ವಿಷಯಕ್ಕೆ ಹೋಗು

ಬೋಲ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೋಲ್ಟ್(ಭದ್ರಮಾಡುವ ವಸ್ತು)(IS: 1364-2002)[೧]

ಇದು ಒಂದು ಕೋಲಿನಾಕಾರದ ಹೊರಮೈಯಲ್ಲಿ ಸುರುಳಿಯಾಕಾರದ ಏಣು(ಥ್ರೆಡ್) ಇರುವ, ತಿರುಗಿಸಿ ಭದ್ರಮಾಡುವ ಯಂತ್ರದ ಒಂದು ಭಾಗವಾಗಿದೆ. ಬೋಲ್ಟ್ ತಾತ್ಕಾಲಿಕವಾಗಿ ಯಂತ್ರದ ಭಾಗಗಳನ್ನು ಜೋಡಿಸುವ 'ಏಣು ಬಂಧಕ(ಥ್ರೆಡೆಡ್ ಪ್ಯಾಸೆನೆರ್)' ಆಗಿದೆ. ಬೋಲ್ಟ್ ನ್ನು ಸಾಮಾನ್ಯವಾಗಿ 'ನಟ್' ಮತ್ತು 'ವಾಷರ್' ಜತೆಗೆ ಬಳಸುತ್ತಾರೆ. ಈ ಜೋಡಿಯನ್ನು 'ಸ್ಕ್ರೂ ಪೇರ್' ಎನ್ನುತ್ತಾರೆ. ಕೆಲವೊಮ್ಮೆ 'ಸ್ಕ್ರೂ' ನಂತೆ ಒಂದನ್ನೆ ಉಪಯೋಗಿಸುತ್ತಾರೆ.

ಜೋಡಣೆಯಾಗಿರುವ ಬೋಲ್ಟ್, ನಟ್ ಮತ್ತು ವಾಷರ್ ಹಾಗು ಬೋಲ್ಟ್ ನ ವಿವಿಧ ಭಾಗಗಳನ್ನು ತೋರಿಸಿದೆ.

ರಚನೆ[ಬದಲಾಯಿಸಿ]

ಲೋಹದ ಕೋಲಿನ ಮೇಲೆ ಸುರುಳಿಯಾಕಾರದ ಏಣು(ಥ್ರೆಡ್) ಇರುತ್ತದೆ.

ಭಾಗಗಳು[ಬದಲಾಯಿಸಿ]

 1. ಷಟ್ಭುಜಾಕೃತಿಯ ಅಥವಾ ಚೌಕಕಾರದ ತಲೆ ಭಾಗ.
 2. ಕೋಲಿನಾಕಾರದ ಹೊರಮೈಯಲ್ಲಿ ಏಣು(ಥ್ರೆಡ್) ಇರುವ ಮೈ ಭಾಗ.
 3. ಇವೆರೆಡರ ಮದ್ಯೆ ಇರುವ ಕಾಲು ಭಾಗ.
ಬೋಲ್ಟ್ ಮತ್ತು ನಟ್

ಬೋಲ್ಟಿನ ವಿಧಗಳು[ಬದಲಾಯಿಸಿ]

ಬೋಲ್ಟ್ ನ ತಲೆಯ ಆಕಾರವು ಬೋಲ್ಟ್ ನ ಉಪಯೊಗದ ಮೇಲೆ ಅವಲಂಬಿಸಿದೆ. ತಲೆಯ ಆಕಾರವನ್ನು ಅವಲಂಬಿಸಿ ಇಂಜಿನಿಯರಿಂಗ್ ನಲ್ಲಿ ಬಳಕೆ ಇರುವ ಮುಖ್ಯವಾದ ಬೋಲ್ಟ್ ಗಳು ಈ ರೀತಿ ಇವೆ.[೨]

 1. ಷಡ್ಭುಜಾಕೃತಿ ತಲೆಯ ಆಕಾರದ ಬೋಲ್ಟ್(Hexagonal headed bolt).
 2. ಚೌಕಕಾರದ ತಲೆಯ ಆಕಾರದ ಬೋಲ್ಟ್(Square headed bolt).
 3. ಕೊಳವೆಯಾಕರದ ಅಥವಾ ಗಿಣ್ಣಿನಾಕರದ ತಲೆಯ ಆಕಾರದ ಬೋಲ್ಟ್(Cylindrical or Cheese headed bolt).
 4. ಲೋಟದ ತಲೆಯ ಆಕಾರದ ಬೋಲ್ಟ್( Cup headed bolt).
 5. ಟಿ-ತಲೆಯ ಆಕಾರದ ಬೋಲ್ಟ್(T-headed bolt).
 6. ಒಳಗೆ ಕುಸಿದ ತಲೆಯ ಆಕಾರದ ಬೋಲ್ಟ್(Counter sunk headed bolt).
 7. ಕೊಂಡಿ ಬೋಲ್ಟ್(Hook Bolt).
 8. ತಲೆಯಿಲ್ಲದ ಗೋಪುಚ್ಛಾಕಾರವಾದ ಬೋಲ್ಟ್( Headless tapered bolt).
 9. ಬೇಡಿ ಬೋಲ್ಟ್(Shakle bolt).

ಬೋಲ್ಟ್ ತಯಾರಿಕೆಗೆ ವಸ್ತುಗಳು[ಬದಲಾಯಿಸಿ]

ಬೋಲ್ಟ್ ತಯಾರಿಕೆಯಲ್ಲಿ ಬಳಸುವ ವಸ್ತುಗಳನ್ನು IS: 1364(Part 5)-2002 ರಲ್ಲಿ ಪಟ್ಟಿ ಮಾಡಲಾಗಿದೆ. ಬೋಲ್ಟ್ ನ್ನು ಸಾಮಾನ್ಯವಾಗಿ ಉಕ್ಕಿನಿಂದ ತಯಾರಿಸಲಾಗುವುದು.ಇದಲ್ಲದೆ,ಹಿತ್ತಾಳೆ,ಕಂಚು, ಅಲ್ಯುಮಿನೀಯಂ ಮತ್ತು ಟಿಟಾನಿಯಂ ಲೋಹಗಳನ್ನು ಕೂಡ ಉಪಯೋಗಿಸಲಾಗುತ್ತದೆ. ನೈಲಾನ್ ಹಾಗು ಪಾಲಿಟೆಟ್ರಾಪ್ಲೂರೋಇಥಲೀನ್ ಕೂಡ ಉಪಯೋಗಿಸುತ್ತಾರೆ. ಕೆಲವೊಮ್ಮೆ, ಮೇಲ್ಮೈ ಪಿನೀಶ್ ಕೊಡಲು ಅಥವಾ ಗುಣಗಳನ್ನು ಸುಧಾರಿಸಲು ಇವುಗಳ ಮೇಲೆ ಬೇರೆ ಲೋಹಗಳ ಲೇಪನವನ್ನು ಮಾಡಲಾಗುವುದು. ಉದಾಹರಣೆಗೆ,ತುಕ್ಕು ಹಿಡಿಯದಂತಿರಲು ಉಕ್ಕಿನ ಸ್ಕ್ರೂಗಳಿಗೆ ಹೊಳಪಾದ ಸತು(ಜಿಂಕ್)ವಿನ ಲೇಪನವನ್ನು ಮಾಡಲಾಗುವುದು.

ಬೋಲ್ಟ್ ಗಳ ತಯಾರಿಕೆ[ಬದಲಾಯಿಸಿ]

ಬೋಲ್ಟ್ ಗಳನ್ನು ಕಮ್ಮಾರಿಕೆ(ಫೋರ್ಜಿಂಗ್)ಯಲ್ಲಿ ತಯಾರಿಸಲಾಗುವುದು.

ಬೋಲ್ಟಿನ ಪಾರಿಭಾಷಿಕಗಳು[ಬದಲಾಯಿಸಿ]

ಭಾರತೀಯ ಮಾಪನ ಸಂಸ್ಥೆ(ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಯು ಸರಾಸರಿ ವ್ಯಾಸವು 1.6 ಮೀ.ಮೀ ನಿಂದ 64 ಮೀ.ಮೀ ವರೆಗೆ ಇರುವ ಷಡ್ಭುಜಾಕೃತಿ ತಲೆಯ ಆಕಾರದ ಮತ್ತು ಚೌಕಕಾರದ ತಲೆಯ ಆಕಾರದ ಬೋಲ್ಟ್ ಮತ್ತು ನಟ್ಗಳ ಗುಣ ಲಕ್ಷಣಗಳನ್ನು ನಮೂದಿಸಿದೆ. ಇವುಗಳ ಸರಾಸರಿ ಉದ್ದವು 10D ನಿಂದ 150D ವರೆಗೆ ಇರುವುದು. ಇಲ್ಲಿ 'D' ಎಂದರೆ, ಬೋಲ್ಟ್ ಅಥವಾ ನಟ್ ನ ಸರಾಸರಿ ವ್ಯಾಸವು ಆಗಿರುವುದು. ಬೋಲ್ಟ್ನ ಉದ್ದ = ಏಣಿನ ಉದ್ದ + ಕಾಲು ಭಾಗದ ಉದ್ದ, ಎಂದು ತೆಗೆದುಕೊಳ್ಳಲಾಗಿದೆ. ಕಾರ್ಯನಿರ್ವಾಹಕನ ರಕ್ಷಣೆಗೆ ಅನುಕೂಲವಾಗುವಂತೆ ಬೋಲ್ಟ್ನ ತಲೆ ಭಾಗದ ಮೊನಚಾದ ಮೂಲೆಗಳು ಮತ್ತು ನಟ್ಗಳ ಮೇಲು ಮೂಲೆಗಳನ್ನು ಶಂಖಾಕೃತಿ ಬರುವಂತೆ ವೃತ್ತಿಸಿದೆ ಅಥವಾ ಮಟ್ಟ ಮಾಡಲಾಗಿದೆ. ಭಾರತೀಯ ಮಾಪನ ಸಂಸ್ಥೆಯ ಪ್ರಕಾರ ಷಡ್ಭುಜಾಕೃತಿ ತಲೆಯ ಆಕಾರದ ಮತ್ತು ಚೌಕಕಾರದ ತಲೆಯ ಆಕಾರದ ಬೋಲ್ಟ್ ಮತ್ತು ನಟ್ ಗಳನ್ನು ಈ ಕೆಳಕಂಡಂತೆ ವಿಭಾಗಿಸಿ ಮಾಪನಗೊಳಿಸಬಹುದು.

 1. ಪ್ರ್ಯಾಶಸ್ತ್ಯ ಏಣುಗಳು ಮತ್ತು ಅಪ್ರ್ಯಾಶಸ್ತ್ಯ ಏಣುಗಳು.
 2. ದಪ್ಪ ವರಸೆಯ, ಸಾಮಾನ್ಯ ವರಸೆಯ , ಸೂಕ್ಷ್ಮ ವರಸೆಯ , ಹೆಚ್ಚು ಸೂಕ್ಷ್ಮ ವರಸೆಯ

ಬೋಲ್ಟ್ ನ್ನು ಮುಖ್ಯವಾಗಿ ಅದರ ಎಣಿನ ಸರಾಸರಿ ವ್ಯಾಸ ಮತ್ತು ಬೋಲ್ಟ್ ನ ಉದ್ದದ ಮೂಲಕ ಹೆಸರಿಸಲಾಗುವುದು. ಉದಾಹರಣೆಗೆ,ಸರಾಸರಿ ವ್ಯಾಸ 16 ಮಿ.ಮೀ. (ಮಿಲ್ಲಿಮೀಟರ್, ಎಮ್.ಎಮ್.) ಮತ್ತು ಉದ್ದ 30 ಮಿ.ಮೀ. ಇರುವ ಬೋಲ್ಟನ್ನು M16X30 ಬೋಲ್ಟ್ ಎನ್ನಲಾಗುತ್ತದೆ. ಇದಲ್ಲದೆ, ಕೆಲವೊಮ್ಮೆ, ವಾಣಿಜ್ಯ ಉದ್ದೇಶಗಳಿಗಾಗಿ, ಇದರ ಜತೆಗೆ ಹೆಚ್ಚುವರಿಯಾಗಿ, ಎಣಿನ ಪರಿಮಿತಿ, ವಸ್ತು, ಗುಣ ಲಕ್ಷಣದ ತರಗತಿ, ತಾಳಿಕೆ(ಟಾಲರೆನ್ಸ್) ಮತ್ತು ಗ್ರೇಡ್ಗಳನ್ನು ಸೇರಿಸಿ ಹೆಸರಿಸಲಾಗುವುದು.

ಬೋಲ್ಟ್ ನ್ನು ಯಂತ್ರದ ಭಾಗಗಳ ಜೋಡಣೆಯಲ್ಲಿ ಬಳಕೆ[ಬದಲಾಯಿಸಿ]

ಬೋಲ್ಟ್ ನ ಬಳಕೆಯ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ.

ಬೋಲ್ಟ್ ನ ಬಳಕೆ

ಬೋಲ್ಟ್ ಮತ್ತು ಸ್ಕ್ರೂ[ಬದಲಾಯಿಸಿ]

ಇವೆರೆಡರ ಮಧ್ಯೆ ಕೆಲವು ಪ್ರಾಯೋಗಿಕ ವ್ಯತ್ಯಾಸಗಳಿದ್ದರೂ, ಕೆಲವೊಂದು ವಿಷಯಗಳಲ್ಲಿ ಸಾಮ್ಯತೆಯನ್ನು ಹೊಂದಿವೆ.

ವ್ಯತ್ಯಾಸಗಳು[ಬದಲಾಯಿಸಿ]

 • ಮೆಷಿನರೀಸ್ ಹ್ಯಾಂಡ್ ಬುಕ್ ಪ್ರಕಾರ,ಒಂದು ಬೋಲ್ಟ್ ನ್ನು ಇನ್ನೊಂದು ನಟ್ ನ ಜತೆಗೆ ಏಣು(ಥ್ರೆಡ್) ಇಲ್ಲದೆ ಇರುವ ಎರಡು ಬಾಗಗಳನ್ನು ಜೋಡಿಸಲು ಉಪಯೋಗಿಸಲಾಗುತ್ತದೆ. ಆದರೆ,ಸ್ಕ್ರೂವನ್ನು ಕಡಿಮೆ ಎಂದರೆ, ಒಂದು ಏಣು(ಥ್ರೆಡ್) ಇರುವ ಬಾಗಗಳನ್ನು ಜೋಡಿಸಲು ಉಪಯೋಗಿಸಲಾಗುತ್ತದೆ[೩].
 • ಬೋಲ್ಟ್ ನ್ನು ಬೋಲ್ಟ್ ನ ಜಾಯಿಂಟ್ ನಲ್ಲಿ ಉಪಯೋಗಿಸಲಾಗುತ್ತದೆ.
 • ಬೋಲ್ಟ್ ನಲ್ಲಿ ಕೆಳಕಾಲುಬಾಗದಲ್ಲಿ ಏಣು(ಥ್ರೆಡ್) ಸ್ವಲ್ಪ ಭಾಗ ಇರುವುದಿಲ್ಲ.ಆದರೆ,ಸ್ಕ್ರೂನಲ್ಲಿ ಥ್ರೆಡ್ ಸಂಪೂರ್ಣವಾಗಿ ಇರುವ ಸಾಧ್ಯತೆಗಳು ಹೆಚ್ಚು.
 • ಬೋಲ್ಟ್ ನ್ನು ಸಾಮಾನ್ಯವಾಗಿ ನಟ್ ನ ಜತೆಗೆ ಉಪಯೋಗಿಸಲಾಗುತ್ತದೆ.
 • ಸ್ಕ್ರೂವನ್ನು ಉಪಯೋಗಿಸುವಾಗ ಅದನ್ನು ಹಿಡಿದು ತಿರುಗಿಸಲೇ ಬೇಕಾಗುತ್ತದೆ.ಆದರೆ,ಬೋಲ್ಟ್ ನ್ನು ಉಪಯೋಗಿಸುವಾಗ, ಅದನ್ನು ಗಟ್ಟಿಯಾಗಿ ಜೋಡಣೆಮಾಡುವ ಜಾಗದಲ್ಲಿರಿಸಿ ನಟ್ ನ್ನು ತಿರುಗಿಸಿ ಜೋಡಿಸಲಾಗುತ್ತದೆ ಅಥವಾ ತಿರುಗಿಸಲ್ಪಡದ ಬೊಲ್ಟ್ ನಂತಿರುವ ಕ್ಯಾರೇಜ್ ಬೊಲ್ಟ್ ನಂತಹ ಬೊಲ್ಟ್ ನ ಮೂಲಕ ನಟ್ ನ್ನು ತಿರುಗಿಸಿ ಜೋಡಿಸಲಾಗುತ್ತದೆ.
 • ಎರೆಡು ಭಾಗಗಳನ್ನು ಜೋಡಿಸುವಾಗ, ಬೋಲ್ಟ್ ನ ತಲೆಯನ್ನು ಒಂದು ರಿಂಚ್ ಅಥವಾ ಸ್ಪಾನರ್ ನ್ನು ಹಿಡಿದು, ನಟ್ ನ್ನು ಇನ್ನೊಂದು ಸ್ಪಾನರ್ ನ ಮೂಲಕ ತಿರುಗಿಸಲಾಗಿತ್ತದೆ. ಆದರೆ, ಸ್ಕ್ರೂ ನ್ನು ಉಪಯೋಗಿಸುವಾಗ,ಸ್ಕ್ರೂ ಡ್ರೈವರ್ ನ್ನು ಉಪಯೋಗಿಸಿ, ಸ್ಕ್ರೂನ ತಲೆಯ ಭಾಗದ ಮೇಲೆ ಇರುವ ಸೀಳಿನ ಮೂಲಕ ತಿರುಗಿಸಲಾಗುವುದು.


ತಾಂತ್ರಿಕ ಚಿತ್ರಗಳು[ಬದಲಾಯಿಸಿ]

ಬೋಲ್ಟಿನ ತಾಂತ್ರಿಕ ಚಿತ್ರ ಬೋಲ್ಟಿನ ತಾಂತ್ರಿಕ ಚಿತ್ರ ಬೋಲ್ಟಿನ ತಾಂತ್ರಿಕ ಚಿತ್ರ

ಉಲ್ಲೇಖ[ಬದಲಾಯಿಸಿ]

 1. Murthy, Trymbaka, Text book of Computer aided Machnine Drawing, Bangalore, CBS Publishers and distributors, ISBN: 9788123916606, 2008
 2. Dhavan, R.K.,A text book of Machine drawing, New Delhi: S.Chand & Co. Ltd., ISBN: 9788121908245, 2006
 3. https://en.wikipedia.org/wiki/Machinery%27s_Handbook
"https://kn.wikipedia.org/w/index.php?title=ಬೋಲ್ಟ್&oldid=1150157" ಇಂದ ಪಡೆಯಲ್ಪಟ್ಟಿದೆ