ಬಿ. ಎಸ್. ಚಂದ್ರಶೇಖರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾಗವತ್ ಚಂದ್ರಶೇಖರ್
Personal information
ಜನನ (1945-04-17) ೧೭ ಏಪ್ರಿಲ್ ೧೯೪೫ (ವಯಸ್ಸು ೭೮)
ಮೈಸೂರು, ಕರ್ನಾಟ
ಬ್ಯಾಟಿಂಗ್ಬಲಗೈ
ಚೆಂಡೆಸೆತಲೆಗ್ ಬ್ರೇಕ್
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್ (ಟೋಪಿ ಸಂಖ್ಯೆ 58)21 ಜನವರಿ 1964 v ಇಂಗ್ಲೆಂಡ್
ಕೊನೆಯ ಟೆಸ್ಟ್12 ಜುಲೈ 1979 v ಇಂಗ್ಲೆಂಡ್
ಪ್ರಥಮ ಒಡಿಐ (ಟೋಪಿ ಸಂಖ್ಯೆ 1)22 ಫೆಬ್ರವರಿ 1976 v ನ್ಯೂಜಿಲ್ಯಾಂಡ್
ಕೊನೆಯ ಒಡಿಐ22 ಫೆಬ್ರವರಿ 1976 v ನ್ಯೂಜಿಲ್ಯಾಂಡ್
Career statistics
Competition ಟೆಸ್ಟ್‌ಗಳು ಓಡಿಐ ಎಫ್ ಸಿ ಎ ಪಟ್ಟಿ
Matches 58 1 246 7
Runs scored 167 11 600 25
Batting average 4.07 - 4.61 25
100s/50s 0/0 0/0 0/0 0/0
Top score 22 11* 25 14*
Balls bowled 15963 56 53817 420
Wickets 242 3 1063 8
Bowling average 29.74 12 24.03 38.87
5 wickets in innings 16 0 75 0
10 wickets in match 2 0 19 0
Best bowling 8/79 3/36 9/72 4/61
Catches/stumpings 25/- 0/0 107/0 1/0
Source: ESPNcricinfo, 10 ನವೆಂಬರ್ 2014

ಬಿ. ಎಸ್. ಚಂದ್ರಶೇಖರ್ (ಮೇ ೧೭, ೧೯೪೫) ಭಾರತೀಯ ಕ್ರಿಕೆಟ್ ನ ನಾಲ್ವರು ಸ್ಪಿನ್-ಮಣಿಗಳಲ್ಲಿ ಒಬ್ಬರು. [೧] ಎಂದೇ ಖ್ಯಾತರಾದ ಭಗವತ್ ಸುಬ್ರಮಣ್ಯ ಚಂದ್ರಶೇಖರ್ ಮೇ ೧೭, ೧೯೪೫ರಂದು ಜನಿಸಿದರು. ೬೦-೭೦ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ಶಕ್ತಿಯಾಗಿದ್ದ ಚಂದ್ರ, ೧೯೭೧ರಲ್ಲಿ ಭಾರತ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನಲ್ಲಿಯೇ ಸರಣಿ ಗೆಲ್ಲಲು ಕಾರಣರಾದರು.

ಜೀವನ[ಬದಲಾಯಿಸಿ]

ಮೈಸೂರಿನಲ್ಲಿ ಜನಿಸಿದ ಚಂದ್ರ, ೬ನೆಯ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿ ತಮ್ಮ ಬಲಗೈ ಶಕ್ತಿ ಕಳೆದುಕೊಂಡರು. ಆಸ್ಟ್ರೇಲಿಯಾದ ರಿಚಿ ಬೆನೋರನ್ನು ಆರಾಧಿಸುತ್ತಿದ್ದ ಚಂದ್ರು ಎಡಗೈನಲ್ಲಿ ಚಂಡೆಸೆಯುವ ಮೂಲಕ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡು, ಅಭ್ಯಾಸ ನಡೆಸಿದರು.೧೦ರ ವಯಸ್ಸಿಗೆ ಬಲಗೈ ಸ್ವಲ್ಪ ಮಟ್ಟಿಗೆ ಬಲಿದ ನಂತರ, ಸ್ಪಿನ್ ಬೌಲಿಂಗ್ ಮಾಡಲು ಶುರುವಿಟ್ಟರು.

ಶ್ರೇಷ್ಠ ಬೌಲರ್[ಬದಲಾಯಿಸಿ]

೧೯೫೫ರ ಹೊತ್ತಿಗೆ ಬೆಂಗಳೂರಿಗೆ ಬಂದ ಚಂದ್ರ ಸಿಟಿ ಕ್ರಿಕಿಟರ್ಸ್ ತಂಡ ಸೇರಿದ ಚಂದ್ರ, ವೇಗದ ಬೌಲಿಂಗ್, ಸ್ಪಿನ್ ಎಲ್ಲವನ್ನೂ ಪ್ರಯತ್ನಿಸಿ, ಲೆಗ್ ಬ್ರೇಕ್ ಶೈಲಿಯಲ್ಲಿ ಅಭ್ಯಾಸ ನಡೆಸಿದರು. ಡಿವಿಶನ್ ಮತ್ತು ರಣಜಿ ಹಂತಕ್ಕೆ ಆಯ್ಕೆಯಾಗಿ, ಕರ್ನಾಟಕ ತಂಡದ ಸ್ಪಿನ್ ಅಸ್ತ್ರವಾದರು. ೧೯೬೪ರಲ್ಲಿ ಮುಂಬಯಿನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡಿದ ಚಂದ್ರ, ೪ ಮಹತ್ವದ ವಿಕೆಟ್ ಕಬಳಿಸಿದರು. ೧೯೬೪ರ ವರ್ಷದ ಕ್ರಿಕೆಟಿಗರಾಗಿ ಆಯ್ಕೆಯಾದ ಚಂದ್ರ, ೧೯೭೮ರವರೆಗೆ ಭಾರತ ತಂಡಕ್ಕೆ ಆಡಿದರು.

೧೯೭೧ರ ಇಂಗ್ಲೆಂಡ್ ಯಾತ್ರೆಯಲ್ಲಿ ಓವಲ್ ಟೆಸ್ಟ್ ನ ೪ನೆ ಇನಿಂಗ್ಸ್ ನಲ್ಲಿ ೩೮ ರನ್ ನೀಡಿ ೬ ವಿಕೆಟ್ ಪಡೆದದ್ದು ಅವರ ಸ್ಮರಣೀಯ ಘಳಿಗೆ. ಅವರ ಬೌಲಿಂಗ್ ನಿಂದಾಗಿ ಭಾರತ ಮೊದಲ ಬಾರಿ ದೇಶದ ಹೊರಗೆ ಸರಣಿ ವಿಜಯ ಸಾಧಿಸಿತು.

೧೯೭೬ರ ನ್ಯೂಜ಼ಿಲೆಂಡ್ ಪ್ರವಾಸದಲ್ಲಿ ಪ್ರಸನ್ನ-ಚಂದ್ರ ಜೋಡಿ ಒಂದೇ ಟೆಸ್ಟ್ ನಲ್ಲಿ ೧೯ ವಿಕೆಟ್ ಪಡೆದರು. ಆದರೂ ನಾಯಕ ಅಜಿತ್ ವಾಡೇಕರ್ ರೊಂದಿಗೆ ಉತ್ತಮ ಭಾಂಧವ್ಯ ಹೊಂದದ ಕಾರಣದಿಂದ ಚಂದ್ರ ಹೆಚ್ಚು ಟೆಸ್ಟ್ ಆಡಲು ಸಾಧ್ಯವಾಗಲಿಲ್ಲ.

ನಂತರದ ೧೯೭೭-೭೮ರ ಆಸ್ಟ್ರೇಲಿಯಾದ ಪ್ರವಾಸದಲ್ಲೂ ಬೌಲಿಂಗ್ ನಿಂದ ವಿಜಯಕ್ಕೆ ಕಾರಣರಾದರು. ಆದರೆ ನಾಲ್ಕು ಬಾರಿ ೦ ರನ್ ಗಳಿಸಿದ್ದಕ್ಕೆ ತೂತು ಇರುವ ಗ್ರೇ-ನಿಕೋಲ್ಸ್ ಬ್ಯಾಟ್ ಅನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬಳುವಳಿಯಾಗಿ ನೀಡಿತು. ನಗುಮನಸ್ಸಿನಿಂದಲೇ ಅದನ್ನು ಸ್ವೀಕರಿಸಿದ ಚಂದ್ರ, ತಮ್ಮ ಶಾಂತ ಸ್ವಭಾವ ಮತ್ತು ವಿನಯವಂತ ನಡವಳಿಕೆಯಿಂದ ಕ್ರಿಕೆಟ್ ಲೋಕದ ಮನಗೆದ್ದರು.

ಭಾರತದ ಸ್ಪಿನ್ ಚತುಷ್ಟಯರಾದ ಚಂದ್ರು, ಪ್ರಸನ್ನ, ಬೇಡಿ ಮತ್ತು ವೆಂಕಟ್ ಇವರು ಕ್ರಿಕೆಟ್ ಎಂಬ ವಿಶ್ವ ಮರೆಯಲಾಗದ ಮಹತ್ವದ ನಿಧಿಗಳು. ಭಾರತಕ್ಕೆ ಇಂಗ್ಲೆಂಡಿನಲ್ಲಿ ಸರಣಿ ವಿಜಯ, ಆಸ್ಟ್ರೇಲಿಯಾದ ವಿರುದ್ಧ ಸರಣಿ ವಿಜಯ ಇವಕ್ಕೆಲ್ಲಾ ನಾಂದಿ ಹಾಡಲಿಕ್ಕೆ ಕಾರಣೀಭೂತರಾದವರು ಚಂದ್ರು. ಪ್ರಸನ್ನ, ಜಿ. ಆರ್. ವಿಶ್ವನಾಥ್, ಸುಧಾಕರ್ ರಾವ್, ಬ್ರಿಜೇಶ್ ಪಟೇಲ್, ಸಯ್ಯದ್ ಕಿರ್ಮಾನಿ ಇದ್ದ ಕರ್ನಾಟಕ ತಂಡ ಅಂದಿನ ಶ್ರೀಮಂತ ಮತ್ತು ಅಧಿಕಾರಿಶಾಹಿ ಮುಂಬಯಿ ತಂಡಕ್ಕೆ ಕೇವಲ ಪ್ರತಿಭೆಯ ಮೂಲಕವಾಗಿ ನೀಡಿದ ಸ್ಪರ್ಧೆ, ಒಮ್ಮೆ ಕರ್ನಾಟಕದಿಂದ ಏಳು ಜನ ಟೆಸ್ಟ್ ಆಟಗಾರರು ಭಾಗವಹಿಸುವಂತಹ ಶಕ್ತಿ ನಿರ್ಮಿಸಿತ್ತು. ಕರ್ನಾಟಕಕ್ಕೆ ಪ್ರತಿಷ್ಠಿತ ರಣಜಿ ಟ್ರೋಫಿ ಪ್ರಶಸ್ತಿಯನ್ನು ಕೂಡಾ ಮೊತ್ತಮೊದಲಬಾರಿಗೆ ತಂದಿತ್ತು.

ಶ್ರೇಷ್ಠ ಸಾಧನೆ[ಬದಲಾಯಿಸಿ]

ನಮ್ಮ ಸಚಿನ್ ಬರುವುದಕ್ಕೆ ಮುಂಚೆ ವಿಶ್ವದಲ್ಲಿ ಯಾರು ಅತ್ಯುತ್ಕೃಷ್ಟ ಬ್ಯಾಟುದಾರ ಎಂದರೆ ತಕ್ಷಣ ಹೊಳೆಯುವ ಹೆಸರು ವೆಸ್ಟ್ ಇಂಡೀಜ್ ತಂಡದ ವಿವಿಯನ್ ರಿಚರ್ಡ್ಸ್. ವಿವಿಯನ್ ರಿಚರ್ಡ್ಸ್ ಹೇಳುತ್ತಾರೆ "ನನಗೆ ಅತ್ಯಂತ ಸವಾಲು ಒಡ್ಡಿದ ಬೌಲರ್ ಅಂದರೆ ಬಿ.ಎಸ್. ಚಂದ್ರಶೇಖರ್" ಎಂದು.

ಕೇವಲ ೫೮ ಟೆಸ್ಟ್ ಪಂದ್ಯ ಆಡಿ ೨೪೨ ವಿಕೆಟ್ ಉರುಳಿಸಿದ ಚಂದ್ರು ಅವರ ಸಾಧನೆ ಅಮೋಘವಾದದ್ದು. ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ ೩೮ರನ್ನು ನೀಡಿ ೬ ವಿಕೆಟ್ ಉರುಳಿಸಿ ಭಾರತಕ್ಕೆ ಸರಣಿ ಜಯ ಒದಗಿಸಿದ ಅವರ ಸಾಧನೆಯನ್ನು, ಶತಮಾನದ ಒಂದು ಇನ್ನಿಂಗ್ಸಿನಲ್ಲಿನ ಅತ್ಯುತ್ಕೃಷ್ಟ ಬೌಲಿಂಗ್ ಎಂದು ಪರಿಗಣಿಸಿದ ವಿಸ್ಡೆನ್, ಅವರಿಗೆ ೨೦೦೨ರ ವರ್ಷದಲ್ಲಿ ಪ್ರಶಸ್ತಿ ಗೌರವವನ್ನು ಅರ್ಪಿಸಿತು.

ಗೂಗ್ಲಿ[ಬದಲಾಯಿಸಿ]

ಕ್ರಿಕೆಟ್ ಬೌಲಿಂಗಿನಲ್ಲಿ ಚಂದ್ರು ಅವರ ಗೂಗ್ಲಿ ಅತ್ಯಂತ ಊಹಿಸಲಸಾಧ್ಯವಾದ ಕಷ್ಟಕಾರವಾದ ಬಾಲ್ ಎಂದು ಮನ್ನಣೆ ಪಡೆದಿದೆ.

ನಗೆ ಹುಟ್ಟಿಸುವ ಬ್ಯಾಟಿಂಗ್ ದಾಖಲೆ[ಬದಲಾಯಿಸಿ]

ಅವರ ಬ್ಯಾಟಿಂಗ್ ಸಾಧನೆ ನಗೆ ಹುಟ್ಟಿಸುವಂತದ್ದಾಗಿದ್ದು, ೨೩ ಬಾರಿ ಸೊನ್ನೆ ರನ್ನು ಗಳಿಸಿ ಅತ್ಯಧಿಕ ಶೇಕಡಾವಾರು ಸೊನ್ನೆ ಪ್ರದರ್ಶನ ನೀಡಿದ ವಿಶ್ವದಾಖಲೆ ಅವರದ್ದಾಗಿದೆ. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ ೪ ರನ್ನುಗಳು ಮಾತ್ರ. ಅವರು ಒಟ್ಟಾರೆ ಗಳಿಸಿದ ೧೬೭ರನ್ನುಗಳು ಅವರು ಉರುಳಿಸಿದ ೨೪೨ ವಿಕೆಟ್ಟುಗಳಿಗಿಂತ ತುಂಬಾ ಹಿಂದುಳಿದದ್ದು ಕೂಡಾ ಅಚ್ಚರಿಯೇ. ೧೯೭೬ರ ವೆಸ್ಟ್ ಇಂಡೀಜ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಶ್ವನಾಥ್ ಅವರೊಂದಿಗೆ ಅವರು ದೃತಿಗೆಡದೆ ಸಾಕಷ್ಟು ಹೊತ್ತು ನಡೆಸಿದ ಬ್ಯಾಟಿಂಗ್, ಟೆಸ್ಟ್ ಡ್ರಾ ಆಗಲು ಕಾರಣವಾಯಿತು, ಅಲ್ಲದೇ ವಿಜಯಕ್ಕೆ ಕಾರಣರಾದರು.

ಅಪಘಾತದಲ್ಲಿ ಪಾರು[ಬದಲಾಯಿಸಿ]

ಕ್ರಿಕೆಟ್ ನಿವೃತ್ತಿ ನಂತರದಲ್ಲಿ ಚಂದ್ರು, ೧೯೯೪ರಲ್ಲಿ ತೀವ್ರವಾದ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಪಾರಾದರು. ಕಾಲು ಊನವಾಗುವ ಹಂತದಲ್ಲಿ, ಚಂದ್ರ ಮುಖೇಶ್ ಗೀತೆಗಳನ್ನು ಕೇಳುತ್ತಾ, ನೋವು ಮರೆಯುವ ಪ್ರಯತ್ನ ಮಾಡಿದರು. ವಿಚಿತ್ರವೆಂದರೆ, ಹಿಂದಿಯ ಗೀತಸಾಹಿತ್ಯ ಅರ್ಥವಾಗದ ಚಂದ್ರರಿಗೆ, ಮುಖೇಶ್ ಧ್ವನಿ ಮಾತ್ರ ಇಷ್ಟ. ಪತ್ನಿ ಸಂಧ್ಯಾ, ಮಗಳು ಗ್ರೀಷ್ಮಾ, ಅಮೇರಿಕದಲ್ಲಿ ವಾಸವಾಗಿರುವ ಮಗ ಇವರ ಕುಟುಂಬ.

ಹಿಂದಿ ಗಾಯಕ ಮುಖೇಶ್ ರ ಅಭಿಮಾನಿ ಮತ್ತು ಮಿತ್ರರಾಗಿದ್ದ ಚಂದ್ರ, ಮುಖೇಶ್ ರನ್ನು ಮುಂಬಯಿ ಯಲ್ಲಿ ಆಡುವಾಗಲೆಲ್ಲ ಭೇಟಿ ಮಾಡುತ್ತಿದ್ದರು. ಮುಖೇಶ್ ಬಗ್ಗೆ ಚಂದ್ರರ ಮಾತು. Archived 2010-10-29 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ[ಬದಲಾಯಿಸಿ]

  1. www.espncricinfo.com/india/content/player/27591.html