ವಿಷಯಕ್ಕೆ ಹೋಗು

ರೈತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೇಸಾಯಗಾರ ಇಂದ ಪುನರ್ನಿರ್ದೇಶಿತ)

ರೈತನು[] ರೈತನು ಬೇಸಾಯಮಾಡುವ ಜಮೀನಿನ ಮಾಲೀಕನಾಗಿರಬಹುದು ಅಥವಾ ಇತರರು ಒಡೆಯರಾಗಿರುವ ಜಮೀನಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬಹುದು, ಆದರೆ ಮುಂದುವರಿದ ಅರ್ಥವ್ಯವಸ್ಥೆಗಳಲ್ಲಿ, ರೈತನು ಸಾಮಾನ್ಯವಾಗಿ ಜಮೀನಿನ ಒಡೆಯನಾಗಿರುತ್ತಾನೆ, ಮತ್ತು ಜಮೀನಿನ ಉದ್ಯೋಗಿಗಳನ್ನು ಜಮೀನು ಕಾರ್ಮಿಕರು, ಅಥವಾ ಆರಂಬದಾಳುಗಳೆಂದು ಕರೆಯಲಾಗುತ್ತದೆ. ಆದರೆ, ಸ್ವಲ್ಪ ಕಾಲದ ಹಿಂದಿನವರೆಗೂ, ರೈತನು ಪರಿಶ್ರಮ ಮತ್ತು ಗಮನದಿಂದ ಸಸ್ಯ, ಬೆಳೆ ಇತ್ಯಾದಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಅಥವಾ ಸುಧಾರಿಸುವ ಅಥವಾ ಪ್ರಾಣಿಗಳನ್ನು (ಜಾನುವಾರು ಅಥವಾ ಮೀನು) ಬೆಳೆಸುವ ವ್ಯಕ್ತಿಯಾಗಿದ್ದನು.

ಕೃಷಿಯ ಕಾಲಮಾನ ನವಶಿಲಾಯುಗದಷ್ಟು ಹಿಂದಿನದ್ದು ಎಂದು ನಿರ್ಧರಿಸಲಾಗಿದೆ. ಕಂಚಿನ ಯುಗದ ವೇಳೆಗೆ, ಸುಮೇರಿಯನ್ನರು ಕೃಷಿ ವಿಶೇಷ ಕಾರ್ಮಿಕ ಪಡೆಯನ್ನು ಹೊಂದಿದ್ದರು (ಕ್ರಿ.ಪೂ. ೫೦೦೦-೪೦೦೦), ಮತ್ತು ಬೆಳೆಗಳನ್ನು ಬೆಳೆಯಲು ನೀರಾವರಿ ಮೇಲೆ ಬಹಳವಾಗಿ ಅವಲಂಬಿಸಿದ್ದರು. ಅವರು ವಸಂತ ಋತುವಿನಲ್ಲಿ ಕೊಯ್ಲು ಮಾಡುವಾಗ ಮೂರು ವ್ಯಕ್ತಿಗಳ ತಂಡಗಳ ಮೇಲೆ ಅವಲಂಬಿಸಿದ್ದರು. ಪ್ರಾಚೀನ ಈಜಿಪ್ಟ್‌ನ ರೈತರು ಬೇಸಾಯ ಮಾಡುತ್ತಿದ್ದರು ಮತ್ತು ನೈಲ್ ನದಿಯಿಂದ ತಮ್ಮ ನೀರನ್ನು ಒದಗಿಸಿಕೊಳ್ಳುತ್ತಿದ್ದರು ಮತ್ತು ಅದರ ಮೇಲೆ ಅವಲಂಬಿಸಿದ್ದರು.

ನಿರ್ದಿಷ್ಟ ಪಳಗಿಸಿದ ಪ್ರಾಣಿಗಳನ್ನು ಬೆಳೆಸುವ ರೈತರನ್ನು ಸೂಚಿಸಲು ಹೆಚ್ಚು ವಿಶಿಷ್ಟ ಪದಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಪಶುಪಾಲಕರು ಅಥವಾ ಜಾನುವಾರು ಸಾಕುವವರೆಂದರೆ ದನಗಳು, ಕುರಿಗಳು, ಆಡುಗಳು, ಮತ್ತು ಕುದುರೆಗಳಂತಹ ಮೇಯುವ ಜಾನುವಾರುಗಳನ್ನು ಬೆಳೆಸುವವರು. ಮುಖ್ಯವಾಗಿ ಹಾಲು ಉತ್ಪಾದನೆಯಲ್ಲಿ (ದನಗಳು, ಮೇಕೆಗಳು, ಕುರಿಗಳು ಅಥವಾ ಇತರ ಹಾಲು ಉತ್ಪಾದಿಸುವ ಪ್ರಾಣಿಗಳಿಂದ) ತೊಡಗಿರುವವರಿಗೆ ಹೈನು ಕೃಷಿಕ ಪದವನ್ನು ಅನ್ವಯಿಸಲಾಗುತ್ತದೆ. ಕೋಳಿ ಸಾಕಣೆಗಾರನೆಂದರೆ ಮಾಂಸ, ಮೊಟ್ಟೆ ಅಥವಾ ಗರಿ ಉತ್ಪಾದನೆಗಾಗಿ (ಸಾಮಾನ್ಯವಾಗಿ ಎಲ್ಲ ಮೂರು) ಕೋಳಿಗಳು, ಟರ್ಕಿಗಳು, ಬಾತುಕೋಳಿಗಳು ಅಥವಾ ಹೆಬ್ಬಾತುಗಳನ್ನು ಸಾಕುವುದರ ಮೇಲೆ ಗಮನಹರಿಸುವವನು.

ಉಲ್ಲೇಖಗಳು

[ಬದಲಾಯಿಸಿ]
  1. Dyer 2007, p. 1: "The word 'farmer' was originally used to describe a tenant paying a leasehold rent (a farm), often for holding a lord's manorial demesne. The use of the word was eventually extended to mean any tenant or owner of a large holding, though when Gregory King estimated that there were 150,000 farmers in the late seventeenth century he evidently defined them by their tenures, as freeholders were counted separately."


"https://kn.wikipedia.org/w/index.php?title=ರೈತ&oldid=1052071" ಇಂದ ಪಡೆಯಲ್ಪಟ್ಟಿದೆ