ಬೆಳಗೆರೆ ಕೃಷ್ಣಶಾಸ್ತ್ರಿ
ಗೋಚರ
ಜೀವನ
[ಬದಲಾಯಿಸಿ]ಬೆಳಗೆರೆ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗದವರು. ಅಲ್ಲಿಯೇ (ಬೆಳೆಗೆರೆ) ಅವೆರು ದಿನಾಂಕ ೨೨-೫-೧೯೧೬ ರಂದು ಜನಿಸಿದರು' (ಜನನ [22-5-1916]). ನಿಧನ ೨೨.೦೩.೨೦೧೩. ತಂದೆ ಆಶುಕವಿಗಳಾಗಿದ್ದ ಚಂದ್ರಶೇಖರ ಶಾಸ್ತ್ರಿಗಳು. ತಾಯಿ ಮೋಕ್ಷಗುಂಡಂ ಅನ್ನಪೂರ್ಣಮ್ಮ[೧].
ಮೊದಲು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಅಧ್ಯಾಪಕ ವೃತ್ತ್ತಿಯನ್ನು ಪ್ರಾರಂಭಿಸಿದರು.
ಒಂದೇ ದಿನ ಇಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಕಳೆದುಕೊಂಡು ಹಿಮಾಲಯದತ್ತ ಪ್ರಯಾಣ ಬೆಳೆಸಿದರು. ಈ ಸುತ್ತಾಟದಲ್ಲಿಯೇ ಮಹಾತ್ಮ ಗಾಂಧಿ ಯವರ ಭೇಟಿಯಾಯಿತು. ಬಿಡುವಿದ್ದಾಗ ಭಜನೆ, ಜೈಮಿನಿ ಭಾರತ ವಾಚನ ಮಾಡುತ್ತಿದ್ದರು. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ , ಡಿ ವಿ ಜಿ, ಎಂ.ಆರ್.ಶ್ರೀ ಮುಂತಾದವರನ್ನು ಕರೆಸಿ, ಜನರಿಗೆ ಆಧ್ಯಾತ್ಮದ ಪರಿಚಯವನ್ನು ಮಾಡಿಸುತ್ತಿದ್ದರು. ಬೆಳಗೆರೆ ಕೃಷ್ಣಶಾಸ್ತ್ರಿ ಯವರು ದಿ.23-3-2013ರಲ್ಲಿ ನಿಧನಹೊಂದಿದ್ದಾರೆ[೨]
ಕೃತಿಗಳು
[ಬದಲಾಯಿಸಿ]- ತುಂಬಿ (ಕವನ ಸಂಕಲನ)
- ಸಾಹಿತಿಗಳ ಸ್ಮೃತಿ ' ಮರೆಯಲಾದೀತೇ? ( ಸಾಹಿತ್ಯಲೋಕದ ದಿಗ್ಗಜರ ಒಡನಾಟದ ನೆನಪುಗಳು)
- ಯೋಗ್ದಾಗೆಲ್ಲ ಐತೆ (ಐದು ಮುದ್ರಣ,ನಾಲ್ಕು ಭಾಷೆಗಳಿಗೆ ಅನುವಾದ)
- ಹಳ್ಳಿಚಿತ್ರ (ನಾಟಕ)
- ಹಳ್ಳಿ ಮೇಷ್ಟ್ರು(ನಾಟಕ)
- ಆಕಸ್ಮಿಕ (ನಾಟಕ)
ಪ್ರಶಸ್ತಿಗಳು
[ಬದಲಾಯಿಸಿ]- ರಾಜ್ಯ ಮತ್ತು ಕೇಂದ್ರದ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿ
- ಹಳ್ಳಿ ಚಿತ್ರ ನಾಟಕಕ್ಕೆ ಕೇಂದ್ರ ನಾಟಕ ಆಕಾಡೆಮಿ ಪ್ರಶಸ್ತಿ
- ಅಳಸಿಂಗಾಚಾರ್ ಪ್ರಶಸ್ತಿ
- ಆಕಾಶವಾಣಿ ಪುರಸ್ಕಾರ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]- ↑ "ಬೆಳಗೆರೆ ಕೃಷ್ಣಶಾಸ್ತ್ರಿ". kanaja.in. Retrieved 8-2-2014.
{{cite web}}
: Check date values in:|accessdate=
(help) - ↑ "ಬೆಳಗೆರೆ ಕೃಷ್ಣಶಾಸ್ತ್ರಿ ನಿಧನ". mupadhyahiri.blogspot.in. Retrieved 8-2-2014.
{{cite web}}
: Check date values in:|accessdate=
(help); Text "date-" ignored (help)