ಬಶೀರ್ ಬಿ. ಎಂ.
ಗೋಚರ
ಬಶೀರ್ ಬಿ.ಎಂ. | |
---|---|
ಜನನ | ಉಪ್ಪಿನಂಗಡಿಸಮೀಪದ ಮಠ |
ವೃತ್ತಿ | ಪತ್ರಕರ್ತ |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ಬಶೀರ್ ರವರು ಕನ್ನಡದಲ್ಲಿ ಹನಿಗತೆ ಪ್ರಾಕಾರವನ್ನು ಸಮರ್ಥವಾಗಿ ಬಳಸುಸುತ್ತಿರುವರಲ್ಲಿ ಪ್ರಮುಖರು. ಜೊತೆಗೆ ಉತ್ತಮ ಕವಿಯೂ ಹೌದು.
ಬಾಲ್ಯ, ಜನನ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಬಶೀರ್ ರವರು ಮಂಗಳೂರಿನ ಬಳಿಯ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಜನಿಸಿದರು. ಉಪ್ಪಿನಂಗಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ, ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು.
ವೃತ್ತಿ ಜೀವನ
[ಬದಲಾಯಿಸಿ]ಮುಂಬಯಿನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ೫ ವರ್ಷಗಳ ಕಾಲ ದುಡಿದ ನಂತರ ಜನವಾಹಿನಿ ಪತ್ರಿಕೆಯಲ್ಲಿ ಹಿರಿಯ ಸಂಪಾದಕರಾಗಿ ೫ ವರ್ಷ ಕೆಲಸ ಮಾಡಿದ್ದಾರೆ. ಪ್ರಸ್ತುತ "ವಾರ್ತಾ ಭಾರತಿ" ಕನ್ನಡ ದೈನಿಕದಲ್ಲಿ ಸುದ್ದಿ ಸಂಪಾದಕನಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುಸ್ತಕಗಳು
[ಬದಲಾಯಿಸಿ]- ಪ್ರವಾದಿಯ ಕನಸು (ಕವನ ಸಂಕಲನ)
- ಬಾಳೆಗಿಡ ಗೊನೆ ಹಾಕಿತು (ಕಥಾ ಸಂಕಲನ)
- ಅಂಗೈಯಲ್ಲಿ ಆಕಾಶ (ಹನಿಗತೆಗಳ ಸಂಕಲನ)
- ಬಾಡೂಟದ ಜೊತೆಗೆ ಗಾಂಧೀ ಜಯಂತಿ (ಲೇಖನಗಳ ಸಂಗ್ರಹ)
- ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿ ಕಣ್ಣಲ್ಲಿ ಹನಿಗಳು(ಹನಿ ಕವಿತೆಗಳು)
- ಅಮ್ಮ ಹಚ್ಚಿದ ಒಲೆ(ಕವನ ಸಂಕಲನ)
ಪ್ರಶಸ್ತಿ ಮತ್ತು ಗೌರವ
[ಬದಲಾಯಿಸಿ]- ಮುದ್ದಣ ಕಾವ್ಯ ಪ್ರಶಸ್ತಿ.
- ಮೈಸೂರು ಚದುರಂಗ ಪ್ರತಿಷ್ಥಾನ ಪ್ರಶಸ್ತಿ.
- ಲಂಕೇಶ್ ಪ್ರಶಸ್ತಿ.