ವಿಷಯಕ್ಕೆ ಹೋಗು

ಬೊಂತಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೊಂತಾದೇವಿ
ಜನನ1160
ಅಂಕಿತನಾಮಬಿಡಾಡಿ


ಬೊಂತಾದೇವಿ[ಬದಲಾಯಿಸಿ]

ಇವಳ ಮೂಲ ಹೆಸರು ನಿಜದೇವಿ. ದಿಗಂಬರೆಯಾಗಿದ್ದ ಶ್ರೇಷ್ಠ ಶಿವಭಕ್ತೆ. ಅಕ್ಕಮಹಾದೇವಿಯಂತೆ ಅರಮನೆಯ ಭೋಗಭಾಗ್ಯಗಳನ್ನು ತೊರೆದು ಉಟ್ಟಬಟ್ಟೆಯನ್ನು ಕಳಚಿ ಕಲ್ಯಾಣದ ಕಡೆ ನಡೆದವಳು. ಈಕೆ ಕಾಶ್ಮೀರ ದೇಶದ ಮಾಂಡವ್ಯಪುರದ ದೊರೆಯ ಮಗಳು. ಶಿವ ಈ ನಿಷ್ಠಾವಂತ ಶಿವಶರಣೆಯನ್ನು ಪರೀಕ್ಷಿಸಲು ಬಂದು ಅವಳಿಗೆ ಒಂದು ಬೊಂತೆ(ಕೌದಿ) ಕೊಟ್ಟು ಇದನ್ನು ಹೊದೆದು ಹೋಗು ಎನ್ನುತ್ತಾನೆ. ಶಿವನು ಕೊಟ್ಟ ಬೊಂತೆಯನ್ನು ಹೊದ್ದವಳನ್ನು ಅಂದಿನ ಜನ 'ಬೊಂತಾದೇವಿ' ಎಂದು ಕರೆದರು. ಕಲ್ಯಾಣಕ್ಕೆ ಬಂದ ಬೊಂತಾದೇವಿ ಕಲ್ಯಾಣದ ಕ್ರಾಂತಿಯಾದ ಮೇಲೂ, ತನ್ನ ಕಡೆಗಾಲದವರೆಗೂ ಅಲ್ಲಿಯೇ ಇರುತ್ತಾಳೆ. ಅಂತ್ಯಕಾಲದಲ್ಲಿ ಶಿವ ತನಗೆ ಕೊಟ್ಟ ಬೊಂತೆಯನ್ನು ಆಕಾಶಕ್ಕೆ ಎಸೆದಾಗ, ಅದು ಆಗಸದಲ್ಲಿ ಲೀನವಾಗುತ್ತದೆ. ಅದರೊಡನೆ ಬೊಂತಾದೇವಿ ಲಿಂಗೈಕ್ಯಳಾಗುತ್ತಾಳೆ. ಈಕೆಯ ಐದು ವಚನಗಳು ದೊರಕಿವೆ. ಶಬ್ದಶಕ್ತಿಯ ಸಾಮರ್ಥ್ಯವನ್ನು ಅಭಿವ್ಯಕ್ತಿಸಿ, ಜ್ಞಾನಕ್ಕೂ-ಅಜ್ಞಾನಕ್ಕೂ ಸಾಮ್ಯತೆ ತರುತ್ತಾಳೆ. ಈಕೆ ತನ್ನ ವಚನಗಳಲ್ಲಿ ವೇದ, ಪುರಾಣ, ಆಗಮಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಬಿಡಾಡಿ".

ಅಂತಾಯಿತು ಇಂತಾಯಿತ್ತೇನಬೇಡ
ಅನಂತ ನಿಂತಾತ್ಮನೆಂದರಿಯಯಾ ! ಬಿಡಾಡಿ
ಕರೆದಾಕೆ ಓ ಎಂಬುದು
ನಾದವೂ, ಬಿಂದುವೂ, ಪ್ರಾಣವೂ ?
ಇದಾವುದ ಬಲ್ಲಡೆ ನೀ ಹೇಳ ! ಬಿಡಾಡಿ
ನಾಲ್ಕು ವೇದ, ಹದಿನೆಂಟು ಪುರಾಣ
ಇಪ್ಪತ್ತೆಂಟು ಆಗಮ ಇದ ಪ್ರತಿ ಬಿಡಾಡಿ
ಶಬ್ದವೇ ಬ್ರಹ್ಮ, ಶಬ್ದವೇ ಸಿದ್ಧ , ಶಬ್ದವೇ ಶುದ್ಧ
ಕಾಣಿರೋ ಬಿಡಾಡಿ ಲಿಂಗೇಶ್ವರನಲ್ಲಿ