ಬೆಂಗಳೂರು ಗಣೇಶ ಉತ್ಸವ

ವಿಕಿಪೀಡಿಯ ಇಂದ
Jump to navigation Jump to search

ಬೆಂಗಳೂರು ಗಣೇಶ ಉತ್ಸವ ಪ್ರತಿ ವರ್ಷವೂ ಶ್ರೀ ವಿದ್ಯಾರಣ್ಯ ಯುವ ಸಂಘದಿಂದ ಗಣೇಶ ಚತುರ್ಥಿ ಸಮಯದಲ್ಲಿ ಸಂಘಟಿಸುವ ಸಾಂಸ್ಕೃತಿಕ ಉತ್ಸವವಾಗಿದೆ.ಇದು 11 ದಿನಗಳ ಕಾಲ ಎಪಿಸಿ ಕಾಲೇಜು ಮೈದಾನ ಬಸವನಗುಡಿ ಬೆಂಗಳೂರು ನಲ್ಲಿ ಆಯೋಜಿಸಲಾಗುತ್ತದೆ .ಸಾಂಸ್ಕೃತಿಕ ಆಚರಣೆಯನ್ನು ಆಚರಿಸಲು ಜನರು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.[೧][೨][೩][೪]

ಕಾರ್ಯಕ್ರಮಗಳು[ಬದಲಾಯಿಸಿ]

ಸಂಗೀತ ಕಾರ್ಯಕ್ರಮಗಳು,ನೃತ್ಯ,ಶಾಸ್ತ್ರೀಯ ಸರೋದ್ ವಾದನ ,ಮನರಂಜನೆ ಭಾಗವಾಗಿ ರಾಕ್ ಮ್ಯೂಸಿಕ್ ಆಯೋಜಿಸಲಾಗುತ್ತದೆ.ಯುವ ಪ್ರತಿಭೆಗಳಿಗೆ ಮತ್ತು ಗಾಯಕರಿಗೆ ವೇದಿಕೆ ಕಲ್ಪಿಸಲಾಗುತ್ತದೆ.[೫][೬]

ಪ್ರವೇಶ[ಬದಲಾಯಿಸಿ]

ಪರಿಸರ ರಕ್ಷಣೆ ಕಾಳಜಿ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತದೆ 11 ದಿನಗಳೂ ಮೈದಾನವು ಪ್ಲಾಸ್ಟಿಕ್‌ ಮುಕ್ತ ವಲಯವಾಗಿರುವದರ ಜೊತೆಗೆ ಮಂಟಪದ ಅಲಂಕಾರಕ್ಕೆ ಕಳೆದ ವರ್ಷ ಬಳಸಿದ ಅಲಂಕಾರಿಕ ವಸ್ತುಗಳನ್ನೆ ಮರುಬಳಕೆ ಮಾಡಲಾಗುತ್ತದೆ. ಸಾಂಸ್ಕೃತಿಕ ಮೆರಗು ತರುವ ಉದ್ದೇಶದಿಂದ ಸಂಗೀತಗಾರರು ಮತ್ತು ಸ್ಥಳೀಯ ಜನಪದ ಕಲಾವಿದರ ಕಲಾ ಪ್ರದರ್ಶನ ಏರ್ಪಡಿಸಲಾಗುತ್ತದೆ .ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಗೀತ, ನೃತ್ಯ ಪ್ರಿಯರಿಗೆ ಮುಕ್ತ ಅವಕಾಶವಿರುತ್ತದೆ.[೭][೮]

ಉತ್ಸವದ ಕಾರ್ಯಕ್ರಮಗಳು[ಬದಲಾಯಿಸಿ]

ಉತ್ಸವದಲ್ಲಿ ಸಂಗೀತ, ಕಲೆ ಮತ್ತು ಸಂಸ್ಕೃತಿಯೊಂದಿಗೆ ವಿಶೇಷ ಕಲಾವಿದರ ಪ್ರದರ್ಶನದ ಕಾರ್ಯಕ್ರಮಗಳಿರುತ್ತವೆ.

ಮಂಟಪ[ಬದಲಾಯಿಸಿ]

ಇದುವರೆಗೆ ಈ ಉತ್ಸವದಲ್ಲಿ ಕರ್ನಾಟಕದ ಪ್ರಖ್ಯಾತ ವಾಸ್ತುಶಿಲ್ಪಗಳಾದ ಮೇಲುಕೋಟೆ ದೇವಸ್ಥಾನದ ಕಲ್ಯಾಣಿ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಮತ್ತು ಧರ್ಮಸ್ಥಳ ಮಂಜುನಾಥ ದೇವಸ್ಥಾನ ಮತ್ತಿತರ ಶೈಲಿಯಲ್ಲಿ ಮಂಟಪ ನಿರ್ವಿುಸಲಾಗಿತ್ತು. 2017 ರಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಮಾದರಿ ಮಂಟಪ ನಿರ್ವಿುಸಲಾಗಿದೆ. ಅಲಂಕೃತ ಕಾಲಮ್ ಸ್ಟೈನ್ಡ್ ಗ್ಲಾಸ್ ಸೀಲಿಂಗ್, ಡೆಕೊರೇಟಿವ್ ಸ್ಟೀಲ್ ಗ್ರಿಲ್ಸ್ ಜತೆ ಮಂಟಪ ನಿರ್ವಿುಸಿ ಗಣೇಶನನ್ನು ಕೂರಿಸಲಾಗಿದೆ.[೯][೧೦][೧೧]

ಉಲ್ಲೇಖಗಳು[ಬದಲಾಯಿಸಿ]

 1. "ಬಸವನಗುಡಿ ಗಣೇಶ ಉತ್ಸವಕ್ಕೆ 53, ವಿಶೇಷಗಳು ಹಲವಾರು". kannada.oneindia.com ,25 August 2017.
 2. "ದರ್ಬಾರಿನ ಮಂಟಪದಲ್ಲಿ ಗಣೇಶ". www.prajavani.net , 25 August 2017.
 3. "This time, head to National College grounds for Ganesha Utsava". www.deccanherald.com. Retrieved 25 August 2017.
 4. "54th Bengaluru Ganesh Utsava Photos". www.indiatimes.com. Retrieved 25 August 2017.
 5. "Head to Basavanagudi for a musical time this Ganesh Chaturthi". www.dnaindia.com. Retrieved 25 August 2017.
 6. "Bangalore's biggest Ganesh Utsav is back". www.thehindu.com. Retrieved 25 August 2017.
 7. "free entry". www.bgu.co.in/. Retrieved 25 August 2017.
 8. "Durbar hall of Mysore Palace recreated in city for Ganesha festival". www.deccanherald.com. Retrieved 25 August 2017.
 9. "55ನೇ ಆವೃತ್ತಿ ಆ.25ರಿಂದ ಸೆ.4ರವರೆಗೆ 2017". vijayavani.net , 25 August 2017.
 10. "This time, head to National College grounds for Ganesha Utsava". www.deccanherald.com. Retrieved 25 August 2017.
 11. "Durbar hall of Mysore Palace recreated in city for Ganesha festival". www.deccanherald.com. Retrieved 25 August 2017.

ಬಾಹ್ಯ ಕೊಂಡಿಗಳು[ಬದಲಾಯಿಸಿ]

www.bgu.co.in