ಬಾಬ್ ಮಾರ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಈ article ಲೇಖನವು the singer. ಇದರ the comedian, see Bob Marley (comedian).
Bob Marley
Black and white picture of a man with long dreadlocks playing the guitar on stage.
Bob Marley performing in Zurich, Switzerland on May 30, 1980.
ಹಿನ್ನೆಲೆ ಮಾಹಿತಿ
ಜನ್ಮ ನಾಮ Robert Nesta Marley
ಶೈಲಿ/ಗಳು Reggae, ska, rocksteady
ವೃತ್ತಿಗಳು Singer-songwriter, musician
ವಾಧ್ಯಗಳು Vocals, guitar, percussion
ಸಕ್ರಿಯ ವರುಷಗಳು 1962–81
L‍abels Studio One, Beverley's, Upsetter/Trojan, Island/Tuff Gong
Associated acts The Wailers, Wailers Band, The Upsetters, I Threes, Bob Marley & The Wailers
ಜಾಲತಾಣ www.bobmarley.com

ರಾಬರ್ಟ್ ನೆಸ್ಟ "ಬಾಬ್‌" ಮಾರ್ಲಿ (ಫೆಬ್ರವರಿ 6, 1945 – ಮೇ 11, 1981) ಜಮೈಕಾ ದೇಶದ ಒಬ್ಬ ಗಾಯಕ-ಪದ್ಯರಚನೆಕಾರ ಮತ್ತು ಸಂಗೀತಗಾರ. ಅವನು ದ ವೈಲರ್ಸ್‌ (1964–1974) ಮತ್ತು ಬಾಬ್ ಮಾರ್ಲಿ & ದ ವೈಲರ್ಸ್‌ (1974–1981) ಎಂಬ ಹೆಸರಿನ ಸ್ಕಾ, ರಾಕ್‌ಸ್ಟಡಿ ಮತ್ತು ರೆಗಿ ಬ್ಯಾಂಡ್‌ಗಳ ಪ್ರಮುಖ ಗಾಯಕ, ಪದ್ಯರಚನೆಕಾರ ಮತ್ತು ಗಿಟಾರ್ ವಾದಕನಾಗಿದ್ದಾನೆ. ಮಾರ್ಲಿಯು ರೆಗ್ಗಿ ಸಂಗೀತದ ಹೆಸರುವಾಸಿ ಮತ್ತು ಗೌರವಾನ್ವಿತ ನಿರ್ವಾಹಕ. ಅವನು ಜಮೈಕಾದ ಸಂಗೀತ ಮತ್ತು ರಸ್ಟಫರಿ ಆಂದೋಲನಗಳೆರಡನ್ನೂ ವಿಶ್ವದಾದ್ಯಂತದ ಕೇಳುಗರಿಗೆ ಹರಡಲು ನೆರವಾದ ಕೀರ್ತಿಗೆ ಪಾತ್ರನಾಗಿದ್ದಾನೆ.[೧]

ಮಾರ್ಲಿಯ ಹೆಚ್ಚು ಜನಪ್ರಿಯ ಗೀತೆಗಳೆಂದರೆ - "ಐ ಶಾಟ್ ದ ಶೆರಿಫ್‌", "ನೊ ವುಮನ್, ನೊ ಕ್ರೈ", "ಕುಡ್ ಯು ಬಿ ಲವ್ಡ್‌", "ಸ್ಟರ್ ಇಟ್ ಅಪ್‌", "ಜ್ಯಾಮಿಂಗ್‌", "ರಿಡೆಂಪ್ಶನ್ ಸಾಂಗ್‌", "ಒನ್ ಲವ್‌" ಮತ್ತು ದ ವೈಲರ್ಸ್‌‌ನೊಂದಿಗೆ "ಥ್ರೀ ಲಿಟಲ್ ಬರ್ಡ್ಸ್‌",[೨] ಹಾಗೂ ಅವನ ಮರಣೋತ್ತರ ಬಿಡುಗಡೆಗಳು - "ಬಫೆಲೊ ಸೋಲ್ಜರ್‌" ಮತ್ತು "ಐರನ್ ಲಯನ್ ಜಿಯಾನ್‌". ಅವನ ಸಾವಿನ ಮ‌ೂರು ವರ್ಷಗಳ ನಂತರ ಬಿಡುಗಡೆಯಾದ ಲೆಜೆಂಡ್‌ (1984) ಎಂಬ ಸಂಗ್ರಹಣ ಆಲ್ಬಮ್‌ ರೆಗ್ಗಿಯ ಅತ್ಯುತ್ತಮ ಮಾರಾಟವಾದ ಆಲ್ಬಮ್ ಆಗಿದೆ‌. ಇದು U.S.ನಲ್ಲಿ 10 ಬಾರಿ ಪ್ಲಾಟಿನಮ್ (ಡೈಮಂಡ್‌) ಪಡೆಯಿತು[೩] ಮತ್ತು ಪ್ರಪಂಚದಾದ್ಯಂತ ಇದರ 20 ದಶಲಕ್ಷ ಪ್ರತಿಗಳು ಮಾರಾಟವಾದವು.[೪][೫]

ಆರಂಭಿಕ ಜೀವನ ಮತ್ತು ವೃತ್ತಿಜೀವನ[ಬದಲಾಯಿಸಿ]

ಬಾಬ್ ಮಾರ್ಲಿಯು ಜಮೈಕಾದ ಸೇಟ್ ಆನ್ ಪ್ಯಾರಿಶ್‌ನ ನೈನ್ ಮೈಲ್ ನ ಸಣ್ಣ ಹಳ್ಳಿಯಲ್ಲಿ ನೆಸ್ಟ ರೋಬರ್ಟ್‌ ಮಾರ್ಲಿಯಾಗಿ ಜನಿಸಿದ.[೬] ನಂತರ ಜಮೈಕಾದ ಪಾಸ್‌ಪೋರ್ಟ್ ಅಧಿಕಾರಿಯೊಬ್ಬ ಅವನ ಮೊದಲ ಮತ್ತು ಮಧ್ಯದ ಹೆಸರನ್ನು ಬದಲು ಮಾಡಿದನು.[೭] ಅವನ ತಂದೆ ನಾರ್ವಲ್ ಸಿಂಕ್ಲೇರ್ ಮಾರ್ಲಿ ಇಂಗ್ಲೆಂಡ್‌ನ ಎಸ್ಸೆಕ್ಸ್‌‍ನಿಂದ ಬಂದ ಕುಟುಂಬದ ಇಂಗ್ಲಿಷ್‌ ತಲೆಮಾರಿನ ಜಮೈಕಾದವನು. ನಾರ್ವಲ್‌ ರಾಯಲ್ ಮೆರೈನ್ಸ್‌ನಲ್ಲಿ ಕ್ಯಾಪ್ಟನ್ ಆಗಿದ್ದನು ಹಾಗೂ ನೆಡುತೋಪಿನ ಮೇಲ್ವಿಚಾರಕನೂ ಆಗಿದ್ದನು, ಆ ಸಂದರ್ಭದಲ್ಲಿ 18 ವರ್ಷ ವಯಸ್ಸಾಗಿದ್ದಆಫ್ರೊ-ಜಮೈಕಾದವಳಾದ ಸೆಡೆಲ್ಲಾ ಬೂಕರ್‌‌ಳನ್ನು ವಿವಾಹವಾದನು.[೮] ನಾರ್ವಲ್‌ ಅವನ ಪತ್ನಿ ಮತ್ತು ಮಗುವಿಗೆ ಹಣಕಾಸಿನ ನೆರವು ನೀಡುತ್ತಿದ್ದನು, ಆದರೆ ಅವನು ಆಗಾಗ್ಗೆ ದೂರದೂರಿಗೆ ಪ್ರವಾಸ ಹೋಗುತ್ತಿದ್ದುದರಿಂದ ಅವರನ್ನು ಕಾಣುವುದು ಅಪರೂಪವಾಗಿತ್ತು. ಮಾರ್ಲಿಯು 1955ರಲ್ಲಿ 10 ವರ್ಷ ವಯಸ್ಸಿವನಾಗಿದ್ದಾಗ ಅವನ ತಂದೆ 60ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು.[೯] ಮಾರ್ಲಿಯು ಮಿಶ್ರ ಜನಾಂಗದ ಮ‌ೂಲದವನಾಗಿದ್ದ ಹಿನ್ನೆಲೆಯಲ್ಲಿ ಯೌವನದಲ್ಲಿ ಜನಾಂಗೀಯ ಪೂರ್ವಗ್ರಹವನ್ನು ಅನುಭವಿಸಿದ. ಹಾಗೂ ಜೀವನಪೂರ್ತಿ ಅವನ ಸ್ವಂತ ಜನಾಂಗದ ಗುರುತಿನ ಬಗ್ಗೆ ಪ್ರಶ್ನೆಗಳನ್ನು ಎದುರಿಸಿದ. ಈ ಕುರಿತು ಒಮ್ಮೆ ಅವನು ಆಕ್ಷೇಪಿಸಿದ್ದಾನೆ:

I don't have prejudice against meself. My father was a white and my mother was black. Them call me half-caste or whatever. Me don't dip on nobody's side. Me don't dip on the black man's side nor the white man's side. Me dip on God's side, the one who create me and cause me to come from black and white.[೧೦]

ಮಾರ್ಲಿಯು ತನ್ನ ಮಿಶ್ರಿತ ವಂಶವನ್ನು ಗುರುತಿಸಿದ್ದರೂ, ಅವನ ಜೀವನಪೂರ್ತಿ ಹಾಗೂ ಅವನ ನಂಬಿಕೆಗಳ ಕಾರಣದಿಂದಾಗಿ ಕಪ್ಪು ಆಫ್ರಿಕನ್ ಎಂದು ಸ್ವಯಂ ಗುರುತಿಸಲ್ಪಟ್ಟ.[೧೧] "ಬ್ಯಾಬಿಲೋನ್‌‌ ಸಿಸ್ಟಮ್" ಮತ್ತು "ಬ್ಲ್ಯಾಕ್‌ಮ್ಯಾನ್ ರಿಡೆಂಪ್ಷನ್‌" ಮೊದಲಾದ ಹಾಡುಗಳಲ್ಲಿ ಮಾರ್ಲಿಯು ಪಾಶ್ಚಿಮಾತ್ಯರ ಅಥವಾ "ಬ್ಯಾಬಿಲೋನ್‌‌"ನರ ದಬ್ಬಾಳಿಕೆಯ ವಿರುದ್ಧ ಕರಿಯರ ಮತ್ತು ಆಫ್ರಿಕನ್ನರ ಹೋರಾಟಗಳ ಬಗ್ಗೆ ಹಾಡಿದ್ದಾನೆ.[೧೨] ಮಾರ್ಲಿಯು ಜತೆಯಲ್ಲಿ ಸಂಗೀತ ನುಡಿಸಲು ಆರಂಭಿಸಿದ ನೆವಿಲ್ಲೆ "ಬನ್ನಿ" ಲಿವಿಂಗ್‌ಸ್ಟೋನ್‌ನೊಂದಿಗೆ (ನಂತರ ಬನ್ನಿ ವೈಲರ್‌ ಎಂದು ಹೆಸರುವಾಸಿಯಾದ) ಸ್ನೇಹಿತನಾದನು. ಅವನು ಸ್ಥಳೀಯ ಗಾಯಕ ಮತ್ತು ನಿಷ್ಠ ರಸ್ಟಫರಿ ಜಾಯ್ ಹಿಗ್ಸ್‌ನೊಂದಿಗೆ ಸಂಗೀತ ಅಭ್ಯಾಸಕ್ಕಾಗಿ ತನ್ನ 14ನೇ ವಯಸ್ಸಿನಲ್ಲಿಯೇ ಶಾಲೆ ತ್ಯಜಿಸಿದ. ಹಿಗ್ಸ್‌ ಮತ್ತು ಲಿವಿಂಗ್‌ಸ್ಟೋನ್‌‌ರೊಂದಿಗೆ ನಡೆಸುತ್ತಿದ್ದ ಸಂಗೀತ ಗೋಷ್ಠಿಯಲ್ಲಿ ಮಾರ್ಲಿಯು ಸಮಾನ ಸಂಗೀತದ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದ ಪೀಟರ್ ಮ್ಯಾಕ್‌ಇಂಟೋಶ್‌ನನ್ನು (ನಂತರ ಪೀಟರ್ ಟೋಶ್‌ ಎಂದು ಹೆಸರಾದ) ಭೇಟಿಯಾದನು.[೧೩] 1962ರಲ್ಲಿ ಮಾರ್ಲಿ ಸ್ಥಳೀಯ ಸಂಗೀತ ನಿರ್ಮಾಪಕ ಲೆಸ್ಲಿ ಕಾಂಗ್‌‌ನೊಂದಿಗೆ ಅವನ ಮೊದಲ ಎರಡು ಸಿಂಗಲ್ಸ್‌ಗಳಾದ "ಜಡ್ಜ್ ನಾಟ್‌" ಮತ್ತು "ಒನ್ ಕಪ್ ಆಫ್ ಕಾಫಿ"ಅನ್ನು ಧ್ವನಿಮುದ್ರಣ ಮಾಡಿದನು. ಈ ಹಾಡುಗಳು ಬೆವೆರ್ಲೆಯ ಹೆಸರುಪಟ್ಟಿಯಲ್ಲಿ ಬಾಬಿ ಮಾರ್ಟೆಲ್‌[೧೪] ಎಂಬ ಗುಪ್ತನಾಮದಡಿಯಲ್ಲಿ ಬಿಡುಗಡೆಯಾದವು ಹಾಗೂ ಸ್ವಲ್ಪ ಮಟ್ಟಿಗೆ ಗಮನವನ್ನೂ ಸೆಳೆದವು. ಈ ಹಾಡುಗಳು ನಂತರ ಮಾರ್ಲಿಯ ಸಾಧನೆಯ ಮರಣೋತ್ತರ ಸಂಗ್ರಹ ಸಾಂಗ್ಸ್ ಆಫ್ ಫ್ರೀಡಮ್‌ ‌ನಲ್ಲಿ ಮರುಬಿಡುಗಡೆಯಾದವು.

ಸಂಗೀತದ ವೃತ್ತಿ ಜೀವನ[ಬದಲಾಯಿಸಿ]

ದ ವೈಲರ್ಸ್‌[ಬದಲಾಯಿಸಿ]

1963ರಲ್ಲಿ ಬಾಬ್ ಮಾರ್ಲಿ, ಬನ್ನಿ ವೈಲರ್‌, ಪೀಟರ್ ಟೋಶ್‌, ಜೂನಿಯರ್ ಬ್ರೈತ್‌ವೈಟೆ, ಬೆವೆರ್ಲಿ ಕೆಲ್ಸೊ ಮತ್ತು ಚೆರ್ರಿ ಸ್ಮಿತ್‌ ಮೊದಲಾದವರು ಸೇರಿ ತಮ್ಮನ್ನು ತಾವೇ "ದ ಟೀನೇಜರ್ಸ್" ಎಂದು ಕರೆದುಕೊಂಡು ಸ್ಕಾ ಮತ್ತು ರಾಕ್‌ಸ್ಟಡಿ ತಂಡವೊಂದನ್ನು ರಚಿಸಿದರು. ನಂತರ ಅವರು ಅವರ ಹೆಸರನ್ನು "ದ ವೈಲಿಂಗ್ ರ‌್ಯೂಡ್‌ಬಾಯ್ಸ್‌" ಎಂದು, ಆನಂತರ "ದ ವೈಲಿಂಗ್ ವೈಲರ್ಸ್" ಎಂದೂ - ಈ ಹಂತದಲ್ಲಿ ದ್ವನಿಮುದ್ರಿಕೆ ನಿರ್ಮಾಪಕ ಕಾಕ್ಸೋನ್ ಡೋಡ್‌ನಿಂದ ಗುರುತಿಸಲ್ಪಟ್ಟರು, ಅಂತಿಮವಾಗಿ "ದ ವೈಲರ್ಸ್‌" ಎಂದೂ ಬದಲಾಯಿಸಿಕೊಂಡರು. ಬಾಬ್ ಮಾರ್ಲಿ, ಬನ್ನಿ ವೈಲರ್‌ ಮತ್ತು ಪೀಟರ್ ಟೋಶ್ ಮೊದಲಾದ ಪ್ರಮುಖ ಮ‌ೂವರು ಗಾಯಕರ ತಂಡವನ್ನು ಬಿಟ್ಟು 1966ರಲ್ಲಿ ಬ್ರೈತ್‌ವೈಟೆ ಕೆಲ್ಸೊ ಮತ್ತು ಸ್ಮಿತ್ ದ ವೈಲರ್ಸ್‌ಅನ್ನು ತೊರೆದುಹೋದರು‌.[೧೫] ಮಾರ್ಲಿಯು 1966ರಲ್ಲಿ ರೀಟಾ ಆಂಡರ್ಸನ್‌‌ಳನ್ನು ಮದುವೆಯಾಗಿ ಅವನ ತಾಯಿ ವಾಸಿಸುವ ಅಮೇರಿಕಾ ಸಂಯುಕ್ತ ಸಂಸ್ಥಾನದ ಡೆಲಾವೇರ್‌ನ ವಿಲ್ಮಿಂಗ್ಟನ್‌‌ನ ಹತ್ತಿರದ ಸ್ಥಳಕ್ಕೆ ಅಲ್ಪಕಾಲಕ್ಕಾಗಿ ತೆರಳಿದನು. ಅಲ್ಲಿ ಅವನು ಡೊನಾಲ್ಡ್ ಮಾರ್ಲಿಯ ಉಪನಾಮದಡಿಯಲ್ಲಿ ಡ್ಯುಪಾಂಟ್‌ ಲ್ಯಾಬ್ ಸಹಾಯಕನಾಗಿ ಮತ್ತು ಕ್ರಿಸ್ಲರ್‌ ಘಟಕದ ಜೋಡಣೆ-ಸಾಲಿನಲ್ಲಿ ಕೆಲಸ ಮಾಡಿದನು.[೧೬]

ಜಮೈಕಾಕ್ಕೆ ಹಿಂದಿರುಗಿದ ನಂತರ ಮಾರ್ಲಿ ರಸ್ಟಫರಿ ಆಂದೋಲನದ ಸದಸ್ಯನಾದನು ಹಾಗೂ ಅವನ ವಿಶಿಷ್ಠ ಮುದ್ರೆ ಡ್ರೆಡ್‌ಲಾಕ್ಸ್‌(ಸುರಳಿ ಸುತ್ತಿದ ಕೂದಲು) ಧರಿಸಲು ಆರಂಭಿಸಿದನು. (ಮಾರ್ಲಿಯ ಧಾರ್ಮಿಕ ಅಭಿಪ್ರಾಯಗಳ ಬಗ್ಗೆ ಇನ್ನಷ್ಟು ತಿಳಿಯಲು ಧಾರ್ಮಿಕ ವಿಭಾಗವನ್ನು ನೋಡಿ ). ಡಾಡ್‌ನೊಂದಿಗಿನ ಸಂಘರ್ಷವೊಂದರ ನಂತರ ಮಾರ್ಲಿ ಮತ್ತು ಅವನ ಬ್ಯಾಂಡ್‌, ಲೀ "ಸ್ಕ್ರ್ಯಾಚ್" ಪೆರ್ರಿ ಮತ್ತು ಅವನ ಸ್ಟುಡಿಯೊ ಬ್ಯಾಂಡ್‌ ದ ಅಪ್‌ಸೆಟ್ಟರ್ಸ್‌ ಒಂದಿಗೆ ಸೇರಿಕೊಂಡಿತು. ಈ ಮೈತ್ರಿಕೂಟವು ಒಂದು ವರ್ಷಕ್ಕಿಂತ ಮೊದಲೇ ಕೊನೆಗೊಂಡರೂ , ಹೆಚ್ಚಿನವರು ಅತ್ಯುತ್ತಮ ಎಂದು ಅಭಿಪ್ರಾಯ ಪಟ್ಟ "ದಿ ವೈಲರ್ಸ್‌"ನ ಉತ್ಕೃಷ್ಟ ಕೆಲಸವನ್ನು ಧ್ವನಿಮುದ್ರಿಸಿದರು. ರೆಕಾರ್ಡ್ ಮಾಡುವ ಹಕ್ಕಿನ ಹಂಚಿಕೆಗೆ ಸಂಬಂಧಿಸಿದ ವಿವಾದದಿಂದ ನಂತರ ಮಾರ್ಲಿ ಮತ್ತು ಪೆರ್ರಿ ಬೇರೆಬೇರೆಯಾದರು, ಆದರೆ ನಂತರ ಅವರು ಸ್ನೇಹಿತರಾಗಿ ಉಳಿದು ಮತ್ತೊಮ್ಮೆ ಒಟ್ಟಿಗೆ ಕೆಲಸಮಾಡಿದರು.ಬಾಬ್ ಮತ್ತು ರೀಟಾ ಮಾರ್ಲಿ, ಪೀಟರ್ ಟೋಶ್ ಮತ್ತು ಬನ್ನಿ ವೇಲರ್ ಕಿಂಗ್‌ಸ್ಟನ್‌ ಮತ್ತು ಲಂಡನ್‌ನ JAD ರೆಕಾರ್ಡ್ಸ್‌ನ ಕೆಲವು ಹಳೆಯ ಹಾಡುಗಳನ್ನು ಮರುಕತ್ತರಿಸಿ ದಿ ವೈಲರ್ಸ್ ಧ್ವನಿಯ ವಾಣಿಜ್ಯೀಕರಣಕ್ಕೆ ಪ್ರಯತ್ನಿಸಿದರು. ನಂತರ ಈ ಹಾಡುಗಳನ್ನು " ಯಾವುದೇ ಆಲ್ಬಮ್‌ನಲ್ಲಿ ಬಿಡುಗಡೆ ಮಾಡಬೇಕಾಗಿಲ್ಲ. ಇವುಗಳು ರೆಕಾರ್ಡ್ ಕಂಪೆನಿಗಳಿಗೆ ಕೇಳುವುದಕ್ಕೆ ಕೇವಲ ಪ್ರದರ್ಶನ ವಸ್ತು" ಎಂದು ಬನ್ನಿ ಪ್ರತಿಪಾದಿಸಿದ. ಬಾಬ್‌ ಮತ್ತು ರೀಟಾ,1968ರಲ್ಲಿ ಜಾನಿ ನ್ಯಾಶ್‌‌ನ ಪದ್ಯರಚನೆಕಾರ ಜಿಮ್ಮಿ ನಾರ್ಮನ್‌‌ನನ್ನು ನೋಡಲು ಬ್ರಾಂಕ್ಸ್‌‌ಗೆ ಭೇಟಿ ಮಾಡಿದರು.[೧೭] ನಾರ್ಮನ್‌ನ ಸಹ-ಬರಹಗಾರ ಆಲ್ ಪೈಫ್ರಮ್ನನ್ನೂ ಒಳಗೊಂಡಂತೆ ನಾರ್ಮನ್‌ ಮತ್ತು ಇತರರೊಂದಿಗಿನ ಮ‌ೂರು ದಿನಗಳ ಸಮೂಹ ಸಂಗೀತ ಗೋಷ್ಠಿಯಲ್ಲಿ ಮಾರ್ಲಿಯು 24 ನಿಮಿಷಗಳ ಧ್ವನಿಮುದ್ರಿಕೆಯಲ್ಲಿ ಅವನ ಸ್ವಂತ ಮತ್ತು ನಾರ್ಮನ್-ಪೈಫ್ರಮ್‌ರ ಹಲವು ಸಂಯೋಜನೆಗಳನ್ನು ಹಾಡಿದ. ರೆಗ್ಗಿ ದಾಖಲೆ ರಕ್ಷಕರೋಜರ್ ಸ್ಟೆಫೆನ್ಸ್‌ ಅವುಗಳಲ್ಲಿ ಹೆಚ್ಚಿನವುಗಳು ರೆಗ್ಗಿಗಿಂತ ಪಾಪ್‌ನಿಂದ ಪ್ರಭಾವಿತವಾಗಿದ್ದು ವಿರಳ ಎಂದು ಮಾರ್ಲೆಯನ್ನು ಅಮೆರಿಕದ ಕೋಷ್ಟಕಗಳಿಗೆ ಪ್ರವೇಶಿಸುವ ಪ್ರಯತ್ನವಾಗಿ ಹೇಳಿದ.[೧೭] ದ ನ್ಯೂಯಾರ್ಕ್ ಟೈಮ್ಸ್ ‌ನಲ್ಲಿನ ಲೇಖನವೊಂದರ ಪ್ರಕಾರ,ಮಾರ್ಲಿಯು "ಸ್ಟೆ ವಿತ್ ಮಿ"ಯಲ್ಲಿ ಡೂ-ವೋಪ್ ಶೈಲಿಯನ್ನು ಮತ್ತು "ಸ್ಪ್ಲಿಶ್ ಫಾರ್ ಮೈ ಸ್ಪ್ಲ್ಯಾಶ್‌"‌ನಲ್ಲಿ "1960ರ ಕಲಾವಿದರ ನಿಧಾನ ಪ್ರೇಮಗೀತೆ ಶೈಲಿ"ಯನ್ನು ಅಳವಡಿಸಿಕೊಂಡು ಧ್ವನಿಮುದ್ರಿಕೆಯಲ್ಲಿ ವಿವಿಧ ರೀತಿಯ ಧ್ವನಿಗಳಿಂದ ಪ್ರಯೋಗ ಮಾಡಿದ್ದಾನೆ.[೧೭] ದ ವೈಲರ್ಸ್‌ನ ಮೊದಲ ಆಲ್ಬಮ್ ಕ್ಯಾಚ್ ಎ ಫೈರ್‌ 1973ರಲ್ಲಿ ಪ್ರಪಂಚದಾದ್ಯಂತ ಬಿಡುಗಡೆಗೊಂಡು ಉತ್ತಮ ರೀತಿಯ ಮಾರಾಟ ಕಂಡಿತು. ಇದರ ಒಂದು ವರ್ಷದ ನಂತರ "ಗೆಟ್ ಅಪ್, ಸ್ಟ್ಯಾಂಡ್ ಅಪ್‌" ಮತ್ತು "ಐ ಶಾಟ್ ದ ಶೆರಿಫ್‌" ಹಾಡುಗಳನ್ನು ಒಳಗೊಂಡ ಬರ್ನಿನ್ ಅನ್ನು ಬಿಡುಗಡೆಮಾಡಿದ. ಎರಿಕ್ ಕ್ಲಾಪ್ಟನ್ ಮಾರ್ಲಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಮ‌ೂಲಕ 1974ರಲ್ಲಿ "ಐ ಶಾಟ್ ದ ಶೆರಿಫ್‌" ಜನಪ್ರಿಯ ಧ್ವನಿಮುದ್ರಿಕೆಯನ್ನು ತಯಾರಿಸಿದ.[೧೮] ದ ವೈಲರ್ಸ್‌ನ ಪ್ರಮುಖ ಮ‌ೂರು ಸದಸ್ಯರೂ ಏಕಾಂಗಿ ವೃತ್ತಿಜೀವನ ನಡೆಸಲು ಬಯಸಿದ್ದರಿಂದ ಅದು 1974ರಲ್ಲಿ ಛಿದ್ರಗೊಂಡಿತು. ಈ ಬೇರ್ಪಡುವಿಕೆಯ ಕಾರಣವು ಊಹಾಪೋಹಗಳಲ್ಲಿ ಮುಚ್ಚಿಹೋಯಿತು; ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಬನ್ನಿ, ಪೀಟರ್ ಮತ್ತು ಬಾಬ್‌ ‌ಮ‌ೂವರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು ಎಂದು ಕೆಲವರು ನಂಬಿದರೆ, ಮತ್ತೆ ಕೆಲವರು ಬನ್ನಿ ಮತ್ತು ಪೀಟರ್ ಒಂಟಿಯಾಗಿ ಕೆಲಸ ಮಾಡಲು ಆಶಿಸಿದರು ಎಂದು ವಾದಿಸುತ್ತಾರೆ.

ಬಾಬ್ ಮಾರ್ಲಿ & ದ ವೈಲರ್ಸ್‌[ಬದಲಾಯಿಸಿ]

ಆಲ್ಟ್=ನೀರಿನಲ್ಲಿ ನಿಂತುಕೊಂಡು ವೇದಿಕೆಯಲ್ಲಿ ನಡೆಯುತ್ತಿರುವ ವಾದ್ಯಗೋಷ್ಠಿಯನ್ನು ಕೇಳುತ್ತಿರುವ ಜನರ ಗುಂಪು

ವಿಘಟನೆಯ ನಂತರವೂ ಮಾರ್ಲಿ "ಬಾಬ್ ಮಾರ್ಲೆ & ದ ವೈಲರ್ಸ್‌" ಆಗಿಯೇ ಧ್ವನಿಮುದ್ರಣ ಮಾಡುವುದನ್ನು ಮುಂದುವರಿಸಿದ. ಅವನ ಹೊಸ ಹಿಮ್ಮೇಳ ಬ್ಯಾಂಡ್‌, ಕಾರ್ಲ್ಟನ್‌ ಮತ್ತು ಅಸ್ಟಾನ್‌ "ಫ್ಯಾಮಿಲಿ ಮ್ಯಾನ್" ಬ್ಯಾರೆಟ್ ಸಹೋದರರನ್ನು ಕ್ರಮವಾಗಿ ಡ್ರಮ್ ಮತ್ತು ಬಾಸ್(ಮಂದ್ರವಾದ್ಯ), ಜೂನಿಯರ್ ಮಾರ್ವಿನ್‌ ಮತ್ತು ಆಲ್ ಆಂಡರ್ಸನ್‌‌ರನ್ನು ಗಿಟಾರ್, ಟೈರೋನ್ ಡೌವ್ನೈ ಮತ್ತು ಅರ್ಲ್ "ವ್ಯಾ" ಲಿಂಡೊರನ್ನು ಕೀಬೋರ್ಡ್‌ಗಳಲ್ಲಿ, ಆಲ್ವಿನ್ "ಸೀಕೊ" ಪ್ಯಾಟರ್ಸನ್‌ನನ್ನು ತಾಳವಾದ್ಯ ವಾದಿಸಲು ಸೇರಿಸಿಕೊಂಡಿತು. ಜ್ಯೂಡಿ ಮೊವಾಟ್, ಮರ್ಸಿಯಾ ಗ್ರಿಫಿತ್ಸ್ ಮತ್ತು ಮಾರ್ಲಿಯ ಪತ್ನಿ ರೀಟಾ ಮೊದಲಾದವರನ್ನು ಒಳಗೊಂಡ "ಐ ಥ್ರೀಸ್" ಹಿನ್ನೆಲೆ ದ್ವನಿಯನ್ನು ನೀಡಿತು. 1975ರಲ್ಲಿ ಮಾರ್ಲಿಯು ಜಮೈಕಾದ ಹೊರಗಿನ ಅವನ ಮೊದಲ ಸಾಧನೆ ನ್ಯಾಟಿ ಡ್ರೀಡ್ ಆಲ್ಬಮ್‌ನ "ನೊ ವುಮನ್, ನೊ ಕ್ರೈ"ಯ ಮ‌ೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ. ಇದರ ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಯಶಸ್ಸು ತಂದುಕೊಟ್ಟ ಮತ್ತೊಂದು ಆಲ್ಬಮ್‌ ರಸ್ತಮ್ಯಾನ್ ವೈಬ್ರೇಶನ್ (1976), ಇದು ಬಿಲ್‌ಬೋರ್ಡ್ ಹಾಟ್ 100ರಲ್ಲಿ ನಾಲ್ಕು ವಾರಗಳಷ್ಟು ಕಾಲ ಇತ್ತು.[೧೯] 1976ರ ಡಿಸೆಂಬರ್‌ನಲ್ಲಿ, ಕಾದಾಡುತ್ತಿದ್ದ ಎರಡು ರಾಜಕೀಯ ಗುಂಪುಗಳ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನವಾಗಿ ಜಮೈಕಾದ ಪ್ರಧಾನಿ ಮೈಕೆಲ್ ಮ್ಯಾನ್ಲೆ ಆಯೋಜಿಸಿದ ಒಂದು ಉಚಿತ ಸಂಗೀತ ಕಛೇರಿ "ಸ್ಮೈಲ್ ಜಮೈಕಾ"ದ ಎರಡು ದಿನಗಳ ಮೊದಲು, ಮಾರ್ಲಿಯ ಮನೆಯೊಳಗೆ ನಡೆದ ದಾಳಿಯೊಂದರಲ್ಲಿ ಅಜ್ಞಾತ ಬಂದೂಕುಧಾರಿಗಳಿಂದ ಮಾರ್ಲಿ, ಅವನ ಪತ್ನಿ ಮತ್ತು ನಿರ್ವಾಹಕ ಡಾನ್ ಟೇಲರ್ ಗಾಯಗೊಂಡರು. ಟೇಲರ್ ಮತ್ತು ಮಾರ್ಲಿಯ ಪತ್ನಿಗೆ ಗಂಭೀರ ಗಾಯಗಳಾಗಿದ್ದವು, ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು. ಬಾಬ್ ಮಾರ್ಲಿಯ ಎದೆ ಮತ್ತು ತೋಳಿನಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ದಾಳಿಯು ರಾಜಕೀಯ ಪ್ರೇರಿತವಾಗಿದ್ದು, ಈ ಸಂಗೀತ ಗೋಷ್ಠಿಯು ನಿಜವಾಗಿ ಮ್ಯಾನ್ಲೆಗೆ ಬೆಂಬಲ ನೀಡುವ ರ‌್ಯಾಲಿ ಎಂದು ಹೆಚ್ಚಿನರು ಅಭಿಪ್ರಾಯಪಟ್ಟರು. ಅದೇನೇ ಇದ್ದರೂ, ಹಲ್ಲೆಯತ್ನದ ಎರಡು ದಿನಗಳ ನಂತರ,ನಿಗದಿತ ಸಮಯದಲ್ಲೇ ಸಂಗೀತ ಗೋಷ್ಠಿಯು ನೆರವೇರಿತು ಹಾಗೂ ಗಾಯಗೊಂಡ ಮಾರ್ಲಿಯು ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದನು. ಏಕೆಂದು ಕೇಳಿದಾಗ ಮಾರ್ಲಿ ಹೀಗೆಂದು ಪ್ರತಿಕ್ರಿಯಿಸಿದನು - "ಈ ಪ್ರಪಂಚವನ್ನು ಕೆಟ್ಟದನ್ನಾಗಿ ಮಾಡಲು ಪ್ರಯತ್ನಿಸುವ ಜನರು ಒಂದು ದಿನವೂ ಬಿಡುವು ಮಾಡಿಕೊಳ್ಳುವುದಿಲ್ಲ. ಇನ್ನು ನಾನು ಹೇಗೆ?" ಮೂಲಭೂತ ಧಾರ್ಮಿಕ ಅಥವಾ ರಾಜಕೀಯ ನಂಬಿಕೆಗಳಿಲ್ಲದ ಜಾಪ್ ಪೋ ಗುಂಪಿನ ಸದಸ್ಯರು ಬಾಬ್ ಮಾರ್ಲಿಯ ಹಿನ್ನೆಲೆ ಬ್ಯಾಂಡ್ ಆಗಿ ಉತ್ಸವದಲ್ಲಿ ನೆರೆದಿದ್ದ 80,000 ಜನರ ಗುಂಪಿನ ಎದುರು ಪ್ರದರ್ಶನ ನೀಡಿದರು. ಆದರೆ ದಿ ವೈಲರ್ಸ್ ಗುಂಪಿನ ಸದಸ್ಯರು ಕಣ್ಮರೆಯಾಗಿದ್ದರು ಅಥವಾ ಅಡಗಿಕೊಂಡಿದ್ದರು.[೨೦][೨೧]

ಮಾರ್ಲಿಯು 1976ರ ಕೊನೆಯಲ್ಲಿ ಜಮೈಕಾ ಬಿಟ್ಟು ಇಂಗ್ಲೆಂಡ್‌ಗೆ ಹೋದ., ಅಲ್ಲಿ ಸ್ವಯಂಘೋಷಿತ ಅಜ್ಞಾತವಾಸವನ್ನು ಎರಡು ವರ್ಷಗಳ ಕಾಲ ಕಳೆದ. ಅಲ್ಲಿ ಅವನು ಎಕ್ಸೋಡಸ್ ಮತ್ತು ಕಾಯ ಆಲ್ಬಮ್‌ಗಳನ್ನು ಧ್ವನಿಮುದ್ರಿಸಿದ. ಎಕ್ಸೋಡಸ್‌ ಬ್ರಿಟಿಷರ ಆಲ್ಬಮ್‌ ಪಟ್ಟಿಯಲ್ಲಿ 56 ಅನುಕ್ರಮ ವಾರಗಳ ಕಾಲ ಇತ್ತು. ಇದು ನಾಲ್ಕು UK ಜನಪ್ರಿಯ ಏಕಗೀತದ ರೆಕಾರ್ಡುಗಳನ್ನು ಹೊಂದಿದೆ: "ಎಕ್ಸೋಡಸ್‌", "ವೈಟಿಂಗ್ ಇನ್ ವೇನ್", "ಜ್ಯಾಮಿಂಗ್‌" ಮತ್ತು "ಒನ್ ಲವ್‌" (ಕರ್ಟಿಸ್ ಮೇಫೀಲ್ಡ್‌ನ ಪ್ರಸಿದ್ಧ "ಪೀಪಲ್ ಗೆಟ್ ರೆಡಿ"ಯ ವಾದನ). ಲಂಡನ್‌ನಲ್ಲಿದ್ದಾಗ ಅವನು ಸಣ್ಣ ಪ್ರಮಾಣದ ಕ್ಯಾನಬಿಸ್(ಮರಿಜುವಾನ)ಅನ್ನು ಹೊಂದಿದ್ದಕ್ಕಾಗಿ ಬಂಧಿಸಲ್ಪಟ್ಟನು ಮತ್ತು ಶಿಕ್ಷೆಗೆ ಗುರಿಯಾದ.[೨೨] ಮಾರ್ಲಿಯು 1978ರಲ್ಲಿ ಜಮೈಕಾಕ್ಕೆ ಹಿಂದಿರುಗಿ, ಕಾದಾಡುತ್ತಿದ್ದ ಪಕ್ಷಗಳನ್ನು ಶಾಂತಗೊಳಿಸುವ ಪ್ರಯತ್ನವಾದ ಒನ್ ಲವ್‌ ಪೀಸ್ ಕನ್ಸರ್ಟ್ ಎಂಬ ಮತ್ತೊಂದು ರಾಜಕೀಯ ಗಾನಗೋಷ್ಠಿಯಲ್ಲಿ ಪ್ರದರ್ಶನ ನೀಡಿದನು. ಈ ಪ್ರದರ್ಶನದ ಕೊನೆಯಲ್ಲಿ ಮಾರ್ಲಿಯ ಕೋರಿಕೆಯ ಮೇರೆಗೆ ಮೈಕೆಲ್ ಮ್ಯಾನ್ಲೆ (ಆಡಳಿತ ನಡೆಸುತ್ತಿದ್ದ ಪೀಪಲ್ಸ್ ನ್ಯಾಶನಲ್ ಪಾರ್ಟಿಯ ಮುಖಂಡ) ಮತ್ತು ಅವನ ರಾಜಕೀಯ ಎದುರಾಳಿಯಾದ ಎಡ್ವರ್ಡ್ ಸೀಗ (ವಿರೋಧಿ ಜಮೈಕಾ ಲೇಬರ್ ಪಕ್ಷದ ಮುಖಂಡ) ವೇದಿಕೆಯಲ್ಲಿ ಒಬ್ಬರನ್ನೊಬ್ಬರು ಸಂಧಿಸಿ ಕೈಕುಲುಕಿದರು.[೨೩]

ಬಾಬ್ ಮಾರ್ಲಿ ಮತ್ತು ದ ವೈಲರ್ಸ್‌ ಹೆಸರಿನಡಿಯಲ್ಲಿ ಹನ್ನೊಂದು ಆಲ್ಬಮ್‌ಗಳು ಬಿಡುಗಡೆಗೊಂಡವು. ಅವುಗಳಲ್ಲಿ ನಾಲ್ಕು ನೇರಪ್ರಸಾರದ ಆಲ್ಬಮ್‌ಗಳು ಮತ್ತು ಏಳು ಸ್ಟುಡಿಯೊ ಆಲ್ಬಮ್‌ಗಳು. ಇವುಗಳಲ್ಲಿ ಒಂದಾದ 13 ಹಾಡುಗಳನ್ನೊಳಗೊಂಡ ಎರಡು ನೇರಪ್ರಸಾರದ ಆಲ್ಬಮ್‌ ಬ್ಯಾಬಿಲೋನ್‌‌ ಬೈ ಬಸ್ 1978ರಲ್ಲಿ ಬಿಡುಗಡೆಗೊಂಡು ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆಯಿತು. ಈ ಆಲ್ಬಮ್ ಮತ್ತು ವಿಶೇಷವಾಗಿ ಅಂತಿಮ ಧ್ವನಿಮುದ್ರಿಕೆ "ಜಮ್ಮಿನ್", ಶ್ರೋತೃಗಳನ್ನು ಉನ್ಮಾದಗೊಳಿಸುವುದರೊಂದಿಗೆ ಮಾರ್ಲಿಯ ನೇರ ಪ್ರದರ್ಶನಗಳ ಬಾವೋತ್ಕರ್ಷವನ್ನು ಸೆರೆಹಿಡಿಯಿತು.[೨೪] ಪ್ರತಿಭಟನೆಯ ಮತ್ತು ರಾಜಕೀಯ ಆರೋಪ ಮಾಡಿದ ಆಲ್ಬಮ್ ಸರ್ವೈವಲ್‌ 1979ರಲ್ಲಿ ಬಿಡುಗಡೆಗೊಂಡಿತು. "ಜಿಂಬಾಬ್ವೆ", "ಆಫ್ರಿಕಾ ಯುನೈಟ್", "ವೇಕ್ ಅಪ್ ಆಂಡ್ ಲೈವ್" ಮತ್ತು "ಸರ್ವೈವಲ್‌" ಮೊದಲಾದ ಹಾಡುಗಳು ಆಫ್ರಿಕನ್ನರ ಹೋರಾಟಗಳಿಗೆ ಮಾರ್ಲಿಯ ನೆರವನ್ನು ಬಿಂಬಿಸುತ್ತವೆ. ಅವನು 1979ರ ಜುಲೈನಲ್ಲಿ ಬೋಸ್ಟನ್‌ನಲ್ಲಿ ನಡೆದ ಅಮಂದ್ಲ ಫೆಸ್ಟಿವಲ್‌‌ನಲ್ಲಿ ಕಾಣಿಸಿಕೊಂಡಿದುದು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಬಗೆಗಿನ ಅವನ ಪ್ರಬಲ ವಿರೋಧವನ್ನು ತೋರಿಸಿಕೊಟ್ಟಿದೆ, ಈ ಬಗ್ಗೆ ಅವನು 1976ರಲ್ಲಿಯೇ ಅವನ "ವಾರ್‌" ಹಾಡಿನಲ್ಲಿ ತೋರಿಸಿದ್ದನು. ಎಪ್ರಿಲ್ 17, 1980ರ ಆರಂಭದಲ್ಲಿ ಜಿಂಬಾಬ್ವೆಯ ಸ್ವಾತಂತ್ರ್ಯಾ ದಿನಾಚಾರಣೆಯ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವಂತೆ ಅವನನ್ನು ಆಹ್ವಾನಿಸಲಾಗಿತ್ತು. ಅಪ್ರೈಸಿಂಗ್‌ (1980) ಬಾಬ್ ಮಾರ್ಲಿಯ ಅಂತಿಮ ಸ್ಟುಡಿಯೊ ಆಲ್ಬಮ್‌ ಹಾಗೂ ಇದು "ರಿಡೆಂಪ್ಶನ್ ಸಾಂಗ್‌" ಮತ್ತು "ಫೋರೆವರ್ ಲವಿಂಗ್ ಜಾಹ್"‍‌‌ಗಳನ್ನೊಳಗೊಂಡ ಅವನ ಅತಿಹೆಚ್ಚು ಧಾರ್ಮಿಕ ಅಂಶಗಳಿರುವ ತಯಾರಿಕೆಗಳಲ್ಲಿ ಒಂದಾಗಿದೆ.[೨೫] ಮಾರ್ಲಿಯ ಮರಣಾನಂತರ 1983ರಲ್ಲಿ ಬಿಡುಗಡೆಯಾದ ಕಾನ್ಫ್ರಂಟೇಶನ್‌ ,ಅವನು ಜೀವಂತವಿದ್ದ ಸಂದರ್ಭದಲ್ಲಿ ಧ್ವನಿಮುದ್ರಿತವಾಗಿ ಬಿಡುಗಡೆಯಾಗಿರದ ವಸ್ತುಗಳನ್ನು ಹೊಂದಿತ್ತು. ಜನಪ್ರಿಯ "ಬಫೆಲೊ ಸೋಲ್ಜರ್‌" ಮತ್ತು ಮುಂಚೆ ಜಮೈಕಾದಲ್ಲಿ ಮಾತ್ರ ಲಭ್ಯವಿದ್ದ ಏಕಗೀತದ ದ್ವನಿಮುದ್ರಿಕೆಗಳ ಹೊಸ ಮಿಶ್ರಣಗಳೂ ಇವುಗಳಲ್ಲಿ ಒಳಗೊಂಡಿವೆ.[೨೬]

ಕೊನೆಯ ವರ್ಷಗಳು[ಬದಲಾಯಿಸಿ]

ಅನಾರೋಗ್ಯ[ಬದಲಾಯಿಸಿ]

1977ರ ಜುಲೈನಲ್ಲಿ ಮಾರ್ಲಿಗೆ ಕ್ಯಾನ್ಸರಿನ ಮೆಲನೋಮದ ಒಂದು ರೂಪ ಅಕ್ರಲ್ ಲೆಂಟಿಜಿನಿಯಸ್ ಮೆಲನೋಮ ಇರುವುದು ಅವನಿಗೆ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಉಂಟಾದ ಗಾಯದ ಪರೀಕ್ಷೆಯಿಂದ ತಿಳಿದುಬಂತು[೨೭]. ಅಪ್ರೈಸಿಂಗ್‌ ಆಲ್ಬಮ್‌ 1980ರ ಮೇಯಲ್ಲಿ ಬಿಡುಗಡೆಯಾದ ನಂತರ ಬ್ಯಾಂಡ್‌ ತನ್ನ ಯುರೋಪಿನ ಪ್ರಮುಖ ಪ್ರವಾಸವನ್ನು ಪೂರೈಸಿತು, ಅಲ್ಲಿ ಮಿಲನ್‌ನಲ್ಲಿ ನೂರಾರು ಸಾವಿರ ಜನರಿಗೆ ಅವರು ಹಿಂದೆಂದೂ ಪ್ರದರ್ಶಿಸದ ಅತಿದೊಡ್ಡ ಸಂಗೀತ ಗೋಷ್ಠಿಯನ್ನು ನಡೆಸಿಕೊಟ್ಟರು. ಪ್ರವಾಸದ ನಂತರ ಮಾರ್ಲಿ ಅಮೇರಿಕಾಕ್ಕೆ ತೆರಳಿದನು, ಅಲ್ಲಿ ಅವನು ಅಪ್ರೈಸಿಂಗ್‌ ಪ್ರವಾಸದ ಭಾಗವಾಗಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಎರಡು ಪ್ರದರ್ಶನಗಳನ್ನು ನಿರ್ವಹಿಸಿದನು. ಅದಾದ ಸ್ವಲ್ಪದರಲ್ಲೇ ಅವನ ಆರೋಗ್ಯ ಕೆಟ್ಟು, ಸಂಪೂರ್ಣವಾಗಿ ಅಸ್ವಸ್ಥನಾದನು ಹಾಗೂ ಕ್ಯಾನ್ಸರ್ ಅವನ ದೇಹದಾದ್ಯಂತ ಹರಡಿಕೊಂಡಿತು. ಉಳಿದ ಪ್ರವಾಸವು ರದ್ದುಗೊಂಡಿತು ಮತ್ತು ಮಾರ್ಲಿಯು ಜೋಸೆಫ್ ಇಸ್ಸೆಲ್ಸ್‌ನ ಬವರಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದನು. ಅಲ್ಲಿ ಅವನು ಕೆಲವು ಆಹಾರ, ಪಾನೀಯ ಮತ್ತು ಇತರ ವಸ್ತುಗಳನ್ನು ದೂರವಿಡುವುದನ್ನು ಆಂಶಿಕವಾಗಿ ಆಧರಿಸಿರುವ ವಿವಾದಾತ್ಮಕ ವಿಧಾನದ ಕ್ಯಾನ್ಸರ್ ಚಿಕಿತ್ಸೆಯನ್ನು ಸ್ವೀಕರಿಸಿದನು. ಎಂಟು ತಿಂಗಳುಗಳ ಕಾಲ ಕ್ಯಾನ್ಸರ್‌ನೊಂದಿಗೆ ಸೆಣಸಾಡಿ ಫಲಕಾರಿಯಾಗದೆ ಅವನು ಜಮೈಕಾದಲ್ಲಿನ ತನ್ನ ಮನೆಗೆ ಹಿಂದಿರುಗಲು ವಿಮಾನ ಹತ್ತಿದನು.[೨೮]

ಮರಣ ಮತ್ತು ಮರಣೋತ್ತರ ಪ್ರಸಿದ್ಧಿ[ಬದಲಾಯಿಸಿ]

ಜರ್ಮನಿಯಿಂದ ಜಮೈಕಾಕ್ಕೆ ಹೋಗುವಾಗ ತಾನು ಸಾಯುತ್ತೇನೆಂಬುದನ್ನು ಅರಿತಿದ್ದ ಮಾರ್ಲಿಯ ಜೈವಿಕ ಕ್ರಿಯೆಗಳು ಬಹಳಷ್ಟು ಹದಗೆಟ್ಟಿತ್ತು. ಮಿಯಾಮಿಯಲ್ಲಿ ವಿಮಾನದಿಂದ ಇಳಿದ ನಂತರ ಅವನನ್ನು ತಕ್ಷಣ ವೈದ್ಯೋಪಚಾರಕ್ಕಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮಿಯಾಮಿಯ ಸೆಡರ್ಸ್ ಆಫ್ ಲೆಬನಾನ್ ಹಾಸ್ಪಿಟಲ್‌ನಲ್ಲಿ 1981ರ ಮೇ 11ರ ಬೆಳಿಗ್ಗೆ ತನ್ನ 36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದನು. ಮೆಲನೋಮವು ಅವನ ಶ್ವಾಸಕೋಶಗಳಿಗೆ ಮತ್ತು ಮಿದುಳಿಗೆ ಹರಡಿದ್ದರಿಂದ ಸಾವು ಸಂಭವಿಸಿತು. ಅವನ ಮಗ ಜಿಗ್ಗಿಗೆ ಹೇಳಿದ ಅಂತಿಮ ಪದಗಳೆಂದರೆ - "ಹಣದಿಂದ ಜೀವನವನ್ನು ಕೊಳ್ಳಲು ಸಾಧ್ಯವಿಲ್ಲ".[೨೯] ಮಾರ್ಲಿಗೆ ಮೇ 21,1981ರಂದು ಜಮೈಕಾದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.ಅದು ಇಥಿಯೋಪಿಯ ಸಾಂಪ್ರದಾಯಿಕತೆ ಮತ್ತು ರಸ್ತಾಫಾರಿ ಪರಂಪರೆಯ ಅಂಶಗಳಿಂದ ಮಿಳಿತವಾಗಿತ್ತು. ಅವನನ್ನು ಅವನ ಹುಟ್ಟೂರಿನ ಹತ್ತಿರದ ಚರ್ಚಿನ ಸಮಾಧಿಯೊಂದರಲ್ಲಿ ಕೆಂಪು ಫೆಂಡರ್ ಸ್ಟ್ರಾಟೊಕಾಸ್ಟರ್‌ನೊಂದಿಗೆ(ಎಲೆಕ್ಟ್ರಿಕ್ ಗಿಟಾರ್)(ಕೆಲವು ಆಧಾರಗಳು ಅದು ಗಿಬ್ಸನ್ ಲೆಸ್ ಪಾಲ್ ಎಂದು ಹೇಳುತ್ತವೆ) ಸಮಾಧಿಮಾಡಲಾಯಿತು.[೩೦] ಮರಣದ ಒಂದು ತಿಂಗಳ ಮೊದಲು ಅವನಿಗೆ ಆರ್ಡರ್ ಆಫ್ ಮೆರಿಟ್(ಜಮೈಕಾದ ಗೌರವ)ನೀಡಿ ಪುರಸ್ಕರಿಸಲಾಯಿತು.[೩೧]

1994ರಲ್ಲಿ ಮಾರ್ಲಿಯನ್ನು ರಾಕ್ ಆಂಡ್ ರೋಲ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಮಾಡಲಾಯಿತು[೩೨] ಹಾಗೂ 1999ರಲ್ಲಿ ಟೈಮ್‌ ನಿಯತಕಾಲಿಕವು ಬಾಬ್ ಮಾರ್ಲಿ & ದ ವೈಲರ್ಸ್‌ನ ಎಕ್ಸೋಡಸ್‌ ಅನ್ನು 20ನೇ ಶತಮಾನದ ಅತ್ಯುತ್ತಮ ಆಲ್ಬಮ್‌ ಎಂದು ಆಯ್ಕೆ ಮಾಡಿತು.[೩೩] ಅವನು 2001ರಲ್ಲಿ ಮರಣೋತ್ತರ ಗ್ರ್ಯಾಮಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಪಡೆದನು ಮತ್ತು ಅವನ ಜೀವನದ ಸುದೀರ್ಘ-ಸಾಕ್ಷ್ಯಚಿತ್ರ ಲೆಬೆಲ್ ಮ್ಯೂ‌ಸಿಕ್ ಗ್ರ್ಯಾಮಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದು ರೀಟಾ, ದ ವೈಲರ್ಸ್ ಮತ್ತು ಮಾರ್ಲಿಯ ಪ್ರೇಯಸಿಯರು ಮತ್ತು ಮಕ್ಕಳ ಕೊಡುಗೆಗಳೊಂದಿಗೆ ಕಥೆಯ ಬಹುಭಾಗವನ್ನು ಅವನ ಸ್ವಂತ ಪದಗಳಲ್ಲಿ ಹೇಳುತ್ತದೆ.[೩೪] 2006ರಲ್ಲಿ ನ್ಯೂಯಾರ್ಕ್ ಸ್ಟೇಟ್, ಬ್ರೂಕ್ಲಿನ್ "ಬಾಬ್ ಮಾರ್ಲಿ ಬೌಲೆವಾರ್ಡ್"ನ ಈಸ್ಟ್ ಫ್ಲಾಟ್‌ಬುಶ್ ವಿಭಾಗದಲ್ಲಿನ ಚರ್ಚಿನ ವಿಶಾಲ ಬೀದಿಯ ಭಾಗವೊಂದರ ಹೆಸರನ್ನು ರೆಮ್ಸೆನ್ ಮಾರ್ಗದಿಂದ ಈಸ್ಟ್ 98ನೇ ಬೀದಿ ಎಂದು ಬದಲಾಯಿಸಿತು.[೩೫]

ಧರ್ಮ[ಬದಲಾಯಿಸಿ]

ಟೆಂಪ್ಲೇಟು:Rastafari

ಬಾಬ್ ಮಾರ್ಲಿಯು ರಸ್ಟಫರಿ ಆಂದೋಳನದ ಸದಸ್ಯನಾಗಿದ್ದು,ರೆಗ್ಗಿಯ ಅಭಿವೃದ್ದಿಗೆ ಅದರ ಸಂಸ್ಕೃತಿಯು ಮುಖ್ಯ ಅಂಶವಾಗಿತ್ತು. ಬಾಬ್ ಮಾರ್ಲಿಯು ರಸ್ಟಫರಿಯ ಸಂಗೀತವನ್ನು ಜಮೈಕಾದ ಸಾಮಾಜಿಕ ವಂಚಿತವಾದ ಪ್ರದೇಶಗಳಿಂದ ಅಂತಾರಾಷ್ಟ್ರೀಯ ಸಂಗೀತರಂಗಕ್ಕೆ ಕೊಂಡೊಯ್ಯುವ ಮ‌ೂಲಕ ಅದರ ಮುಖ್ಯ ಪ್ರತಿಪಾದಕನಾದನು. ಅವನ ಜೀವನಚರಿತ್ರೆಯ ಲೇಖಕರ ಪ್ರಕಾರ, ಅವನು ಟ್ವೆಲ್ವ್ ಟ್ರೈಬ್ಸ್ ಮ್ಯಾನ್ಶನ್‌ನೊಂದಿಗೆ ಸಂಬಂಧ ಹೊಂದಿದ್ದನು. ಅವನು ಫೆಬ್ರವರಿಯಲ್ಲಿ ಜನಿಸಿದರಿಂದ "ಟ್ರೈಬ್ ಆಫ್ ಜೋಸೆಫ್" ಎಂಬ ಪಂಗಡಕ್ಕೆ ಸೇರಿದವನಾಗಿದ್ದನು (ಪ್ರತಿಯೊಂದು ಹನ್ನೆರಡು ವಿಭಾಗಗಳೂ ಬೇರೆ ಬೇರೆ ತಿಂಗಳಲ್ಲಿ ಜನಿಸಿದ ಸದಸ್ಯರಿಂದ ರಚಿಸಲ್ಪಟ್ಟಿರುತ್ತದೆ). ನಿಜವಾದ ರಸ್ಟಾಸ್ ಇಟಾಲ್ ಎಂದು ಕರೆಯುವ ಮಾಂಸರಹಿತ ಆಹಾರಕ್ರಮವನ್ನು ಬಳಸುತ್ತಿದ್ದುದರಿಂದ ಮಾರ್ಲಿಯು ಸಸ್ಯಾಹಾರಿಯಾಗಿದ್ದನು.[೩೬] ಇದನ್ನು ಅವನು ಆಲ್ಬಮ್‌ನ ಪ್ರಮುಖ ಅಡಿಟಿಪ್ಪಣಿಗಳಲ್ಲಿ, ಜಾಕೋಬ್‌ ಅವನ ಮಗ ಜೋಸೆಫ್‌ಗೆ ಆಶೀರ್ವಾದ ಮಾಡುವುದು ಸೇರಿದಜೆನೆಸಿಸ್ ‌ನಿಂದ ಪಡೆದ ಭಾಗವನ್ನು ಉಲ್ಲೇಖಿಸುತ್ತಾ, ಸೂಚಿಸಿದ್ದಾನೆ. ಮಾರ್ಲಿಯು 1980ರ ನವೆಂಬರ್ 4ರಲ್ಲಿ ಜಮೈಕಾದ ಕಿಂಗ್‌ಸ್ಟನ್‌ನಲ್ಲಿನ ಆರ್ಥೊಡೊಕ್ಸ್ ಕ್ರಿಶ್ಚಿಯನ್ ಚರ್ಚ್‌ನ ಆರ್ಚ್‌ಬಿಷಪ್‌ನಿಂದ ದೀಕ್ಷಾಸ್ನಾನ ಮಾಡಿ ಕ್ರೈಸ್ತಧರ್ಮವನ್ನು ಸ್ವೀಕರಿಸಿದನು.[೩೭][೩೮]

ಪತ್ನಿ ಮತ್ತು ಮಕ್ಕಳು[ಬದಲಾಯಿಸಿ]

ಬಾಬ್ ಮಾರ್ಲಿಗೆ ಅನೇಕ ಮಕ್ಕಳಿದ್ದರು: ಅವನ ಪತ್ನಿ ರೀಟಾಳೊಂದಿಗೆ ಮ‌ೂರು, ರೀಟಾಳ ಹಿಂದಿನ ಸಂಬಂಧಗಳಿಂದ ದತ್ತುಪಡೆದ ಎರಡು ಮತ್ತು ಬೇರೆ ಬೇರೆ ಮಹಿಳೆಯರೊಂದಿಗೆ ಇತರ ಅನೇಕ. ಬಾಬ್ ಮಾರ್ಲಿಯ ಅಧಿಕೃತ ವೆಬ್‌ಸೈಟ್ ಅವನಿಗೆ ಹನ್ನೊಂದು ಮಕ್ಕಳಿರುವುದನ್ನು ಸೂಚಿಸುತ್ತದೆ.

ಅಧಿಕೃತ ಸೈಟ್‌ನಲ್ಲಿ ಪಟ್ಟಿಮಾಡಲ್ಪಟ್ಟವುಗಳೆಂದರೆ:

 1. ಶರೋನ್ - 1964ರ ನವೆಂಬರ್ 23ರಲ್ಲಿ ರೀಟಾಳಿಗೆ ಅವಳ ಹಿಂದಿನ ಸಂಬಂಧದಲ್ಲಿ ಜನನ.
 2. ಸೆಡೆಲ್ಲಾ - 1967ರ ಆಗಸ್ಟ್ 23ರಲ್ಲಿ ರೀಟಾಳಿಗೆ ಜನನ.
 3. ಡೇವಿಡ್ "ಜಿಗ್ಗಿ" - 1968ರ ಅಕ್ಟೋಬರ್ 17ರಲ್ಲಿ ರೀಟಾಳಿಗೆ ಜನನ.
 4. ಸ್ಟೆಫೆನ್ - 1972ರ ಎಪ್ರಿಲ್ 20ರಲ್ಲಿ ರೀಟಾಳಿಗೆ ಜನನ.
 5. ರೋಬರ್ಟ್‌ "ರೋಬಿ" - 1972ರ ಮೇ 16ರಂದು ಪ್ಯಾಟ್ ವಿಲಿಯಮ್ಸ್‌ಳಿಗೆ ಜನನ.
 6. ರೋಹನ್- 1972ರ ಮೇ 19ರಲ್ಲಿ ಜ್ಯಾನೆಟ್ ಹಂಟ್‌ಳಿಗೆ ಜನನ.
 7. ಕರೆನ್ - 1973ರಲ್ಲಿ ಜ್ಯಾನೆಟ್ ಬೌವೆನ್‌ಳಿಗೆ ಜನನ.
 8. ಸ್ಟೆಫಾನೈ - 1974ರ ಆಗಸ್ಟ್ 17ರಲ್ಲಿ ಜನಿಸಿದವಳು; ಸೆಡೆಲ್ಲಾ ಬೂಕರ್‌ ಪ್ರಕಾರ, ಸ್ಟೆಫಾನೈ ರೀಟಾ ಮತ್ತು ಅವಳೊಂದಿಗೆ ಸಂಬಂಧ ಹೊಂದಿದ್ದ ಇಟಲ್ ಎಂಬುವವನ ಮಗಳು; ಆದರೂ ಆಕೆಯನ್ನು ಬಾಬ್‌‌ನ ಮಗಳೆಂದೇ ಪರಿಗಣಿಸಲಾಗಿದೆ.
 9. ಜೂಲಿಯನ್ - 1975ರ ಜೂನ್‌ 4ರಲ್ಲಿ ಲ್ಯೂಸಿ ಪೌಂಡರ್‌ಳಿಗೆ ಜನನ.
 10. ಕೈ-ಮಾನಿ - 1976ರ ಫೆಬ್ರವರಿ 26ರಲ್ಲಿ ಅನಿತಾ ಬೆಲ್ನಾವಿಸ್‌ಳಿಗೆ ಜನನ.
 11. ಡ್ಯಾಮಿಯನ್ - 1978ರ ಜುಲೈ 21ರಲ್ಲಿ ಕಿಂಡಿ ಬ್ರೇಕ್ಸ್‌ಪಿಯರ್‌ಳಿಗೆ ಜನನ.

ಮಕೇಡ 1981ರ ಮೇ 30ರಲ್ಲಿ ಯ್ವೆಟ್ಟೆ ಕ್ರಿಕ್ಟನ್‌ಳಿಗೆ ಮಾರ್ಲಿಯ ಮರಣದ ನಂತರ ಜನಿಸಿದಳು.[೩೯] ಅವಳನ್ನೂ ಮಾರ್ಲಿಯ ಮಗಳೆಂದೇ ಪರಿಗಣಿಸಲಾಗುತ್ತದೆ, ಆದರೆ ಬಾಬ್ ಮಾರ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೆಂದು ಪಟ್ಟಿ ಮಾಡಲಾಗಿಲ್ಲ.

ಅನೇಕ ವೆಬ್‌ಸೈಟ್‌ಗಳು (ಉದಾ. "Bob Marley's Children". Chelsea's Entertainment Reviews.  Text "accessdate 2009-12-28" ignored (help)) 1963ರ ಮೇ 22ರಲ್ಲಿ ಚೆರಿಲ್ ಮುರ್ರೆಗೆ ಜನಿಸಿದ ಇಮಾನಿ ಕ್ಯಾರೋಲ್‌ಳನ್ನೂ ಮಗಳೆಂದು ಪಟ್ಟಿಮಾಡುತ್ತವೆ; ಆದರೆ ಅವಳು ಬಾಬ್ ಮಾರ್ಲಿಯ ಅಧಿಕೃತ ವೆಬ್‌ಸೈಟ್‌ನಲ್ಲಿ [೩೯] ನಲ್ಲಿ ಕಂಡುಬರುವುದಿಲ್ಲ.

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಪ್ರವಾಸಗಳು[ಬದಲಾಯಿಸಿ]

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ಆಲ್ಟ್=ಕಾಲುಹಾದಿಯಲ್ಲಿ ಬಾಬ್ ಮಾರ್ಲಿ ಎಂದು ಕೆತ್ತನೆಮಾಡಿರುವ ಐದು ಕೊನೆಯಿರುವ ಗುಲಾಬಿ ಬಣ್ಣದ ನಕ್ಷತ್ರ

ಚಲನಚಿತ್ರ ಅಳವಡಿಕೆಗಳು[ಬದಲಾಯಿಸಿ]

2008ರ ಫೆಬ್ರವರಿಯಲ್ಲಿ ನಿರ್ದೇಶಕ ಮಾರ್ಟಿನ್ ಸ್ಕೋರ್ಸೆಸೆ, ಮಾರ್ಲಿಯ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸಬೇಕೆಂಬ ತನ್ನ ಆಶಯವನ್ನು ವ್ಯಕ್ತಪಡಿಸಿದನು. ಆ ಚಿತ್ರವನ್ನು 2010ರ ಫೆಬ್ರವರಿ 6ರಂದು ಮಾರ್ಲಿಯ 65ನೇ ಜನ್ಮದಿನದಂದು ಬಿಡುಗಡೆ ಮಾಡಲು ಉದ್ದೇಶಿಲಾಗಿತ್ತು.[೪೩] ಆದರೆ ಇತ್ತೀಚೆಗೆ ಸ್ಕೋರ್ಸೆಸೆಯು ಕಾರ್ಯಯೋಜನೆಯ ಸಮಸ್ಯೆಗಳಿಂದಾಗಿ ಅದನ್ನು ಕೈಬಿಟ್ಟನು. ಅವನ ಬದಲಿಗೆ ಆ ಕಾರ್ಯವನ್ನು ಜೊನಾಥನ್ ಡೆಮ್ಮೆ ವಹಿಸಿಕೊಂಡನು.[೪೪]

2008ರ ಮಾರ್ಚ್‍‌ನಲ್ಲಿ ದ ವೈನ್‌ಸ್ಟೈನ್ ಕಂಪೆನಿಯು ರೀಟಾ ಮಾರ್ಲಿನೊ ವುಮನ್ ನೊ ಕ್ರೈ: ಮೈ ಲೈಫ್ ವಿತ್ ಬಾಬ್ ಮಾರ್ಲೆ ಪುಸ್ತಕದ ಆಧಾರದ ಮೇಲೆ ಬಾಬ್ ಮಾರ್ಲೆಯ ಜೀವನ ಚರಿತ್ರೆಯ ಚಿತ್ರವನ್ನು ತಯಾರಿಸುವ ಬಗೆಗಿನ ಯೋಜನೆಗಳನ್ನು ಪ್ರಕಟಿಸಿತು. ರ‌್ಯೂಡಿ ಲ್ಯಾಂಗ್ಲೈಸ್‌ನು ಲಿಜ್ಜೈ ಬೋರ್ಡೆನ್‌ನಿಂದ ಕಥಾವಸ್ತುವನ್ನು ರಚಿಸುತ್ತಾನೆ ಮತ್ತು ರೀಟಾ ಮಾರ್ಲಿಯು ನಿರ್ವಾಹಕ ನಿರ್ಮಾಪಕಳಾಗಿರುತ್ತಾಳೆ.[೪೫]

ಧ್ವನಿ ಮಾದರಿಗಳು[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. "2007 Pop Conference Bios/Abstracts". Experience Music Project and Science Fiction Museum and Hall of Fame. 2007. 
 2. "Bob Marley". Encyclopædia Britannica. 2006. 
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Moskowitz 2007, p. 1
 7. Moskowitz 2007, p. 9
 8. Moskowitz 2007, p. 2
 9. Moskowitz 2007, p. 4
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. "Religion and Ethics: Rastafari - Bob Marley". BBC. 
 12. Middleton 2000, p. 181-198
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. "The Beverley Label and Leslie Kong: Music Business". bobmarley.com. 
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. White, Timothy (June 25, 1981). "Bob Marley: 1945-1981". Rolling Stone. Jann Wenner. 
 17. ೧೭.೦ ೧೭.೧ ೧೭.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. ವಾಕರ್, ಜೆಫ್ (1980) - ಜ್ಯಾಪ್ ಪೌವ್‌ನ LP ರೆಗ್ಗಿ ನಿಯಮ ಗಳ ವ್ಯಾಪ್ತಿಯಲ್ಲಿರುವವರು. ಲಾಸ್ ಏಂಜಲೀಸ್: ರೈನೊ ರೆಕಾರ್ಡ್ಸ್
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. "The Ethiopian Orthodox Church & Bob Marley's Baptism And The Church". Jamaicans.com. 
 38. "Bob Marley's Baptism in Ethiopian Orthodox Church". Rastafarispeaks.com. 
 39. ೩೯.೦ ೩೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. "The Immortals: The First Fifty". Rolling Stone. Jann Wenner. 
 41. "Who is the greatest lyricist of all time". BBC. May 23, 2001. 
 42. "London honours legendary reggae artist Bob Marley with heritage plaque". AfricaUnite.org. 
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಫಾರ್ಲೆ, ಕ್ರಿಸ್ಟೋಫರ್ (2007). ಬಿಫೋರ್ ಲೆಜೆಂಡ್‌: ದ ರೈಸ್ ಆಫ್ ಬಾಬ್ ಮಾರ್ಲಿ , ಅಮಿಸ್ಟಡ್ ಪ್ರೆಸ್ ISBN 0-06-053992-5
 • ಗೋಲ್ಡ್‌ಮ್ಯಾನ್, ವಿವೈನ್ (2006). ದ ಬುಕ್ ಆಫ್ ಎಕ್ಸೋಡಸ್‌: ದ ಮೇಕಿಂಗ್ ಆಂಡ್ ಮೀನಿಂಗ್ ಆಫ್ ಬಾಬ್ ಮಾರ್ಲಿ ಆಂಡ್ ದ ವೈಲರ್ಸ್‌' ಆಲ್ಬಮ್‌ ಆಫ್ ದ ಸೆಂಚುರಿ , ಆರಮ್ ಪ್ರೆಸ್ ISBN 1-84513-210-6
 • ಹೆನ್ಕೆ, ಜೇಮ್ಸ್ (2006). ಮಾರ್ಲಿ ಲೆಜೆಂಡ್‌: ಆನ್ ಇಲ್ಲಸ್ಟ್ರೇಟೆಡ್ ಲೈಫ್ ಆಫ್ ಬಾಬ್ ಮಾರ್ಲಿ , ಸೈಮನ್ & ಸ್ಕಸ್ಟರ್ ಲಿಮಿಟೆಡ್ ISBN 0-7432-8551-4
 • ಮಾರ್ಲಿ, ರೀಟಾ; ಜೋನ್ಸ್, ಹೆಟ್ಟಿ (2004) ನೊ ವುಮನ್ ನೊ ಕ್ರೈ: ಮೈ ಲೈಫ್ ವಿತ್ ಬಾಬ್ ಮಾರ್ಲಿ ಹೈಪರಿಯಾನ್ ಬುಕ್ಸ್ ISBN 0-7868-8755-9
 • ಮಸೌರಿ, ಜಾನ್ (2007) ವೈಲಿಂಗ್ ಬ್ಲೂಸ್: ದ ಸ್ಟೋರಿ ಆಫ್ ಬಾಬ್ ಮಾರ್ಲಿಸ್ "ವೈಲರ್ಸ್" ವೈಸ್ ಪಬ್ಲಿಕೇಶನ್ಸ್ ISBN 1-84609-689-8
 • Moskowitz, David (2007), The Words and Music of Bob Marley, Westport, Connecticut, United States: Greenwood Publishing Group, ISBN 0275989356 
 • ವೈಟ್, ಟಿಮೋತಿ (2006). ಕ್ಯಾಚ್ ಎ ಫೈರ್‌: ದ ಲೈಫ್ ಆಫ್ ಬಾಬ್ ಮಾರ್ಲಿ ಔಲ್ ಬುಕ್ಸ್ ISBN 0-8050-8086-4
 • Middleton, J. Richard (2000), Religion, culture, and tradition in the Caribbean: Identity and Subversion in Babylon: Strategies for "Resisting Against the System" in music of Bob Marley and the Wailers, Palgrave Macmillan, ISBN 031223242X 

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಬಾಬ್ ಮಾರ್ಲಿ]]
 1. REDIRECT Template:Bob Marley and the Wailers