ವಿಷಯಕ್ಕೆ ಹೋಗು

ಬೆನಝೀರ್ ಭುಟ್ಟೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನಝೀರ್ ಭುಟ್ಟೊ
بينظير بھٹو
ಪಾಕಿಸ್ತಾನದ ಪ್ರಧಾನಮಂತ್ರಿ
In office
ಡಿಸೆಂಬರ್ ೨, ೧೯೮೮ – ಆಗಸ್ಟ್ ೬, ೧೯೯೦
Presidentಗುಲಾಮ್ ಇಶಾಖ್ ಖಾನ್
Preceded byಮೊಹಮ್ಮದ್ ಖಾನ್ ಜುನೇಜೊ
Succeeded byಗುಲಾಮ್ ಮುಸ್ತಾಫ್ ಜತೋಯ್
In office
ಅಕ್ಟೋಬರ್ ೧೯, ೧೯೯೩ – ನವೆಂಬರ್ ೫, ೧೯೯೬
Presidentವಾಸೀಮ್ ಸಜ್ಜಾದ್
ಫರೂಖ್ ಲೆಘಾರಿ
Preceded byಮೊಯೀನ್ ಖುರೇಷಿ
Succeeded byಮಿರಾಜ್ ಖಲೀದ್
Personal details
Bornಜೂನ್ ೨೧, ೧೯೫೩
ಕರಾಚಿ, ಪಾಕಿಸ್ತಾನ
Diedಡಿಸೆಂಬರ್ ೨೭, ೨೦೦೭
ರಾವಲ್ಪಿಂಡಿ, ಪಾಕಿಸ್ತಾನ
Political partyಪಾಕಿಸ್ತಾನ್ ಜನರ ಪಕ್ಷ
Spouseಆಸಿಫ್ ಆಲಿ ಜರ್ದಾರಿ
Alma materಆಕ್ಸ್ಫರ್ಡ್, ರಾಡ್ಕ್ಲಿಫ್ ಕಾಲೇಜ್, ಹಾರ್ವರ್ಡ್ ವಿಶ್ವವಿದ್ಯಾಲಯ

ಬೆನಝೀರ್ ಭುಟ್ಟೊ (ಜೂನ್ ೨೧, ೧೯೫೩ - ಡಿಸೆಂಬರ್ ೨೭, ೨೦೦೭) ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಹಾಗೂ ಅಲ್ಲಿಯ ರಾಜಕೀಯ ಪಕ್ಷ "ಪಾಕಿಸ್ತಾನ್ ಪೀಪಲ್ ಪಾರ್ಟಿ"ಯ ಮುಖಂಡೆ. ಇವರು ಪಾಕಿಸ್ತಾನದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ. ಇವರು ಮಾಜಿ ಪ್ರಧಾನ ಮಂತ್ರಿ ಝುಲ್ಫಿಕರ್ ಆಲಿ ಭುಟ್ಟೋ ಅವರ ಹಿರಿಯ ಮಗಳು. ಇವರು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದರು. ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಇವರು, ಪಾಕಿಸ್ತಾನದ ರಾವಲ್‍ಪಿಂಡಿಯಲ್ಲಿ ಡಿಸೆಂಬರ್ ೨೭, ೨೦೦೭ರ ಸಂಜೆ ಗುಂಡು ಹಾಗೂ ಬಾಂಬ್ ಧಾಳಿಗೆ ಬಲಿಯಾದರು.[]

ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನೆಲೆ

[ಬದಲಾಯಿಸಿ]

ಇವರು ಮುಸ್ಲಿಮರ ಪೈಕಿ ಶಿಯಾ ಜನಾಂಗಕ್ಕೆ ಸೇರಿದವರಗಿದ್ದು. ತಾಯಿಯ ಹೆಸರು ನುಸ್ರತ್ ಭುಟ್ಟೊ. ಇವರ ಪೂರ್ವಜರು ಭಾರತದ ಹರಿಯಾಣದಿಂದ ವಲಸೆ ಹೋದವರು. ಇವರ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ರಾವಲ್‍ಪಿಂಡಿ ಹಾಗೂ ಕರಾಚಿಯಲ್ಲಿ ನಡಿಯಿತು. ಹೆಚ್ಚಿನ ವಿದ್ಯಾಭ್ಯಾಸವು ಅಮೆರಿಕ ದೇಶಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ (೧೯೬೬-೧೯೭೩). ಇಲ್ಲಿಯ ವಿದ್ಯಾಭ್ಯಾಸವೇ ಇವರ ಸಮಾಜವಾದೀಯ ಧೋರಣೆಗೆ ತಳಹದಿಯಾಯಿತೆಂದು ನಂಬಲಾಗುತ್ತಿದೆ. ಮುಂದಿನ ವಿದ್ಯಾಭ್ಯಾಸವು ಇಂಗ್ಲೆಂಡಿನ ಆಕ್ಸ್‍ಫರ್ಡ್ನಲ್ಲಿ (೧೯೭೩-೧೯೭೭) ಆಯಿತು. ಇವರ ಪ್ರಮುಖ ಕಲಿಕೆಯ ವಿಷಯಗಳೆಂದರೆ ತುಲನೀಯ ಸರ್ಕಾರ, ತತ್ವಶಾಸ್ತ್ರ, ರಾಜಕೀಯ ಹಾಗೂ ಅರ್ಥಶಾಸ್ತ್ರಗಳು.

೧೯೮೭ರಲ್ಲಿ ಇವರು ಅಸಿಫ್ ಆಲಿ ಜರ್ದಾರಿ ಅವರನ್ನು ಮದುವೆಯಾದರು. ಇವರಿಗೆ ಮೂವರು ಮಕ್ಕಳು.ಇವರ ತಂದೆ ಹಾಗೂ ಸಹೋದರರಿಬ್ಬರೂ ಕೂಡ ಇತರರಿಂದ ಕೊಲೆಯಾದವರು.

ರಾಜಕೀಯ ಜೀವನ ಹಾಗೂ ಅಂತ್ಯ

[ಬದಲಾಯಿಸಿ]

ಪಾಕಿಸ್ತಾನಕ್ಕೆ ಎರಡು ಬಾರಿ ಪ್ರಧಾನಿಯಾದ ಇವರು, ಎರಡು ಸಲವೂ ಭ್ರಷ್ಟಾಚಾರದ ಆರೋಪದ ಮೇಲೆ ಉಚ್ಚಾಟಿತರಾದರು. ಎರಡನೆಯ ಬಾರಿ ಉಚ್ಚಾಟಿತರಾದ ಮೇಲೆ ಇವರು ದುಬಾಯಿಗೆ ಸ್ವೇಛ್ಚಿತವಾಗಿ ತೆರಳಿದರು. ೨೦೦೭ರ ಅಕ್ಟೋಬರಿನಲ್ಲಿ ಪಾಕಿಸ್ತಾನಕ್ಕೆ ಮರಳಿದರು. ೨೦೦೮ರ ಜನವರಿಯಲ್ಲಿ ಚುನಾವಣೆಯಲ್ಲಿ ಮೂರನೇ ಬಾರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ಇವರು ಚುನಾವಣಾ ಪ್ರಚಾರದಲ್ಲಿದ್ದಾಗಲೇ ಭಯೋತ್ಪಾದಕರ (ಸಾಬೀತಾಗಿಲ್ಲ) ಧಾಳಿಗೆ ಬಲಿಯಾದರು.

ಉಲ್ಲೇಖಗಳು

[ಬದಲಾಯಿಸಿ]