ವಿಷಯಕ್ಕೆ ಹೋಗು

ಬಧಾಯಿ ಹೋ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಧಾಯಿ ಹೋ
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
ನಿರ್ದೇಶನಅಮಿತ್ ರವೀಂದ್ರನಾಥ್ ಶರ್ಮಾ
ನಿರ್ಮಾಪಕವಿನೀತ್ ಜೈನ್
ಆಲೆಯಾ ಸೇನ್
ಹೇಮಂತ್ ಭಂಡಾರಿ
ಅಮಿತ್ ರವಿಂದರ್‌ನಾಥ್ ಶರ್ಮಾ
ಸುಶೀಲ್ ಚೌಧರಿ
ಪ್ರೀತಿ ಸಾಹನಿ
ಲೇಖಕಶಾಂತನು ಶ್ರೀವಾಸ್ತವ
ಅಕ್ಷತ್ ಘಿಲ್ಡಿಯಾಲ್
ಜ್ಯೋತಿ ಕಪೂರ್
ಚಿತ್ರಕಥೆಅಕ್ಷತ್ ಘಿಲ್ಡಿಯಾಲ್
ಪಾತ್ರವರ್ಗಆಯುಷ್ಮಾನ್ ಖುರಾನಾ
ನೀನಾ ಗುಪ್ತಾ
ಗಜರಾಜ್ ರಾವ್
ಸುರೇಖಾ ಸಿಕ್ರಿ
ಸಾನ್ಯಾ ಮಲ್ಹೋತ್ರಾ
ಸಂಗೀತಹಾಡುಗಳು:
ತನಿಷ್ಕ್ ಬಾಗ್ಚಿ
ರೋಚಕ್ ಕೋಹ್ಲಿ
ಜ್ಯಾಮ್ಏಟ್
ಸನಿ ಮತ್ತು ಇಂದರ್ ಬಾವ್ರಾ
ಹಿನ್ನೆಲೆ ಸಂಗೀತ:
ಅಭಿಷೇಕ್ ಅರೋರಾ
ಛಾಯಾಗ್ರಹಣಸಾನು ವರ್ಘೀಸ್
ಸಂಕಲನದೇವ್ ರಾವ್ ಜಾಧವ್
ಸ್ಟುಡಿಯೋಜಂಗ್ಲಿ ಪಿಕ್ಚರ್ಸ್
ಕ್ರೋಮ್ ಪಿಕ್ಚರ್ಸ್
ವಿತರಕರುಎಎ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 18 ಅಕ್ಟೋಬರ್ 2018 (2018-10-18)
ಅವಧಿ123 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಂಡವಾಳ₹29 ಕೋಟಿ[]
ಬಾಕ್ಸ್ ಆಫೀಸ್₹221.44 ಕೋಟಿ[]

ಬಧಾಯಿ ಹೋ (ಅನುವಾದ: ಅಭಿನಂದನೆಗಳು) ೨೦೧೮ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಅಮಿತ್ ಶರ್ಮಾ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ನೀನಾ ಗುಪ್ತಾ, ಗಜರಾಜ್ ರಾವ್, ಸುರೇಖಾ ಸಿಕ್ರಿ ಮತ್ತು ಸಾನ್ಯಾ ಮಲ್ಹೋತ್ರಾ ನಟಿಸಿದ್ದಾರೆ. ಇದು ಗರ್ಭಿಣಿಯಾಗುವ ಮಧ್ಯಮ ವಯಸ್ಸಿನ ದಂಪತಿ ಮತ್ತು ಅದರಿಂದ ತಮ್ಮ ಪ್ರೌಢ ಪುತ್ರನು ನಿರಾಶನಾಗುವ ಕಥೆಯನ್ನು ಹೇಳುತ್ತದೆ.[][] ಚಿತ್ರವನ್ನು ವಿನೀತ್ ಜೈನ್, ಹೇಮಂತ್ ಭಂಡಾರಿ ಮತ್ತು ಆಲೆಯಾ ಸೇನ್ ಜಂಗ್ಲಿ ಪಿಕ್ಚರ್ಸ್ ಹಾಗೂ ಕ್ರೋಮ್ ಪಿಕ್ಚರ್ಸ್ ಲಾಂಛನದಡಿ ತಯಾರಿಸಿದ್ದಾರೆ. ಈ ಚಿತ್ರವನ್ನು ಶಾಂತನು ಶ್ರೀವಾಸ್ತವ ಮತ್ತು ಅಕ್ಷತ್ ಘಿಲ್ಡಿಯಾಲ್ ಬರೆದಿದ್ದಾರೆ.[][]

ಬಧಾಯಿ ಹೋ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ವಾಣಿಜ್ಯಿಕ ಯಶಸ್ಸಾಗಿ ಹೊರಹೊಮ್ಮಿತು. ₹29 ಕೋಟಿಯ ಬಂಡವಾಳದಲ್ಲಿ ತಯಾರಾದ ಇದು ₹221 ಕೋಟಿಗಿಂತಲೂ ಹೆಚ್ಚು ಹಣಗಳಿಸಿತು, ಇದು ೨೦೧೮ರ ೯ನೇ ಅತಿ ಹೆಚ್ಚು ಹಣ ಗಳಿಸಿದ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಿತು. ೬೪ನೇ ಫಿಲ್ಮ್‌ಫ಼ೇರ್ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ಗುಪ್ತಾರಿಗೆ ವಿಮರ್ಶಕರ ಅತ್ಯುತ್ತಮ ನಟಿ, ಸಿಕ್ರಿಗೆ ಅತ್ಯುತ್ತಮ ಪೋಷಕ ನಟಿ, ಮತ್ತು ರಾವ್‍ರಿಗೆ ಅತ್ಯುತ್ತಮ ಪೋಷಕ ನಟ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿತು.[] ಇದು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಗೆದ್ದಿತು: ಹಿತಕರ ಮನೋರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಮತ್ತು ಸಿಕ್ರಿಗೆ ಅತ್ಯುತ್ತಮ ಪೋಷಕ ನಟಿ.[]

ಕಥಾವಸ್ತು

[ಬದಲಾಯಿಸಿ]

ನಕುಲ್ ಕೌಶಿಕ್ (ಆಯುಷ್ಮಾನ್ ಖುರಾನಾ) ಕೆಲಸ ಮಾಡುತ್ತಿರುವ ೨೫ ವರ್ಷದ ಹುಡುಗನಾಗಿದ್ದು ತನ್ನ ಸಹೋದ್ಯೋಗಿ ರೆನಿಯೊಂದಿಗೆ (ಸಾನ್ಯಾ ಮಲ್ಹೋತ್ರಾ) ಸ್ಥಿರ ಸಂಬಂಧ ಹೊಂದಿರುತ್ತಾನೆ. ಅವಳ ತಾಯಿ ಸಂಗೀತಾ (ಶೀಬಾ ಚಡ್ಢಾ) ಅವನನ್ನು ಇಷ್ಟಪಟ್ಟು ಅವರ ಸಂಬಂಧವನ್ನು ಒಪ್ಪುತ್ತಾಳೆ. ಅವನ ತಂದೆ ಜೀತೇಂದರ್ ಕೌಶಿಕ್ (ಗಜರಾಜ್ ರಾವ್) ರೇಲ್ವೆದಲ್ಲಿ ಕೆಲಸಮಾಡುವ ಮಧ್ಯಮ ವಯಸ್ಸಿನ ವ್ಯಕ್ತಿಯಾಗಿರುತ್ತಾನೆ. ಅವನ ತಾಯಿ ಪ್ರಿಯಂವದಾ (ನೀನಾ ಗುಪ್ತಾ) ಸಾಮಾನ್ಯ ಗೃಹಿಣಿಯಾಗಿರುತ್ತಾಳೆ. ಅವನ ತಮ್ಮ ಗುಲ್ಲರ್ (ಶಾರ್ದುಲ್ ರಾಣಾ) ಪ್ರೌಢಶಾಲಾ ವಿದ್ಯಾರ್ಥಿಯಾಗಿರುತ್ತಾನೆ. ಅವನ ಅಜ್ಜಿ ದುರ್ಗಾ (ಸುರೇಖಾ ಸಿಕ್ರಿ) ಯಾವಾಗಲೂ ಪ್ರಿಯಂವದಾಳೊಂದಿಗೆ ಜಗಳವಾಡುತ್ತಿರುತ್ತಾಳೆ ಮತ್ತು ತನ್ನ ಮಗ ಜೀತುನನ್ನು ಹಿಡಿತದಲ್ಲಿರಿಕೊಂಡಿರುತ್ತಾಳೆ. ಒಂದು ದಿನ ಅವಳು ಪ್ರಿಯಂವದಾಳನ್ನು ಮೂದಲಿಸಿದಾಗ ಅವಳು ನಿರಾಶಳಾಗುತ್ತಾಳೆ. ಜೀತು ತನ್ನ ಹೆಂಡತಿಗೆ ಸಾಂತ್ವನಗೊಳಿಸುತ್ತಾನೆ ಮತ್ತು ಅವರಿಬ್ಬರು ಒಂದಾಗುತ್ತಾರೆ.

೧೯ ವಾರಗಳ ನಂತರ, ತಾನು ಗರ್ಭಿಣಿ ಎಂದು ಪ್ರಿಯಂವದಾಗೆ ಅರಿವಾಗುತ್ತದೆ. ಗರ್ಭಪಾತ ಮಾಡಿಸಿಕೊಳ್ಳುವುದು ಪಾಪಕರವೆಂದು ಅವಳಿಗೆ ಕಾಣುತ್ತದೆ. ಜೀತು ಕುಟುಂಬದವರಿಗೆ ಪ್ರಿಯಂವದಾಳ ಮೂರನೇ ಬಸಿರಿನ್ನು ಘೋಷಿಸುತ್ತಾನೆ. ಇಬ್ಬರು ಪುತ್ರರಿಗೆ ಮುಜುಗರವಾಗಿ ತಮ್ಮ ಹೆತ್ತವರು, ಸ್ನೇಹಿತರು ಮತ್ತು ಸಮಾಜದಿಂದ ತಪ್ಪಿಸಿಕೊಳ್ಳಲು ಆರಂಭಿಸುತ್ತಾರೆ. ಅವರ ಅಜ್ಜಿಗೂ ದಿಗಿಲಾಗಿ ಅಸಂತೋಷವಾಗುತ್ತದೆ.

ಈ ಸುದ್ದಿಯು ಬೇಗನೇ ಹರಡುತ್ತದೆ ಮತ್ತು ಅವರನ್ನು ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಮತ್ತು ಸಮಾಜದವರು ಹಾಸ್ಯ ಮಾಡುತ್ತಾರೆ. ನಕುಲ್ ರೆನಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಜೀತು ಮತ್ತು ಪ್ರಿಯಂವದಾ ತಮ್ಮ ಸೋದರಸಂಬಂಧಿಯ ಮದುವುಗೆ ಮೀರಟ್‍ಗೆ ತಮ್ಮ ಜೊತೆಗೆ ಬರುವಂತೆ ನಕುಲ್ ಮತ್ತು ಗುಲ್ಲರ್‌ನನ್ನು ಕೇಳಿಕೊಳ್ಳುತ್ತಾರೆ. ಇಬ್ಬರೂ ನೆಪಗಳನ್ನು ಹೇಳಿ ನಿರಾಕರಿಸುತ್ತಾರೆ. ಇದರಿಂದ ಜೀತುಗೆ ಸಿಟ್ಟುಬರುತ್ತದೆ ಮತ್ತು ಅವನು ತನ್ನ ಹೆಂಡತಿ ಹಾಗೂ ತಾಯಿಯೊಂದಿಗೆ ತೆರಳುತ್ತಾನೆ. ಈ ನಡುವೆ, ನಕುಲ್‍ನನ್ನು ಹುರಿದುಂಬಿಸಲು ರೆನಿ ಕೋಣೆ ಭೇಟಿಯ ಪ್ರಸ್ತಾಪವಿಡುತ್ತಾಳೆ. ಆದರೆ ಅವನು ಅವಳೊಂದಿಗೆ ನಿಕಟವಾಗಲು ಆಗುವುದಿಲ್ಲ, ಏಕೆಂದರೆ ಅದು ಅವನಿಗೆ ಅವನ ತಾಯಿಯ ಬಸಿರಿನ ನೆನಪು ತರುತ್ತದೆ. ಸಂಗೀತಾಗೆ ರೆನಿಯಿಂದ ನಕುಲ್‍ನ ತಾಯಿಯ ಬಸಿರಿನ ಬಗ್ಗೆ ಗೊತ್ತಾಗುತ್ತದೆ. ಅವಳಿಗೆ ಅಸಹ್ಯವಾಗಿ ಕೌಶಿಕ್ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾಳೆ. ನಕುಲ್ ಇದನ್ನು ಕದ್ದು ಕೇಳಿಸಿಕೊಂಡು ಸಂಗೀತಾಳೊಂದಿಗೆ ಒರಟಾಗಿ ವರ್ತಿಸುತ್ತಾನೆ, ಮತ್ತು ರೆನಿಯೊಂದಿಗೆ ಸಂಬಂಧ ಮುರಿದುಕೊಳ್ಳುತ್ತಾನೆ.

ಮೀರಟ್ ಮತ್ತು ಮುಜ಼ಫ್ಫರ್‌ನಗರದಲ್ಲಿ, ಜೀತುನ ಹಿರಿಯ ಅತ್ತಿಗೆ (ಅಲ್ಕಾ ಅಮೀನ್) ಮತ್ತು ಸೋದರಿ (ಅಲ್ಕಾ ಕೌಶಲ್) ಪ್ರಿಯಂವದಾಳೊಂದಿಗೆ ಅವಳ ತಡವಾದ ಬಸಿರಿನ ಬಗ್ಗೆ ಒರಟಾಗಿ ಮಾತಾಡುತ್ತಾರೆ. ಮೊದಲ ಬಾರಿಗೆ, ಅವನ ತಾಯಿಯು ಅವಳ ಕರ್ತವ್ಯಕ್ಕಾಗಿ ತನ್ನ ಸೊಸೆಯ ಪಕ್ಷವಹಿಸುತ್ತಾಳೆ ಮತ್ತು ಅವರಿಗೆ ಅವಳ ಕುರಿತು ಅವರ ಸ್ವಾರ್ಥ ಮತ್ತು ಕೀಳಾದ ಮನೋಭಾವವನ್ನು ಅರಿವಾಗುವಂತೆ ಮಾಡುತ್ತಾಳೆ.

ಶಾಲೆಯಲ್ಲಿ ಕೆಲವು ಹುಡುಗರು ತನ್ನ ತಾಯಿಯ ಬಸಿರಿನ ಬಗ್ಗೆ ತಮಾಷೆ ಮಾಡಿದರು ಮತ್ತು ತಾನು ಅವರಿಗೆ ಪ್ರತಿಕ್ರಿಯಿಸಿದಾಗ, ಒಬ್ಬನು ತನಗೆ ಹೊಡೆದನು ಎಂದು ಗುಲ್ಲರ್ ನಕುಲ್‍ಗೆ ಹೇಳುತ್ತಾನೆ. ನಕುಲ್ ಮರುದಿನ ಶಾಲೆಗೆ ಹೋಗುತ್ತಾನೆ ಮತ್ತು ಗುಲ್ಲರ್ ಆ ಹುಡುಗನ ಕಪಾಳಕ್ಕೆ ಮೂರು ಸಲ ಹೊಡೆಯುತ್ತಾನೆ. ನಕುಲ್ ತನ್ನ ಸ್ವಂತ ಸ್ನೇಹಿತರನ್ನು ಭೇಟಿಯಾಗುತ್ತಾನೆ ಮತ್ತು ಅವರಲ್ಲಿ ಒಬ್ಬನು ಅವನನ್ನು ಮೂದಲಿಸಿದಾಗ, ಅವನು ತಕ್ಕ ಉತ್ತರವನ್ನು ಕೊಡುತ್ತಾನೆ. ಅವನು ತನ್ನ ತಂದೆತಾಯಿಗಳೊಂದಿಗೆ ರಾಜಿ ಮಾಡಿಕೊಂಡು ಮಗನಾಗಿ ತನ್ನ ಕರ್ತವ್ಯಗಳನ್ನು ಪೂರೈಸಲು ಆರಂಭಿಸುತ್ತಾನೆ. ನಕುಲ್ ರೆನಿಯೊಂದಿಗೆ ಸಂಬಂಧವನ್ನು ಮುರಿದುಕೊಂಡಿದ್ದಾನೆಂದು ಪ್ರಿಯಂವದಾಗೆ ಅರಿವಾಗುತ್ತದೆ, ಮತ್ತು ರೆನಿಯ ತಾಯಿಯ ಹತ್ತಿರ ಕ್ಷಮೆ ಕೇಳುವಂತೆ ಅವಳು ಅವನಿಗೆ ಹೇಳುತ್ತಾಳೆ. ನಕುಲ್ ಮನಸ್ಸಿಲ್ಲದೆಯೇ ಒಪ್ಪುತ್ತಾನೆ.

ಸೀಮಂತದ ಸಿದ್ಧತೆಗಳು ಆರಂಭವಾದಂತೆ, ಪ್ರಿಯಂವದಾಗೆ ಹೆರಿಗೆ ನೋವು ಶುರುವಾಗುತ್ತದೆ ಮತ್ತು ಅವಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಸಂಗೀತಾ ರೆನಿಗೆ ನಕುಲ್‍ನ ಕ್ಷಮೆ ಕೋರಿಕೆ ಬಗ್ಗೆ ಮತ್ತು ತಾನೂ ನಕುಲ್‍ನನ್ನು ಕ್ಷಮಿಸಿರುವುದಾಗಿ ಹೇಳುತ್ತಾಳೆ. ರೆನಿ ನಕುಲ್‍ನ ಮನೆಗೆ ಮತ್ತು ಆಮೇಲೆ ಆಸ್ಪತ್ರೆಗೆ ಅವಸರವಾಗಿ ಹೋಗುತ್ತಾಳೆ.

೧೫ ತಿಂಗಳ ನಂತರ, ನಕುಲ್ ಮತ್ತು ರೆನಿಯ ನಿಶ್ಚಿತಾರ್ಥವಾಗುತ್ತದೆ.

ಪಾತ್ರವರ್ಗ

[ಬದಲಾಯಿಸಿ]
  • ನಕುಲ್ ಕೌಶಿಕ್ ಆಗಿ ಆಯುಷ್ಮಾನ್ ಖುರಾನಾ
  • ರೆನೀ ಶರ್ಮಾ ಆಗಿ ಸಾನ್ಯಾ ಮಲ್ಹೋತ್ರಾ
  • ಪ್ರಿಯಂವದಾ ಕೌಶಿಕ್ ಆಗಿ ನೀನಾ ಗುಪ್ತಾ
  • ಜೀತೇಂದ್ರ ಕೌಶಿಕ್ ಆಗಿ ಗಜರಾಜ್ ರಾವ್
  • ದುರ್ಗಾ ದೇವಿ ಕೌಶಿಕ್ ಆಗಿ ಸುರೇಖಾ ಸಿಕ್ರಿ
  • ಸಂಗೀತಾ ಶರ್ಮಾ ಆಗಿ ಶೀಬಾ ಚಡ್ಢಾ
  • ಗುಲ್ಲರ್ ಕೌಶಿಕ್ ಆಗಿ ಶಾರ್ದುಲ್ ರಾಣಾ
  • ಜುನಾ ಆಗಿ ರಾಹುಲ್ ತಿವಾರಿ
  • ಗುಡ್ಡನ್ ಕೌಶಿಕ್ ಆಗಿ ಅಲ್ಕಾ ಕೌಶಲ್
  • ಸುನಿಲ್ ಆಗಿ ಅರುಣ್ ಕಾಲ್ರಾ
  • ಮನೋರಮಾ ಕೌಶಿಕ್ ಆಗಿ ಅಲ್ಕಾ ಅಮೀನ್

ತಯಾರಿಕೆ

[ಬದಲಾಯಿಸಿ]

ಚಲನಚಿತ್ರವನ್ನು ಎರಡು ಯೋಜನೆಗಳಲ್ಲಿ ಚಿತ್ರೀಕರಿಸಲಾಯಿತು. ಪ್ರಧಾನ ಛಾಯಾಗ್ರಹಣವು ೨೯ ಜನೆವರಿ ೨೦೧೮ರಂದು ಪ್ರಾರಂಭವಾಯಿತು. ಮೊದಲ ಯೋಜನೆಯು ಮುಂಬಯಿಯಲ್ಲಿ ೧೧ ಫ಼ೆಬ್ರುವರಿಯಂದು ಮುಗಿಯಿತು. ಎರಡನೇ ಯೋಜನೆಯು ೧೬ ಫ಼ೆಬ್ರುವರಿ ೨೦೧೮ರಲ್ಲಿ ದೆಹಲಿಯಲ್ಲಿ ಆರಂಭವಾಗಿ ೨೧ ಮಾರ್ಚ್ ೨೦೧೮ರಂದು ಮುಗಿಯಿತು.[]

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

[ಬದಲಾಯಿಸಿ]

ಬಾಕ್ಸ್ ಆಫ಼ಿಸ್

[ಬದಲಾಯಿಸಿ]

ಏಳು ವಾರಗಳ ಕೊನೆಗೆ ಬಧಾಯಿ ಹೋ ಭಾರತದ ಬಾಕ್ಸ್ ಆಫ಼ಿಸ್‍ನಲ್ಲಿ ₹135.95 ಕೋಟಿಗಳಷ್ಟು ಗಳಿಸಿತ್ತು.[೧೦][೧೧] ಇದರ ಅಂತಿಮ ವಿಶ್ವಾದ್ಯಂತ ಗಳಿಕೆಯು ₹221.48 ಕೋಟಿ ಆಗಿತ್ತು.

ರೀಮೇಕ್

[ಬದಲಾಯಿಸಿ]

ಈ ಚಲನಚಿತ್ರವನ್ನು ಬೋನಿ ಕಪೂರ್ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ರೀಮೇಕ್ ಮಾಡಲಿದ್ದಾರೆ.[೧೨]

ಧ್ವನಿವಾಹಿನಿ

[ಬದಲಾಯಿಸಿ]

ಹಾಡುಗಳನ್ನು ತನಿಷ್ಕ್ ಬಾಗ್ಚಿ, ರೋಚಕ್ ಕೋಹ್ಲಿ, ಜ್ಯಾಮ್ಏಟ್ ಮತ್ತು ಸನಿ ಬಾವ್ರಾ-ಇಂದರ್ ಬಾವ್ರಾ ಸಂಯೋಜಿಸಿದ್ದಾರೆ. ಗೀತೆಗಳಿಗೆ ಸಾಹಿತ್ಯವನ್ನು ವಾಯು, ಕುಮಾರ್ ಮತ್ತು ಮೆಲೊಡಿ ಬರೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Badhaai Ho – Movie – Box Office India". Box Office India. Retrieved 30 October 2018.
  2. "Badhaai Ho Box Office collection till Now – Bollywood Hungama". Bollywood Hungama. Retrieved 10 December 2018.
  3. "Ayushmann Khurrana commences shooting of Junglee Pictures' 'Badhaai Ho' – Bollywood films to look forward in 2018 – The Times of India". The Times of India.
  4. "Badhaai Ho: Ayushmann Khurrana, Sanya Malhotra begin shoot for Amit Sharma's upcoming film- Entertainment News, Firstpost". 2018-01-31.
  5. "Amit Sharma on Twitter". Twitter (in ಇಂಗ್ಲಿಷ್). Retrieved 2018-08-18.
  6. "Badhaai Ho Movie Wiki, News, Trailer, Songs, Cast and Crew and Release Date – Movie Alles". Movie Alles (in ಅಮೆರಿಕನ್ ಇಂಗ್ಲಿಷ್). 2018-08-18. Archived from the original on 2018-08-18. Retrieved 2018-08-18.
  7. "Winners of the 64th Vimal Filmfare Awards 2019". Filmfare. 23 March 2019. Retrieved 23 March 2019.
  8. "National Film Awards 2019: 'Andhadhun', 'Uri:The Surgical Strike' bag awards". The Hindu. 9 August 2019. Retrieved 9 August 2019.
  9. "Ayushmann Khurrana on Twitter". Twitter (in ಇಂಗ್ಲಿಷ್). Retrieved 2018-08-18.
  10. "Badhaai Ho Box Office Collection Day 6: Ayushmann Khurrana and Sanya Malhotra's Movie Continues to Rake Moolah, Collects Rs 56.85 Crores". LatestLY. 24 October 2018. Retrieved 24 October 2018.
  11. Latest, Bollywood. "Badhaai Ho Box Office Collection Day 46 (7th Sunday): Blockbuster". www.bollywoodlatestforu.com. Retrieved 6 December 2018.
  12. "Boney Kapoor set to remake 'Badhaai Ho' in four languages for South Indian audience". The Economic Times. 2019-03-19. Archived from the original on 2019-03-28. Retrieved 2019-03-21.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]