ಬೆಳವಡಿ ಮಲ್ಲಮ್ಮ

ವಿಕಿಪೀಡಿಯ ಇಂದ
Jump to navigation Jump to search
Belawadi Mallamma
Belawadi Mallamma.JPG
ಬೆಳವಡಿ ಮಲ್ಲಮ್ಮ
Known forbrave queen ( warrior)

ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ.[೧][೨]

ಜೀವನಚರಿತ್ರೆ[ಬದಲಾಯಿಸಿ]

ಅವಳು  ಸೋದೆಯ ರಾಜ ಮಧುಲಿಂಗ ನಾಯಕನ ಮಗಳು.  ಸಾವಿತ್ರಿಬಾಯಿ ಎಂದೂ ಹೆಸರಾದ ಆಕೆ     ಮರಾಠಾ ದಳಪತಿ ದಾದಾಜಿ i ರಘುನಾಥ್ ನೇಡ್ಕರ್ ಜತೆ ತನ್ನ ಪತಿಯ ರಾಜ್ಯದ ರಕ್ಷಣೆಗಾಗಿ  ಹೋರಾಡಿದಳು.   ಅವಳ  ರಾಜ್ಯವು  ಬಹಳ ಸುರಕ್ಷಿತವೂ  ಮತ್ತು ಸೋಲಿಸಲಾಗದಂಥಾದ್ದೂ ಆಗಿತ್ತು.   ಯುದ್ಧದಲ್ಲಿ ಶಿವಾಜಿಯ ಸೈನಿಕನು ಅವಳು ಸವಾರಿ  ಮಾಡುತ್ತಿದ್ದ ಕುದುರೆಯ ಕಾಲನ್ನು ಕತ್ತರಿಸಿದಾಗ ಅವಳು ಕೆಳಗೆ ಬಿದ್ದಳು.  ಆದರೂ ಎದೆಗೆಡದೆ ಎದ್ದು ಅವಳು ಹೋರಾಟವನ್ನು ಮುಂದುವರೆಸಿದಳು.  ಶಿವಾಜಿಯ ಸೈನಿಕರು ಧಾವಿಸಿ  ಅವಳನ್ನು  ಬಂಧಿಸಿ ಶಿವಾಜಿಯ ಬಳಿಗೆ ಕರೆದುಕೊಂಡು ಹೋದರು. ಶಿವಾಜಿಯು ಆಕೆಯನ್ನು ಹೊಗಳಿ  ಹೇಳಿದ "ನಾನು ತಪ್ಪು ಮಾಡಿದೆ , ತಾಯೀ,  ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ನಿಮ್ಮ ರಾಜ್ಯ ಬೇಕಿಲ್ಲ " ಮತ್ತು ಬಿಡುಗಡೆ ಮಾಡಿದ.[೩]

[೪] ಅವಳು ಶತ್ರು ಪಡೆಗಳ ಜತೆ ಕುದುರೆ ಮೇಲೆ  ಸೀರೆಯಲ್ಲಿ  ವೀರಗಚ್ಚೆ ಹಾಕಿ  ಹೋರಾಡಿದಳು.[೫]

ವಿದ್ವಾಂಸರಾದ ಶೇಷೊ ಶ್ರೀನಿವಾಸ್ ಮುತಾಲಿಕ್ ಅವರು  ಕ್ರಿ. ಶ. ೧೭೦೪-೦೫ ರಲ್ಲಿ ಮಧುಲಿಂಗ ನಾಯಕರ ಅರಮನೆ ಜೀವನವನ್ನು ಮರಾಠಿ ಭಾಷೆಯಲ್ಲಿ ದಾಖಲಿಸಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ]

ಉಲ್ಲೇಖಗಳು[ಬದಲಾಯಿಸಿ]