ಬೆಳ್ಳಿ ಲಲಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳ್ಳಿ ಲಲಿತಾ (೨೯ ಏಪ್ರಿಲ್ ೧೯೭೪ - ೨೬ ಮೇ ೧೯೯೯) ಒಬ್ಬ ಭಾರತೀಯ ಜಾನಪದ ಗಾಯಕಿ ಮತ್ತು ತೆಲಂಗಾಣ ಕಲಾ ಸಮಿತಿಯ ಸಂಸ್ಥಾಪಕಿಯಾಗಿದ್ದು ೧೯೯೯ ರಲ್ಲಿ ಕೊಲೆಯಾದರು.

ಜೀವನ[ಬದಲಾಯಿಸಿ]

ಅವರು ನಲ್ಗೊಂಡ ಜಿಲ್ಲೆಯ ಆತ್ಮಕೂರ್ ಮಂಡಲಿಯ ನಂಚಾರ್‌ಪೇಟೆಯಲ್ಲಿ ತೆಲುಗು ಮಾತನಾಡುವ ಕುರುಮ ಕುಟುಂಬದಲ್ಲಿ ಜನಿಸಿದರು. ಆಕೆಗೆ ಒಬ್ಬ ಸಹೋದರ, ಬೆಳ್ಳಿ ಕೃಷ್ಣ ಕಾರ್ಯಕರ್ತ ಮತ್ತು ಸರ್ಕಾರಿ ಉದ್ಯೋಗಿಯಾಗಿದ್ದರು, ಹಾಗೂ ಆಕೆಗೆ ೫ ಸಹೋದರಿಯರಿದ್ದರು. ಅವರು ನಾಗರಿಕ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಮತ್ತು ೧೯೯೦ ರ ದಶಕದ ಉತ್ತರಾರ್ಧದಲ್ಲಿ ತೆಲಂಗಾಣ ಪ್ರದೇಶದ ರಾಜ್ಯತ್ವಕ್ಕಾಗಿ ಕಾರ್ಯಕರ್ತರಾಗಿದ್ದರು. ಆಕೆಯ ತಂದೆ ಒಗ್ಗು ಕಥಾ ಗಾಯಕ ಮತ್ತು ಕಾರ್ಮಿಕ. ಅವರು ತೆಲಂಗಾಣ ರಾಜ್ಯದ ಕಾರಣಕ್ಕಾಗಿ ಹೋರಾಡುತ್ತಿದ್ದರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದರು. ೧೯೯೯ ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಆಕೆಯ ಕೊಲೆಯಾಗುವ ಮೊದಲು ಭೋಂಗಿರ್ ಕ್ಷೇತ್ರದಿಂದ ಒಂದು ಸ್ಥಾನವನ್ನು ನೀಡಿತು. 

ಸಾವು[ಬದಲಾಯಿಸಿ]

೧೯೯೯ ರಲ್ಲಿ, ಆಕೆಯನ್ನು ಅಪಹರಿಸಿ, ಹಲ್ಲೆ ನಡೆಸಿ, ಕೊಡಲಿಯಿಂದ ಛಿದ್ರಗೊಳಿಸಿ ಆಕೆಯ ದೇಹದ ಭಾಗಗಳನ್ನು ೧೭ ತುಂಡುಗಳಾಗಿ ಕತ್ತರಿಸಲಾಯಿತು. [೧] ನಂತರ ಆಕೆಯ ಛಿದ್ರಗೊಂಡ ದೇಹದ ಭಾಗಗಳನ್ನು ದುಷ್ಕರ್ಮಿಗಳು ಚೌಟುಪೋಲ್ ಪೊಲೀಸ್ ಠಾಣೆಯ ಮುಂದೆ ಎಸೆದಿದ್ದರು. ಆರಂಭದಲ್ಲಿ, ಅಂದಿನ ಟಿಡಿಪಿ ಸರ್ಕಾರದ ಗೃಹ ಸಚಿವ ಅಲಿಮಿನೆಟಿ ಮಾಧವ ರೆಡ್ಡಿ ಕೊಲೆಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿಯಿತ್ತು ಆದರೆ ನಂತರ ಈ ಆರೋಪವನ್ನು ತೆರವುಗೊಳಿಸಲಾಯಿತು.  ಹೆಚ್ಚಿನ ಪುರಾವೆಗಳ ನಂತರ ಸ್ಥಳೀಯ ನಕ್ಸಲೀಯ ಗಾಡ್‌ಫಾದರ್ ಮತ್ತು ಕಿಂಗ್‌ಪಿನ್ ಮೊಹಮ್ಮದ್ ನಯೀಮುದ್ದೀನ್‌ ಅವರು ಕೊಲೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದೆ. [೨] [೩] [೪] ಇದಲ್ಲದೆ ಆಕೆಯ ಮೂವರು ಸಹೋದರರು ಸಹ ಕೊಲ್ಲಲ್ಪಟ್ಟರು, ಉಳಿದ ಸಹೋದರ ಕೃಷ್ಣ ೨೦೦೦ ರಿಂದ ೨೦೧೭ ರವರೆಗೆ [೫] ಅಡಗಿಕೊ೦ಡಿದ್ದನು.

ಉಲ್ಲೇಖಗಳು[ಬದಲಾಯಿಸಿ]

  1. Face To Face With Belli Lalitha’s Sister Archived 2020-02-16 ವೇಬ್ಯಾಕ್ ಮೆಷಿನ್ ನಲ್ಲಿ. - AP7AM.com Reporting
  2. "From Maoist to police informer to gangster: The rise and fall of Nayeem". Hindustan Times. 15 August 2016. Retrieved 2020-06-30.
  3. "Brutality involved in Sambasivudu murder indicates Nayeem's role". The Hindu. 29 March 2011. Retrieved 2020-06-30.
  4. "From Revolutionary To Underworld Don - The Journey Of A Gangster". Sakshi. 9 August 2016. Archived from the original on 16 February 2020.
  5. "Nayeem victim's brother returns after 17-yr exile". The Times of India. Retrieved 2020-06-30.