ಬುಲ್ಲೆಟ್ ಬಾಬ (ಒಂ ಬನ್ನಾ) ದೇವಸ್ಠಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಂ ಬನ್ನ ಅಥವಾ ಬುಲ್ಲೆಟ್ ಬಾಬ[ಬದಲಾಯಿಸಿ]

ಭಾರತ ದೇಶದ ರಾಜಾಸ್ಥಾನ ರಾಜ್ಯದ ಜೋಧಪುರ್ ನಿಂದ ಉದಯಪುರಕ್ಕೆ ಹೋಗುವ ರಸ್ತೆಯಲ್ಲಿ ಜೊಧಪುರದಿಂದ ಸುಮಾರು ೪೬ ಕಿ.ಮೀ. ದೂರದಲ್ಲಿ ಈ ವಿಶಿಷ್ಟ ದೇವಾಲಯವಿದೆ.

ವಿಶೇಷತೆ[ಬದಲಾಯಿಸಿ]

ಇಲ್ಲಿ ಪೂಜಿಸುವುದು ೩೫೦ ಸಿ.ಸಿ. ರಾಯಲ್ ಎನ್ ಫೀಲ್ಡ್ ಮೋಟಾರ್ ಬೈಕ್.

ಇತಿಹಾಸ[ಬದಲಾಯಿಸಿ]

೧೯೯೧ ರಲ್ಲಿ ಓಂ ಬನ್ನಾ (ಮೊದಲಿನ ಹೆಸರು ಓಂ ಸಿಂಗ್ ರಾಥೊಡ್) ಎಂಬುವನು ಈ ಬೈಕಿನಲ್ಲಿ ಪೃಯಾಣಿಸುತ್ತಿದ್ದಾಗ ಈಗ ದೇವಸ್ಥಾನವಿರುವ ಸ್ಥಳದಲ್ಲಿ ಆಯ ತಪ್ಪಿ ಬಿದ್ದು ಮರಣ ಹೊಂದಿದನಂತೆ. ಮರುದಿನ ಮಹಜರಿಗೆ ಬಂದಿದ್ದ ಪೋಲೀಸರು ಈ ಬೈಕನ್ನು ಹತ್ತಿರದ ಪೋಲೀಸ್ ಠಾಣೆಯಲ್ಲಿ ಇಟ್ಟಿದ್ದರಂತೆ. ಆದರೆ ಈ ಬೈಕು ಪೋಲೀಸ್ ಠಾಣೆ ಯಿಂದ ಕಾಣೆಯಾಗಿ ಅವಘಡ ನಡೆದ ಸ್ಥಳದ ಹತ್ತಿರ ಬಂದು ನಿಂತಿತ್ತಂತೆ. ಎಷ್ಟೆ ಬಾರಿ ಪೋಲೀಸರು ಪೋಲೀಸ್ ಠಾಣೆಗೆ ತಂದು ನಿಲ್ಲಿಸಿದದೂ, ಈ ಬೈಕು ಅಲ್ಲಿಂದ ಮಾಯವಾಗಿ ಪುನಃ ಅಪಘಾತ ನಡೆದ ಸ್ಥಳದಲ್ಲಿ ಕಾಣಿಸುತ್ತಿತ್ತಂತೆ. ಈ ಅದ್ಬುತವನ್ನು ಸ್ಥಳೀಯ ನಾಗರೀಕರು ದೇವರ ಲೀಲೆಯೇ ಇರಬೇಕೆಂದು ಭಾವಿಸಿ, ಈ ಬೈಕನ್ನು ಪೂಜಿಸ ತೊಡಗಿದರಂತೆ ಮತ್ತು ಕಾಲಕ್ರಮೇಣದಲ್ಲಿ ಇಲ್ಲಿ ಗುಡಿಯನ್ನು ನಿರ್ವಿಸಿದರಂತೆ. ಸ್ಥಳೀಯರ ಹೇಳಿಕೆ ಯಂತೆ ಈಗಲೂ ಈ ಬುಲ್ಲೆಟ್ ಬಾಬ ಈ ತಾಣದ ಸುತ್ತಮುತ್ತಲಲ್ಲಿ ರಾತ್ರಿಯಲ್ಲಿ ಸಂಚರಿಸುವ ವಾಹನ ಸವಾರರು ಏನಾದರೂ ತೊಂದರೆ ಅನುಭವಿಸುತ್ತಿದ್ದರೆ, ಅವರಿಗೆ ಸಹಾಯ ಮಾಡುತ್ತಾನಂತೆ.

ಉಲ್ಲೇಖ[ಬದಲಾಯಿಸಿ]

ವರ್ಗಗಳು[ಬದಲಾಯಿಸಿ]