ವಿಷಯಕ್ಕೆ ಹೋಗು

ಬಶೀರ್ ಬಿ. ಎಂ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಶೀರ್ ಬಿ.ಎಂ.
ಜನನಉಪ್ಪಿನಂಗಡಿಸಮೀಪದ ಮಠ
ವೃತ್ತಿಪತ್ರಕರ್ತ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ

ಬಶೀರ್ ರವರು ಕನ್ನಡದಲ್ಲಿ ಹನಿಗತೆ ಪ್ರಾಕಾರವನ್ನು ಸಮರ್ಥವಾಗಿ ಬಳಸುಸುತ್ತಿರುವರಲ್ಲಿ ಪ್ರಮುಖರು. ಜೊತೆಗೆ ಉತ್ತಮ ಕವಿಯೂ ಹೌದು.

ಬಾಲ್ಯ, ಜನನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಬಶೀರ್ ರವರು ಮಂಗಳೂರಿನ ಬಳಿಯ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಜನಿಸಿದರು. ಉಪ್ಪಿನಂಗಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ, ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು.

ವೃತ್ತಿ ಜೀವನ

[ಬದಲಾಯಿಸಿ]

ಮುಂಬಯಿನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ೫ ವರ್ಷಗಳ ಕಾಲ ದುಡಿದ ನಂತರ ಜನವಾಹಿನಿ ಪತ್ರಿಕೆಯಲ್ಲಿ ಹಿರಿಯ ಸಂಪಾದಕರಾಗಿ ೫ ವರ್ಷ ಕೆಲಸ ಮಾಡಿದ್ದಾರೆ. ಪ್ರಸ್ತುತ "ವಾರ್ತಾ ಭಾರತಿ" ಕನ್ನಡ ದೈನಿಕದಲ್ಲಿ ಸುದ್ದಿ ಸಂಪಾದಕನಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪುಸ್ತಕಗಳು

[ಬದಲಾಯಿಸಿ]
  1. ಪ್ರವಾದಿಯ ಕನಸು (ಕವನ ಸಂಕಲನ)
  2. ಬಾಳೆಗಿಡ ಗೊನೆ ಹಾಕಿತು (ಕಥಾ ಸಂಕಲನ)
  3. ಅಂಗೈಯಲ್ಲಿ ಆಕಾಶ (ಹನಿಗತೆಗಳ ಸಂಕಲನ)
  4. ಬಾಡೂಟದ ಜೊತೆಗೆ ಗಾಂಧೀ ಜಯಂತಿ (ಲೇಖನಗಳ ಸಂಗ್ರಹ)
  5. ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿ ಕಣ್ಣಲ್ಲಿ ಹನಿಗಳು(ಹನಿ ಕವಿತೆಗಳು)
  6. ಅಮ್ಮ ಹಚ್ಚಿದ ಒಲೆ(ಕವನ ಸಂಕಲನ)

ಪ್ರಶಸ್ತಿ ಮತ್ತು ಗೌರವ

[ಬದಲಾಯಿಸಿ]
  • ಮುದ್ದಣ ಕಾವ್ಯ ಪ್ರಶಸ್ತಿ.
  • ಮೈಸೂರು ಚದುರಂಗ ಪ್ರತಿಷ್ಥಾನ ಪ್ರಶಸ್ತಿ.
  • ಲಂಕೇಶ್ ಪ್ರಶಸ್ತಿ.

ಉಲ್ಲೇಖ

[ಬದಲಾಯಿಸಿ]