ಬಸವಲಿಂಗ ಪಟ್ಟದೇವರು
ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು , ಹೊದ್ದುಕೊಂಡಿರುವಂಥ ಮಠ. ಇವನಾರರವ, ಇವನಾರವ? ಎನ್ನದೆ ಎಲ್ಲರನ್ನು ನಮ್ಮವರೆನ್ನುವ ಮಠ. ಬಡವರಿಗೆ, ದಿನರಿಗೆ,ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ .ಎಂ.ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು.
ಕನ್ನಡವು ಗಡಿನಾಡಾದ ಹೈದ್ರಾಬಾದ ಕನ್ರಾಟಕದ ಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊ೦ಡು ಬ೦ದವರು ಡಾ ಚನ್ನಬಸವ ಪಟ್ಟದೇವರು,ಬಸವಣ್ಣನವರ ನುಡಿಯಲ್ಲಿ ನಡೆದವರು ಪೂಜ್ಯರು,ಅದರ೦ತೆ ಅವರ ದಾರಿಯೆಲ್ಲೆ ಸಾಗಿಬ೦ದವರು ಡಾ ಬಸವಲಿ೦ಗ ಪಟ್ಟದೇವರು ಅದರ೦ತೆ ಗುರುಬಸವ ಪಟ್ಟದೇವರು ಅದಕ್ಕಾಗಿಯೇ ಗುರು ಮುಟ್ಟಿ ಗುರುವಾದ೦ತೆ ಎ೦ದು ಕರೆದರು,ಇವರ ಗುರು-ಶಿಹ್ಸ್ಯ ಪರ೦ಪರೆಯನ್ನು ನೊಡುತ್ತಿದ್ದರೆ ಸಾಕ್ರೆತಟೀಸ್,ಅರಿಸ್ಟಾಟಲ್,ಪ್ಲೇಟೋ ನೆನಪಾಗುತ್ತಾರೆ.ಇವರ ಬಗ್ಗೆ 'ಸಚಿನ್.ಎಸ್.ಕಾರಬಾರಿ'ರವರು ಬರೆದ ಭಾಲ್ಕಿಯ ಶ್ರೀಗಳು ಹೋತ್ತಿಗೆಯಲ್ಲಿ ಮನಗಾಣಬಹುದು.
ಪರಮ ಪೂಜ್ಯ ಡಾ: ಚನ್ನಬಸವ ಪಟ್ಟದೇವರು
[ಬದಲಾಯಿಸಿ]ನಡೆದಾಡುವ ದೇವರು, ನಿಜಾಮನ ಕಾಲದಲ್ಲಿ 1936 ರಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡ ಪ್ರಸಾರ ಮಾಡಿದವರು. ಉರ್ದು ಬೋರ್ಡು ಹಾಕಿ, ಕನ್ನಡ ಕಲಿಸಿದವರು. ‘ಕನ್ನಡದ ಮಠ ‘ ಕನ್ನಡದ ಪಟ್ಟದೇವರೆಂದೇ ಖ್ಯಾತನಾಮ ಪಡೆದವರು.ತಮ್ಮ ಆಯುಷ್ಯದುದ್ದಕ್ಕೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಬೆಳೆಸಿದವರು. ಸಾವಿರ ಸಾವಿರ ಸಂಖ್ಯೆಯ ಕುಟುಂಬಗಳು ಅಪ್ಪಗಳನ್ನು ನೆನೆಸುತ್ತಾ ಶಾಂತಿವರ್ಧಕ ಸಂಸ್ಥೆಯಲ್ಲಿ ಆಶ್ರಯ ಪಡೆದಿರುತ್ತಾರೆ. ಬಸವಕಲ್ಯಾಣದ ನೂತನ ಅನುಭವ ಮಂಟಪ ಸ್ಥಾಪಕರೂ ಆಗಿದ್ದಾರೆ. ಕರ್ನಾಟಕದ ಯಾವ ಸರ್ಕಾರ , ಯಾವ ಮಠಗಳು ಬಸವಕಲ್ಯಾಣದ ಕಡೆ ಮುಖ ಮಾಡದಿದ್ದಾಗ , ಭಾಲ್ಕಿ ಮಠದಿಂದ ಪಾದಯಾತ್ರೆ ಮೂಲಕ ಬಸವಕಲ್ಯಾಣಕ್ಕೆ ಹೋಗಿ ಅನುಭವ ಮಂಟಪ ಸ್ಥಾಪಿಸಿ ನಾಡಿನ ಗಮನ ಸೆಳೆದವರು. ಆ ಕಾಲದಲ್ಲಿ ದಲಿತರಿಗೆ ಲಿಂಗದೀಕ್ಷೆ ನೀಡಿ , ಮಠದಲ್ಲಿ ಕರೆಯಿಸಿ ಬಾವಿ ಮುಟ್ಟಿಸಿದ್ದು ಇಂಥ ಹತ್ತಾರು ಕಾರ್ಯಮಾಡಿದವರು . ಎಲ್ಲಕ್ಕಿಂತ ಹೆಚ್ಚಾಗಿ ಶ್ರೀ ಮಠಕ್ಕೆ ಸಮರ್ಥ ಉತ್ತರಾಧಿಕಾರಿಯಾಗಿ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರನ್ನು ಗುರುತಿಸಿ ನಮಗೆ ಬಿಟ್ಟು ಹೋದದ್ದು ದೊಡ್ಡ ಅಪ್ಪಗಳ ಬಹುದೊಡ್ಡ ಕೊಡುಗೆ.
"ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದೇವರು"
[ಬದಲಾಯಿಸಿ]ಮೃದು ಸ್ವಭಾವದವರು , ದಯೆ ಪ್ರೀತಿಯುಳ್ಳವರು. ಕಷ್ಟ ಕಾರ್ಪಣ್ಣ್ಯದಲ್ಲಿದ್ದವರನ್ನು ನೋಡಿ ಕರಗುವವರು , ಅವರ ಹೃದಯ ತಾಯಿ ಹೃದಯವಾಗಿದೆ. ಅನೇಕ ನೊಂದ ಬಡ ವಿದ್ಯಾರ್ಥಿಗಳ ಬಳಿಗೆ ಬೆಳಕಾಗಿದ್ದಾರೆ. ಅವರ ಸರ್ವಸ್ವವೇ ಆಗಿದ್ದಾರೆ. ಇತರರ ದುಃಖ ನೋಡಿದ ಕೂಡಲೇ ತಮ್ಮ ಕಣ್ಣಲ್ಲೆ ನೀರುಬರುವುದು. ಅಷ್ಟೊಂದು ಸರಳ ಸಹಜ ವ್ಯಕ್ತಿತ್ವವುಳ್ಳ ಪೂಜ್ಯರು ರಾತ್ರಿಯನ್ನದೇ ಹಗಲು ಮಾಡಿ ದುಡಿಯುತ್ತಿರುವರು. ಪೂಜೆಯೇ ಕಾಯಕ ಮಾಡಿಕೊಂಡವರಲ್ಲ. ಕಾಯಕವೇ ಲಿಂಗಪೂಜೆ ಎಂದು ಶ್ರಮಪಟ್ಟವರು . ಕಷ್ಟಕಾರ್ಪಣ್ಯವನ್ನು ಮೆಟ್ಟಿ ನಿಂತು ಭಾಲ್ಕಿಮಠವನ್ನು ಸರ್ವತೋಮುಖ ಅಭಿವ್ರದ್ಧಿಪಡಿಸಿದ್ದಾರೆ . ಜನತೆಯತ್ತ ಮಠ ತೆಗೆದುಕೊಂಡು ಹೋಗಿದ್ದಾರೆ. ಜನರ ಮಠ ಸಮಾಜದ ಮಠವಾಗಿಸಿದ್ದಾರೆ. ಸ್ವಾವಲಂಬಿಯಾಗಿ ಸ್ವತಂತ್ರ ಮಠವಾಗಿಸಿದ್ದಾರೆ, ಹತ್ತು ಹಲವು ವಿಧಾಯಕ ಕಾರ್ಯಗಳನ್ನು ಮಾಡಿದ್ದಾರೆ.
ಗುರುಬಸವ ಪಟ್ಟದೇವರು; ಕ್ರಿಯಾಶಿಲ ಪೂಜ್ಯರಾದ ಗುರುಬಸವ ಪಟ್ಟದೇವರು ಪರಿಸರ ಸ೦ರಕ್ಱ್ಱಣೆ,ತ್ರಿವಿಧ ದಾಸೋಹವನ್ನು ನಡೆಸಿಕೋ೦ಡು ಬರುತ್ತಿದ್ದಾರೆ.
ಬಸವಲಿಂಗ ಪಟ್ಟದೇವರು ಶೈಕ್ಷಣಿಕ ಸೇವೆ;
[ಬದಲಾಯಿಸಿ]ನಿನ್ನೊಡವೆ ಎಂಬುದು ಜ್ಞಾನರತ್ನ , ಜ್ಞಾನವೇ ಶಕ್ತಿ ಎಂಬ ವಾಕ್ಯದಂತೆ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದೇವರು ಶಿಕ್ಷಣ ರಂಗದಲ್ಲಿ ಕ್ರಾಂತಿಯನ್ನೆ ಮಾಡಿದ್ದಾರೆ. ಅಲ್ಪ ಸಮಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಬ್ರಹತ್ತಾಗಿ ಬೆಳೆಸಿದ್ದು ಬಸವಲಿಂಗ ಪಟ್ಟದ್ದೇವರ ಶ್ರಮ ಪ್ರಯತ್ನದ ಫಲ ಎಂಬುದು ನಾವು ಅರ್ಥ ಮಾಡಿಕೊಳ್ಳಬೇಕು. ಬೀದರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಶಿಕ್ಷಣ ಸಂಸ್ಥೆಗಳು ವ್ಯಾಪಿಸಿವೆ. ಅಷ್ಟೇ ಅಲ್ಲ ಗುಲ್ಬರ್ಗಾ ಜಿಲ್ಲೆಯಲ್ಲಿಯೂ ಪ್ರವೇಶ ಮಾಡಿವೆ ಎಂದು ಹೇಳಲು ಸಂತಸವಾಗುತ್ತಿದೆ. ತಮ್ಮ ಗುರುಗುಳು ಮಾಡಿದ ಸಂಸ್ಥೆ ತಮ್ಮ ಕಡೆ ಬರಲಿಲ್ಲ ಎಂದು ನಿರಾಶರಗದೇ ಮತ್ತೆ ಶೂನ್ಯದಿಂದ ವಿಸ್ತರಿಸಿದ್ದಾರೆ. 1992 ರಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ್ನು ಸ್ಥಾಪಿಸಿ ನಲವತ್ತು ಮಕ್ಕಳಿಂದ ಪ್ರಾಂಭವಾದ ಸಂಸ್ಥೆ ಇಂದಿಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಾರೆ. ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಿಬ್ಬಂದಿಯವರು ಕಾರ್ಯ ಮಾಡುತ್ತಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಪೂಜ್ಯರ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಜೊತೆ ಮಕ್ಕಳಲ್ಲಿ ಸಂಸ್ಕಾರ ಸಂಸ್ಕ್ರತಿ ಬೆಳೆಸುವುದು ಈ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಪ್ರಯತ್ನ ಪರಿಶ್ರಮ ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರು ನಮ್ಮ ಕಣ್ಣ ಮುಂದೆ ಇದ್ದಾರೆ. ಪೂಜ್ಯರು ಸ್ಥಾಪಿಸಿದ ಸಂಸ್ಥೆ ಈ ಕೆಳಗಿನಂತಿವೆ.
ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ
[ಬದಲಾಯಿಸಿ]ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರ ಕನಸಿನ ಕೂಸು ಇಂದು ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಶಾಲೆ ಎನಿಸಿಕೊಂಡಿದೆ. ರಾಜ್ಯಮಟ್ಟದ ರಾಂಕುಗಳು ಪಡೆದು ಮುಖ್ಯಮಂತ್ರಿ, ಶಿಕ್ಷಣ ಮಂತ್ರಿಗಳಿಂದ ಪ್ರಶಸ್ತಿ ಪದಕ ಪಡೆದುಕೊಂಡಿದೆ ಎಲ್.ಕೆ.ಜಿ. ಯಿಂದ ಪಿ.ಯು.ಸಿ. ವರೆಗೆ ಶಿಕ್ಷಣ ನೀಡಲಾಗುತ್ತದೆ. ಕನ್ನಡ ಮಾಧ್ಯಮದಲ್ಲಿದ್ದರೂ ಇಂಗ್ಲಿಷ್ ಕಲಿಯುವಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತು ಮಾಡಿ ತೋರಿಸಿದೆ. ಇಲ್ಲಿ ಪಾಸಾದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಶ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಇತರೆ ಸಂಸ್ಥೆಯಲ್ಲಿ ಪ್ರವೇಶ ಪಡೆದು ಅಲ್ಲಿ ಗುರುಕುಲ ವಿದ್ಯಾರ್ಥಿಗಳೇ ಪ್ರಥಮ ರಾಂಕ್ ಸ್ಥಾನದಲ್ಲಿದ್ದರೆಂದು ಹೇಳಲು ಹೆಮ್ಮೆ ಅನಿಸುತ್ತದೆ. ಸಂಸ್ಕಾರ ಸಹಿತವಾದ ಈ ಸಂಸ್ಥೆ ಬೀದರ್ ಜಿಲ್ಲೆಗೆ ಹೆಮ್ಮೆ ಎನಿಸಿದೆ. ಇಂಥ ಆದರ್ಶ ಸಂಸ್ಕಾರಯುವಾದ ವಸತಿ ಶಾಲೆ ಮಾಡಿದ ಬಸವಲಿಂಗ ಪಟ್ಟದ್ದೆವರು ನಮ್ಮೆಲ್ಲರ ಅಪ್ಪಗಳು.
ಹಾನಗಲ ಕುಮಾರೇಶ್ವರ ಉಚಿತ ಪ್ರಸಾದ ನಿಲಯ
[ಬದಲಾಯಿಸಿ]ಬಡವರಿಗೆ ಅನಾಥರಿಗೆ ಆಶ್ರಯ ನೀಡುವ ಪ್ರಸಾದ ನಿಲಯ, ಇಲ್ಲಿರುವ ಮಕ್ಕಳು ಪೂಜ್ಯರ ದೃಷ್ಟಿಯಲ್ಲಿ ನಿಜವಾದ ಜಂಗಮರು. ಎಡದ ಕೈಯಲ್ಲಿ ಲಿಂಗಪೂಜೆ ಬಲದ ಕೈಯಲ್ಲಿ ಜಂಗಮ ಸೇವೆ ಅಪ್ಪ ಬಸವಗುರುವಿನ ವಾಣಿ ಪ್ರತ್ಯಕ್ಷ್ಯ ಆಚರಣೆಯಲ್ಲಿ ಕಾಣುತ್ತೇವೆ. ಎಲ್ಲಾ ಜಾತಿ, ಮತ-ಪಂಥ ಭೇದವಿಲ್ಲದೆ ಎಲ್ಲರಿಗೂ ಪ್ರವೇಶವಿದೆ. ಬಸವ ಸಂಸ್ಕಾರದೊಂದಿಗೆ ಇಲ್ಲಿನ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಥಾನದಲ್ಲಿದ್ದಾರೆ. ಕೇವಲ ಇಪ್ಪತ್ತೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಪ್ರಸಾದ ನಿಲಯ ಇಂದು ನಾಲ್ಕುನೂರು ಮಕ್ಕಳಿಂದ ಪ್ರಸಾದ ನಿಲಯ ವಿಸ್ತರಿಸಿದ್ದು , ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ಕಲ್ಯಾಣ ಕರ್ನಾಟಕದಲ್ಲಿಯೇ ಇದೊಂದು ಅಪರೂಪ ಏಕೈಕ ಪ್ರಸಾದ ನಿಲಯ ಎಂದು ಸಂತಸದಿಂದ ಹೇಳಬೇಕಾಗುತ್ತದೆ.
ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯ, ಬೀದರ
[ಬದಲಾಯಿಸಿ]ಬಡ ಮತ್ತು ಪ್ರತಿಭಾವಂತರಿಗೆ ಬೀದರ ನಗರದಲ್ಲಿ ಪ್ರಪ್ರಥಮವಾಗಿ ಪ್ರಾರಂಭಿಸಿದ್ದು, ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ಇಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್, ಬಿ.ಎಡ್ , ಡಿ.ಎಡ್, ಮುಂತಾದ ಉನ್ನತ ಶಿಕ್ಷಣ ಪಡೆಯುವರಿಗೆ ಈ ಪ್ರಸಾದ ನಿಲಯ ಆಶ್ರಯ ತಾಣವಾಗಿದೆ. ಇಲ್ಲಿ ಐವತ್ತು ವಿದ್ಯಾರ್ಥಿಗಳು ಇರುತ್ತಾರೆ. ನಗರದ ಮಧ್ಯಭಾಗದಲ್ಲಿ ಭಕ್ತರ ಸಹಕಾರದಿಂದ ಸಂಗ್ರಹಿತ ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವತಂತ್ರ ಕಟ್ಟಡ ಖರೀದಿಸಲಾಗಿದೆ. ಮುಂದೆ ಒಂದು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಪೂಜ್ಯರ ಕನಸು ನನಸಾಗಲಿ ಎಂದು ನಾವು ಪ್ರಾರ್ಥಿಸೋಣ. ಆಂಧ್ರದಲ್ಲಿ ಕನ್ನಡ ಶಾಲೆಗಳು: ಕನ್ನಡಿಗರು ಬಹುಸಂಖ್ಯೆಯಲ್ಲಿ ಇದ್ದರೂ ಆಂಧ್ರಕ್ಕೆ ಸೇರಿದ ಮೇದಕ ಜಿಲ್ಲೆಯ ನಾರಾಯಖೇಡ ತಾಲೂಕಿನಲ್ಲಿ ಕಾರಾಮುಂಗಿ ಮತ್ತು ಮೋರ್ಗಿಗಳಲ್ಲಿ ಕನ್ನಡ ಶಾಲೆಗಳು ಆರಂಭಿಸಿದ್ದು ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ನಾಲ್ಕು ನೂರು ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಾರೆ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇದೆ. ( ಅನುಭವ ಮಂಟಪ ಗುರುಕುಲ ಪ್ರಾಥಮಿಕ ಶಾಲೆ ಕಾರಾಮುಂಗಿ ಮತ್ತು ಬಸವ ಗುರುಕುಲ್ ಪ್ರಾಥಮಿಕ ಶಾಲೆ ಮೋರ್ಗಿ).
ದಾಸೋಹ ಸೇವೆ :
[ಬದಲಾಯಿಸಿ]“ ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯಾ” ಎಂಬ ಬಸವ ವಾಣಿಯಂತೆ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ದಾಸೋಹವನ್ನು ವಿಸ್ತರಿಸಿದ್ದಾರೆ. ಮಠಕ್ಕೆ ಯಾರೆ ಬರಲಿ ನಿರಂತರ ದಾಸೋಹ ನಡೆಯುತ್ತದೆ. ಮಠದ ಒಲೆಯಲ್ಲಿ ಬೆಂಕಿ ನಂದುವುದೇ ಇಲ್ಲ . ಸದಾಕಾಲ ನಿರಂತರವಾಗಿ ದಾಸೋಹ ಇದ್ದೇ ಇರುತ್ತದೆ. ಪ್ರತಿ ತಿಂಗಳ ನಡೆಯುವ “ ಶರಣ ಸಂಗಮ “ ಸಮಾರಂಭ ಮುಗಿದ ಬಳಿಕ ಸಾವಿರ ಸಾವಿರ ಸಂಖ್ಯೆಯಲ್ಲಿ ದಾಸೋಹ ನಡೆಯುತ್ತದೆ. ಪೂಜ್ಯರ ಸ್ಮರಣೋತ್ಸವ , ಪೂಜ್ಯರ ಬಳಿಕ ಸಾವಿರ ಸಾವಿರ ಸಂಖ್ಯೆಯಲ್ಲಿ ದಾಸೋಹ ನಡೆಯುತ್ತದೆ. ಪೂಜ್ಯರ ಸ್ಮರಣೋತ್ಸವ , ಪೂಜ್ಯರ ಜಯಂತಿಯಲ್ಲಿ ಲಕ್ಷ ಲಕ್ಷ ಜನ ದಾಸೋಹ ನಡೆಯುತ್ತದೆ. ಅನ್ನದೇವರ ಮುಂದೆ ಇನ್ನೂ ದೇವರುಂಟೆ? ಎಂಬ ಶರಣವಾಣಿಯಂತೆ ದಾಸೋಹ ಎಂದರೇನು? ಎಂಬುದು ಬಸವಲಿಂಗ ಪಟ್ಟದ್ದೇವರು ಪ್ರಯೋಗಿಕವಾಗಿ ನಿಜ ಆಚರಣೆಯಲ್ಲಿ ತಂದಿದ್ದಾರೆ. ಅನಾಥ ಮಕ್ಕಳ ಕೇಂದ್ರ : ಅನೈತಿಕದಿಂದಲೋ ಮತ್ತಾವ ಕರಂದಿಂದಲೋ ಹೆರಿಗೆಯಾದ ಕೂಡಲೇ ತಿಪ್ಪೆಯಲ್ಲಿ ಬೇಲಿಯಲ್ಲಿ , ಚರಂಡಿಯಲ್ಲಿ ಬಿಸಾಡಿದ ಮಕ್ಕಳನ್ನು ಎತ್ತಿಕೊಂಡು ಬಂದು ಸಾಕುತ್ತಿರುವುದು ನಿಜಕ್ಕೂ ಡಾ।। ಬಸವಲಿಂಗ ಪಟ್ಟದ್ದೇವರ ಅಂತಃಕರಣ, ಮಾನವೀಯ ಪ್ರೇಮ ಏನೆಂದು ಕೊಂಡಾಡುವುದು ಮನದಲ್ಲಿ ನಮಿಸುವುದು ಮಾತ್ರ ನಮ್ಮ ಕರ್ತವ್ಯ . ಸುಮಾರು 15 ಮಕ್ಕಳು ಇದ್ದಾರೆ. ಅವರಿಗೆ ಯಾವುದೇ ಕೊರತೆ ಇಲ್ಲದಂತೆ ನಿಜವಾಗಿಯೂ ಬಸವ ಮಕ್ಕಳು ಎಂದು ಭಾವಿಸಿ ಪೂಜ್ಯರ ಅಂತಃಕರಣದಲ್ಲಿ ಬೆಳೆಸುತ್ತಿದ್ದಾರೆ. ಹಾಗೇ ಬಸವಕಲ್ಯಾಣದ ಅನುಭವ ಮ೦ಟಪದಲ್ಲಿ ಚನ್ನಬಸವ ಪಟ್ಟದೇವರು ಪ್ರಾರ೦ಭಿಸಿದ ದಾಸೋಹ ಸೇವೆ ಇ೦ದಿಗೂ ಕೂಡ ಹಾಗೇ ನಡೇದುಕೂ೦ಡು ಬ೦ದಿದೆ.
ಸಂಗೀತ ಶಾಲೆ :
[ಬದಲಾಯಿಸಿ]ಸಂಗೀತ ಮನಸ್ಸಿನ ಸಿದ್ದ ಔಷಧ ಎಂಬುದು ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರ ಆಶಯ. ಆದ್ದರಿಂದ ಶ್ರೀಗಳು ಸಂಗೀತ ಶಾಲೆಯನ್ನು ಆರಂಭಿಸಿದರು. ಔರಾದ ತಾಲೂಕಿನ ಖೇಡ ಗ್ರಾಮದಲ್ಲಿ “ ನೀಲಾಂಬಿಕಾ ಅಂಗವಿಕಲ ವಸತಿ ಸಂಗೀತ ಪಾಠಶಾಲೆಯನ್ನು 1994 ರಲ್ಲಿ ಆರಂಭಿಸಿದರು. ಈ ಭಾಗದ ಅನೇಕ ಮಹಿಳೆಯರಿಗೆ ಇದು ಆಶಾ ಕಿರಣವಾಗಿದೆ. ಅಂಗವಿಕಲರ ಬಾಳಿನ ಬೆಳಕಾಗಿದೆ. ಹಾಗೆಯೇ 1996 ರಲ್ಲಿ ಭಾಲ್ಕಿಯ ಹೀರೆಮಠದ ಸಂಸ್ಥಾನದಲ್ಲಿಯೇ ನೀಲಾಂಬಿಕಾ ಸಂಗೀತ ಪಾಠ ಶಾಲೆ ಆರಂಭಿಸಲಾಯಿತು. ಇಲ್ಲಿ ಸಂಗೀತ ಕಲಿತ ಅನೇಕರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅನೇಕ ಸಂಗೀತಾಸಕ್ತರಿಗೆ ಇಲ್ಲಿ ಉಪಜೀವನಕ್ಕೆ ಆಧಾರವಾಗಿದೆ.
ತಿಂಗಳ ಶರಣ ಸಂಗಮ ಹಾಗೂ ಶಿವಾನುಭವ ಗೋಷ್ಠಿ
[ಬದಲಾಯಿಸಿ]ಪ್ರತಿ ತಿಂಗಳು 22 ರಂದು ಮಾಸಿಕ ಶರಣ ಸಂಗಮ ಕಾರ್ಯಕ್ರಮ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಲಿಂಗೈಕ್ಯ ದಿನವಾದ 22ನೇ ಏಪ್ರಿಲ್ 1999ರ ಸ್ಮರಣಾರ್ಥ ನಡೆಸಿಕೊಂಡು ಬರಲಾಗುತ್ತಿದೆ. ಜೊತೆಗೆ ಪ್ರತಿ ತಿಂಗಳ ಹುಣ್ಣಿಮೆಯೆಂದು 1995 ರಿಂದ ಮಾಸಿಕ ಶಿವಾನುಭವ ಗೋಷ್ಠಿ ನಡೆಯುತ್ತಾ ಬಂದಿದೆ. ಈ ಎರಡು ಕಾರ್ಯಕ್ರಮಗಳಲ್ಲಿ ನಾಡಿನ ಹೆಸರಾಂತ ಹಿರಿಯ ವಿದ್ವಾಂಸರು ಭಾಗವಹಿಸಿ, ಜನತೆಗೆ ಬಸವತತ್ವದ ತನ್ನ ವೈಚಾರಿಕತೆಯನ್ನು ಉಣ ಬಡಿಸಲಾಗುತ್ತಿದೆ.
ಶ್ರಾವಣ ಮಾಸದಲ್ಲಿ ವಚನ ಪ್ರವಚನ
[ಬದಲಾಯಿಸಿ]ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ವಚನ ಪ್ರವಚನವು ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮವು ಮೊದಲು ಹಿರೇಮಠ ಸಂಸ್ಥಾನದಲ್ಲಿಯೇ ಸಾಗುತ್ತಿತ್ತು. ಈಗ ಭಾಲ್ಕಿ ಪಟ್ಟಣದ ಮಧ್ಯಭಾಗದಲ್ಲಿ ನಿರ್ಮಾಣಗೊಂಡಿರುವ ಪೂಜ್ಯ ಶ್ರೀ ಡಾ।। ಚನ್ನಬಸವ ಪಟ್ಟದ್ದೆವರ ಪುಣ್ಯಾಶ್ರಮ (ಚನ್ನಬಸವಾಶ್ರಮ)ದ ವಿಶಾಲ ಪ್ರಾಂಗಣದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸದ್ಭಕ್ತರು ಪಾಲ್ಗೊಳ್ಳುತ್ತಾರೆ. ಜೊತೆಗೆ ಜಯಂತೋತ್ಸವ , ಸ್ಮರಣೋತ್ಸವ ಸಂಧರ್ಭದಲ್ಲಿ ವಚನ ಪ್ರವಚನ ಜರಗುತ್ತದೆ. ಹಾಗೆಯೇ ಸಾಂಧರ್ಭಿಕ ಶಿವಶರಣರ ಜಯಂತಿಗಳನ್ನು ಆಚರಿಸಿಕೊಂಡು ಬರಲಾಗುತ್ತದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ‘ ಮನೆಗೊಂದು ವಚನ ಪ್ರವಚನ ಕಾರ್ಯಕ್ರಮ’ ಜರುಗಿವೆ.
ಸಮ್ಮೇಳನ – ಸಮಾವೇಶಗಳು
[ಬದಲಾಯಿಸಿ]ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರ ದಿವ್ಯ ನೇತ್ರತ್ವದಲ್ಲಿ ನಡೆಯುವ ಏಪ್ರಿಲ್ ತಿಂಗಳ ಸ್ಮರಣೋತ್ಸವ, ಡಿಸೆಂಬರನಲ್ಲಿ ಜರುಗುವ ಜಯಂತ್ಯೋತ್ಸವ ನಿಮಿತ್ಯ ರಾಷ್ಟ್ರೀಯ ರಾಜ್ಯ ಮಟ್ಟದ ಸಮ್ಮೇಳನ- ಸಮಾವೇಶಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ , ಅಖಿಲ ಭಾರತ 9ನೇ ಶರಣ ಸಾಹಿತ್ಯ ಸಮ್ಮೇಳನ 2006ರಲ್ಲಿ ಅದ್ದೂರಿಯಾಗಿ ಜರುಗಿತು. ಇದರ ಸವಿನೆನಪಿಗಾಗಿ “ ಚನ್ನಬಸವ ಕಲ್ಯಾಣವೆಂಬ ” ಅರ್ಥಪೂರ್ಣ ನೆನಪಿನ ಸಂಚಿಕೆ ಹೊರತರಲಾಯಿತು. 2007 ರಲ್ಲಿ ರಾಜ್ಯ ಮಟ್ಟದ “ ಉರಿಲಿಂಗ ಪೆದ್ದಿ ಮಠಾಧೀಶರ” ರಾಜ್ಯಮಟ್ಟದ ಮೊದಲ ಸಮಾವೇಶ ಜರುಗಿತು. ಈ ಸಮಾವೇಶದಲ್ಲಿ 40 ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು. ಈ ಎರಡು ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದವು.
ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವ
[ಬದಲಾಯಿಸಿ]ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರ ಆಲೋಚನೆಗಳು ಅತ್ಯಂತ ಜನಪರ ಜೀವಪರ ಆಗಿವೆ. ಸರಳತೆ ಅವರ ಮೂಲ ಸಿದ್ದಾಂತವಾಗಿದೆ. ಅದಕ್ಕಾಗಿ ತಿಂಗಳ ಶರಣ ಸಂಗಮ, ವಾರ್ಷಿಕ ಸ್ಮರಣೋತ್ಸವ, ಜಯಂತೋತ್ಸವ ಸಂಧರ್ಭದಲ್ಲಿ ಸಾಮಾಜಿಕ ಅಸಮಾನತೆ ತೊಡೆಯಲು ಅಂತರ್ ಜಾತಿ ವಿವಾಹಗಳನ್ನು ಏರ್ಪಡಿಸಿ ದುಂದು ವೆಚ್ಚ ಕಡಿವಾಣಕ್ಕೆ ಸಾಮೂಹಿಕ ಉಚಿತ ವಿವಾಹಗಳನ್ನು ಸ್ವತಃ ತಾವೇ ಎದುರು ನಿಂತು ನಡೆಸಿಕೊಡುತ್ತಾರೆ. ಇದಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಿರುತ್ತಾರೆ. ಪ್ರತಿ ವರ್ಷ ನಡೆವ ಸಾಮೂಹಿಕ ವಿವಾಹದಲ್ಲಿ ಮದುಮಕ್ಕಳಿಗೆ , ಪೂಜ್ಯ ಶ್ರೀಗಳು ಕಾಲುಂಗುರು ಹೊದಿಕೆ ಉಚಿತವಾಗಿ ಕೊಡುತ್ತಾ ಬಂದಿರುತ್ತಾರೆ. ಇದರ ಪ್ರಭಾವ ಆಂಧ್ರ, ಮಹಾರಾಷ್ಟ್ರದವರೆಗೆ ವ್ಯಾಪಿಸಿದೆ. ಅನೇಕರು ಇದರ ಸದುಪಯೋಗ ಪಡೆದಿರುತ್ತಾರೆ. ಪರಿಸರ ಸಂರಕ್ಷಣೆ ಇಂದು ಎಲ್ಲ ಅಗತ್ಯಗಳಿಗಿಂತ ಪರಿಸರ ಸಂರಕ್ಷಣೆ ಹೆಚ್ಚು ಅಗತ್ಯ ಎಂದು ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರ ಅಭಿಪ್ರಾಯವಾಗಿದೆ. “ ಕಾಡು ಉಳಿದರೆ ನಾಡು” ಎಂಬುದನ್ನು ಅವರು ಆಚರಣೆಯಲ್ಲಿ ತಂದವರು. ಮಳೆಗಾಲದಲ್ಲಿ ಅನೇಕ ಸಸಿ ನೆಡುವ ಕಾರ್ಯಕ್ರಮಗಳೊಂದಿಗೆ ಸಸಿ ವಿತರಣ ಕಾರ್ಯಕ್ರಮ ಪ್ರತಿವರ್ಷ ಪೂಜ್ಯ ಶ್ರೀಗಳು ನಡೆಸಿಕೊಡುತ್ತಲಿದ್ದಾರೆ. ಆಶ್ರಯ ದಯವೇ ಧರ್ಮದ ಮೂಲವೆಂದು ಬಸವಣ್ಣನವರು ಹೇಳಿದಂತೆ, ದಯಾಪರರಾದ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ಅಂತಃಕರಣವುಳ್ಳ ಮಾತ್ರಹೃದಯಿಗಳಗಿದ್ದಾರೆ. ನಿರಾಶ್ರಿತರಾದ ಅನೇಕ ವೃಧರಿಗೆ, ಹಿರೇಮಠದಲ್ಲಿ ಆಶ್ರಯ ನೀಡಿದ್ದಾರೆ. ಜೊತೆಗೆ ಅನೇಕ ವಿಧವೆಯರಿಗೆ, ನಿರಾಶ್ರಿತ ಮಹಿಳೆಯರಿಗೆ, ಆಶ್ರಯ ನೀಡಿದ ಅವರು ಸಮಾಜದಲ್ಲಿ ಗೌರವದ ಬದುಕು ನಡೆಸುವಂತೆ ಅವಕಾಶ ಮಾಡಿಕೊಟ್ಟಿದ್ದಾರೆ.
ಗ್ರಂಥಾಲಯ
[ಬದಲಾಯಿಸಿ]ಜ್ಞಾನದ ಬಹು ದೊಡ್ಡ ಆಸ್ತಿ ಎಂದರೆ ಅದು ಪುಸ್ತಕ. ಹಿರೇಮಠ ಸಂಸ್ಥಾನದಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ ಇದೆ. ಇಲ್ಲಿ ಶರಣರ ಸಾಹಿತ್ಯ, ಕ್ರಷಿ, ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸುಮಾರು ಎಂಟು ಸಾವಿರ ಗ್ರಂಥಗಳಿವೆ. ವಿದ್ವಾಂಸರು, ಶರಣ ಸಾಹಿತಿಗಳು, ಮಹಾಪ್ರಬಂಧ ಮಂಡಿಸುವವರು, ಅಧ್ಯಯನಶೀಲರು ಮುಂತಾದವರಿಗೆ, ಈ ಗ್ರಂಥಾಲಯದಿಂದ ಉಚಿತವಾಗಿ ಗ್ರಂಥಗಳನ್ನು ಅಭ್ಯಾಸಕ್ಕಾಗಿ ಕೊಟ್ಟು, ಮರಳಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರೇಮಠದಲ್ಲಿಯೇ ಉಳಿದು ಆಧ್ಯಯನ ನಡೆಸುವವರಿಗೆ ಉಚಿತ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಇರುತ್ತದೆ. ಈ ಗ್ರಂಥಾಲಯದ ಸದುಪಯೋಗ ಪಡೆದು ಅನೇಕರು ಸಂಶೋಧನೆ ಮಾಡಿ, ಮಹಾಪ್ರಬಂಧ ಮಂಡಿಸಿ, ಡಾಕ್ಟರೇಟ ಪದವಿ ಪಡೆದ ಉದಾಹರಣೆಗಳಿವೆ. ಹೀಗೆ ಶ್ರೀಮಠದ ಗ್ರಂಥಾಲಯವು ಒಂದರ್ಥದಲ್ಲಿ ಸಾರ್ವಜನಿಕ ಗ್ರಂಥಾಲಯವಾಗಿದೆ. ಬಸವ ಧರ್ಮ ಕಮ್ಮಟ ಮಠಕ್ಕೆ ಸ್ವಾಮಿಗಳಾಗುವವರಿಗೆ ಶಿವಯೋಗ ಮಂದಿರದಲ್ಲಿ ತರಬೇತಿ ನೀಡುವಂತೆ ಭಾಲ್ಕಿ ಹಿರೇಮಠದಲ್ಲಿಯೂ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ಅನೇಕ ಸಾಧಕರಿಗೆ ತರಬೇತಿ ನೀಡುತ್ತಿದ್ದಾರೆ. ಇದು ಸಂಪೂರ್ಣ ಬಸವ ತತ್ವ ಆಧಾರಿತವಾದ ಆಚರಣೆಗಳಾಗಿರುವುದರಿಂದ ಬಸವ ಧರ್ಮ ಕಮ್ಮಟವೆಂದು ಕರೆಯಬಹುದಾಗಿದೆ. ಇಲ್ಲಿ ತರಬೇತಿ ಪಡೆದ ಸಾಧಕರು ಬೇರೆ ಬೇರೆ ಮಠಗಳಲ್ಲಿ ಮಠಾಧೀಶರಾಗಿರುವರು. ಅದರಲ್ಲಿ ಬೀಳಗಿ ಮಠದ ಶ್ರೀಗಳು ಒಬ್ಬರು. ಇಲ್ಲಿನ ಸಾಧಕರಿಗೆ ಲಿಂಗ ದೀಕ್ಷಾ ವಿಧಾನ, ಮದುವೆ, ಸಂಸ್ಕಾರ ಮೊದಲಾದ ಸಾಂಸ್ಕ್ರತಿಕ ಆಚರಣೆಗಳ ವಿಧಿ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ಸದ್ಯ ಇರುವ ಪ್ರಮುಖ ಸಾಧಕರೆಂದರೆ :- ಶ್ರೀ ಮಹಾಲಿಂಗ ದೇವರು, ಶ್ರೀ ಇಷ್ಟಲಿಂಗ ದೇವರು, ಶ್ರೀ ಶಿವಾನಂದ ದೇವರು, ಶ್ರೀ ಚಂದ್ರಶೇಖರ ದೇವರು, ಶ್ರೀ ಗುರುಪಾದ ದೇವರು, ಶ್ರೀ ಬಸವಲಿಂಗ ದೇವರು, ಶ್ರೀ ಶಂಕರಲಿಂಗ ದೇವರು, ಶ್ರೀ ಪ್ರಭುಲಿಂಗ ದೇವರು, ಶ್ರೀ ಬಸವನಂದ ಶರಣರು ಇತ್ಯಾದಿ. ನೆರವು ಪ್ರಕ್ರತಿಯ ವಿಸ್ಮಯಗಳು ಅನೇಕ. ಹಾಗೆ ಪ್ರಕ್ರತಿ ವಿಕೋಪದಿಂದ ನೆರೆ ಹಾವಳಿ ಬಂದಾಗ, ಭೂಕಂಪವಾದಾಗ ನಿರಾಶ್ರಿತರಿಗೆ ಪೂಜ್ಯ ಶ್ರೀ ಡಾ ।। ಬಸವಲಿಂಗ ಪಟ್ಟದ್ದೆವರು ಪರಿಹಾರ ನಿಧಿ ಸಗ್ರಹಿಸಿ ನೀಡಿದ್ದಾರೆ. ಗುಜರಾತದ ಭೂಕಂಪ, ಸುನಾಮಿ, ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶದ ಜನರಿಗೆ ಶ್ರೀಗಳು ಪರಿಹಾರ ನೆರವು ಸಂಗ್ರಹಿಸಿಕೊಟ್ಟಿದ್ದಾರೆ.
ಶಾಖಾ ಮಠಗಳ ಜೀರ್ಣೋದ್ಧಾರ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ಪಟ್ಟಾಧಿಕಾರ ವಹಿಸಿಕೊಂಡ ಕೂಡಲೇ ಎಲ್ಲಾ ಶಾಖಾ ಮಠಗಳ ಜೀರ್ಣೋದ್ಧಾರ ಮಾಡಿದ್ದಾರೆ. ಅವುಗಳಲ್ಲಿ ಕಾರಾಮುಂಗಿ, ಮೊರ್ಗಿ, ಸಂಗಮ, ಡೊಣಗಾಪುರ ಮೊದಲಾದವು ಪ್ರಮುಖವಾಗಿವೆ. ಕ್ರಷಿ ಸ್ನೇಹ “ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ” ಎಂಬುದನ್ನು ಆಚರಣೆಯಲ್ಲಿ ತಂದು ತೋರಿದವರು ಪೂಜ್ಯ ಶ್ರೀ ಡಾ ।। ಬಸವಲಿಂಗ ಪಟ್ಟದ್ದೆವರು ಪೂಜ್ಯರು ಮಠಾಧೀಶರಾದರೂ ಸಹ ಧರ್ಮದಷ್ಟೆ ವ್ಯವಸಾಯ ಮುಖ್ಯವೆಂದವರು. ಶಾಖಾ ಮಠಗಳ ಕೆಳಗೆ ಇದ್ದ ಹಾಳು ಹೊಲಗಳನ್ನು ಹಸನುಗೊಳಿಸಿದ ಶ್ರೇಗಳು ಅವೆಲ್ಲವನ್ನು ವ್ಯವಸಾಯಕ್ಕೆ ಅಣಿಗೊಳಿಸಿದರು. ನಿರಾಶರಾದ ರೈತರು ಆತ್ಮಹತ್ಯೆಗೆ ಶರಣಗುತ್ತಿರುವಾಗ ಮಾದರಿ ಕ್ರಷಿ ಅಭಿವ್ರದ್ಧಿಪಡಿಸಿದ ರೈತರಿಗೆ ಆತ್ಮಸ್ಥೈರ್ಯ ನೀಡಿದರು. ವರ್ಷದ ಬ್ರಹತ ಸಮಾರಂಭಗಳಲ್ಲಿ ಕ್ರಷಿಪರ ಚಿಂತನೆ ನಡೆಸುವರು. ಹಾಗಾಗಿ ಭಾಲ್ಕಿ ಹಿರೇಮಠ ರೈತ ಮಠವಾದರೆ ಪೂಜ್ಯ ಶ್ರೀ ಡಾ ।। ಬಸವಲಿಂಗ ಪಟ್ಟದ್ದೆವರು ರೈತರ ಸ್ವಾಮಿಗಳಾಗಿದ್ದಾರೆ. ಪರಿಸರ ಪ್ರೀತಿ ಹಿಂದಿಗಿಂತಲೂ ಇಂದು ಪರಿಸರ ಸಂರಕ್ಷಣೆ ಇಂದು ಹೆಚ್ಚು ಅಗತ್ಯವಿದೆ. ಏಕೆಂದರೆ ಗಾಂಧೀಜಿಯವರು ಹೇಳುತ್ತಾರೆ. ‘ ಪ್ರಕ್ರತಿಗೆ ಮನುಷ್ಯರ ಎಲ್ಲಾ ಆಶೆಗಳನ್ನು ಪೂರೈಸುವ ಸಾಮರ್ಥ್ಯವಿದೆ . ಆದರೆ ಒಂದೇ ಒಂದು ದುರಾಸೆಯನ್ನಲ್ಲ ”. ಆದ್ದರಿಂದ ನಾವು ಪರಿಸರ ಸಂರಕ್ಷಿಸಿ ನಿಸರ್ಗದೊಂದಿಗೆ ಸಹಜ ಬದುಕನ್ನು ಬದುಕಬೇಕು. ಶುದ್ಧವಾದ ಗಾಳಿ, ನೀರು, ಜನರಿಗೆ ಸಿಗಬೇಕಾದರೆ ಮತ್ತು ಸಾಕಲಿಕವಾಗಿ ಮಳೆ ಬರಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಿರೇಮಠ ಸಂಸ್ಥಾನ ಭಾಲ್ಕಿ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಜೂನ-ಜುಲೈ-ಆಗಸ್ಟ್ ತಿಂಗಳುಗಳ್ಳಿ ಸಸಿಗಳನ್ನು ಪ್ರತಿ ವರ್ಷ ಜನರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಸಸಿಗಳ ಈ ವಿತರಣೆ ಕಾರ್ಯದಲ್ಲಿ ಸ್ಥಳೀಯ ತೋಟಗಾರಿಕೆ ಇಲಾಖೆ ಅರಣ್ಯ ಇಲಾಖೆ ಮತ್ತು ಸಂಘ ಸಂಸ್ಥೆಗಳು ಸಹಕರಿಸುತ್ತಿವೆ. ಸ್ಮಾರಕ ನಿರ್ಮಾಣ ಈ ಭಾಗದ ನಡೆದಾಡುವ ದೇವರಾಗಿದ್ದ ಡಾ।। ಚನ್ನಬಸವ ಪಟ್ಟದ್ದೆವರ ಸ್ಮಾರಕವನ್ನು ಕಮಲನಗರದಲ್ಲಿ ನಿರ್ಮಿಸಲು ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ನಿರಂತರ ಶ್ರಮಿಶಿ ಚಾಲನೆ ನೀಡಿದ್ದಾರೆ. ಕರ್ನಾಟಕ ಸರಕಾರದ ಜನತೆಯ ಮುಖ್ಯಮಂತ್ರಿ ಮಾನ್ಯ ಶ್ರೀ.ಬಿ.ಎಸ್.ಯಡಿಯೂರಪ್ಪ ಅವರಿಂದ ಸ್ಮಾರಕಕ್ಕೆ ರೂಪಾಯಿ ಐವತ್ತು ಲಕ್ಷ ಮಂಜೂರಿಯಾಗಿದು ಇದರಲ್ಲಿ ಪ್ರಕಾಶ ಖಂಡ್ರೆ ಅವರ ಶ್ರಮವು ಅಪಾರವಾಗಿದೆ, ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿದೆ. ಇದೊಂದು ಬೃಹತ್ ಸ್ಮಾರಕವಾಗಬೇಕು ಎಂಬುದು ಶ್ರೀಗಳ ಸದಾಶಯವಾಗಿದೆ.
ಮಹಾರಾಷ್ಟ್ರ, ಆಂಧ್ರ ಬಸವ ಪರಿಷತ್ತು
[ಬದಲಾಯಿಸಿ]ಬಸವ ತತ್ವ ವಿಶ್ವಮಾನವ ತತ್ವವಾಗಿದೆ. ಅದು ಎಲ್ಲಾ ಕಡೆ ವಿಸ್ತರಿಸಬೇಕು. ವಚನ ಸಾಹಿತ್ಯ ಭಾಷಾಂತರವಾಗಬೇಕು ಎಂಬ ಸದಾಶಯದಿಂದ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ಬಸವ ತತ್ವ ಪ್ರಸಾರಕ್ಕಾಗಿ ನೆರೆ ರಾಜ್ಯಗಳಲ್ಲಿ ಬಸವ ಪರಿಷತ್ತು ಆರಂಭಿಸಿದ್ದಾರೆ. ಮರಾಠಿ ಹಾಗೂ ತೆಲುಗು ಭಾಷಿಕರಿಗೆ ಬಸವಾದಿ ಶರಣರ ಸಾಹಿತ್ಯ, ತತ್ವ, ವಿಚಾರಧಾರೆಗಳನ್ನು ಪರಿಚಯಿಸಲು ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಬಸವ ಪರಿಷತ್ತು 07-01-2007 ರಂದು ಸ್ಥಾಪಿಸಿ ಅದರಡಿ ಸು.40ಕ್ಕೂ ಹೆಚ್ಚು ಕೃತಿಗಳನ್ನು ಮರಾಠಿ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಜೊತೆಗೆ ಆಂಧ್ರ ಪ್ರದೇಶದಲ್ಲಿ ಆಂಧ್ರ ಬಸವ ಪರಿಷತ್ತು 22.12.2007 ರಂದು ಸ್ಥಾಪಿಸಲಾಯಿತು. ಅದರಡಿ ಸು. ಹತ್ತು ಕೃತಿಗಳನ್ನು ತೆಲುಗು ಭಾಷೆಯಲ್ಲಿ ಪ್ರಕಟಿಸಲಾಗಿದೆ. ಬಸವ ಧರ್ಮ ಪ್ರಸಾರ (ವ್ಯಕ್ತಿತ್ವ ವಿಕಾಸ) ಶಿಬಿರ ಇಂದು ವ್ಯಕ್ತಿ ವಿಕಾಸವಾಗಿದೆ. ವ್ಯಕ್ತಿತ್ವ ವಿಕಾಸವಾಗಬೇಕು. ಮನುಷ್ಯರು ಮಹಾಮಾನವರಾಗಬೇಕು . ಅದೇ ಜೀವನ ವ್ಯಕ್ತಿತ್ವ ವಿಕಾಸ. ಬಸವ ತತ್ವ ಆಧಾರದ ಮೇಲೆ ಮನುಷ್ಯರು ಒಳ ಹೊರಗನ್ನು ಶುದ್ಧಿಕರಿಸಿಕೊಳ್ಳಬೇಕೆಂಬುದು ಪೂಜ್ಯ ಡಾ।। ಬಸವಲಿಂಗ ಪಟ್ಟದ್ದೆವರ ಆಶಯ. ಅದಕ್ಕಾಗಿ ಬೇಸಿಗೆ ರಜಾ ದಿನಗಳಲ್ಲಿ ಮಹಿಳೆ,ಮಕ್ಕಳು,ವೃದ್ಧರೂ ಹಾಗೂ ಅನಾಥರಿಗಾಗಿ ಬಸವ ಧರ್ಮಪ್ರಸಾರ (ವ್ಯಕ್ತಿತ್ವ ವಿಕಾಸ) ಶಿಬಿರಗಳನ್ನು ಪ್ರತಿ ವರ್ಷ ಆಯೋಜಿಸುತ್ತಾ ಬಂದಿದ್ದಾರೆ.
ವಚನ ಕಂಠ ಪಾಠ ಸ್ಪರ್ಧೆ
[ಬದಲಾಯಿಸಿ]ಆಧುನಿಕತೆಯಿಂದ ಮಕ್ಕಳು ನಮ್ಮ ಸಂಸ್ಕ್ರತಿಯಿಂದ ವಿಮುಖರಾಗುತ್ತಿದ್ದಾರೆ.ಅದಕ್ಕಾಗಿ ಅವರಲ್ಲಿ ಓದಿನ ಆಸಕ್ತಿ, ಬಸವ ತತ್ವದ ಅರಿವು ಮುಡಿಸುವುದಕ್ಕಾಗಿ ಪೂಜ್ಯ ಡಾ।। ಬಸವಲಿಂಗ ಪಟ್ಟದ್ದೆವರು ವಚನ ಕಂಠ ಪಾಠ ಸ್ಪರ್ಧೆ ಏರ್ಪಡಿಸಿ ಅತಿ ಹೆಚ್ಚು ವಚನ ಹೇಳಿದವರಿಗೆ ಹತ್ತು ಸಾವಿರ ನಗದು ಬಹುಮಾನ ನೀಡುತ್ತಾರೆ. ವಚನ ಕಂಠ ಪಾಠ ಸ್ಪರ್ಧೆಗಾಗಿ ಕರ್ನಾಟಕದಲ್ಲಿ ಇದು ಬಹುದೊಡ್ಡ ಮೊತ್ತವಾಗಿದೆ ಎಂದು ಹೇಳಬಹುದು. ಗೌರವ ಪ್ರಶಸ್ತಿಗಳು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಹಿರೇಮಠ ಸಂಸ್ಥಾನ ಭಾಲ್ಕಿ ವತಿಯಿಂದ ಪ್ರತಿ ವರ್ಷ ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತಿದೆ. ಅಂತಹವರಿಗೆ ಡಾ।। ಚನ್ನಬಸವ ಪಟ್ಟದ್ದೆವರು ಪ್ರಶಸ್ತಿ ಪತ್ರ ರೂ.10,000/- ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಪ್ರಮುಖ ಗೌರವ ಪ್ರಶಸ್ತಿಗಳು
[ಬದಲಾಯಿಸಿ]1) ಮಹಾರಾಷ್ಟ್ರದಲ್ಲಿ ಶರಣರ ಸಾಹಿತ್ಯ ಮರಾಠಿ ಭಾಷೆಯಲ್ಲಿ ರಚಿಸಿದ ಸಾಹಿತಿಗಳಿಗೆ. 2) ಆಂಧ್ರಪ್ರದೇಶದಲ್ಲಿ ಶರಣರ ಸಾಹಿತ್ಯ ತೆಲುಗು ಭಾಷೆಯಲ್ಲಿ ರಚಿಸಿದ ಲೇಖಕರಿಗೆ. 3) ಮಕ್ಕಳ ಸಾಹಿತ್ಯ ರಚಿಸಿದ ಸಾಹಿತಿಗಳಿಗೆ. 4) “ ಸಿದ್ಧರಾಮ ಜಂಬಲದಿನ್ನಿ ಸ್ಮರಣೆಯಲ್ಲಿ ” ಉತ್ತಮ ವಚನ ಸಂಗೀತಕಾರರಿಗೆ. 5) ಶ್ರೀ ಸಿದ್ರಮ ಡಿ. ಕೆ ಅವರು ಸ್ಥಾಪಿಸಿದ ಶಾಶ್ವತ ನಿಧಿಯಿಂದ ಕಾಯಕ ಪ್ರಶಸ್ತಿ. 6) ಬೀದರ ಜಿಲ್ಲೆಯಲ್ಲಿ ಉತ್ತಮ ಗ್ರಂಥ ರಚಿಸಿದ ಸಾಹಿತಿಗಳಿಗೆ. 7) ಬೀದರ ಜಿಲ್ಲೆಯಲ್ಲಿ ಹಿರಿಯ ಸಾಹಿತಿಗಳಿಗೆ. 8) “ ಮನೆಗೊಂದು ವಚನ ಪ್ರವಚನ ” ದಿಂದ ಬಸವಧರ್ಮ ಪ್ರಸಾರ ಮಾಡುತ್ತಿರುವವರಿಗೆ. 9) ಉತ್ತಮ ಓದುಗ ಪ್ರಶಸ್ತಿ. 10) ಡಾ।। ಚನ್ನಬಸವ ಪಟ್ಟದ್ದೆವರು ಯುವಕ ಸಂಘದ ಪ್ರಶಸ್ತಿ.
=ಸಾಹಿತ್ಯ ರಚನೆ
[ಬದಲಾಯಿಸಿ]ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ಸಹೃದಯಿಗಳಾಗಿರುವಂತೆ ಸೃಜನಶೀಲ ಬರಹಗಾರರು ಆಗಿರುವವರು. ಹಾಗಾಗಿ ಹತ್ತಾರು ಪುಸ್ತಕಗಳನ್ನು ಬರೆದು ಆ ಮೂಲಕ ಜನರಲ್ಲಿ ಬಸವ ತತ್ವದ ವೈಚಾರಿಕತೆಯನ್ನು ತುಂಬುತ್ತಿದ್ದಾರೆ. ಅವರ ಅನೇಕ ಕೃತಿಗಳು ಮರಾಠಿ, ತೆಲುಗು ಹಾಗೂ ಹಿಂದಿ ಭಾಷೆಗಳಿಗೆ ಅನುವಾದ ಆಗಿರುವುದನ್ನ ನೋಡಿದರೆ ಅವರ ಸಾಹಿತ್ಯದ ಜನಪ್ರಿಯತೆ ಅರ್ಥವಾಗುತ್ತದೆ. ಇಷ್ಟಲಿಂಗ ಪೂಜಾ ವಿಧಾನ, ಬಸವಜ್ಯೋತಿ, ಶಿವಶರಣೆಯರ ವಚನಗಳು, ಬಸವ ನೈವಿದ್ಯ, ಶರಣ ಸಾಹಿತ್ಯ ದರ್ಪಣ, ಧರ್ಮಗುರು ಬಸವಣ್ಣ ಮತ್ತು ಅಷ್ಟಾವರಣ, ಬಸವ ವಚನ ಸಿಂಚನ, ಚನ್ನಬಸವ ಪಟ್ಟದ್ದೆವರು,ಬಸವತತ್ವಗಳ ಆಚರಣೆ ಮತ್ತು ನಾವು , ಬಸವ ಚಿಂತನ, ಬಸವ ಸಂತತಿಗಳು, ಬಸವಧರ್ಮ ದರ್ಪಣ ಮತ್ತು ದಿನಕ್ಕೊಮ್ಮೆ ಏನು ನೆನೆದೇನ.
ಪುಸ್ತಕ ಪ್ರಕಟಣೆ
[ಬದಲಾಯಿಸಿ]ಪುಸ್ತಕಗಳು ಮನುಷ್ಯರ ಅತ್ಯುತ್ತಮ ಸಂಗಾತಿಗಳಾಗಿದ್ದು ನಮ್ಮ ಸಂಸ್ಕೃತಿಯನ್ನ ಪಸರಿಸುವ ಮತ್ತು ಜ್ಞಾನವನ್ನು ಹೆಚ್ಚಿಸುವ ಸಾಧನವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನದ ಪ್ರಾಬಲ್ಯದಿಂದಾಗಿ ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ. ಓದುವ ವಲಯ ಕಡಿಮೆಯಾಗುತ್ತಿದೆ. ಹಾಗಾಗಿ ಉತ್ತಮ ಲೇಖಕರಿಂದ ಉತ್ತಮ ವಿಚಾರಗಳನ್ನು ಬರೆಸಿ ಪುಸ್ತಕಗಳನ್ನು ಪ್ರಕಟಿಸುವದರೊಂದಿಗೆ ಅಕ್ಷರ ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶದಿಂದ ಪೂಜ್ಯ ಶ್ರೀ. ಡಾ।। ಬಸವಲಿಂಗ ಪಟ್ಟದ್ದೆವರು ‘ಬಸವ ಧರ್ಮ ಪ್ರಸಾರ ಸಂಸ್ಥೆ ಹಿರೇಮಠ ಸಂಸ್ಥಾನ, ಭಾಲ್ಕಿ ’ ಎಂಬ ಹೆಸರಿನಲ್ಲಿ ಪ್ರಕಾಶನ ಸಂಸ್ಥೆ ತೆರೆದು ನೂರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದು ಮತ್ತು ಬಸವ ತತ್ವವನ್ನು ಪುಸ್ತಕ ಸಂಸ್ಕೃತಿಯ ಮೂಲಕ ಪ್ರಚಾರ ಮಾಡುತ್ತಿರುವುದು ಶ್ರೀಗಳ ಗಮನಾರ್ಹ ಸಾಧನೆಗಳಾಗಿವೆ. ಪ್ರಕಟಣೆಯ ವಿವರ ಕನ್ನಡದಲ್ಲಿ 43, ಹಿಂದಿಯಲ್ಲಿ 4, ಇಂಗ್ಲೀಷಿನಲ್ಲಿ -1 ಪುಸ್ತಕ ಪ್ರಕಟಿಸಿರುವುದಲ್ಲದೆ ಡಾ।। ಚನ್ನಬಸವ ಪಟ್ಟದ್ದೆವರ ಪ್ರೀತಷ್ಠನ 2, ಮಹಾರಾಷ್ಟ್ರ ಬಸವ ಪರಿಷತ್ತಿನಿಂದ 34, ಆಂಧ್ರದ ಬಸವ ಪರಿಷತ್ತಿನಿಂದ 7 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಪೂಜ್ಯರಿಗೆ ಸಂದ ಗೌರವ ಪ್ರಶಸ್ತಿಗಳು ಗೌರವ ಡಾಕ್ಟರೇಟ್ ಪದವಿ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೆವರು “ ಕನ್ನಡ ಜಂಗಮರು ”. ಬಸವ ತತ್ವ ಪ್ರಸಾರ, ಸಮಾಜ ಸೇವೆ, ಶೈಕ್ಷಣಿಕ ಅಭಿವೃದ್ಧಿ , ಕನ್ನಡತ್ವದ ವಿಕಾಸ, ಶ್ರೀಗಳ ಬದುಕಿನ ಮೂಲ ಸಿದ್ಧಾಂತಗಳಾಗಿವೆ . ಬಡವರ ದೀನ, ದುರ್ಬಲರ, ಮಹಿಳೆಯರ ಪರ ನಿಂತು ಸಾಮಾಜಿಕ ನ್ಯಾಯಕ್ಕಾಗಿ ಹೊರಾಡುತ್ತಿರುವ ಶ್ರೀಗಳು ಶಿಕ್ಷಣದ ಖಾಸಗಿಕರಣದ ಮಧ್ಯೆ ಶಿಕ್ಷಣವನ್ನು ಮಾನವೀಕರಣಗೊಳಿಸಿದವರು. ಅನಾಥರು, ವೃದ್ಧರೂ, ವಿಧವೆಯರು, ವಿಕಲಚೇತನರಿಗೆ ಆಶ್ರಯ ನೀಡಿ ಮಾನವೀಯತೆ ಮೇರೆದವರು. ಅಂತರ್ಜಾತಿ ವಿವಾಹವೇರ್ಪಡಿಸಿ ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ ನೆಲೆಗೊಳಿಸಿದವರು. ಹೀಗೆ ಪ್ರತಿಫಲಾಪೇಕ್ಷವಿಲ್ಲದ ಅಹರ್ನಿಷ ಸೇವೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಸಂದಿದೆ. ಕಲ್ಯಾಣ ಬಸವ ಶ್ರೀ ಪ್ರಶಸ್ತಿ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರು ಬಸವಯೋಗನುಷ್ಠಾನ ಕೈಗೊಂಡು ಅರವತ್ಮೂರು ದಿವಸಗಳ ಅವಧಿ ಮುಕ್ತಾಯವಾದ ನಂತರ ಬೀದರ ಜಿಲ್ಲೆಯ ನಾಗರಿಕ ಸಮಿತಿ ವತಿಯಿಂದ “ಕಲ್ಯಾಣ ಬಸವಣ್ಣ ” ಎಂಬ ಪ್ರಶಸ್ತಿಯನ್ನು ದಿನಾಂಕ : 22/11/2000 ರಂದು ಪೂಜ್ಯ ಬಸವಲಿಂಗ ಪಟ್ಟದ್ದೆವರಿಗೆ ಅರ್ಪಿಸಿದರು. ಇದೆ ಸಂಧರ್ಭದಲ್ಲಿ ಬೀದರ ರಹಸ್ಯ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಶ್ರೀ.ಡಿ.ಕೆ.ಸಿದ್ರಾಮ ಅವರು ರೂ.50,000/- (ರೂ . ಐವತ್ತು ಸಾವಿರ ಮಾತ್ರ) ಹಮ್ಮಿಣಿ ಭಾಲ್ಕಿ ಹಿರೇಮಠಕ್ಕೆ ಸಲ್ಲಿಸುತ್ತಾರೆ. ರಮಣಶ್ರೀ ಶರಣ ಪ್ರಶಸ್ತಿ ಮಠಗಳೆಂದರೆ ಕೇವಲ ಧರ್ಮ ಪ್ರಚಾರ ಎಂಬುವುದನ್ನು ಮೀರಿ ಹಿಂದುಳಿದ ಈ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಿರುವ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೆವರ ಶೈಕ್ಷಣಿಕ ಸೇವೆ ಅಪಾರವಾದದ್ದು. ಹಳ್ಳಿಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಿದ್ದಾರೆ. ಶರಣ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಬಿಂಬಿಸುವ ಮೂಲಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಕ್ರಮವು ಈ ವಿದ್ಯಾಪೀಠದ ವಿಶೇಷತೆಯಾಗಿದೆ. ಈ ಸೇವೆ ಸಾಧನೆಗಳನ್ನು ಗೌರವಿಸಿ ದಿನಾಂಕ : 17-11-2008 ರಂದು ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇವರ ವತಿಯಿಂದ “ರಮಣಶ್ರೀ ಶರಣ ಪ್ರಶಸ್ತಿ ” ಯನ್ನು ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರಿಗೆ ನೀಡಿ ಗೌರವಿಸಿದ್ದಾರೆ. ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ಪೂಜ್ಯ ಡಾ।। ಚನ್ನಬಸವ ಪಟ್ಟದ್ದೇವರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು ಕನ್ನಡ ನಾಡು-ನುಡಿಯ ಸೇವೆ ನಿರಂತರ ಮಾಡುತ್ತಾ ಬಂದಿದ್ದಾರೆ. ಇವರ ನಂತರದಲ್ಲಿ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರ ಶೈಕ್ಷಣಿಕ , ಸಾಮಾಜಿಕ, ಸಾಹಿತ್ಯಿಕ ಸೇವೆಗಳನ್ನು ಗೌರವಿಸಿ ಮತ್ತು ಶ್ರೀ ಮಠದ ಎಲ್ಲಾ ಕನ್ನಡಪರ ಚಟಿವಟಿಕೆಯಿಂದಾಗಿ ಕ್ರಿ.ಶ. 2006 ರಲ್ಲಿ ಕರ್ನಾಟಕ ರಾಜ್ಯವು ಸುವರ್ಣ ಮಹೋತ್ಸವ ಅಚರಿಸುತ್ತಿರುವ ಸಂಧರ್ಭದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನಕ್ಕೆ “ ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ” ಘೋಷಿಸಿತ್ತು. ದಿನಾಂಕ : 01-11-2006 ರಂದು ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಂದ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರು ಈ ಪುರಸ್ಕಾರವನ್ನು ಪಡೆದರು. ಈ ಪ್ರಶಸ್ತಿ ಲಭಿಸಿದ್ದಕ್ಕೆ ಬೆಳಗಾವಿ,ಜಿಡಗಾ, ನಾಲವಾರ ಮುಂತಾದ ಮಠಗಳ ಮಠಾಧೀಶರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಕ್ತಿಯಿಂದ ಅಭಿನಂದಿಸಿ ಸಂತೋಷಪಟ್ಟಿದ್ದಾರೆ.