ಬಾರ್ಕೂರು ಕೋಟೆ
ಗೋಚರ
ಬಾರ್ಕೂರು ಕೋಟೆಯನ್ನು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕ ಹರಿಹರ I ನಿರ್ಮಿಸಿದನು. ಬಾರ್ಕೂರು ಕೋಟೆಯು ೨೦ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಕೋಟೆಯ ಒಳಗೆ ಸಾಮ್ರಾಜ್ಯದ ಅವಶೇಷಗಳಿವೆ. ಸೈನ್ಯದ ಭಾಗವಾಗಿರುವ ಕುದುರೆಗಳು ಮತ್ತು ಆನೆಗಳನ್ನು ಕಟ್ಟಲು ಬಳಸುವ ಕಂಬಗಳಿವೆ. ಈ ಕೋಟೆಯನ್ನು ಹಲವಾರು ವರ್ಷಗಳ ಹಿಂದೆ ಪುರಾತತ್ವಶಾಸ್ತ್ರಜ್ಞರು ಕೆಲವು ಎಕರೆ ಪ್ರದೇಶದಲ್ಲಿ ಉತ್ಖನನ ಮಾಡಿದರು. ಬಾರ್ಕೂರು ಕೋಟೆಯು ಪಾಳುಬಿದ್ದಿದ್ದು, ಇದು ಈಗ ಒಂದು ವಿಹಾರ ತಾಣವಾಗಿದೆ.