ಬೊಟ್ಟಿಕೆರೆ ಪುರುಷೋತ್ತಮ ಪೂಂಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೊಟ್ಟಿಕೆರೆ ಪುರುಷೋತ್ತಮ ಪೂಂಜ
ಜನನಜೂನ್ ೨೧, ೧೯೫೩
ಬೊಟ್ಟಿಕೆರೆ, ಮಂಗಳೂರು ದಕ್ಷಿಣ ಕನ್ನಡ
ವೃತ್ತಿಭಾಗವತ, ಪ್ರಸಂಗಕರ್ತ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಶೋಭಾ ಪೂಂಜ
ಮಕ್ಕಳುಜೀವಿತೇಶ್ ಪೂಂಜ, ಪರೀಕ್ಷಿತ್ ಪೂಂಜ


ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಒಬ್ಬ ಯಕ್ಷಗಾನದ ಖ್ಯಾತ ಭಾಗವತರು ಮತ್ತು ಪ್ರಸಂಗಕರ್ತರು. ಅನೇಕ ಮೇಳಗಳಲ್ಲಿ ಭಾಗವತರಾಗಿದ್ದು ಸುಮಾರು ಕನ್ನಡ ಮತ್ತು ತುಳು ಪ್ರಸಂಗಗಳನ್ನು ಬರೆದಿದ್ದಾರೆ. ಯಕ್ಷರಂಗದ ಅಭಿನವ ವಾಲ್ಮೀಕಿ ಎಂಬ ಬಿರುದು ಇವರಿಗಿದೆ.

ಜೀವನ[ಬದಲಾಯಿಸಿ]

ಬಾಲ್ಯ[ಬದಲಾಯಿಸಿ]

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬೊಟ್ಟಿಕೆರೆ ಎಂಬಲ್ಲಿ ಜೂನ್ ೨೧, ೧೯೫೩ ರಲ್ಲಿ ಜನಿಸಿದರು. ತಂದೆ ತ್ಯಾಂಪಣ್ಣ ಪೂಂಜ; ತಾಯಿ ಜಲಜಾ ಪೂಂಜ.

ಶಿಕ್ಷಣ[ಬದಲಾಯಿಸಿ]

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಬಿ ಎಸ್ಸಿ. ಪದವೀಧರರು. ಆನೆಗುಂಡಿ ಗಣಪತಿ ಭಟ್ ಹಾಗೂ ಹೊಸಹಿತ್ಲು ಮಹಾಲಿಂಗ ಭಟ್ ಅವರಿಂದ ಭಾಗವತಿಕೆ ಅಭ್ಯಾಸ ಮಾಡಿದ್ದಾರೆ.

ವೃತ್ತಿಜೀವನ[ಬದಲಾಯಿಸಿ]

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಉಪ್ಪಳ ಭಗವತಿ ಮೇಳ, ಮುಂಬೈ ಗೀತಾಂಬಿಕಾ ಯಕ್ಷಗಾನ ಮಂಡಳಿ, ಪುತ್ತೂರು ಮೇಳ, ಕರ್ಣಾಟಕ ಮೇಳ, ಕಟೀಲು ಮೇಳಗಳಲ್ಲಿ ಭಾಗವತರಾಗಿ ವೃತ್ತಿ ನಿರ್ವಹಿಸಿದ್ದಾರೆ..

ವೈವಾಹಿಕ ಜೀವನ[ಬದಲಾಯಿಸಿ]

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ೧೯೯೦ ರಲ್ಲಿ ಶೋಭಾ ಪೂಂಜ ಅವರನ್ನು ವಿವಾಹವಾದರು.

ಸಾಹಿತ್ಯ ಕೃಷಿ[ಬದಲಾಯಿಸಿ]

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರು ಬರೆದ ರಾಮಾಯಣ ಆಧಾರಿತ 'ಮಾನಿಷಾದ' ಪ್ರಸಂಗವು ಬಹಳ ಪ್ರಸಿದ್ಧಿಯನ್ನು ಹೊಂದಿದೆ.

ಯಕ್ಷಗಾನ ಪ್ರಸಂಗ ಕೃತಿಗಳು[ಬದಲಾಯಿಸಿ]

  1. ನಳಿನಾಕ್ಷ ನಂದಿನಿ
  2. ಮಾನಿಷಾದ
  3. ಮಾತಂಗ ಕನ್ಯೆ
  4. ಸತಿ ಉಲೂಪಿ
  5. ವಧೂ ವೈಶಾಲಿನಿ
  6. ಉಭಯ ಕುಲ ಬಿಲ್ಲೋಜ
  7. ಕ್ಷಾತ್ರ ಮೇಧ
  8. ರಾಜಾ ದ್ರುಪದ
  9. ಮನ್ಮಥೋಪಾಖ್ಯಾನ
  10. ಗಂಡುಗಲಿ ಘಟೋತ್ಕಜ
  11. ಪಾಂಚಜನ್ಯ
  12. ಅಮರ ಸಿಂಧೂದ್ಭವ
  13. ರುದ್ರಪಾದ

ಕಾಲ್ಪನಿಕ ಯಕ್ಷಗಾನ ಪ್ರಸಂಗಗಳು[ಬದಲಾಯಿಸಿ]

  1. ಮೇಘ ಮಯೂರಿ
  2. ಮೇಘ ಮಾಣಿಕ್ಯ
  3. ಅಮೃತ ವರ್ಷಿಣಿ
  4. ಸ್ವ್ರರ್ಣ ನೂಪುರ

ತುಳು ಯಕ್ಷಗಾನ ಪ್ರಸಂಗಗಳು[ಬದಲಾಯಿಸಿ]

  1. ಐಗುಳೆ ದಚ್ಚಿನೆ
  2. ಕುಡಿಯೆನ ಕೊಂಬಿರೆಳ್
  3. ಕುಡಿಯೆನ ಕಣ್ಣ್
  4. ಪಟ್ಟದ ಕತ್ತಿ
  5. ದಳವಾಯಿ ಮುದ್ದಣ್ಣೆ
  6. ಸ್ವರ್ಣ ಕೇದಗೆ
  7. ಬಂಗಾರ್ದ ಗೆಜ್ಜೆ

ನಾಟಕಗಳು[ಬದಲಾಯಿಸಿ]

  1. ಹಿತ್ತಾಳೆ ಕಿವಿ
  2. ಪಗರಿದ ಪಾಸ್

ನೃತ್ಯ ರೂಪಕಗಳು[ಬದಲಾಯಿಸಿ]

  1. ಅಂಧಕ ನಿದಾನ
  2. ಭುವನಾಭಿರಾಮ
  3. ಜೇವು ಕೇದಗೆ

ಇತರೆ ಕೃತಿಗಳು[ಬದಲಾಯಿಸಿ]

  1. ಬೀರೆ ದೇವು ಪೂಂಜೆ
  2. ಪ್ರಬಂಧಗಳು