ಭಾಗವತ ಮೇಳ
ಭಾಗವತ ಮೇಳ
[ಬದಲಾಯಿಸಿ]ಭಾರತ ತನ್ನ ವಿವಿಧ ಶಾಸ್ತ್ರೀಯ ನೃತ್ಯ ರೂಪಗಳಿಗೆ ಹೆಸರುವಾಸಿಯಾಗಿದೆ. ಒಂದೇ ತರಹದ ಶಾಸ್ತ್ರೀಯ ನೃತ್ಯ ರೂಪ ಆಧಾರಿತ ಅಥವಾ ಹಲವಾರು ತರಹದ ರಾಷ್ಟ್ರಿಯ ನೃತ್ಯ ರೂಪಗಳ ಸಂಯೋಜನೆಯ ಆಧಾರಿತ ಹಲವಾರು ನೃತ್ಯ ಶೈಲಿಗಳು ವಿಕಾಸಗೊಂಡಿದೆ. ಈ ಕೆಲವು: ನೃತ್ಯ ನಾಟಕಗಳು, ಸಂಗೀತ ರೂಪಗಳು, ಭಾಗವತ ಮೇಳ[೧], ಯಕ್ಷಗಾನ[೨], ಕೋರವಂಜ ಮುಂತಾದವುಗಳು.
ನೃತ್ಯ ನಾಟಕ
[ಬದಲಾಯಿಸಿ]ಈ ಶೈಲಿಯು ನೃತ್ಯ ಹಾಗು ನಾಟಕದ ಸಂಯೋಜನೆಯಾಗಿದೆ. ವಿವಿಧ ಕಲಾವಿದರು ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾರೆ. ಕಲಾವಿದರು ನಾಟಕೀಯ ಅಂಶಗಳನ್ನು ಒಟ್ಟುಗೂಡಿಸಿ ಸಂಪೂರ್ಣ ಕಥೆಯನ್ನು ಅಥವಾ ಕಥೆಯ ಕಂತುಗಳನ್ನು ಪ್ರದರ್ಶಿಸುತ್ತಾರೆ. ವೇಷಭೂಷಣ, ಆಭರಣ ಮತ್ತು ರಂಗಪರಿಕರಗಳು ಪಾತ್ರಕ್ಕೆ ಅನುಗುಣವಾಗಿರುತ್ತದೆ. ಅವರ ಕೂದಲ ಶೈಲಿಯೂ ಸಹ ಪಾತ್ರಕ್ಕೆ ಹೊಂದುವಂತೆ ಇರುತ್ತದೆ. ಕಥೆಯಲ್ಲಿ ಒಬ್ಬ ನಾಯಕ ಮತ್ತು ವಿವಿಧ ಪ್ರಮುಖ ಪಾತ್ರಗಳು ಹಾಗು ಸಣ್ಣ ಪಾತ್ರಗಳು ಕಂಡುಬರುತ್ತವೆ. ಇದರಲ್ಲಿ ಬಹಳ ಪಾತ್ರಗಳು ಕಂಡುಬಂದು, ಈ ಎಲ್ಲಾ ಪಾತ್ರಗಳಿಗೂ ನೃತ್ಯವನ್ನು ಬಹಳ ಅಚ್ಚುಕಟ್ಟಾಗಿ ಸಂಯೋಜಿಸಿರುವುದರಿಂದ ನೃತ್ಯ ನಾಟಕವು ಬಹಳ ಆಕರ್ಷಕವಾಗಿರುತ್ತದೆ ಹಾಗು ಪ್ರೇಕ್ಷಕರಿಗೆ ಬಹಳ ತೃಪ್ತಿ ಒದಗಿಸುತ್ತದೆ. ನೃತ್ಯ ನಾಟಕದ ಇನ್ನೊಂದು ವೈಶಿಷ್ಟತೆ ಎಂದರೆ ವೇದಿಕೆ. ವೇದಿಕೆಯ ಹಿನ್ನಲೆ ದೃಶ್ಯಗಳನ್ನು ಪ್ರತಿ ದೃಶ್ಯಕ್ಕೆ ಅನುಗುಣವಾಗಿ ಬದಲಿಸಲಾಗುತ್ತದೆ. ಬೆಳಕನ್ನು ಸಹ ದೃಶ್ಯಕ್ಕೆ ಅನುಗುಣವಾಗಿ ವೀಕ್ಷಕರಿಗೆ ನೈಜ್ಯ ಭಾವನೆ ನೀಡುವಂತೆ ಬಳಸಿಕೊಳ್ಳುತ್ತಾರೆ. ಸಾಮನ್ಯವಾಗಿ ನಾಟಕಗಳಲ್ಲಿ, ವೇದಿಕೆ ಮೇಲೆ ಅನೇಕ ಉತ್ಪ್ರೇಕ್ಷಕ ವಿನ್ಯಾಸಗಳನ್ನು ಕಾಣಬಹುದು. ಆದರೆ ನೃತ್ಯ ನಾಟಕದಲ್ಲಿ ವೇದಿಕೆ ಮೇಲೆ ಯಾವುದೇ ಉತ್ಪ್ರೇಕ್ಷಕ ವಿನ್ಯಾಸಗಳು ಕಂಡುಬರುವುದಿಲ್ಲ.
ಹಿನ್ನಲೆ
[ಬದಲಾಯಿಸಿ]ಈ ಶೈಲಿಯು ತಂಜಾವೂರು ಬಳಿ ಇರುವ ಮೆಲತ್ತೂರು ಎಂಬ ಹಳ್ಳಿಯಲ್ಲಿ ಆಚರಿಣೆಯಲ್ಲಿದೆ. '೧೩ ಭಾಗವತ ಮೇಳ' ಹಾಡು ಮತ್ತು ನೃತ್ಯದ ಮೂಲಕ ದೇವರ ಹಿರಿಮೆಯನ್ನು ಸಾಮಾನ್ಯ ಮನುಷ್ಯರಿಗೆ ತಿಳಿಸುತ್ತಾ, ದೇವರಿಗೆ ನಮಸ್ಕಾರಗಳು ಹಾಗು ಪ್ರಾರ್ಥನೆಯನ್ನು ಸೂಚಿಸುತ್ತಾರೆ. ಈ ನೃತ್ಯ ಶೈಲಿಯು ಶೃಂಗಾರ ಹೊರತುಪಡಿಸಿ ಎಲ್ಲಾ ರಸಗಳನ್ನು ಹೊಂದಿದೆ. ತಮಿಳು ನಾಡಿನ ಭಾಗವತ ಮೇಳದ ಸಂಪ್ರದಾಯವು 'ಶ್ರಿಮದ್ ಭಗವತಂ' ಹಾಗು 'ಪುರಾಣ'ಗಳಿಂದ ಸಂಗೀತ ಹಾಗು ನೃತ್ಯದ ಕಲೆಯನ್ನು ಬಹಳ ಸಮೃದ್ಧವಾಗಿ ಅಳವಡಿಸಿಕೊಂಡಿದ್ದಾರೆ. ಭಕ್ತಿಯನ್ನು ಎಲ್ಲೆಡೆ ಹರಡಲು ಕೇವಲ 'ಭಾಗವತೆಲು', 'ಭಾಗವತಾರ್' ಎಂಬ ಮನುಷ್ಯರು ಮಾತ್ರ ಈ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸುತ್ತಾರೆ. ಆದ್ದರಿಂದ ಈ ನೃತ್ಯ ಶೈಲಿಯನ್ನು 'ಭಾಗವತ ಮೇಳ' ಎಂದು ಕರೆಯುತ್ತಾರೆ. ಹೀಗೆ ಭಾಗವತ ಮೇಳವು ತಮಿಳು ನಾಡಿನ 'ಚೋಳ' ಮಂಡಲದಲ್ಲಿ ೧೬ನೇ ಶತಮಾನದಲ್ಲಿ ಬೇರೂರಿತು. ಆದರೆ ಈ ಕಲೆಯ ಮೂಲ 'ಆಂಧ್ರ' ಎಂದು ಹೇಳುವುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ. ಬಾಲು ಭಾಗವತರ್ ಹಾಗು ಮೆಲತ್ತೂರಿನ ಭಾರತಂ ನಾರಯಣ ಸ್ವಾಮಿಯವರು ಈ ಶೈಲಿಯ ಬೆಳವಣಿಗೆ ಮತ್ತು ಜನಪ್ರಿಯತೆಗೆ ಮುಖ್ಯ ಕಾರಣರಾಗಿದ್ದಾರೆ. ಈ ಶೈಲಿಯ ಜನಪ್ರಿಯತೆಗಾಗಿ ಇವರು ಸುಮಾರು ೧೯೩೦ ಹಾಗು ೧೯೪೦ರಲ್ಲಿ ಇ.ಕೃಷ್ಣ ಹಾಗು ಡಾ.ವಿ.ರಾಘವನ್ ರವರ ಮಾರ್ಗದರ್ಶನವನ್ನು ಪಡೆದರು. ಈ ನೃತ್ಯ ಶೈಲಿಯು ೪೦೦ ವರ್ಷ ಹಳೆಯದಾಗಿದೆ. ಈ ನೃತ್ಯಯವು ತಮಿಳನಾಡಿನ ಮೆಲತ್ತೂರು, ಸೋಲಮಂಗಳಂ ಮತ್ತು ಊತುಕಾಡು ಹಳ್ಳಿಗಳಲ್ಲಿ ಜನಪ್ರಿಯವಾಗಿದೆ. ಈ ಶೈಲಿಯ ವೈಶಿಷ್ಟ್ಯವೇನೆಂದರೆ ಸಂಭಾಷಣೆಯು ತಮಿಳು ಭಾಷೆಯಲ್ಲಿದ್ದು ಹಾಡುಗಳು ತೆಲುಗು ಭಾಷೆಯಲ್ಲಿದೆ. ನೃತ್ಯದ ಪ್ರದರ್ಶನಗಳು ಸಾಮನ್ಯವಾಗಿ ನರಸಿಂಹ ಜಯಂತಿಯ ಸಮಯದಲ್ಲಿ, ಮೇ ತಿಂಗಳಲ್ಲಿ ನಡೆಯುತ್ತದೆ. ಹಿಂದಿನ ಕಾಲದಲ್ಲಿ ನಾವು ಈ ನೃತ್ಯವನ್ನು ಮೆಲತ್ತೂರಿನಲ್ಲಿ ಮಾತ್ರ ಕಾಣಬಹುದಾಗಿತ್ತು. ಈ ನಡುವೆ ನಾವು 'ಪೆರುಮಾಲು' ಎಂಬ ಹಳ್ಳಿಯಲ್ಲಿಯೂ ಕಾಣಬಹುದು. ನೃತ್ಯ ಕಲಾವಿದರು ಎಲ್ಲರೂ ಪುರುಷರಾಗಿರುತ್ತಾರೆ.
ಕಾರ್ಯಕ್ರಮವು ಕಲಾವಿದರ ಕೋಣೆಯಲ್ಲಿ ವಂದನೆ/ಪೂಜೆಯೊಂದಿಗೆ ಆರಂಭವಾಗುತ್ತದೆ. ವಿದೂಶಕನು ಮೊದಲಿಗೆ ವೇದಿಕೆಯನ್ನು ಪ್ರವೇಶಿಸುತ್ತಾನೆ. ಸಂಗೀತಗಾರರು ದಿನದ ಮಂಗಳವನ್ನು ಹಾಡುತ್ತಾ ವಿದೂಶಕನ್ನನು ಹಿಂಬಾಲಿಸುತ್ತಾರೆ. ಇದರ ಸಂಯೋಜನೆ ಕಾವ್ಯಾತ್ಮಕವಾಗಿದ್ದು,ಇದನ್ನು ರಾಗ ಮತ್ತು ತಾಳಕ್ಕೆ ಹೊಂದಿಸಲಾಗಿದೆ. ನಂತರ ಗಣೇಶನ ಮುಖವಾಡವನ್ನು ಧರಿಸಿರುವ ಕಲಾವಿದನು ವೇದಿಕೆಯನ್ನು ಪ್ರವೇಶಿಸುತ್ತಾನೆ. ಸಂಗೀತಗಾರರು ಗಣೇಶನ ಹಾಡನ್ನು ಹಾಡಲು ಪ್ರಾರಂಭಿಸುತ್ತಾರೆ. ಇದರ ನಂತರ ಮುಖ್ಯ ಪಾತ್ರಗಳು, ಇಬ್ಬರು ಕಲಾವಿದರು ಹಿಡಿದು ನಿಂತಿರೊ ಸಣ್ಣ ಪರದೆಯಿಂದ ವೇದೆಕೆಯನ್ನು ಪ್ರವೇಶಿಸುತ್ತಾರೆ. ಈಗ ಕಥೆ ಆರಂಭವಾಗುತ್ತದೆ. ಇದನ್ನು ಪಾತ್ರ ಪ್ರವೇಶ ಎನ್ನುತ್ತಾರೆ. ಮುಖ್ಯ ಕಲಾವಿದರು 'ನೃಟ್ಟ' ಎಂಬ ಸಣ್ಣ ತುಣುಕನ್ನು ಪ್ರದರ್ಶಿಸುತ್ತಾರೆ. ಇದರಲ್ಲಿ ಅವರ ಸಾಮಾರ್ಥ್ಯವನ್ನು ತೋರಿಸುತ್ತಾರೆ ಹಾಗು ಮುಖ್ಯ ಪಾತ್ರಕ್ಕೆ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆಗ ಸಂಗೀತಗಾರರು ಸಹ ಕಲಾವಿದರ ಹಿಂದೆ ಒಡಾಡುತಿದ್ದರು ಆದರೆ ಈಗ ಅವರು ಭರತನಾಟ್ಯದ ಪ್ರದರ್ಶನದಲ್ಲಿ ಕಂಡುಬರುವ ಹಾಗೆ ವೇದಿಕೆಯ ಬಲಭಾಗದಲ್ಲಿ ಕುಳಿತಿರುತ್ತಾರೆ.
ಸಂಗೀತ ಹಾಗು ಸಂಭಾಷಣಿಯನ್ನು ಪ್ರದರ್ಶನಗಳಲ್ಲಿ ಬಳಸಲಾಗುತ್ತದೆ. ಪ್ರತಿ ಪಾತ್ರವು ವೇದಿಕೆಯನ್ನು ಪ್ರವೇಶಿಸುತ್ತಿದ್ದಂತಯೇ ಅವರ ಪರಿಚಯ ನೀಡಲಾಗುತ್ತದೆ. ಅಲಾರಿಪು, ಜಾತಿಸ್ವರ, ಶಬ್ಧ ಮತ್ತು ವರ್ಣಗಳು ಎಲ್ಲಾ ನೃತ್ಯ ನಾಟಕಗಳಲ್ಲಿ ಕಾಣಬಹುದು. ಹಾಡುಗಳು 'ದರು' ರೂಪದಲ್ಲಿರುತ್ತದೆ. ಕಲಾವಿದರು ಕಾಗದದಿಂದ ಮಾಡಿರುವ ಗಣೇಶ, ಬ್ರಹ್ಮ, ನರಸಿಂಹ, ರಾಕ್ಷಸ ಮುಂತಾದ ಪಾತ್ರಗಳ ಮುಖವಾಡವನ್ನು ಧರಿಸಿರುತ್ತಾರೆ. ಈ ಮುಖವಾಡವನ್ನು ಬಹಳ ಎಚ್ಚರಿಕೆಯಿಂದ ಸಂರಕ್ಷಿಸಿ ಇಡುತ್ತಾರೆ. ಇವುಗಳನ್ನು ಮರದ ಕೆಲಸಗಾರರು ಮೃದು ಮರದ ಕೊಂಬೆಗಳಿಂದ ಮಾಡುತ್ತಾರೆ. ಈ ನೃತ್ಯ ನಾಟಕಗಳನ್ನು ಸ್ಥಳೀಯ ಕಲಾವಿದರು ಪ್ರದರ್ಶಿಸುತ್ತಾರೆ.ಕಲಾವಿದರು ಹೆಮ್ಮೆಯಿಂದ ಯಾವುದೇ ವೇತನವನ್ನು ಸ್ವೀಕರಿಸದೆ ನೃತ್ಯ ಪ್ರದರ್ಶನವನ್ನು ಮಾಡುತ್ತಾರೆ. ಇವರು ಬಳಸುವ ಸಂಗೀತ ಶ್ರೀಮಂತವಾದ ಶಾಸ್ತ್ರೀಯ ಸಂಗೀತ. ಈ ಕಲೆಯನ್ನು ಕಲಾವಿದರ ತಲೆಮಾರಿನವರಿಗೆ ನೀಡುತ್ತಾರೆ. ಇವರು ಮಾಡುವ ಪಾತ್ರಕ್ಕೆ ದೇವರ ಅನುಗ್ರಹ ಪಡೆಯಲು, ಪ್ರತಿದಿನ ಬಹಳ ಸುಸಂಸ್ಕೃತ ಹಾಗು ನಿಷ್ಠೆಯ ಜೀವನವನ್ನು ನಡೆಸುತ್ತಾರೆ. ಪ್ರದರ್ಶನವನ್ನು ಅವರ ಗ್ರಾಮದ ಗಡಿಯ ಹೊರಗೆ ಮಾಡುವಂತಿಲ್ಲ. ಇದನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾಟ್ಯವು ಕೇವಲ ನೃತ್ಯ ಅಥವಾ ನಾಟಕವಲ್ಲ. ನಾಟ್ಯವು 'ಭರತನು' ವರ್ಣಿಸಿರುವ ಹಾಗೆ ಪುರಾಣ ಕಥೆಯನ್ನು ಬಿಂಬಿಸುವ ಒಂದು ಪ್ರದರ್ಶನವಾಗಿದೆ. ಇದನ್ನು ಕಲಾವಿದರು ಸೂಕ್ತವಾದ ಬಟ್ಟೆಗಳನ್ನು ಧರಿಸಿ, ಸೂಕ್ತವಾದ ಸಂಗೀತ, ಸಂಭಾಷಣೆ, ನೃತ್ಯ ಹಾಗು ಅಭಿವ್ಯಕ್ತಿಗಳಿಂದ ಪ್ರದರ್ಶಿಸುತ್ತಾರೆ. ಇಂತಹ ರೂಪವನ್ನು ನಾವು ೩ನೇ ಶತಮಾನದವರೆಗು ಕಾಣಬಹುದು. ಕಾಳಿದಾಸನ ಸಂಯೋಜನೆಗಳನ್ನು ಬಹಳವಾಗಿ ಬಳಸಿಕೊಳ್ಳಲಾಗಿದೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- http://melatturbhagavatamela.org/about.php Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
- https://sangeethas.wordpress.com/2008/05/15/melattur-bhagavatha-mela/
- http://www.bhagavatamela.org/
ಉಲ್ಲೇಖಗಳು
[ಬದಲಾಯಿಸಿ]- ↑ "ಭಾಗವತ ಮೇಳ". Archived from the original on 2016-03-06. Retrieved 2015-11-04.
- ↑ "ಯಕ್ಷಗಾನ". Archived from the original on 2016-03-09. Retrieved 2015-11-04.