ಬನ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕೇಶಿಯಾ ಫೆರುಜಿನಿಯಾ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಶಮಿ ಮರಕ್ಕೆ ಪ್ರೋಸೋಪಿಸ್ ಸಿನೇರಿಯಾ ಎಂದು ಕರೆಯಲಾಗುತ್ತದೆ. ಇದು ಪೀಬಾ ಕುಟುಂಬದ ಫ್ಯಾಬಾಸಯೆಯಲ್ಲಿನ ಹೂಬಿಡುವ ಮರವಾಗಿದೆ. ಇಂದು ಪಶ್ಚಿಮ ಏಷ್ಯಾದ ಶುಷ್ಕ ಭಾಗಗಳು ಮತ್ತು ಅಫ್ಘಾನಿಸ್ತಾನ, ಬಹ್ರೇನ್, ಇರಾನ್, ಭಾರತ, ಒಮನ್, ಪಾಕಿಸ್ತಾನ, ಸೌದಿ ಅರೇಬಿಯಾ ಸೇರಿದಂತೆ ಆಗ್ನೇಯ ಏಷ್ಯಾದ ಭಾಗಗಳಲ್ಲಿ ಪ್ರಮುಖವಾಗಿ ನೆಲೆಯಾಗಿದೆ. ಇದು ಯುನೈಟೆಡ್ ಅರಬ್ ಎಮಿರೇಟ್ಸ್‍ನ ರಾಷ್ಟ್ರೀಯ ಮರವಾಗಿದ್ದು, ಅಲ್ಲಿ ಅದನ್ನು ಘಫ್ ಎಂದು ಕರೆಯಲಾಗುತ್ತದೆ. ಇದು ಭಾರತಕ್ಕೆ ಸಂಬಂಧಿಸಿದಂತೆ ರಾಜಸ್ತಾನದ ರಾಜ್ಯ ಮರವಾಗಿದೆ. ಅಲ್ಲಿ ಇದನ್ನು ಖಜರಿ ಎಂದು ಕರೆಯಲಾಗುತ್ತದೆ. ಸಸ್ಯಶಾಸ್ತ್ರದ ಅನ್ವಯ ಇದನ್ನು ಪ್ರೊಸೋಪಿಸ್ ಸನೆರರಿಯಾ ಎಂದು ಕರೆಯಲಾಗುತ್ತದೆ.

ಸಸ್ಯ ವಿವರಣೆ[ಬದಲಾಯಿಸಿ]

ಈ ಬನ್ನಿ ಮರ ಅಥವಾ ಶಮೀ ವೃಕ್ಷ ಬರ-ನಿರೋಧಕ ಮರವಾಗಿದ್ದು, ಸಾಮಾನ್ಯವಾಗಿ ೧೨ಮೀ ಉದ್ದ ಬೆಳೆಯುತ್ತದೆ. ಇದರ ಮರದ ಬುಡ ಅಥವಾ ಕಾಂಡ ಸುಮಾರು ೨-೩ಮೀ ವರೆಗೆ ನೇರವಾಗಿದ್ದೂ, ೫೦ಚೆ.ಮೀವರೆಗೆ ವ್ಯಾಸವನ್ನು ಹೊಂದಿರುತ್ತದೆ ಮತ್ತು ೧೫ಸೆ.ಮೀ ಉದ್ದದ ತನಕ ಮುಳ್ಳುಗಳನ್ನು ಹೊಂದಿರುತ್ತದೆ. ಇದರ ಕೊಂಬೆಗಳು ಚಿಕ್ಕದಾಗಿಯೂ ಹಾಗೂ ಶಂಖುವಿನಾಕಾರದ ಮುಳ್ಳುಗಳನ್ನು ಹೊಂದಿರುತ್ತದೆ.[೧]

ವಿವಿಧ ಭಾಷೆಗಳಲ್ಲಿ ಶಮಿ ಮರದ ಹೆಸರು[ಬದಲಾಯಿಸಿ]

 • ಸಂಸ್ಕೃತ - ಅರಿಮೇಧ/ ಬ್ರಹ್ಮಶಲ್ಯ/ ದ್ವಿಜಪ್ರಿಯ
 • ಕನ್ನಡ -ಬನ್ನಿ ಮರ
 • ತೆಲುಗು -ಜಮ್ಮಿ ಚೆಟ್ಟು
 • ತಮಿಳು -ವಣ್ಣೆ
 • ಹಿಂದಿ -ಖೈಗರ್, ಸಫೇದ್ ಖೈರ್
 • ಮಲಯಾಳಂ - ಕರೀವೇಲಂ, ವನ್ನಿ
 • ಮರಾಠಿ - ಧವಿ- ಖೈರ್
 • ನೇಪಾಳಿ - ಖೌರ್[೨]

ಉಪಯೋಗಗಳು[ಬದಲಾಯಿಸಿ]

ಔಷಧೀಯ ಬಳಕೆ[ಬದಲಾಯಿಸಿ]

 1. ಕುಷ್ಟ ರೋಗ(ಚರ್ಮ ರೋಗಗಳು), ಗ್ರಂಥಿಗಳು( ಗೆಡ್ಡೆಗಳು), ಬಾಲರೋಗಗಳು( ಮಕ್ಕಳ ರೋಗಗಳು), ವಾತ, ಪಿತ್ತ, ಕಫ, ಕೆಮ್ಮು, ಅತಿಸಾರ ಮತ್ತು ಶ್ವಾಸ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಈ ಮರದ ಸಾರವನ್ನು ಬಳಸಲಾಗುತ್ತದೆ.
 2. ಧನ್ವಂತರಿ ನಿಘಂಟಿನ ಪ್ರಕಾರ, ‘ಪಂಚಭೃಂಗ' ಎಂಬ 5 ಮರಗಳಲ್ಲಿ ಶಮೀ ವೃಕ್ಷವೂ ಒಂದು. ಯಾವುದೇ ವ್ಯಕ್ತಿಯ ರೋಗ ಗುಣಪಡಿಸಿದ ನಂತರ ಸ್ನಾನ ಮಾಡಲು ಈ ಐದು ಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ರೋಗದ ಸೋಂಕನ್ನು ನಿವಾರಿಸುವುದಲ್ಲದೇ ಶಕ್ತಿಯನ್ನು ಉತ್ತೇಜಿಸುತ್ತದೆ.
 3. ಅನಿರೀಕ್ಷಿತ ಗರ್ಭಪಾತವನ್ನು ತಪ್ಪಿಸಲು ಇದರ ಹೂವುಗಳನ್ನು ಸಕ್ಕರೆ ಕ್ಯಾಂಡಿಯೊಂದಿಗೆ ಮಿಶ್ರಣ ಮಾಡಿ ಕೊಡಲಾಗುತ್ತದೆ.
 4. ಈ ಮರದ ತೊಗಟೆಯನನ್ನು ಸಂಧಿವಾತದ ಚಿಕಿತ್ಸೆಯಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ.
 5. ಉದುಂಬಾರದ ಹಣ್ಣನ್ನು ಎದೆ ಹಾಲಿನೊಂದಿಗೆ ತಾಮ್ರದ ಪಾತ್ರೆಯಲ್ಲಿ ಉಜ್ಜಿ ಅದನ್ನು ತುಪ್ಪದಲ್ಲಿ ಅದ್ದಿದ ಶಮಿಯ ಎಲೆಗಳಿಂದ ಸುಟ್ಟ ಗಾಯದ ಮೇಲೆ ಲೇಪನ ಮಾಡಿದರೆ ಉರಿ, ತುರಿಕೆ, ಕಿರಿಕಿರಿ ಎಲ್ಲವೂ ಕಡಿಮೆಯಾಗುತ್ತದೆ.
 6. ಶುಂಠಿಯೊಂದಿಗೆ ಬೆರೆಸಿ ತಯಾರಿಸಿದ ಇದರ ತೊಗಟೆಯ ಕಷಾಯವನ್ನು ಹಲ್ಲುಗಳ ಸಂಕುಚತತೆಯನ್ನು ಹೋಗಲಾಡಿಸಲು ಸೇವಿಸಲಾಗುತ್ತದೆ.
 7. ಬೇಧಿಯಂಥಹ ಸಮಸ್ಯೆಗಳ ಚಿಕಿತ್ಸೆಗಾಗಿಯೂ ಇದರ ಬಳಕೆಯಾಗುತ್ತದೆ.

ಇತರೆ ಬಳಕೆ[ಬದಲಾಯಿಸಿ]

 1. ಈ ಮರದ ತೊಗಟೆಯನ್ನು ಮದ್ಯ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
 2. ಕೃಷಿಯಲ್ಲಿ ಬೆಳೆಗಳಿಗೆ ಸುಗಮವಾಗಲೆಂದು, ಬೆಳೆಗಳ ಮಧ್ಯ ಈ ಮರವನ್ನು ಬೆಳೆಸಲಾಗುತ್ತದೆ.
 3. ಈ ಮರ ಉತ್ಪಾದಿಸುವ ಅಂಟು ಪದಾರ್ಥವನ್ನು ಮಸಿ(ಇಂಕ್)ತಯಾರಿಕೆಯಲ್ಲಿ, ಮೂಲಿಕಾ ಪದಾರ್ಥವಾಗಿಯೂ ಬಳಸಲಾಗುತ್ತದೆ.

ಉಲ್ಲೇಖ[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2020-08-14. Retrieved 2018-09-30. {{cite web}}: |archive-date= / |archive-url= timestamp mismatch (help)
 2. https://www.flowersofindia.net/catalog/slides/Rusty%20Acacia.html
"https://kn.wikipedia.org/w/index.php?title=ಬನ್ನಿ&oldid=1156846" ಇಂದ ಪಡೆಯಲ್ಪಟ್ಟಿದೆ