ಬೆಳವಡಿ ಮಲ್ಲಮ್ಮ
ಬೆಳವಡಿ ಮಲ್ಲಮ್ಮ | |
---|---|
ಜನನ | ಆಗಸ್ಟ್ 18, |
ಗಮನಾರ್ಹ ಕೆಲಸಗಳು | brave queen ( warrior) |
ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ.[೧][೨]
ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮ.
ಜೀವನಚರಿತ್ರೆ ಬೆಳವಡಿ ಮಲ್ಲಮ್ಮನ ಬಾಲ್ಯ ಮತ್ತು ಜಿವನ ಚರಿತ್ರೆ
[ಬದಲಾಯಿಸಿ]ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ನಡುವೆ ನಡೆದ ಯುದ್ಧದ ಐತಿಹಾಸಿಕ ದಾಖಲೆಗಳ ಪಟ್ಟಿ.
೧. ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠಿ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಇಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರಣ ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.
೨. ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ.
೩. ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪುಸ್ತಕದಲ್ಲಿ ಮಲ್ಲಮ್ಮಳನ್ನು 'ಸಾವಿತ್ರಿ ಬಾಯಿ' ಎಂದು ಕರೆದಿದ್ದಾರೆ. ಮಲ್ಲಮ್ಮ ಮತ್ತು ಶಿವಾಜಿಯ ನಡುವಿನ ಯುದ್ದ 27 ದಿನಗಳ ಕಾಲ ನಡೆದಿತ್ತು ಎಂದು ಬರೆದಿದ್ದಾರೆ.
೪. ಶಿವಾಜಿ ಸೈನಿಕರು ತಪ್ಪ ಮಾಡಿದ ಕಾರಣಕ್ಕೆ ಶಿವಾಜಿಯ ಮರಾಠ ಅಂದ್ರೆ ಮಾವಳ ಸೈನ್ ಬೆಳವಾಡಿ ಮಲ್ಲಮ್ಮ ಅವರ ಪತಿಗೆ ಯುದ್ಧ ದಲ್ಲಿ ಮರಣ ಹೊಂದತನೆ ಅದನ್ನು ತಿಳಿದು ಶಿವಾಜಿ ಮಹಾರಾಜರು ಸ್ವತ ರಾಣಿ ಬೆಳವಾಡಿ ಮಲ್ಲಮ್ಮ ಅವರ ಪರಾಕ್ರಮ ಮೆಚ್ಚಿ ಅವರ್ ಅತ್ರ ಮಂಡಿ ಊರಿ ಕೃತಜ್ಞೆ ಹೇಳುತ್ತಾರೆ ರಾಣಿ ಬೆಳವಾಡಿ ಮಲ್ಲಮ್ಮ ಅವರ್ ಸಂಸ್ಥಾನ ದಲ್ಲಿ ಶಿವಾಜಿ ಅವರ ಮೂರ್ತಿ ಸ್ಥಾಪನೆ ಮಾಡ್ತಾರ ಅಂತೆ ಪುರಾವೆ ಗಳಿವೆ ".[೩]
೫. ಮರಾಠಿ ಇತಿಹಾಸಕಾರರಲ್ಲಿ ಅನೇಕ ಗೊಂದಲಗಳು ಇರುವ ಬಗ್ಗೆ ಪುಣೆ ವಿಶ್ವವಿದ್ಯಾಲಯದವರು ಸಾಬೀತು ಮಾಡಿದ್ದಾರೆ. ಅವಳು ಶತ್ರು ಪಡೆಗಳ ಜತೆ ಕುದುರೆ ಮೇಲೆ ಸೀರೆಯಲ್ಲಿ ವೀರಗಚ್ಚೆ ಹಾಕಿ ಹೋರಾಡಿದಳು. ೬. ಬೆಳವಡಿಯ ಮಲ್ಲಮ್ಮನ ಆಯುಧಗಳು : ಬಿಲ್ಲು ಬಾಣ, ಕಾವಲಿ ಇವರ ಸೈನ್ಯದ ಆಯುಧಗಳಾಗಿದ್ದವು [೪]
ವಿದ್ವಾಂಸರಾದ ಶೇಷೊ ಶ್ರೀನಿವಾಸ್ ಮುತಾಲಿಕ್ ಅವರು ಕ್ರಿ. ಶ. ೧೭೦೪-೦೫ ರಲ್ಲಿ ಮಧುಲಿಂಗ ನಾಯಕರ ಅರಮನೆ ಜೀವನವನ್ನು ಮರಾಠಿ ಭಾಷೆಯಲ್ಲಿ ದಾಖಲಿಸಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ]
ಉಲ್ಲೇಖಗಳು ಕನ್ನಡ
[ಬದಲಾಯಿಸಿ]- ↑ "Ensure Belwadi Mallamma of Belgaum district gets her place in international history". The Hindu. Chennai, India. 2008-10-26. Archived from the original on 30 October 2008.
{{cite news}}
: Unknown parameter|deadurl=
ignored (help) - ↑ "The Saga of a Historic Education Society, BELAWADI".
{{cite web}}
: Cite has empty unknown parameter:|dead-url=
(help)[permanent dead link] - ↑ [ಫ್ಯಾಕ್ಟರಿ ರೆಕಾರ್ಡ್ಸ್, ಸೂರತ್,107]
- ↑ "Translation of the speech originally delivered in Kannada". Archived from the original on 2007-01-28.
{{cite web}}
: Cite has empty unknown parameter:|dead-url=
(help)
- Pages using the JsonConfig extension
- CS1 errors: unsupported parameter
- CS1 errors: empty unknown parameters
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Articles with hCards
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು