ವಿಷಯಕ್ಕೆ ಹೋಗು

ಬಾಳ ಬಂಧನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಳ ಬಂಧನ (ಚಲನಚಿತ್ರ)
ಬಾಳ ಬಂಧನ
ನಿರ್ದೇಶನಪೇಕೇಟಿ ಶಿವರಾಂ
ನಿರ್ಮಾಪಕಎ.ಎಲ್.ಶ್ರೀನಿವಾಸನ್
ಪಾತ್ರವರ್ಗರಾಜಕುಮಾರ್ ಜಯಂತಿ ಸಂಪತ್, ಬಾಲಕೃಷ್ಣ, ದ್ವಾರಕೀಶ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣವಿ.ಸೆಲ್ವರಾಜ್
ಬಿಡುಗಡೆಯಾಗಿದ್ದು೧೯೭೧
ಚಿತ್ರ ನಿರ್ಮಾಣ ಸಂಸ್ಥೆಎ.ಎಲ್.ಎಸ್. ಪ್ರೊಡಕ್ಷನ್ಸ್

ಸಾರಾಂಶ

[ಬದಲಾಯಿಸಿ]

ಮಗುವಾಗಿದ್ದಾಗ ಅನಾಥನಾದ ರಂಗ (ರಾಜ್‌ಕುಮಾರ್ ಪಾತ್ರ) ಅವರ ದೂರದ ಸಂಬಂಧಿ ಚಂದ್ರಶೇಖರ್ ರಾವ್ ಬಹದ್ದೂರ್ (ಸಂಪತ್) ಮತ್ತು ಅವರ ಕರುಣಾಮಯಿ ಪತ್ನಿ ಪಾರ್ವತಿ (ಎಂ ಜಯಶ್ರೀ) ಆಶ್ರಯದಲ್ಲಿ ಬೆಳೆದನು.

ಚಂದ್ರಶೇಖರ್ ರಾವ್ ಅವರ ಮೂರು ಗಂಡು ಮಕ್ಕಳು ರಾಮನಾಥ (ವಜ್ರಮುನಿ), ಸೋಮನಾಥ (ಬೆಂಗಳೂರು ನಾಗೇಶ್) ಮತ್ತು ವಿಶ್ವನಾಥ (ದ್ವಾರಕೀಶ್), ಇಬ್ಬರು ಹೆಣ್ಣುಮಕ್ಕಳು - ದೊಡ್ಡ ಮಗಳು ವಿಧವೆ ರಾಜಮ್ಮ (ಲಕ್ಷ್ಮಿ ದೇವಿ) ಮತ್ತು ಅವಳ ಮಗ ಹಾಗೂ ಇಬ್ಬರು ಚಿಕ್ಕ ಮೊಮ್ಮಕ್ಕಳು ತುಂಬಿದ ದೊಡ್ಡ ಕುಟುಂಬ. ಪಾರ್ವತಿ ತನ್ನ ಬಾಲ್ಯದ ಗೆಳತಿ ಮಾಯಕ್ಕನಿಗೆ ಅವಳ ಮಗಳು ಲಕ್ಷ್ಮಿಯನ್ನು (ಜಯಂತಿ) ತನ್ನ ಮೂರನೇ ಸೊಸೆಯಾಗಿ ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತಾಳೆ. ಆದರೆ ಅವಳ ಮೂರನೇ ಮಗ ಲೇಪಾಕ್ಷಿಯನ್ನು (ಬಿ ಜಯ) ಪ್ರೀತಿಸುತ್ತಿದ್ದ ಕಾರಣ ಮದುವೆಯಾಗಲು ನಿರಾಕರಿಸುತ್ತಾನೆ. ಆಗ ಪಾರ್ವತಿ ಲಕ್ಷ್ಮಿಯನ್ನು ರಂಗನಿಗೆ ಕೊಟ್ಟು ಮದುವೆ ಮಾಡಿಕೊಡುತ್ತಾಳೆ.

ಷೇರು ಮಾರುಕಟ್ಟೆಯಲ್ಲಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಂಡಾಗ ಚಂದ್ರಶೇಖರ್ ರಾವ್ ಅವರ ಜೀವನವು ಕ್ರೂರ ತಿರುವು ಪಡೆಯುತ್ತದೆ. ಮಗಳ ಮದುವೆ ರದ್ದಾಗುತ್ತದೆ. ಗಂಡು ಮಕ್ಕಳ ಸೊಸೆಯಂದಿರ ವರ್ತನೆ ಬದಲಾಗುತ್ತದೆ. ರಂಗ ಮತ್ತು ಲಕ್ಷ್ಮಿಯನ್ನು ಹೊರಗೆ ಕಳುಹಿಸುವಂತೆ ಆಗುತ್ತದೆ. ಚಂದ್ರಶೇಖರ್ ರಾವ್ ಹೃದಯಾಘಾತದಿಂದ ಸಾಯುತ್ತಾನೆ.

ಕೋಟಯ್ಯನ (ಬಾಲಕೃಷ್ಣ) ಸಹಾಯದಿಂದ ರಂಗನು ತಂಗಿಯಂತೆ ಇದ್ದ ಗೀತಾಳನ್ನು ಮದುವೆಯಾಗಲಿರುವ ರಾಚಪ್ಪ (ಮಹದೇವಪ್ಪ) ಒಡೆತನದ ಕಾರ್ಖಾನೆಯಲ್ಲಿ ಕೆಲಸ ಪಡೆಯುತ್ತಾನೆ. ರಂಗನು ಕುಟುಂಬದಲ್ಲಿನ ಪ್ರಕ್ಷುಬ್ಧತೆಯನ್ನು ಹೇಗೆ ಸರಿಪಡಿಸುತ್ತಾನೆ ಮತ್ತು ಎಲ್ಲರನ್ನೂ ಮತ್ತೆ ಹೇಗೆ ಒಂದಾಗಿಸುತ್ತಾನೆ ಎಂಬುದೇ ಕಥೆಯ ಉಳಿದ ಸಾರಾಂಶ.

ಉಲ್ಲೇಖಗಳು

[ಬದಲಾಯಿಸಿ]