ಬಣ್ಣದ ಚಿಟ್ಟುಕೋಳಿ

ವಿಕಿಪೀಡಿಯ ಇಂದ
Jump to navigation Jump to search
ಬಣ್ಣದ ಚಿಟ್ಟುಕೋಳಿ
Painted spurfowls.png
ಗಂಡು ಮತ್ತು ಹೆಣ್ಣು- ದರೋಜಿಯಲ್ಲಿ
Conservation status
Egg fossil classification
Kingdom:
Animalia
Phylum:
Chordata
Class:
Order:
Family:
Subfamily:
Genus:
Species:
G. lunulata
Binomial nomenclature
Galloperdix lunulata
(Valenciennes, 1825)
Synonym (taxonomy)

Francolinus hardwickii

ಬಣ್ಣದ ಚಿಟ್ಟುಕೋಳಿ (ಲುನುಲಟಾ) ಹೆಚ್ಚಾಗಿ ಬೆಟ್ಟ ಮತ್ತು ಕಲ್ಲುಗಳುಳ್ಳ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಮತ್ತು ಮುಖ್ಯವಾಗಿ ಭಾರತದ ಪರ್ಯಾಯದ್ವೀಪದಲ್ಲಿನ ಕಾಡುಗಳಲ್ಲಿ ಕುರುಚಲು ಫೆಸೆಂಟ್ ಕುಟುಂಬದ ಪಕ್ಷಿಯಾಗಿದೆ. ಗಂಡು ಹಕ್ಕಿಯು ಹೆಚ್ಚು ಗಾಢ ಬಣ್ಣದ ಮತ್ತು ಬಿಳಿ ಬಣ್ಣದ ಉಗುರುಗಳನ್ನು ಹೊಂದಿರುತ್ತದೆ, ಹಾಗು ಹೆಣ್ಣು ಹಕ್ಕಿಯು ಮಾಸಲು ಬಣ್ಣದ್ದಾಗಿರುತ್ತದೆ.

ವಿವರಣೆ[ಬದಲಾಯಿಸಿ]

ಈ ಚಿಟ್ಟುಕೋಳಿಯು ಕೆಂಪು ಚಿಟ್ಟುಕೋಳಿಯಂತೆ ಬೋಳು ಮುಖವನ್ನು ಹೊಂದಿರದೆ ಅತ್ಯಂತ ವರ್ಣರಂಜಿತವಾಗಿರುತ್ತದೆ. ಗಂಡು ಹಕ್ಕಿಯು ಕಪ್ಪು ಬಾಲ ಮತ್ತು ಕತ್ತಿನ ಕೆಳಗೆ ಗಾಢವಾದ ಬಣ್ಣವನ್ನು ಹೊಂದಿರುತ್ತದೆ. ಮತ್ತು ದೇಹದ ಮೇಲಿನ ಭಾಗಗಳು ಮತ್ತು ಪುಕ್ಕಗಳು ಬಿಳಿ ಮಚ್ಚೆಗಳನ್ನು ಹೊಂದಿರುರತ್ತದೆ. ಹೆಣ್ಣು ಹಕ್ಕಿಯು ಮುಖದ ಮೇಲೆ ಕೆಂಪು ಬಣ್ಣವನ್ನು ಹೊಂದಿದ್ದು, ದೇಹವು ಆಸಲು ಬಣ್ಣವನ್ನು ಹೊಂದಿರುತ್ತದೆ. ಮತ್ತು ಎರಡು ಲಿಂಗದ ಹಕ್ಕಿಗಳಲ್ಲು ಬಾಲವು ಎತ್ತರವಾಗಿ ನಿಂತಿರುತ್ತದೆ.

ಹಂಚುವಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಬಣ್ಣದ ಚಿಟ್ಟುಕೋಳಿ ರಾಜಸ್ಥಾನದ ಅರಾವಳಿ ವ್ಯಾಪ್ತಿಯ ಕೆಲವು ಭಾಗಗಳಲ್ಲಿ, ಮಧ್ಯ ಭಾರತದ ಬೆಟ್ಟಗಳ ಮತ್ತು ದಕ್ಷಿಣ ಭಾರತದ ಕಲ್ಲಿನ ಬೆಟ್ಟಗಳು ಮತ್ತು ಒಣ ಅರಣ್ಯ ಪ್ರದೇಶಗಳಲ್ಲಿ, ಆಂಧ್ರ ಪ್ರದೇಶ ಪೂರ್ವ ಘಟ್ಟಗಳ ನಲ್ಲಮಲೈ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇವುಗಳು ಹೆಚ್ಚಾಗಿ ಒಣ ಪ್ರದೇಶಗಳು, ಪೊದೆಗಳು, ಕಲ್ಲು ಬೆಟ್ಟಗಳ ಇಳಿಹಜಾರು ಪ್ರದೇಶಗಳಲ್ಲಿ ಕಂಡುಬರುತ್ತವೆ.

ನಡವಳಿಕೆ ಮತ್ತು ಪರಿಸರವಿಜ್ಞಾನ[ಬದಲಾಯಿಸಿ]

ಬಣ್ಣದ ಚಿಟ್ಟುಕೋಳಿಗಳು ಜೋಡಿ ಅಥವಾ 6 ಪಕ್ಷಿಗಳ ಸಣ್ಣ ಕುಟುಂಬಗಳಲ್ಲಿ ಕಂಡುಬರುತ್ತದೆ ಮತ್ತು ಕಡಿಮೆ ದೂರಗಳಲ್ಲಿ ಹಾರಿ, ಗಿಡಗಂಟೆಗಳ ಮೇಲೆ ಹೆಚ್ಚಾಗಿ ತಂಗುತ್ತವೆ. ಇವುಗಳ ಮುಖ್ಯ ಆಹಾರವೆಂದರೆ ಹಣ್ಣುಗಳು, ಕೀಟಗಳು ಮತ್ತು ಹೂವುಗಳು. ಮುಖ್ಯವಾಗಿ ಜೂನ್ ನಿಂದ ಫೆಬ್ರವರಿ ವರೆಗೆ ಇವುಗಳ ಸಂತಾನಭಿವೃದ್ಧಿಯ ಸಮಯ. ನೆಲದ ಮೇಲೆ ಗೂಡನ್ನು ಕಟ್ಟುವ ಈ ಹಕ್ಕಿಯು ಒಮ್ಮೆಲೆ ೪ ರಿಂದ ೫ ಮೊಟ್ಟೆಗಳನ್ನಿಡುತ್ತದೆ. ಮತ್ತು ಹೆಣ್ಣು ಹಕ್ಕಿಯು ಮೊಟ್ಟೆಗಳಿಗೆ ಕಾವನ್ನು ಕೊಡುತ್ತದೆ.ಆದರೆ ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಮರಿಗಳು ಆರೈಕೆಯನ್ನು ಮಾಡುತ್ತವೆ. ಮರಿಗಳನ್ನು ಬೇರೆ ಪ್ರಾಣಿ ಮತ್ತು ಪಕ್ಷಿಗಳಿಂದ ರಕ್ಶಿಸಲು ಇವು ಆಕ್ರಮಣಕಾರರ ದಿಕ್ಕು ತಪ್ಪಿಸುವ ಹಾವಭಾವಗಳನ್ನು ಪ್ರದರ್ಶಿಸುತ್ತವೆ.

  1. BirdLife International (2009). "Galloperdix lunulata". IUCN Red List of Threatened Species. Version 2010.4. International Union for Conservation of Nature. Retrieved 13 February 2011.CS1 maint: ref=harv (link)