ವಿಷಯಕ್ಕೆ ಹೋಗು

ಬಿಕಾನೇರಿ ಭುಜಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಕಾನೇರಿ ಭುಜಿಯಾ (ಹಲವುವೇಳೆ ಸರಳವಾಗಿ ಭುಜಿಯಾ ಎಂದು ಕರೆಯಲ್ಪಡುತ್ತದೆ) ಒಂದು ಜನಪ್ರಿಯ ಗರಿಗರಿಯಾದ ಲಘು ಆಹಾರವಾಗಿದೆ. ಇದನ್ನು ಮಡಿಕೆ ಕಾಳು ಮತ್ತು ಬೇಸನ್ (ಕಡಲೆ ಹಿಟ್ಟು) ಹಾಗೂ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ರಾಜಸ್ಥಾನದ ಬಿಕಾನೆರ್‌‌ನಲ್ಲಿ ಹುಟ್ಟಿಕೊಂಡಿತು. ತಿಳಿ ಹಳದಿ ಬಣ್ಣದ್ದಾದ ಇದು ಮೊದಲನೆಯ ಬಾರಿ ಬಿಕಾನೇರ್‌ನಲ್ಲಿ ತಯಾರಿಸಲ್ಪಟ್ಟಿತು ಎಂದು ಪ್ರಸಿದ್ಧವಾಗಿ ಪರಿಚಿತವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕೇವಲ ಬಿಕಾನೇರ್‌ನ ವಿಶಿಷ್ಟ ಉತ್ಪನ್ನವಾಗಿರುವದಷ್ಟೇ ಅಲ್ಲದೆ, ಜಾತಿವಿಶಿಷ್ಟವಾದ ಹೆಸರೂ ಆಗಿದೆ.[]

ಮಡಿಕೆ ಕಾಳು, ಬೇಸನ್, ಕಡಲೆ ಸೇರಿದ ಹಿಟ್ಟಿಗೆ ಪುಡಿಮಾಡಿದ ಸೆಲ್ಯುಲೋಸ್ (ನಾರು), ಉಪ್ಪು, ಕೆಂಪು ಮೆಣಸಿನ ಪುಡಿ, ಕರಿಮೆಣಸು, ಏಲಕ್ಕಿ, ಲವಂಗಗಳಂತಹ ಸಂಬಾರ ಪದಾರ್ಥಗಳು, ಶೇಂಗಾ ಎಣ್ಣೆ, ಇತ್ಯಾದಿಗಳನ್ನು ಸೇರಿಸಿ ನಾದಲಾಗುತ್ತದೆ. ಇದನ್ನು ಒಂದು ಜರಡಿಯ ಮೂಲಕ ಒತ್ತಿ ತರಕಾರಿ ಎಣ್ಣೆಯಲ್ಲಿ ಕರಿಯಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Camel country: Known for its sand dunes and bhujia, Bikaner". The Tribune. 18 January 2009.