ಬೆಂಡೆಕಾಯಿ ಹುಳಿಪಲ್ಯ
ಬೆಂಡೆಕಾಯಿ ಹುಳಿಪಲ್ಯ ಕರ್ನಾಟಕದಲ್ಲಿ ಮಾಡಲಾಗುವ ಒಂದು ರೀತಿಯ ಆಹಾರ ಪದಾರ್ಥ. ಇದನ್ನು ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ತಯಾರಿಸಲಾಗುತ್ತದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ಇದನ್ನು ಮಾಡಲಾಗುತ್ತದೆ. ಮಜ್ಜಿಗೆ ಅಥವಾ ಮೊಸರು ಈ ಅಡುಗೆಯ ಮುಖ್ಯ ಅಂಶ. [೧]
ಬೇಕಾಗುವ ಸಾಮಗ್ರಿಗಳು
[ಬದಲಾಯಿಸಿ]- ಬೆಂಡೆಕಾಯಿ
- ಮಜ್ಜಿಗೆ
- ಬೆಳ್ಳುಳ್ಳಿ
- ಈರುಳ್ಳಿ
- ಟೊಮ್ಯಾಟೊ
- ಮೆಣಸಿನಕಾಯಿ
- ಎಣ್ಣೆ
- ಸಾಸಿವೆ
- ಜೀರಿಗೆ
- ಅರಿಶಿಣ
- ಕಾರದ ಪುಡಿ
- ಉಪ್ಪು
- ಶೇಂಗಾ ಪುಡಿ
ಮಾಡುವ ವಿಧಾನ
[ಬದಲಾಯಿಸಿ]ಸಾಮಾನ್ಯವಾಗಿ ಬೆಂಡೆಕಾಯಿ ಪಲ್ಯವನ್ನು ಮಾಡುವ ಹಾಗೆ ಮೊದಲು ಬೆಂಡೆಕಾಯಿಯನ್ನು ಪಲ್ಯವನ್ನು ಮಾಡುವ ಅಳತೆಯ ಆಧಾರದ ಮೇಲೆ ಎಷ್ಟು ಬೇಕೆಂದು ನಿರ್ಧರಿಸಿ ಕತ್ತರಿಸಿಕೊಳ್ಳಬೇಕು. ಮೊದಲು ಒಗ್ಗರಣೆಗೆ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸಿನಕಾಯಿ ಹಾಕಿ ಬೆಳ್ಳುಳ್ಳಿ, ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಬಳಸಬಹುದು. ನಂತರ ಅರಿಶಿಣ, ಕಾರದ ಪುಡಿ, ಉಪ್ಪು, ಶೇಂಗಾ ಪುಡಿ, ಕೊನೆಯಲ್ಲಿ ಕತ್ತರಿಸಿದ ಬೆಂಡೆಕಾಯಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರಣಗೊಳಿಸಿ ನಂತರ ಇದಕ್ಕೆ ಸ್ವಲ್ವ ನೀರು ಹಾಕಿ ಬೇಯಲು ಇಡಿ. ನಂತರ ಪೂರ್ತಿಯಾಗಿ ಪಲ್ಯ ತಯಾರಾದ ಮೇಲೆ ಇದನ್ನು ಆರಲು ಬಿಡಿ. ಕೊನೆಯಲ್ಲಿ ಇದಕ್ಕೆ ಮಜ್ಜಿಗೆಯನ್ನು ಸೇರಿಸಿ ಚೆನ್ನಾಗಿ ಕಲಸಿದ ನಂತರ ಕೊತ್ತಂಬರಿಯಿಂದ ಅಲಂಕರಿಸಿದ ಮೇಲೆ ಬೆಂಡೆಕಾಯಿ ಹುಳಿಪಲ್ಯ ರೊಟ್ಟಿಯೊಂದಿಗೆ ತಿನ್ನಬಹುದು
ಪೋಷಕಾಂಶಗಳು ಮತ್ತುಆರೋಗ್ಯ
[ಬದಲಾಯಿಸಿ]ಈ ಆಹಾರವು ಔಷಧೀಯ ಗುಣ ಹೊಂದಿದೆ. ಇದು "ಸಿ " ಮತ್ತು "ಕೆ " ಜೀವಸತ್ವವನ್ನು ಒಳಗೊಂಡಿದೆ. ಮೂವತ್ತು ಕೆಲೊರಿಗಳಷ್ಟು ಪೌಷ್ಟಿಕ ತರಕಾರಿಯಾಗಿರುವ ಬೆಂಡೆಕಾಯಿಯಲ್ಲಿ ೭೫ ಮಿಲಿಗ್ರಾಂ ಸಿ ಜೀವಸತ್ವವಿದೆ[೨]. ಅದರಲ್ಲಿರುವ ಬೀಜಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಲು ಅಗತ್ಯವಾದ ಕೆ ಜೀವಸತ್ವ ಮತ್ತು ಮೂಳೆಗಳನ್ನು ದೃಢಗೊಳಿಸುವ ಸುಣ್ಣ ಹೇರಳವಾಗಿದೆ. ಹೊಟ್ಟೆನೋವು, ಜ್ವರದ ಭೇದಿ ನಿವಾರಿಸುತ್ತದೆ. ರಸದ ಲೇಪನದಿಂದ ಚರ್ಮದ ತುರಿಕೆ ಗುಣವಾಗಿ ಕಾಂತಿ ಹೆಚ್ಚುತ್ತದೆ ಮತ್ತು ಇದರಲ್ಲಿ ಕೊಬ್ಬಿನಂಶ ಇಲ್ಲ.ಒಂದು ತುಂಡು ಬೆಂಡೆ ತಿಂದರೆ ಒಂದು ಕಪ್ ಟೊಮೆಟೊದಲ್ಲಿರುವಷ್ಟು ಸಿ ಜೀವಸತ್ವಸಿಗುತ್ತದೆ. ಫಾರ್ಮಸಿ ಅಂಡ್ ಬಯೋಲಿಯೆಡ್ ಸೈನ್ಸಸ್ ಜರ್ನಲ್ ೨೦೧೧ರ ವರದಿ ಪ್ರಕಾರ ಕರುಳಿನ ಸಕ್ಕರೆ ಹೀರುವಿಕೆಯ ಪ್ರಮಾಣವನ್ನು ಬೆಂಡೆಕಾಯಿ ತಡೆಯುತ್ತದೆ. ಮಧುಮೇಹ ನಿರ್ಬಂಧಕ ಗುಣ ಅದರಲ್ಲಿ ಹೆಚ್ಚಾಗಿದೆ[೩] . ಕರುಳಿನ ತ್ಯಾಜ್ಯಗಳನ್ನು ಹೊರದೂಡಲು ಬಹು ಉಪಯುಕ್ತವೂ ಹೌದು. ಖಿನ್ನತೆ, ದುರ್ಬಲ ಭಾವನೆಗಳನ್ನು ನಿವಾರಿಸಲು ಬೆಂಡೆ ಸಹಕಾರಿ. ಚರ್ಮ ಮತ್ತು ಕೂದಲಿನ ಮೃದುತ್ವ ಹೆಚ್ಚಿಸುತ್ತದೆ. ಗರ್ಭಿಣಿ [೪]ಹಾಗೂ ಎಳೆಯ ಮಕ್ಕಳಿಗೂ ಅದು ಉತ್ತಮ ಆಹಾರವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Kitchen, Hebbars (4 April 2020). "ಬೆಂಡೆಕಾಯ್ ಹುಳಿ | bendekai huli | ವೆಂಡಕ್ಕಾಯ್ ಸಾಂಬಾರ್ | ಭಿಂಡಿ ಸಾಂಬಾರ್". Hebbar's Kitchen. Retrieved 17 December 2022.
- ↑ "ಬೆಂಡೆಕಾಯಿಯಲ್ಲಿರುವ ಜೀವಸತ್ವಗಳು". Retrieved 17 December 2022.
- ↑ "ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು". Retrieved 17 December 2022.
- ↑ "Lady Finger during Pregnancy - Nutritional Value & Health Benefits". parenting.firstcry.com. Retrieved 17 December 2022.