ವಿಷಯಕ್ಕೆ ಹೋಗು

ಬೆಂಡೆಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kydia calycina
Scientific classification e
Unrecognized taxon (fix): Kydia
ಪ್ರಜಾತಿ:
K. calycina
Binomial name
Kydia calycina
Synonyms[]
List
    • Hibiscus roxburghianus (Wight) Mabb.
    • Kydia fraterna Roxb.
    • Kydia roxburghiana Wight

ಬೆಂಡೆಮರ ಅಥವಾ ಕಿಡಿಯಾ ಕ್ಯಾಲಿಸಿನಾ ಎಂಬುದು ಭಾರತೀಯ ಉಪಖಂಡ, ದಕ್ಷಿಣ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಕಿಡಿಯಾ ಕುಲದ ಹೂಬಿಡುವ ಸಸ್ಯವಾಗಿದೆ.[] ವೇಗವಾಗಿ ಬೆಳೆಯುವ, ಮಧ್ಯಮ ಗಾತ್ರದ ಮರ. ಇದನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ. ಇದು ಅಗ್ಗದ ಮರ ಮತ್ತು ಫೈಬರ್‌ಗಾಗಿ ಬೆಳೆಸಲಾಗುತ್ತದೆ.[] ಭಾರತದಲ್ಲಿ ಪಶ್ಚಿಮ ಘಟ್ಟ, ಪೂರ್ವ ಘಟ್ಟ, ಎಲೆ ಉದುರಿಸುವ ಶುಷ್ಕ ಕಾಡುಗಳಲ್ಲಿ ಕಂಡು ಬರುತ್ತದೆ.

ಹೆಸರುಗಳು

[ಬದಲಾಯಿಸಿ]

ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಈ ಮರದ ಹೆಸರುಗಳು ಇಂತಿವೆ.

  • ಅಸ್ಸಾಮಿ-ಬಾನ್-ಕೋಪಾಹಿ,ಕುಕುಹಾ,ಪಿಚೋಲಾ
  • ಬೆಂಗಾಲಿ-ಪೋಲಾ ಪೋಲಾ
  • ಚೈನೀಸ್-翅果麻 ಚಿ ಗುವೋ ಮಾ
  • ಆಂಗ್ಲ-ಪುಲಾ,ರಾಕ್ಸ್‌ಬರ್ಗ್‌ನ ಕಿಡಿಯಾ
  • ಗುಜರಾತಿ-ದೊಡ್ಡ ಹಿರ್ವಾನಿ, ಮೋತಿ ಹಿರ್ವಾನಿ
  • ಹಿಂದಿ-ಪುಲಾ,ಪತ್ತ,ಪುಲಿಯಾ
  • ಕನ್ನಡ-ಬೆಂದೆ, ಬೆಂಡೆಮರ
  • ಕೊಂಕಣಿ -ವಾರಂಗ್
  • ಮಲಯಾಳಂ-ವೆಲ್ಲಚಡಚಿ,ವೆಲುಕ್ಕು,ವೆಲುಕ್ಕುವೆಂಟಾ, ಕಟ್ಟಾವನಕ್ಕ್, ವೆಲಲತಚ್ಚಿ.
  • ಮಣಿಪುರಿ-ಖಾಬಿ
  • ಮರಾಠಿ -ರಣ್ ಭೆಂಡಿ, ರಣಭೆಂಡಿ,ವಾರಂಗ್
  • ಒರಿಯಾ-ಬ್ಯಾಂಕೋಪಾಸಿಯಾ
  • ಇತರೆ-ಬೆಂಡೈ,ಭೋತಿ,ಇಲ್ಯಾ,ಕುಬಿಂದೆ,ಕಿಡಿಯಾ,ವೆಲ್ಲಚಡಚಿ,ವೆಲ್ಲುಕು ವೆಂಟಾ,ಪುಲಿಯಾ
  • ತಮಿಳು-ವಟ್ಟಕಣ್ಣು,ಪುಲಾ
  • ತೆಲುಗು-ಪೊಟಾರಿ
  • ಉರ್ದು-ಕಪಾಸಿಯಾ

ಸಸ್ಯ ವಿವರಣೆ

[ಬದಲಾಯಿಸಿ]

ಸುಮಾರು ೧೫ ಮೀಟರ್ ಎತ್ತರಕ್ಕೆ ಬೆಳೆಯುವ ಮರ. ತೊಗಟೆ ೫-೬ ಸೆ.ಮೀ ದಪ್ಪ ಇರುತ್ತದೆ.ಬಣ್ಣ ಬೂದು ಕಂದು.ಕಿರುಕೊಂಬೆಗಳು ದುಂಡಾಗಿದ್ದು, ನಕ್ಷತ್ರಾಕಾರದ ಮೃದುತುಪ್ಪಳದಿಂದ ಕೂಡಿರುತ್ತವೆ.ಎಲೆಗಳು ಸರಳವಾಗಿದ್ದು, ಪರ್ಯಾಯವಾಗಿರುತ್ತವೆ.ಅಕ್ಟೋಬರ್ -ಡಿಸೆಂಬರ್ ತಿಂಗಳಲ್ಲಿ ಹೂವು ಬಿಡುತ್ತದೆ.

ಉಪಯೋಗಗಳು

[ಬದಲಾಯಿಸಿ]

ಮರ ಉರುವಲಾಗಿ ಉಪಯೋಗವಾಗುತ್ತದೆ. ಎಲೆಗಳು ಆನೆಗಳಿಗೆ, ಜಿಂಕೆ ಮತ್ತು ಕಾಡುಕೋಣಗಳಿಗೆ ಉತ್ತಮ ಮೇವು.

ಉಲ್ಲೇಖಗಳು

[ಬದಲಾಯಿಸಿ]
  1. Pl. Coromandel 3: 11 (1811)
  2. ೨.೦ ೨.೧ "Kydia calycina Roxb". Plants of the World Online. Board of Trustees of the Royal Botanic Gardens, Kew. 2017. Retrieved 4 September 2020.
  3. Swaminathan, M. S.; Kochhar, S. L. (23 May 2019). Major Flowering Trees of Tropical Gardens. Cambridge University Press. p. 45-46. ISBN 9781108640633.


"https://kn.wikipedia.org/w/index.php?title=ಬೆಂಡೆಮರ&oldid=1251588" ಇಂದ ಪಡೆಯಲ್ಪಟ್ಟಿದೆ