ಬಂಡಾಯ ಕಾವ್ಯ
ಗೋಚರ
- ಬಂಡಾಯ ಕಾವ್ಯಕ್ಕೆ ಉದಾಹರಣೆ ಯಾಗಿ ಕೆಳಗೆ ಒಂದೆರಡು ಕವನಗಳನ್ನು ಕೊಟ್ಟಿದೆ
೨೦೦೦ ಮೇ ೧೧
[ಬದಲಾಯಿಸಿ]- ಉದಾ:
- ( ೨೦೦೦ ಮೇ ೧೧ಕ್ಕೆ ಭಾರತದ ಜನಸಂಖ್ಯೆ ೧೦೦ಕೋಟಿತಲುಪಿದೆ )
- (ವಿಶ್ವದಲ್ಲಿ ಭಾರತಕ್ಕೆ ಭ್ರಷ್ಟತೆಗೆ ಮೊದಲ ಸ್ಥಾನವೆಂದು ಪತ್ರಿಕಾವರದಿ ಬಂದಿದೆ)
- ರಚನೆ (ಚಂ)
- ಏಸುವಿಗೆ ಎರಡು ಸಾವಿರ ವರ್ಷ,
- ಭಾರತ ಮಾತೆಗೋ ನೂರು ಕೋಟಿ ಸಂತಾನ,
- ಬೇಂದ್ರೆ ಕಣ್ಣೀರಿಟ್ಟು ಬರೆದಾಗ
- ಕೇವಲ ಮೂವತ್ಮೂರು ಕೋಟಿ
- ಹೆಳವರೆಷ್ಟೋ, ಕುರುಡರೆಷ್ಟೋ,-ಅವರೆಂದದ್ದು. ||೧||
- ಮತ್ತೆ ಅದೇ ಕಥೆ ; ಇತಿಹಾಸ ಪುನರಾವರ್ತನೆ,
- ಬರಗಾಲದಲಿ ಬೆಂದವರೆಷ್ಟೋ,
- ಬಿರುಗಾಳಿಯಲಿ ಸತ್ತವರೆಷ್ಟೋ,
- ಬಡತನದ ಬೇಗೆಯಲಿ ನೋಯುವವರ-
- ಲೆಖ್ಖ ತೆಗೆಯ ಬೇಕಷ್ಟೆ ! ||೨||
- ಬಿಡುಗಡೆಯ ಭಾಷ್ಪ ಬಿದ್ದು ಐವತ್ತು ವರ್ಷ,
- ಅಷ್ಟರಲಿ ಬೆಳದದ್ದು ಸರ್ವತೋಮುಖ,
- ಎದ್ದು ಕಾಣುವುದು -ಸಂತಾನ ಭಾಗ್ಯ.
- ಅದರೊಳಗೆ ಭ್ರಷ್ಟರದೇ - ಸಾಮ್ರಾಜ್ಯ
- ಅದಕ್ಕೆ ವಿಶ್ವದಲಿ ನಮಗೇ ಮೊದಲ ಸ್ಥಾನ. ||೩||
- ಧರ್ಮ ಜಾಗ್ರತಿಯ ಚಳವಳಿಯೋ,
- ಸಂಸ್ಸೃತಿಯ ಮೆರುಗು ಪ್ರವಚನವೊ,
- ಕೇರಿಕೇರಿಯಲಿ ಗಂಟೆ ಮೊಳಗು - ದೇವರೆಷ್ಟೋ !
- ಕೂಗಿ ಕರೆವರೆಷ್ಟೋ ,ಮೌನದಲಿ ಮೊರೆಯೆಷ್ಟೋ!
- ಕೇಳಿಸಿಕೊಂಡಿದ್ದಕ್ಕೆ ಪ್ರಮಾಣವೆಲ್ಲಿ ? ||೪||
- ಕಂದಾಚಾರ, ಬಯಲಾಡಂಬರದ ಪಾದದಡಿ,
- ಸತ್ಯ , ಪ್ರಾಮಾಣಿಕತೆ, ಶಾಂತಿ ಸೊರಗಿ,
- ಭ್ರಷ್ಠತೆಯ ಮಸಿ ನುಂಗಿ ಬಣ್ಣಗಳೆಲ್ಲ ಶೂನ್ಯ.
- ಅಂಧಶ್ರದ್ಧೆ, ಗುಂಡು-ರಕ್ತದೋಕುಳಿಯಲ್ಲಿ
- ರಾಮ ರಾಜ್ಯದ ಕನಸು ಕನಸಾಗಿಯೇ ಹೋಯ್ತು! ||೫||
ನೋಡಿ
[ಬದಲಾಯಿಸಿ]ಕನ್ನಡ ಸಾಹಿತ್ಯ ಪ್ರಕಾರಗಳು | ಕನ್ನಡ ಕಾವ್ಯ ಪ್ರಕಾರಗಳು | ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ