ಬೆಂಗಳೂರು ನಾಗರತ್ನಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ನಾಗರತ್ನಮ್ಮನವರು ನಂಜನಗೂಡಿನಲ್ಲಿ ೧೮೭೮ ನವಂಬರ ೩ರಂದು ಜನಿಸಿದರು. ಇವರ ತಾಯಿ ಪುಟ್ಟಲಕ್ಷಮ್ಮ; ತಂದೆ ಸುಬ್ಬರಾಯ. ಬೆಂಗಳೂರಿನಲ್ಲಿ ಗುರು ಮುನಿಸ್ವಾಮಪ್ಪನವರಿಂದ ಕರ್ನಾಟಕ ಸಂಗೀತವನ್ನು ಕಲಿತ ನಾಗರತ್ನಮ್ಮನವರು ತಮ್ಮ ಪಾಂಡಿತ್ಯ ಹಾಗು ಹಾಡುಗಾರಿಕೆಯಿಂದಾಗಿ ೧೮೯೨ರಲ್ಲಿ ಒಡೆಯರ ಇವರಿಂದ ಗೌರವಿಸಲ್ಪಟ್ಟರು ಹಾಗು ಉದ್ಯೋಗ ಪಡೆದರು. ೧೮೯೪ರಲ್ಲಿ ಮಹಾರಾಜರ ಮರಣಾನಂತರ ಬೆಂಗಳೂರಿಗೆ ಮರಳಿದರು. ಕೊನೆಗೆ ಚೆನ್ನೈದಲ್ಲಿ ನೆಲೆಸಿದರು.

Mukunda Mala stotra by Bengaluru Nagaratnamma

ದೇಶದಾದ್ಯಂತ ೧೨೩೫ ಕಚೇರಿಗಳನ್ನು ನೀಡಿ ರಸಿಕರ ಮನ ಗೆದ್ದ ನಾಗರತ್ನಮ್ಮನವರಿಗೆ ಅನೇಕ ಗೌರವಗಳು ಲಭಿಸಿವೆ. ಆಂಧ್ರ ಪ್ರದೇಶದ ಪ್ರತಿಷ್ಠಿತ ಗಂಡಬೇರುಂಡ ಪ್ರಶಸ್ತಿ ಅವುಗಳಲ್ಲೊಂದು.

ತಿರುವೈಯಾರಿನಲ್ಲಿ ತ್ಯಾಗರಾಜರ ಸಮಾಧಿ ಸ್ಥಳದ ಜೀರ್ಣೋದ್ಧಾರ ಮಾಡಿಸಿ, ಪ್ರತಿ ವರ್ಷ ಅಲ್ಲಿ ತ್ಯಾಗರಾಜರ ಆರಾಧನೆ ವೈಭವದಿಂದ ನಡೆಯುವಂತೆ ಮಾಡಿದರು.

೧೯೫೨ ಮೇ ೧೯ರಂದು ನಾಗರತ್ನಮ್ಮ ನಾದಬ್ರಹ್ಮನಲ್ಲಿ ಲೀನರಾದರು. ಅವರ ಸಮಾಧಿಯನ್ನು ತಿರುವಯ್ಯಾರಿನಲ್ಲಿ, ಅವರ ಮಾನಸಿಕ ಗುರು ತ್ಯಾಗರಾಜರ ಸಮಾಧಿಯ ಬಳಿಯೇ ಮಾಡಲಾಯಿತು.