ಬೊಟ್ಟಿಕೆರೆ ಪುರುಷೋತ್ತಮ ಪೂಂಜ
ಬೊಟ್ಟಿಕೆರೆ ಪುರುಷೋತ್ತಮ ಪೂಂಜ | |
---|---|
ಜನನ | ಜೂನ್ ೨೧, ೧೯೫೩ ಬೊಟ್ಟಿಕೆರೆ, ಮಂಗಳೂರು ದಕ್ಷಿಣ ಕನ್ನಡ |
ವೃತ್ತಿ | ಭಾಗವತ, ಪ್ರಸಂಗಕರ್ತ |
ರಾಷ್ಟ್ರೀಯತೆ | ಭಾರತೀಯ |
ಬಾಳ ಸಂಗಾತಿ | ಶೋಭಾ ಪೂಂಜ |
ಮಕ್ಕಳು | ಜೀವಿತೇಶ್ ಪೂಂಜ, ಪರೀಕ್ಷಿತ್ ಪೂಂಜ |
ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಒಬ್ಬ ಯಕ್ಷಗಾನದ ಖ್ಯಾತ ಭಾಗವತರು ಮತ್ತು ಪ್ರಸಂಗಕರ್ತರು. ಅನೇಕ ಮೇಳಗಳಲ್ಲಿ ಭಾಗವತರಾಗಿದ್ದು ಸುಮಾರು ಕನ್ನಡ ಮತ್ತು ತುಳು ಪ್ರಸಂಗಗಳನ್ನು ಬರೆದಿದ್ದಾರೆ. ಯಕ್ಷರಂಗದ ಅಭಿನವ ವಾಲ್ಮೀಕಿ ಎಂಬ ಬಿರುದು ಇವರಿಗಿದೆ.
ಜೀವನ
[ಬದಲಾಯಿಸಿ]ಬಾಲ್ಯ
[ಬದಲಾಯಿಸಿ]ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬೊಟ್ಟಿಕೆರೆ ಎಂಬಲ್ಲಿ ಜೂನ್ ೨೧, ೧೯೫೩ ರಲ್ಲಿ ಜನಿಸಿದರು. ತಂದೆ ತ್ಯಾಂಪಣ್ಣ ಪೂಂಜ; ತಾಯಿ ಜಲಜಾ ಪೂಂಜ.
ಶಿಕ್ಷಣ
[ಬದಲಾಯಿಸಿ]ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಬಿ ಎಸ್ಸಿ. ಪದವೀಧರರು. ಆನೆಗುಂಡಿ ಗಣಪತಿ ಭಟ್ ಹಾಗೂ ಹೊಸಹಿತ್ಲು ಮಹಾಲಿಂಗ ಭಟ್ ಅವರಿಂದ ಭಾಗವತಿಕೆ ಅಭ್ಯಾಸ ಮಾಡಿದ್ದಾರೆ.
ವೃತ್ತಿಜೀವನ
[ಬದಲಾಯಿಸಿ]ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಉಪ್ಪಳ ಭಗವತಿ ಮೇಳ, ಮುಂಬೈ ಗೀತಾಂಬಿಕಾ ಯಕ್ಷಗಾನ ಮಂಡಳಿ, ಪುತ್ತೂರು ಮೇಳ, ಕರ್ಣಾಟಕ ಮೇಳ, ಕಟೀಲು ಮೇಳಗಳಲ್ಲಿ ಭಾಗವತರಾಗಿ ವೃತ್ತಿ ನಿರ್ವಹಿಸಿದ್ದಾರೆ..
ವೈವಾಹಿಕ ಜೀವನ
[ಬದಲಾಯಿಸಿ]ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ೧೯೯೦ ರಲ್ಲಿ ಶೋಭಾ ಪೂಂಜ ಅವರನ್ನು ವಿವಾಹವಾದರು.
ಸಾಹಿತ್ಯ ಕೃಷಿ
[ಬದಲಾಯಿಸಿ]ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರು ಬರೆದ ರಾಮಾಯಣ ಆಧಾರಿತ 'ಮಾನಿಷಾದ' ಪ್ರಸಂಗವು ಬಹಳ ಪ್ರಸಿದ್ಧಿಯನ್ನು ಹೊಂದಿದೆ.
- ನಳಿನಾಕ್ಷ ನಂದಿನಿ
- ಮಾನಿಷಾದ
- ಮಾತಂಗ ಕನ್ಯೆ
- ಸತಿ ಉಲೂಪಿ
- ವಧೂ ವೈಶಾಲಿನಿ
- ಉಭಯ ಕುಲ ಬಿಲ್ಲೋಜ
- ಕ್ಷಾತ್ರ ಮೇಧ
- ರಾಜಾ ದ್ರುಪದ
- ಮನ್ಮಥೋಪಾಖ್ಯಾನ
- ಗಂಡುಗಲಿ ಘಟೋತ್ಕಜ
- ಪಾಂಚಜನ್ಯ
- ಅಮರ ಸಿಂಧೂದ್ಭವ
- ರುದ್ರಪಾದ
ಕಾಲ್ಪನಿಕ ಯಕ್ಷಗಾನ ಪ್ರಸಂಗಗಳು
[ಬದಲಾಯಿಸಿ]- ಮೇಘ ಮಯೂರಿ
- ಮೇಘ ಮಾಣಿಕ್ಯ
- ಅಮೃತ ವರ್ಷಿಣಿ
- ಸ್ವ್ರರ್ಣ ನೂಪುರ
- ಐಗುಳೆ ದಚ್ಚಿನೆ
- ಕುಡಿಯೆನ ಕೊಂಬಿರೆಳ್
- ಕುಡಿಯೆನ ಕಣ್ಣ್
- ಪಟ್ಟದ ಕತ್ತಿ
- ದಳವಾಯಿ ಮುದ್ದಣ್ಣೆ
- ಸ್ವರ್ಣ ಕೇದಗೆ
- ಬಂಗಾರ್ದ ಗೆಜ್ಜೆ
ನಾಟಕಗಳು
[ಬದಲಾಯಿಸಿ]- ಹಿತ್ತಾಳೆ ಕಿವಿ
- ಪಗರಿದ ಪಾಸ್
ನೃತ್ಯ ರೂಪಕಗಳು
[ಬದಲಾಯಿಸಿ]- ಅಂಧಕ ನಿದಾನ
- ಭುವನಾಭಿರಾಮ
- ಜೇವು ಕೇದಗೆ
ಇತರೆ ಕೃತಿಗಳು
[ಬದಲಾಯಿಸಿ]- ಬೀರೆ ದೇವು ಪೂಂಜೆ
- ಪ್ರಬಂಧಗಳು