ವಿಷಯಕ್ಕೆ ಹೋಗು

ಬ್ರೆಡ್ ಪಕೋಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರೆಡ್ ಪಕೋಡಾ

ಬ್ರೆಡ್ ಪಕೋಡಾ ಭಾರತದ ಒಂದು ಕರಿದ ಲಘು ಆಹಾರವಾಗಿದೆ (ಪಕೋಡಾ ಅಥವಾ ಪನಿಯಾಣ). ಇದನ್ನು ಬ್ರೆಡ್ ಬಜ್ಜಿ ಎಂದೂ ಕೂಡ ಕರೆಯಲಾಗುತ್ತದೆ. ಒಂದು ಸಾಮಾನ್ಯ ಬೀದಿ ಆಹಾರವಾದ ಇದನ್ನು ಬ್ರೆಡ್‍ನ ಚೂರುಗಳು, ಕಡಲೆ ಹಿಟ್ಟು, ಮತ್ತು ಸಂಬಾರ ಪದಾರ್ಥಗಳು ಸೇರಿದಂತೆ ಇತರ ಘಟಕಾಂಶಗಳಿಂದ ತಯಾರಿಸಲಾಗುತ್ತದೆ.[೧]

ತ್ರಿಕೋನಾಕಾರದ ಬ್ರೆಡ್ ಚೂರುಗಳನ್ನು ಉಪ್ಪುಖಾರ ಸೇರಿದ ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಈ ಲಘು ಆಹಾರವನ್ನು ತಯಾರಿಸಲಾಗುತ್ತದೆ.[೨] ಹಿಸುಕಿದ ಆಲೂಗಡ್ಡೆಗಳಂತಹ ಹೂರಣವು ಸಾಮಾನ್ಯವಾಗಿದೆ.[೩][೪] ಇದನ್ನು ಎಣ್ಣೆಯಲ್ಲಿ ಮುಳುಗಿಸಿ ಕರಿಯಬಹುದು ಅಥವಾ ಬಾಣಲೆಯಲ್ಲಿ ಸ್ವಲ್ಪವೇ ಎಣ್ಣೆಯಲ್ಲಿ ಕರಿಯಬಹುದು. ಇದನ್ನು ಚಟ್ನಿಗಳು ಅಥವಾ ಕೆಚಪ್‍ನೊಂದಿಗೆ ಬಡಿಸಲಾಗುತ್ತದೆ.[೫]

ಉಲ್ಲೇಖಗಳು[ಬದಲಾಯಿಸಿ]

  1. Sephi Bergerson (2009). Street Food Of India. Roli Books. p. 90. ISBN 978-81-7436-571-2.
  2. Neelam Batra (2011). 1,000 Indian Recipes. Houghton Mifflin Harcourt. p. 19. ISBN 0-544-18910-8.
  3. Nisha Madhulika (3 February 2015). "Tea-time snack: How about Aloo Bread Pakora this evening". Indian Express.
  4. Vatsala Mamgain (5 December 2015). "Carb snobs, look away". Mint.
  5. Richa Hingle (2015). Vegan Richa's Indian Kitchen: Traditional and Creative Recipes for the Home Cook. Vegan Heritage Press. p. 65. ISBN 978-1-941252-10-9.