃತ್ಯ ಅವರನ್ನು ನಟನೆಗೆ ಬರಲು ಸಹಾಯಮಾಡಿತು. 'ವಿನು ಬಳಂಜ' ತಮ್ಮ ಕುಟುಂಬ ಧಾರವಾಹಿಗೆ 'ಭಾಗ್ಯಶ್ರೀ'ಯವರನ್ನು ಆಯ್ಕೆಮಾಡಿಕೊಂಡರು. ಆ ಸಮಯದಲ್ಲಿ ಆಕೆಗೆ ನಟನೆಯ ಬಗ್ಗೆ ಹೇಳಿಕೊಟ್ಟರು. ಅವರು ಧರ್ಯ ತುಂಬಿದ ವಿಧಾನ ಭಾಗ್ಯಶ್ರೀಗೆ ಬಹಳ ಮೆಚ್ಚುಗೆಯಾಯಿತು. 'ನೃತ್ಯದಲ್ಲಿ ಮಾತಿಲ್ಲ. ನಟನೆಯಲ್ಲಿ ಮಾತೆ ಪ್ರಧಾನ'. 'ಆದ್ದರಿಂದ ಆಶ್ಚರ್ಯ ಸಂತೋಷ, ದುಖಃ ದ ಮಹತ್ವ ವನ್ನು ನೃತ್ಯದಲ್ಲಿ ತೋರಿಸುವಂತೆ, ಅಭಿನಯಿಸುವಾಗಲೂ ಆ ಎಲ್ಲಾ ಸಂವೇದನೆಗಳನ್ನು ತಲೆಯಲ್ಲಿಟ್ಟುಕೊಂಡು ಮುಂದುವರೆಯಬೇಕು.' ಎಂದು ಪ್ರೋತ್ಸಾಹಿಸಿದರು. ಭಾಗ್ಯಶ್ರೀಗೆ ಜ್ಞಾಪಕ ಶಕ್ತಿ ಹೆಚ್ಚು . ಸಂಭಾಷಣೆಗಳನ್ನು ತ್ವರಿತವಾಗಿ ಕಲಿತರು.