ವಿಷಯಕ್ಕೆ ಹೋಗು

ಫಾಸ್ಟ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Fast & Furious
ಚಿತ್ರ:Fast and Furious Poster.jpg
Theatrical movie poster
ನಿರ್ದೇಶನJustin Lin
ನಿರ್ಮಾಪಕNeal H. Moritz
Vin Diesel
Michael Fottrell
Co-Producer:
Ricardo Del Río
Executive Producer:
Samantha Vincent
ಲೇಖಕScreenplay:
Chris Morgan
Characters:
Gary Scott Thompson
ಪಾತ್ರವರ್ಗVin Diesel
Paul Walker
Michelle Rodriguez
Jordana Brewster
John Ortiz
Laz Alonso
Gal Gadot
ಸಂಗೀತBrian Tyler
ಛಾಯಾಗ್ರಹಣAmir Mokri
ಸಂಕಲನFred Raskin
Christian Wagner
ಸ್ಟುಡಿಯೋRelativity Media
Original Film
One Race Films
Universal Pictures
Neal H. Moritz Productions
ವಿತರಕರುUniversal Pictures
ಬಿಡುಗಡೆಯಾಗಿದ್ದುApril 3, 2009
ಅವಧಿ107 minutes
ದೇಶಟೆಂಪ್ಲೇಟು:FilmUS
ಭಾಷೆEnglish
ಬಂಡವಾಳ$85 million []
ಬಾಕ್ಸ್ ಆಫೀಸ್$359,264,265[]

ಫಾಸ್ಟ್‌ & ಫ್ಯೂರಿಯಸ್‌ ಚಿತ್ರವು ದಿ ಫಾಸ್ಟ್‌ ಆಂಡ್‌ ದಿ ಫ್ಯೂರಿಯಸ್‌ 4 ಎಂದೂ ಜನಪ್ರಿಯವಾಗಿದ್ದು, ದಿ ಫಾಸ್ಟ್‌ ಆಂಡ್‌ ದಿ ಫ್ಯೂರಿಯಸ್‌ ಚಲನಚಿತ್ರ ಸರಣಿಯ ನಾಲ್ಕನೇ ಚಿತ್ರವಾಗಿದೆ. ಈ ಚಿತ್ರ 2009ರ ಎಪ್ರಿಲ್‌ 3ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಕಥಾವಸ್ತು ಸರಣಿಯ ಮ‌ೂಲ ಚಿತ್ರದೊಂದಿಗೆ ಸಂಪರ್ಕ ಹೊಂದಿದೆ. ಮ‌ೂಲ ಚಿತ್ರದಲ್ಲಿ ನಟಿಸಿರುವ ವಿನ್‌ ಡೀಸಲ್‌‌, ಪೌಲ್ ವಾಕರ್‌, ಮಿಚೆಲ್‌ ರೊಡ್ರಿಗೋಜ್‌, ಮತ್ತು ಜೋರ್ಡನ ಬ್ರೆವ್‌ಸ್ಟರ್‌ ಅವರು ಮತ್ತೆ ಅದೇ ಪಾತ್ರಗಳಲ್ಲಿ ಅಭಿನಯಿಸಿರುವರು. [][] ಈ ಚಿತ್ರವನ್ನು ಜಸ್ಟಿನ್ ಲಿನ್‌ ನಿರ್ದೇಶಿಸಿದ್ದಾರೆ. ಸರಣಿಯ ಮ‌ೂರನೇ ಕಂತನ್ನು ಸಹ ಅವರೇ ನಿರ್ದೇಶಿಸಿದ್ದರುThe Fast and the Furious: Tokyo Drift .


ಕಥಾವಸ್ತು

[ಬದಲಾಯಿಸಿ]

ಡಾಮಿನಿಕ್‌ ರಿಪಬ್ಲಿಕ್‌ನಲ್ಲಿ ಡೊಮಿನಿಕ್ ಟೊರೆಟ್ಟೊ ಮತ್ತು ಅವನ ಹೊಸ ತಂಡವು ಇಂಧನ ಟ್ಯಾಂಕರ್‌ಗಳನ್ನು ಅಪಹರಿಸುತ್ತಿರುವ ದೃಶ್ಯದೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಟೊರೊಟ್ಟೊನ ತಂಡದಲ್ಲಿ ಲೆಟ್ಟಿ, ರಿಕೊ, ಟೆಗೊ ಮತ್ತು ಹ್ಯಾನ್ ಲ್ಯೂ ಇರುತ್ತಾರೆ. ಅಪಹರಣದ ನಂತರ, ಟ್ಯಾಂಕರ್‌ನ ಹಿಂತುದಿ ತುಂಬಾ ಬಿಸಿಯಾಗಿರುವುದನ್ನು ಗಮನಿಸುವ ಡೊಮಿನಿಕ್‌, "ನಿನ್ನದೇ ಏನಾದರೂ ಕೆಲಸಗಳನ್ನು ಮಾಡಲು" ನಿನಗಿದು ಸಕಾಲ ಎಂದು ಹ್ಯಾನ್‌ಗೆ ಹೇಳುತ್ತಾನೆ. ಇದರ ಬಳಿಕ ಬೇರೆಡೆಗೆ ಹೋಗುವ ಉದ್ದೇಶದಿಂದ, ಲೆಟ್ಟಿಯನ್ನು ಡೊಮ್‌ ತೊರೆಯುತ್ತಾನೆ. ನಂತರ ಟೊರಟ್ಟೊ ಪನಾಮ ಸಿಟಿಯಲ್ಲಿರುವಾಗ, ಅವನಿಗೆ ತಂಗಿ ಮೀಯಾಳಿಂದ ದೂರವಾಣಿ ಕರೆ ಬರುತ್ತದೆ, ಮತ್ತು ಲಿಟ್ಟಿ ಕೊಲೆಯಾಗಿರುವ ಸಂಗತಿ ತಿಳಿಯುತ್ತದೆ. ಕೂಡಲೇ ಲಾಸ್ ಎಂಜಲೀಸ್‌ಗೆ ಡೊಮ್ ಮರಳುತ್ತಾನೆ, ಮತ್ತು ಲೆಟ್ಟಿ ಅಪಘಾತಕ್ಕೊಳಗಾದ ಕಾರನ್ನು ಪರೀಕ್ಷಿಸುತ್ತಾನೆ. ಅಲ್ಲಿ ನೈಟ್ರೋಮಿಥೇನ್‌ ಜಾಡು ಅವನಿಗೆ ಸಿಗುತ್ತದೆ. ನಂತರ ಡೊಮ್‌ ನೈಟ್ರೋಮಿಥೇನ್‌ ಬಳಸುವ ಏಕಮಾತ್ರ ಕಾರ್‌ ಮೆಕ್ಯಾನಿಕ್ ಬಳಿಗೆ ಹೋಗಿ, ಆ ಇಂಧನಕ್ಕಾಗಿ ಬೇಡಿಕೆ ಸಲ್ಲಿಸಿದ ಡೇವಿಡ್ ಪಾರ್ಕ್‌ನ ಹೆಸರನ್ನು ನೀಡುವಂತೆ ಮೆಕ್ಯಾನಿಕ್‌ ನನ್ನು ಒತ್ತಾಯಿಸುತ್ತಾನೆ.


ಈ ನಡುವೆ, ಮಾದಕ ವಸ್ತುಗಳ ವ್ಯಾಪಾರಿ ಅರ್ಟುಟೊ ಬ್ರಾಗಾನನ್ನು ಪತ್ತೆಹಚ್ಚಲು FBI ಏಜೆಂಟ್‌ ಬ್ರಿಯಾನ್ ಒ'ಕಾನ್ನರ್‌ ಪ್ರಯತ್ನಿಸುತ್ತಿರುತ್ತಾನೆ. ಅವನ ಹುಡುಕಾಟ ಡೇವಿಡ್ ಪಾರ್ಕ್‌ನ ಇರುವಲ್ಲಿಗೆ ಒಯ್ಯುತ್ತದೆ. ಇದಕ್ಕೂ ಮೊದಲೇ ಪಾರ್ಕ್‌ ಇರುವ ಸಂಕೀರ್ಣವನ್ನು ತಲುಪುವ ಡೊಮ್‌, ಮತ್ತು ಪಾರ್ಕ್ ಓಡಿ ಹೋಗುವುದರ ಒಳಗೆ ಅವನನ್ನು ತಲೆಕೆಳಗು ಮಾಡಿ ಕಿಟಕಿಯ ಹೊರಗೆ ತೂಗು ಹಾಕುತ್ತಾನೆ. ಅಷ್ಟರಲ್ಲಿ ಧಾವಿಸುವ ಬ್ರಿಯಾನ್, ಪಾರ್ಕ್‌‌ನನ್ನು ಬದುಕಿಸುತ್ತಾನೆ. ನಂತರ ಪಾರ್ಕ್ FBIಯ ಹೊಸ ಮಾಹಿತಿದಾರನಾಗುತ್ತಾನೆ. ಲಾಸ್‌ ಎಂಜಲೀಸ್‌‌ನಲ್ಲಿ ಹಾದು ಹೋಗುವ ಸ್ಟ್ರೀಟ್ ರೇಸ್‌ನಲ್ಲಿ ಭಾಗವಹಿಸುವಂತೆ ಬ್ರಿಯಾನ್‌ನನ್ನು ಪಾರ್ಕ್‌ ಮನವೊಲಿಸುತ್ತಾನೆ; ಈ ರೇಸ್‌ನ ವಿಜೇತರು, ಅಮೆರಿಕ ಸಂಯುಕ್ತ ಸಂಸ್ಥಾನ-ಮೆಕ್ಸಿಕೊ ಗಡಿ ಮ‌ೂಲಕ ಬ್ರಾಗನಿಗೆ ಹೆರಾಯಿನ್‌‌ ಸಾಗಾಣಿಕೆಯಲ್ಲಿ ತೊಡಗಿರುವ ತಂಡದಲ್ಲಿ ಕೊನೆಯ ಚಾಲಕರಾಗಿ ಸೇರಿಕೊಳ್ಳುವರು. ಪೋಲಿಸರ ವಶದಲ್ಲಿದ್ದ ನಿಸಾನ್‌ ಸ್ಕೈಲೈನ್‌ GT-R ಅನ್ನು (ಇದು ಆಧುನೀಕರಿಸಿದ GT-T R34) ರೇಸ್‌ಗೆ ಬ್ರಿಯಾನ್‌ ಆಯ್ಕೆ ಮಾಡಿಕೊಳ್ಳುತ್ತಾನೆ. ರೇಸ್‌ನಲ್ಲಿ ಡೊಮ್‌ ಕೂಡ ಸ್ಪರ್ಧಿಸಿರುತ್ತಾನೆ. ರೇಸ್‌ನ ಕೊನೆಯಲ್ಲಿ ಡೊಮ್‌ ಮತ್ತು ಬ್ರಿಯಾನ್‌ ನಡುವೆ ತೀವ್ರ ಸ್ಪರ್ಧೆ ಏರ್ಪಡುತ್ತದೆ. ಬ್ರಿಯಾನ್‌ನ ಕಾರಿನ ಹಿಂದಿನ ಫೆಂಡರ್‌ಗೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಡೊಮ್‌ ವಿಜಯಿಯಾಗುತ್ತಾನೆ, ಇದರಿಂದಾಗಿ ಬ್ರಿಯಾನ್‌ನ ಕಾರು ವೇಗವಾಗಿ ಗಿರಕಿ ಹೊಡೆದು ಸ್ಪರ್ಧೆಯಿಂದ ಹೊರಗೆ ಬೀಳುತ್ತದೆ. ಸ್ಪರ್ಧೆಯಿಂದ ಹೊರಬಿದ್ದರೂ ತನ್ನ ಅಧಿಕಾರವನ್ನು ಬಳಸಿಕೊಳ್ಳುವ FBI ಏಜೆಂಟ್‌ ಬ್ರಿಯಾನ್‌, ಹೆರಾಯಿನ್ ಸಾಗಾಣಿಕೆ ತಂಡದ ಇನ್ನೊಬ್ಬ ಚಾಲಕ ಡ್ವಿಟ್ ಮುಲ್ಲರ್‌ನನ್ನು ಬಂಧಿಸಿ ಅವನ ಜಾಗದಲ್ಲಿ ತಂಡವನ್ನು ಸೇರಿಕೊಳ್ಳುತ್ತಾನೆ.


ಇದಾದ ಒಂದು ದಿನದ ನಂತರ ಟೊರೆಟ್ಟೊ ತಂಡವು, ಬ್ರಾಗಾನ ಸಹಚರರಲ್ಲಿ ಒಬ್ಬನಾದ ಫೆನಿಕ್ಸ್‌ನನ್ನು ಭೇಟಿ ಮಾಡುತ್ತದೆ. ಲೆಟ್ಟಿಯನ್ನು ಹತ್ಯೆಗೈದ ಪಾತಕಿ ಫೆನಿಕ್ಸ್ ಎಂಬ ಸತ್ಯಸಂಗತಿ ಡೊಮ್‌ಗೆ ತನ್ನ ತಂಡದಿಂದ ತಿಳಿದು ಬರುತ್ತದೆ. ಪೋಲಿಸರ ಕಣ್ತಪ್ಪಿಸುವ ಸಲುವಾಗಿ ಟೊರೆಟ್ಟೊ ತಂಡ ಗಡಿಯುದ್ದಕ್ಕೂ ಇರುವ ಸುರಂಗ ಮಾರ್ಗದ ಮ‌ೂಲಕ ಪ್ರಯಾಣಿಸುತ್ತದೆ. ಹೆರಾಯಿನ್‌ ತಲುಪಿಸಿದ ನಂತರ, ಚಾಲಕರನ್ನು ಸಾಯಿಸುವಂತೆ ಬ್ರಾಗಾ ಆದೇಶಿಸಿರುವುದು ಬ್ರಿಯಾನ್‌ಗೆ ಮೊದಲೇ ತಿಳಿದಿರುತ್ತದೆ (ಒಂದೆಡೆ ಲಿಟ್ಟಿಯ ಹತ್ಯೆಯಾಗಿದೆ..ಇನ್ನೊಂದೆಡೆ ತನಗೆ ಬೇಕಾಗಿರುವ ಡೊಮ್‌ ಕೂಡ ಸ್ವತಂತ್ರವಾಗಿ ಓಡಾಡುತ್ತಿದ್ದಾನೆ, ಹೀಗಿದ್ದೂ ಬ್ರಾಗನನ್ನು ಬಂಧಿಸುವುದಕ್ಕಾಗಿ ರಹಸ್ಯವಾಗಿ ಕಾರ್ಯಾಚರಣೆ ನಡೆಸಲು ಲೆಟ್ಟಿಯ ವೇಷ ಧರಿಸುವಲ್ಲಿ ಬ್ರಿಯಾನ್ ಯಶಸ್ವಿಯಾಗುತ್ತಾನೆ). ಎಲ್ಲ ಚಾಲಕರು ತಮ್ಮ ಕಾರುಗಳಿಂದ ಕೆಳಗಿಳಿದಾಗ, ಇಲ್ಲಿ ಏನೋ ಎಡವಟ್ಟಾಗಿದೆ ಎಂಬುದು ಡೊಮ್‌‌ ಅರಿವಿಗೆ ಬರುತ್ತದೆ, ಅವನು ತನ್ನ ಕಾರಿನ ನೈಟ್ರಸ್‌ ಆಕ್ಸೈಡ್‌ ಟ್ಯಾಂಕಿಗೆ ಸಂಪರ್ಕಿಸಿದ ಕೊಳವೆಯನ್ನು ಕಳಚಿ, ಸಿಗರೇಟ್ ಲೈಟರ್ ಮ‌ೂಲಕ ಉರಿಸುವುದಕ್ಕೆ ಸಿದ್ಧಗೊಳಿಸಿ ಸ್ಫೋಟಗೊಳ್ಳಲು ತನ್ನ ಚೆವೆಲ್ಲೆ ಕಾರನ್ನು ಅಣಿಗೊಳಿಸುತ್ತಾನೆ. ಕೆಲವು ಉದ್ವಿಗ್ನ ಕ್ಷಣಗಳ ನಂತರ, ಡೊಮ್‌ನ ಕಾರು ಸ್ಪೋಟಗೊಳ್ಳುತ್ತದೆ. ಈ ಘಟನೆಯಿಂದ ಬ್ರಾಗಾನ ಮಂದಿ ದಿಗ್ಭ್ರಾಂತರಾಗುತ್ತಾರೆ. ಈ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಬ್ರಿಯಾನ್‌‌ USD $60 ದಶಲಕ್ಷ ಮೌಲ್ಯದ ಹೆರಾಯಿನ್‌‌ ಇರುವ ಹಮ್ಮರ್(ವಾಹನ)ಅನ್ನು ಅಪಹರಿಸುತ್ತಾನೆ. ಡೊಮ್ ಮತ್ತು ಬ್ರಿಯಾನ್ ಇಬ್ಬರೂ ಹಮ್ಮರ್‌ನೊಂದಿಗೆ ಲಾಸ್‌ ಎಂಜಲೀಸ್ ಕಡೆಗೆ ವಾಪಸಾಗುತ್ತಾರೆ ಮತ್ತು ಹೆರಾಯಿನ್‌‌ ಅನ್ನು ಪೋಲಿಸ್‌ ವಶದಲ್ಲಿ ಅಡಗಿಸಿಡುತ್ತಾರೆ. ಹೆರಾಯಿನ್‌‌ ವಿನಿಮಯ ಹಣವನ್ನು ತೋರಿಸುವಂತೆ ಬ್ರಾಗಾನ ಮೇಲೆ ಒತ್ತಡ ಹೇರಿ, ಆತನನ್ನು ಇಲ್ಲಿಗೆ ಬರಿಸಿ ಪೊಲೀಸರ ಬಲೆಗೆ ಬೀಳುವಂತೆ ಮಾಡಬಹುದೆಂದು ಬ್ರಿಯಾನ್ ತನ್ನ ಹಿರಿಯ ಸಹೋದ್ಯೋಗಿಗಳಿಗೆ ತಿಳಿಸುತ್ತಾನೆ. ಪೋಲಿಸರು ಡೊಮ್‌ನನ್ನು ಕ್ಷಮಿಸಿದರೆ ಮಾತ್ರ, ತಾನು ಈ ಕೆಲಸವನ್ನು ಮಾಡುವುದಾಗಿ ಎಂದು ಬ್ರಿಯಾನ್ ಹೇಳುತ್ತಾನೆ. ಆದರೆ ಎಲ್ಲವೂ ಯೋಜನೆಯಂತೆ ನಡೆಯುವುದಿಲ್ಲ. ಆ ಸ್ಥಳದಲ್ಲಿದ್ದುಕೊಂಡು ಬ್ರಾಗಾ ಎಂದು ಹೇಳಿಕೊಂಡಾತ ವಂಚಕ ಮಾತ್ರವಲ್ಲದೆ, ಆ ಹೆಸರು ಮಾತ್ರ ಇಟ್ಟುಕೊಂಡಿರುತ್ತಾನೆ. ನಿಜವಾದ ಬ್ರಾಗ ತಪ್ಪಿಸಿಕೊಂಡು ಮೆಕ್ಸಿಕೊಗೆ ಪಲಾಯನ ಮಾಡುತ್ತಾನೆ.


ನಂತರ ಬ್ರಾಗಾನನ್ನು ಹಿಡಿಯುವುದಕ್ಕಾಗಿ ಬ್ರಿಯಾನ್‌ ಮತ್ತು ಡೊಮ್‌ ಮೆಕ್ಸಿಕೊಗೆ ತೆರಳುತ್ತಾರೆ. ಅಲ್ಲಿನ ಚರ್ಚ್‌ ಒಂದರಲ್ಲಿ ಬ್ರಾಗಾನನ್ನು ಪತ್ತೆ ಹಚ್ಚುವ ಅವರು, ಬಂಧಿಸುತ್ತಾರೆ. ಬ್ರಾಗಾನ ಸಹಚರರು ತಮ್ಮ ನಾಯಕನ ರಕ್ಷಣೆಗೆ ಬಂದಾಗ, ಭೂಗತ ಸುರಂಗಗಳ ಮ‌ೂಲಕ ಬ್ರಿಯಾನ್‌ ಮತ್ತು ಡೊಮ್‌ ತಮ್ಮ ಕಾರುಗಳನ್ನು ವೇಗವಾಗಿ ಓಡಿಸುತ್ತಾರೆ. ಆದರೂ ಬ್ರಾಗನ ಸಹಚರರು ಬೆನ್ನಟ್ಟುತ್ತಾರೆ, ಸುರಂಗದ ಕೊನೆಯಲ್ಲಿ ಫೆನಿಕ್ಸ್‌ ಬ್ರಿಯಾನ್‌ನ ಕಾರಿಗೆ ಅಡ್ಡಲಾಗಿ ಬಂದು ಡಿಕ್ಕಿ ಹೊಡೆಯುವುದರಿಂದ ಕಾರಿಗೆ ಹಾನಿಯಾಗುತ್ತದೆ. ಬ್ರಿಯಾನ್‌‌ ಮ‌ೂಳೆ ಮುರಿತಕ್ಕೊಳಗಾಗುತ್ತಾನೆ. ಬ್ರಿಯಾನ್‌ನನ್ನು ಫೆನಿಕ್ಸ್‌ ಕೊಲ್ಲಲು ಮುಂದಾದಾಗ, ಡೊಮ್ ಸುರಂಗದ ಅವಶೇಷಗಳೆಡೆಯಲ್ಲೇ ಕಾರನ್ನು ನುಗ್ಗಿಸಿ ಫೆನಿಕ್ಸ್‌ನ ಮೇಲೆ ಏರಿ ಹೋಗುತ್ತಾನೆ, ಪರಿಣಾಮ ಫೆನಿಕ್ಸ್ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. U.S.ಗೆ ಸೇರಿದ ಘಟನೆಯ ಸ್ಥಳಕ್ಕೆ ಪೋಲಿಸ್‌ ಮತ್ತು ಹೆಲಿಕಾಫ್ಟರ್‌ಗಳು ಬರುತ್ತಿದ್ದಂತೆ, ಸ್ಥಳ ಬಿಟ್ಟು ತೆರಳುವಂತೆ ಡೊಮ್‌ಗೆ ಬ್ರಿಯಾನ್‌ ಹೇಳುತ್ತಾನೆ. ಆದರೆ ತಾನು ಆಯಾಸಗೊಂಡಿದ್ದು ಓಡಲಾಗುತ್ತಿಲ್ಲವೆಂದು ಡೊಮ್‌ ತಿಳಿಸುತ್ತಾನೆ. ಡೊಮ್‌ಗೆ ಕ್ಷಮೆ ನೀಡುವಂತೆ ಬ್ರಿಯಾನ್‌ ಮನವಿ ಮಾಡಿಕೊಂಡರೂ ಸಹ, ನ್ಯಾಯಾಧೀಶರು ಆತನಿಗೆ 25 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸುತ್ತಾರೆ. ಚಿತ್ರದ ಕೊನೆಯ ದೃಶ್ಯದಲ್ಲಿ, ಲಾಂಪೋಕ್‌ ಕಾರಾಗೃಹಗೆ ಕರೆದೊಯ್ಯುವ ಕೈದಿಗಳ ಬಸ್‌ನಲ್ಲಿ ಡೊಮ್‌ನನ್ನು ಕುಳ್ಳಿರಿಸಲಾಗುತ್ತದೆ. ಬಸ್‌ ರಸ್ತೆಯಲ್ಲಿ ಸಾಗಿ ಬರುತಿದ್ದಂತೆ, ಅದನ್ನು ಬ್ರಿಯಾನ್‌, ಮೀಯಾ, ರಿಕೊ ಮತ್ತು ಟೆಗೊ ಅದನ್ನು ಅಡ್ಡಗಟ್ಟುತ್ತಾರೆ.


ಪಾತ್ರವರ್ಗ

[ಬದಲಾಯಿಸಿ]


  • ಡೊಮಿನಿಕ್ ಟೊರೆಟ್ಟೊ ವಿನ ಪಾತ್ರದಲ್ಲಿ ವಿನ್‌ ಡೀಸಲ್‌ : ಈತ ವೃತ್ತಿಯಲ್ಲಿ ಒಬ್ಬ ಆಟೋ ಮೆಕ್ಯಾನಿಕ್. ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಸಿದ್ಧ ಸ್ಟ್ರೀಟ್ ರೇಸರ್ (ವೇಗವಾಗಿ ವಾಹನ ಓಡಿಸುವವ) ಹಲವು ಸೆಮಿ-ಟ್ರಕ್‌ ಅಪಹರಣಗಳಿಗೆ ಸಂಬಂಧಿಸಿ ಡೊಮ್‌, ಪೋಲಿಸರಿಗೆ ಬೇಕಾದ ವ್ಯಕ್ತಿಯಾಗಿದ್ದ. ಚಿತ್ರದ ಆರಂಭದಲ್ಲಿ ಡಾಮಿನಿಕ್ ರಿಪಬ್ಲಿಕ್‌‌ನಲ್ಲಿ ವಾಸವಾಗಿದ್ದು, ಇಂಧನದ ಟ್ರಕ್‌ ಅನ್ನು ಅಪಹರಿಸುವುದಕ್ಕಾಗಿ ಬ್ಯುಕ್‌ ಗ್ರ್ಯಾಂಡ್ ನ್ಯಾಷನಲ್‌ ಕಾರನ್ನು ಓಡಿಸುತ್ತಿರುತ್ತಾನೆ. ಚಿತ್ರದಲ್ಲಿ ಡೊಮ್‌ ಶೆವ್ರೊಲೆಟ್‌ ಚೆವೆಲ್ಲೆ SS ಅನ್ನು ಸಹ ಓಡಿಸುತ್ತಾನೆ ಮತ್ತು ಚಿತ್ರದ ಕೊನೆಯಲ್ಲಿ, ಮೊದಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದ 1970ರ ಡಾಡ್ಜ್‌ ಚಾರ್ಚರ್‌ R/Tಯನ್ನು ಹಿಂದಿರುಗಿಸುತ್ತಾನೆ (ಬೇರೆ ಶೈಲಿಯ ಎದುರಿನ ಗ್ರಿಲ್‌ನೊಂದಿಗೆ ಮಾರ್ಪಡಿಸಿದ 1969ರ ಮಾದರಿಯನ್ನು ಈ ಚಿತ್ರದಲ್ಲಿ ಬಳಸಲಾಗಿತ್ತು). ಬ್ರಾಗಾ ಸಹಚರರಿಂದ ಸಾಯಿಸಲ್ಪಟ್ಟ ತನ್ನ ಮಾಜಿ ಗೆಳತಿ ಲೆಟ್ಟಿಯ ಮರಣದ ಸೇಡನ್ನು ತೀರಿಸಿಕೊಳ್ಳಲು ಡೊಮ್ ಲಾಸ್‌ ಎಂಜಲೀಸ್ ಮರಳುವನು.
  • ಬ್ರಿಯಾನ್‌ ಒ'ಕಾನ್ನರ್‌ ನ ಪಾತ್ರದಲ್ಲಿ ಪೌಲ್ ವಾಕರ್‌ : ಬ್ರಿಯಾನ್‌ ಒಬ್ಬ ಪೋಲಿಸ್ ಅಧಿಕಾರಿ, ಆಟೋ ಮೆಕ್ಯಾನಿಕ್ ಮತ್ತು ಪ್ರತಿಭಾನ್ವಿತ ಸ್ಟ್ರೀಟ್ ರೇಸರ್ ಆಗಿದ್ದ. ಮೆಕ್ಸಿಕೊವಿನ ಮಾದಕ ದ್ರವ್ಯ ಸಾಗಾಣಿಕೆಯ ಮುಂದಾಳು ಅರ್ಟುಟೊ ಬ್ರಾಗಾನ ಜಾಡು ಹಿಡಿಯಲು FBI ಏಜೆಂಟ್‌ ಆಗಿ ಬ್ರಿಯಾನ್‌ ನೇಮಕಗೊಂಡಿದ್ದ. ಆರಂಭದಲ್ಲಿ ಬ್ರಿಯಾನ್‌ ನಿಸಾನ್‌ ಸ್ಕೈಲೈನ್‌ GTT R34 ಕಾರನ್ನು ಓಡಿಸುತ್ತಿದ್ದು, ನಂತರ ಚಿತ್ರದ ಉಳಿದ ಭಾಗಗಳಲ್ಲಿ ಸುಬರು ಇಂಪ್ರೆಜಾ WRX STI ಕಾರನ್ನು ಓಡಿಸುತ್ತಾನೆ.
  • ಲೆಟಿಸಿಯಾ "ಲೆಟ್ಟಿ" ಒರ್ಟಿಜ್‌ ಪಾತ್ರದಲ್ಲಿ ಮಿಚೆಲ್‌ ರೊಡ್ರಿಗೋಜ್‌ : ಇವಳು ಡೊಮಿನಿಕ್‌ನ ಗೆಳತಿಯಾಗಿದ್ದು, ಚಿತ್ರದ ಪ್ರಾರಂಭದಲ್ಲಿ ಅವನೊಂದಿಗೆ ಡಾಮಿನಿಕ್‌ ರಿಪಬ್ಲಿಕ್‌ನಲ್ಲಿ ವಾಸಿಸುತ್ತಿರುತ್ತಾಳೆ. ಬ್ರಾಗಾನ ಸಹಚರರಿಂದ ಅವಳ ಹತ್ಯೆಯಾದ ನಂತರ, ಡೊಮಿನಿಕ್‌ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸುತ್ತಾನೆ. ಅವಳು 1970 ಪ್ಲಿಮೌತ್‌ ರೋಡ್‌ರನ್ನರ್‌ ಅನ್ನು ಚಲಾಯಿಸಬಲ್ಲಳು.
  • ಮಿಯಾ ಟೊರೆಟ್ಟೊ ಪಾತ್ರದಲ್ಲಿ ಜೋರ್ಡನ ಬ್ರೆವ್‌ಸ್ಟರ್‌ : ಡೊಮಿನಿಕ್‌ನ ಕಿರಿಯ ಸಹೋದರಿಯಾಗಿದ್ದು, ಬ್ರಿಯಾನ್‌ನ ಪ್ರೇಯಸಿ. ಬ್ರಾಗಾನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸುತಿದ್ದ ಇಬ್ಬರನ್ನು ಒಂದುಗೂಡಿಸುವಲ್ಲಿ ಇವಳು ಪ್ರಮುಖ ಪಾತ್ರವಹಿಸುತ್ತಾಳೆ. ಮಿಯಾ ಹಾಂಡ NSXನಿಂದ ಪರಿವರ್ತನೆಗೊಂಡ JDMಅನ್ನು ಓಡಿಸುತ್ತಾಳೆ.
  • ರಾಮನ್ ಕಂಪೋಸ್‌/ಅರ್ಟುಟೊ ಬ್ರಾಗಾ ಪಾತ್ರದಲ್ಲಿ ಜಾನ್‌ ಒರ್ಟಿಜ್‌ : ಇವನು ಆರಂಭದಲ್ಲಿ ತಾನು ಬ್ರಾಗನ ಕಡೆಯ ವ್ಯಕ್ತಿಯೆಂದು ಹೇಳಿಕೊಂಡರೂ, ನಂತರದ FBI ವರದಿ ಪ್ರಕಾರ ಆತನೇ ಬ್ರಾಗ ಎಂಬುದು ಬಹಿರಂಗಗೊಳ್ಳುತ್ತದೆ. ಪ್ರಮುಖ ಮಾದಕ ವಸ್ತುಗಳ ಮಾರಾಟ ಜಾಲದ ನಾಯಕನಾಗಿರುವ ಈತ US-ಮೆಕ್ಸಿಕೊದ ಗಡಿಯಲ್ಲಿ ಹೆರಾಯಿನ್‌‌ ಅನ್ನು ಸಾಗಿಸಲು ಸ್ಟ್ರೀಟ್ ರೇಸರ್‌ಗಳನ್ನು ನೇಮಿಸಿಕೊಳ್ಳುತ್ತಾನೆ.
  • ಫೆನಿಕ್ಸ್‌ ಕಾಲ್ಡೆರಾನ್‌ ಪಾತ್ರದಲ್ಲಿ ಲಾಸ್‌ ಅಲೊನ್ಸೊ : ಫೆನಿಕ್ಸ್‌ ಬ್ರಾಗಾನ ಕೆಲಸಗಳನ್ನು ನಡೆಸಿಕೊಡುವವನಾಗಿದ್ದು, ಲೆಟ್ಟಿಯ ಸಾವಿಗೆ ಈತನೆ ಕಾರಣ. ಫೆನಿಕ್ಸ್‌ ಫೋರ್ಡ್‌ ಗ್ರ್ಯಾನ್ ಟೊರಿನೊ ಕಾರನ್ನು ಓಡಿಸುತ್ತಾನೆ.
  • ಗಿಸೆಲ್ ಹಾರಬೊ ರ ಪಾತ್ರದಲ್ಲಿ ಗಾಲ್‌ ಗಡೊಟ್‌ : ಇವಳು ಆರಂಭದಲ್ಲಿ ಬ್ರಾಗಾನೊಂದಿಗೆ ಗುರುತಿಸಿಕೊಂಡಿದ್ದರೂ, ಒಂದೊಮ್ಮೆ ಆಕೆಯನ್ನು ಡೊಮಿನಿಕ್‌ ಪ್ರಾಣಪಾಯದಿಂದ ಕಾಪಾಡಿದ ನಂತರ, ಬ್ರಾಗಾನನ್ನು ಪತ್ತೆ ಹಚ್ಚುವಲ್ಲಿ ಡೊಮಿನಿಕ್‌ ಮತ್ತು ಬ್ರಿಯಾನ್‌ಗೆ ನೆರವಾಗುತ್ತಾಳೆ. ಗಿಸೆಲ್‌ ಟೆಕ್‌ಆರ್ಟ್‌ GTಸ್ಪೋರ್ಟ್ಸ್‌ ಕಾರನ್ನು ಓಡಿಸುತ್ತಾಳೆ.
  • ಪೆನ್ನಿಂಗ್‌ ಪಾತ್ರದಲ್ಲಿ ಜ್ಯಾಕ್ ಕೋನ್ಲಿ
  • ಹ್ಯಾನ್ ಲ್ಯೂ ಪಾತ್ರದಲ್ಲಿ ಸುಂಗ್ ಕಾಂಗ್‌ : ಹ್ಯಾನ್‌ ಡಾಮಿನಿಕ್‌ ರಿಪಬ್ಲಿಕ್‌ನಲ್ಲಿದ್ದ ಡೊಮಿನಿಕ್‌ ಗುಂಪಿಗೆ ಸೇರಿದವನಾಗಿದ್ದು, ಇವನು ಚಿತ್ರದ ಉತ್ತರಭಾಗಟೊಕಿಯೊ ಡ್ರಿಫ್ಟ್‌ ನಲ್ಲಿ ಕಾಣಿಸಿಕೊಳ್ಳುತ್ತಾನೆ. ತಾಪಮಾನ ಕುಸಿತದಾಗ ಟೊಕಿಯೊಗೆ ತೆರಳುವಂತೆ ಹ್ಯಾನ್‌ ಹೇಳುತ್ತಾನೆ. "ಟೊಕಿಯೊದಲ್ಲಿ ಅವರು ಕೆಲವು ಕೆಟ್ಟ ಕೆಲಸವನ್ನು ಮಾಡುತ್ತಿರುವುದಾಗಿ ನಾನು ಕೇಳಿದ್ದೇನೆ" ಎಂದು ಡೊಮ್‌ಗೆ ಹ್ಯಾನ್‌ ಹೇಳುವನು.
  • ಚಿತ್ರದ ಪ್ರಾರಂಭ ಮತ್ತು ಕೊನೆಯಲ್ಲಿ ರಿಕೊ ಪಾತ್ರದಲ್ಲಿ ಡಾನ್‌ ಒಮರ್‌ ಕಾಣಿಸಿಕೊಳ್ಳುವರು.
  • ಚಿತ್ರದ ಪ್ರಾರಂಭ ಮತ್ತು ಕೊನೆಯಲ್ಲಿ ಟೆಗೊ ಪಾತ್ರದಲ್ಲಿ ಟೆಗೊ ಕ್ಯಾಲ್ಡೆರಾನ್‌ ಸಹ ರಿಕೊ ಜೊತೆ ಕಾಣಿಕೊಳ್ಳುವರು.
  • ಅಲೆಕ್ಸ್‌ ಪಾತ್ರದಲ್ಲಿ ಬ್ರ್ಯಾಂಡನ್‌ T. ಜಾಕ್ಸನ್‌


ನಿರ್ಮಾಣ

[ಬದಲಾಯಿಸಿ]

ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್‌ ಫೆರ್ನಾಂಡೊ ವ್ಯಾಲಿಯಲ್ಲಿ ಚಲನಚಿತ್ರದ ಕಾರುಗಳನ್ನು ನಿರ್ಮಿಸಲಾಗಿತ್ತು. ಚಲನಚಿತ್ರಕ್ಕಾಗಿ ಸುಮಾರು 240 ಕಾರುಗಳನ್ನು ತಯಾರಿಸಲಾಗಿತ್ತು.[] ನಕಲಿ ವಾಹನಗಳು ನೈಜವಾಗಿ ಇರಬೇಕಾಗಿದ್ದ ವೈಶಿಷ್ಟ್ಯಗಳನ್ನು ಹೊಂದಿರಲಿಲ್ಲ. ಉದಾಹರಣೆಗೆ F-ಬಾಂಬ್‌ 1973 ಶೆವ್ರೊಲೆಟ್‌ ಕ್ಯಾಮರೊನ ಪ್ರತಿರೂಪವಾಗಿದ್ದು, ಇದನ್ನು ಹಾಟ್‌ ರೋಡ್‌ ಮ್ಯಾಗಜೀನ್‌ಡೇವಿಡ್‌ ಫ್ರೀಬುರ್ಜರ್‌ ನಿರ್ಮಿಸಿದ್ದಾರೆ. ಇದು 3-ವೇಗದ ಸ್ವಯಂಚಾಲಿತ ಶಕ್ತಿ ಸಂವಹನದೊಂದಿಗೆ 300 hp ಸಾಮರ್ಥ್ಯದ V8 ಎಂಜಿನ್‌ ಅನ್ನು ಹೊಂದಿದೆ. ಆದರೆ ಮ‌ೂಲ ಕಾರು ಟ್ವಿನ್‌-ಟರ್ಬೊ 1,500 hp ಎಂಜಿನ್‌ ಮತ್ತು 5-ವೇಗದ ಶಕ್ತಿ ಸಂವಹನವನ್ನು ಹೊಂದಿದೆ. ಹಾಗೇನೆ, ಮೊದಲ ಚಿತ್ರದಲ್ಲಿ ಬಳಸಿಕೊಳ್ಳಲಾದ ಮ‌ೂಲ ಡಾಡ್ಜ್‌ ಚಾರ್ಜರ್‌ 426 ಹೆಮಿ R/T ಕಾರು 1970ಯದ್ದಾಗಿತ್ತು. ಆದರೆ ಈ ಚಲನಚಿತ್ರದಲ್ಲಿ ಬಳಸಿದ ಕಾರು 1969ರ ಡಾಡ್ಜ್‌ ಚಾರ್ಚರ್‌ R/T 426 ಹೆಮಿಯಾಗಿದ್ದು, ಇದನ್ನು 1970 ಕಾರಿನಂತೆ ಕಾಣುವುದಕ್ಕಾಗಿ ಮುಂದಿನ ಗ್ರಿಲ್‌ ಅನ್ನು ಸ್ವಲ್ಪ ಬದಲಿಸಲಾಗಿತ್ತು; ಅದಾಗಲೇ ತುಂಡುತುಂಡಾಗಿದ್ದ ಮ‌ೂಲ 1970 ಡಾಡ್ಜ್‌ ಚಾರ್ಚರ್‌ ಕಾರಿಗೆ ಹಳೇ ರೂಪ ನೀಡುವುದಕ್ಕಾಗಿ ಎಲ್ಲ ಭಾಗಗಳನ್ನು ಬೇರ್ಪಡಿಸಲಾಗಿತ್ತು.[]


ಸಂಗೀತ

[ಬದಲಾಯಿಸಿ]


ಬ್ರಿಯಾನ್‌ ಟೇಲರ್‌ ಅವರು ಫಾಸ್ಟ್‌ & ಫ್ಯೂರಿಯಸ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 20ನೇ ಸೆಂಚುರಿ ಫಾಕ್ಸ್‌ನ ನ್ಯೂಮ್ಯಾನ್‌ ಸ್ಕೋರಿಂಗ್ ಸ್ಟೇಜ್‌ನಲ್ಲಿರುವ ಹಾಲಿವುಡ್‌ ಸ್ಟುಡಿಯೊ ಸಿಂಪೋನಿಯಲ್ಲಿ ಸಂಗೀತವನ್ನು ಧ್ವನಿಮುದ್ರಿಸಿದರು.[] ಸುಮಾರು 78 ನಿಮಿಷಗಳ ಸಂಗೀತ ಆಲ್ಬಮ್‌ನ CDಯನ್ನು ವರೆಸ್‌ ಸಾರಾಬ್ಯಾಂಡ್ ರೆಕಾರ್ಡ್ಸ್‌ ಸಂಸ್ಥೆ ಬಿಡುಗಡೆ ಮಾಡಿತು.


ಚಿತ್ರದ ಟ್ರೇಲರ್‌ಗಳಲ್ಲಿ (ಚಿತ್ರದ ಜಾಹೀರಾತಿನಲ್ಲಿ ತೋರಿಸುವ ತುಣುಕು) ಬಳಸಿದ ಧ್ವನಿಪಥ "ವಿ ಆರ್ ರಾಕ್‌ಸ್ಟಾರ್ಸ್‌" ಅನ್ನು ಡಸ್‌ ಇಟ್‌ ಆಫೆಂಡ್‌ ಯು, ಯಾ? ತಂಡ ರಚಿಸಿತ್ತು. ಮತ್ತು "ಕ್ರ್ಯಾಂಕ್ ದ್ಯಾಟ್‌"ನ ರಿಮಿಕ್ಸ್‌ ಮಾಡಿದ ಆವೃತ್ತಿ ಟ್ರ್ಯಾವಿಸ್‌ ಬಾರ್ಕರ್‌ ಅನ್ನು ಸೋಲ್ಜಾ ಬಾಯ್‌ ಟೆಲ್‌ 'ಎಮ್‌ ರಚಿಸಿದ್ದಾರೆ.


2009 ಮಾರ್ಚ್‌ 31ರಂದು ಸ್ಟಾರ್‌ ಟ್ರ್ಯಾಕ್‌ನಲ್ಲಿ ಚಿತ್ರದ ಧ್ವನಿಪಥ ಅಧಿಕೃತವಾಗಿ ಬಿಡುಗಡೆಯಾಯಿತು. ಧ್ವನಿಪಥದ ಮೊದಲ ಹಾಡನ್ನು "ಬ್ಲಾಂಕೊ" ಎಂದು ಹೆಸರಿಸಲಾಗಿತ್ತು ಮತ್ತು ಫೇರಲ್‌ ವಿಲಿಯಮ್ಸ್‌ ಒಳಗೊಂಡಿರುವ ಪಿಟ್‌ಬುಲ್‌ ತಂಡವು ಈ ಧ್ವನಿಪಥವನ್ನು ರಚಿಸಿತು. ಇದನ್ನು ದಿ ನೆಪ್ಚುನ್ಸ್‌ ನಿರ್ಮಿಸಿದರು.[] ಮೊದಲ ಜಾಹೀರಾತು ಧ್ವನಿಪಥವನ್ನು "ಕ್ರ್ಯಾಂಕ್‌ ದ್ಯಾಟ್‌ (ಟ್ರ್ಯಾವಿಸ್‌ ಬಾರ್ಕರ್‌ ರಾಕ್‌ ರಿಮಿಕ್ಸ್‌)" ಎಂದು ಹೆಸರಿಸಲಾಗಿತ್ತು (ಮೊದಲು ಇದನ್ನು ಎರಡನೇ ಹಾಡಾಗಿ ಮಾಡಲು ನಿರ್ಧರಿಸಲಾಗಿತ್ತು, ನಂತರ ನಿರ್ಣಯವನ್ನು ಬದಲಾಯಿಸಲಾಯಿತು) ಮತ್ತು ಟ್ರ್ಯಾವಿಸ್‌ ಬಾರ್ಕರ್‌ ಒಳಗೊಂಡಿರುವ ಸೋಲ್ಜಾ ಬಾಯ್‌ ತಂಡ ಈ ಹಾಡನ್ನು ರಚಿಸಿತು. ಲಿಲ್‌ ಜಾನ್‌‌ ಒಳಗೊಂಡಿರುವ ಪಿಟ್‌ಬುಲ್‌ ತಂಡವು "ಕ್ರೇಜಿ" ಎಂಬ ಎರಡನೇ ಹಾಡನ್ನು ರಚಿಸಿತು. ಈ ಧ್ವನಿಪಥವನ್ನು ಪಿಟ್‌ಬುಲ್‌ನ ಮುಂದಿನ ಆಲ್ಬಮ್‌ನಲ್ಲಿ ಸೇರಿಸಿಕೊಳ್ಳಲಾಯಿತು. ಆಲ್ಬಮ್‌ನ ಮೂರನೇ ಹಾಡು "ಬ್ಯಾಡ್‌ ಗರ್ಲ್ಸ್‌"ನ್ನು ರಾಬಿನ್‌ ತಿಕೆ ರಚಿಸಿದರು. ಧ್ವನಿಪಥವು "ಜಿ-ಸ್ಟ್ರೊ" ಎಂಬ ಹಾಡನ್ನು ಒಳಗೊಂಡಿದ್ದು, ಅದನ್ನು ಫೆರಲ್‌ ವಿಲಿಯಮ್ಸ್‌ ಒಳಗೊಂಡಿರುವ ಬಸ್ಟ ರೈಮ್ಸ್‌ ತಂಡ ರಚಿಸಿತು ಮತ್ತು ಈ ಹಾಡನ್ನು ದಿ ನೆಪ್ಚುನ್ಸ್‌ ನಿರ್ಮಿಸಿದರು. ಈ ಧ್ವನಿಪಥವನ್ನು ಬಸ್ಟ ರೈಮ್ಸ್‌ನ ಆಲ್ಬಮ್‌ ಬ್ಯಾಕ್‌ ಆನ್‌‌ ಮೈ B.S. ನಿಂದ ತೆಗೆದುಕೊಳ್ಳಲಾಗಿದೆ. ಈ ಆಲ್ಬಮ್‌ನ ಹೆಚ್ಚಿನ ಪಥಗಳು ಸ್ಪ್ಯಾನಿಷ್ ಸಂಗೀತವನ್ನು ಒಳಗೊಂಡಿದ್ದು, ಇದಕ್ಕೆ ಅಮೆಜಾನ್‌ 5ರಲ್ಲಿ 3.5 ಅಂಕ ನೀಡಲಾಗಿದೆ. "ಕ್ರ್ಯಾಂಕ್‌ ದ್ಯಾಟ್‌"ನ್ನು ಸೇರಿಸದೆ, ಇಂಟರ್‌ಸ್ಕೋಪ್‌ ಮತ್ತು ಸ್ಟಾರ್‌ ಟ್ರ್ಯಾಕ್‌ ರೆಕಾರ್ಡ್ಸ್‌ ಚಿತ್ರದ ಧ್ವನಿಪಥವನ್ನು ಬಿಡುಗಡೆ ಮಾಡಿದವು.


"ರೈಸಿಂಗ್‌ ಸನ್‌" ಎಂಬ ಇನ್ನೊಂದು ಹಾಡನ್ನು ಆಲ್ಬಮ್‌ನಿಂದ ತೆಗೆದುಹಾಕಲಾಯಿತು. ಇದನ್ನು ಕೋರಿಯನ್‌ ತಂಡ TVXQ ರಚಿಸಿತ್ತು.


ಚಿತ್ರದ ಜಪಾನಿನ ಆವೃತ್ತಿಯಲ್ಲಿ "ಬಿಫೋರ್ ಐ ಡಿಕೇ" ಹಾಡು ಒಳಗೊಂಡಿತ್ತು. ಇದನ್ನು ಜಪಾನಿನ ರಾಕ್ ತಂಡ ದಿ ಗೆಜೆಟ್‌ ರಚಿಸಿದ್ದರು.


ಪುರಸ್ಕಾರ

[ಬದಲಾಯಿಸಿ]

ಫಾಸ್ಟ್‌ & ಫ್ಯೂರಿಯಸ್‌ ಚಿತ್ರ ವೃತ್ತಿಪರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. 2009ರ ಎಪ್ರಿಲ್‌ 18ರ ಅಂಕಿ ಅಂಶದ ಪ್ರಕಾರ, ಚಿತ್ರವು ರೋಟನ್‌ ಟೊಮಟೊಸ್‌ ವೆಬ್‌ಸೈಟ್‌[]ನ ಟೊಮಾಟೊಮೀಟರ್‌ನಲ್ಲಿ 28% ಅಂಕ ಪಡೆದಿತ್ತು, ಅಂತೆಯೇ ಮೇಟಾಕ್ರಿಟಿಕ್‌ನಲ್ಲಿ 45% ಅಂಕ ಗಳಿಸಿತ್ತು.[] ಎಂಟರ್‌ಟೇನ್‌ಮೆಂಟ್‌ ವೀಕ್ಲಿ ,[೧೦] ದಿ ಹಾಲಿವುಡ್‌ ರಿಪೋರ್ಟರ್‌ ,[೧೧] ಮತ್ತು ಲಾಸ್‌ ಎಂಜಲೀಸ್ ಟೈಮ್ಸ್‌ [೧೨] ಇತ್ಯಾದಿ ಪತ್ರಿಕೆಗಳು ಚಿತ್ರವನ್ನು ಹೊಗಳಿವೆ. ಆದಾಗ್ಯೂ ಹಿಂದಿನ ಚಲನಚಿತ್ರಗಳಿಗೆ ಸಕಾರಾತ್ಮಕ ವಿಮರ್ಶೆ ನೀಡಿದ್ದ ರೋಜರ್ ಎಬರ್ಟ್‌, ಈ ಚಿತ್ರಕ್ಕೆ ಅಷ್ಟೊಂದು ಒಳ್ಳೆಯ ವಿಮರ್ಶೆ ನೀಡಲಿಲ್ಲ. ಅವರು ವಿಮರ್ಶೆ ಈ ಕೆಳಗಿನಂತಿದೆ: "ಚಿತ್ರದಲ್ಲಿ ಬಳಸಿದ ಸಾಧನಗಳನ್ನು ನಾನು ಮೆಚ್ಚುತ್ತೇನೆ. ಆದರೆ ನನಗೆ ಚಿತ್ರ ತೀರಾ ಸಾಧಾರಣವಾಗಿ ಕಂಡಿತು. ಸರಣಿಯ ಹಿಂದಿನ ಮ‌ೂರು ಚಿತ್ರಗಳು, ಈಗಾಗಲೇ ವೀಡಿಯೊ ಆಟಗಳಾಗಿರುವಾಗ, ನಾಲ್ಕನೇ ಚಿತ್ರದ ಅಗತ್ಯವೇನಿತ್ತು? ಓಹ್‌. ನಾನು ನನ್ನದೇ ಪ್ರಶ್ನೆಗೆ ಉತ್ತರಿಸಿದೆ."[೧೩]


ಗಲ್ಲಾ ಪೆಟ್ಟಿಗೆ

[ಬದಲಾಯಿಸಿ]

ಚಿತ್ರ ಬಿಡುಗಡೆಯಾದ ಮೊದಲ ದಿನವೇ $30.5 ದಶಲಕ್ಷದಷ್ಟು ಆದಾಯ ಗಳಿಸಿತು. ವಾರದ ಕೊನೆಯಲ್ಲಿ $70,950,500ನಷ್ಟು ಗಳಿಸಿ, ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಇದು ಟೊಕಿಯೊ ಡ್ರಿಫ್ಟ್‌ ಗಳಿಸಿದ ಸಂಪೂರ್ಣ ದೇಶೀಯ ಗಳಿಕೆಗಿಂತ ಹೆಚ್ಚು.[೧೪] 2009ರ ವಾರಾಂತ್ಯದಲ್ಲಿ ಬಿಡುಗಡೆಯಾದಾಗ ಎಲ್ಲ ಚಿತ್ರಗಳ ಪೈಕಿ ಈ ಚಿತ್ರ ಭರ್ಜರಿಯಾಗಿ ತೆರೆ ಕಂಡಿತ್ತು (ಆದಾಯ ಗಳಿಕೆಯಲ್ಲಿ ಸ್ಟಾರ್‌ ಟ್ರೆಕ್‌ , X-Men Origins: Wolverine , [[ಹ್ಯಾರ್ರಿ ಪೊಟರ್‌ ಮತ್ತು ದಿ ಹಾಫ್‌-ಬ್ಲಡ್‌ ಪ್ರಿನ್ಸ್‌|ಹ್ಯಾರ್ರಿ ಪೊಟರ್‌ Transformers: Revenge of the Fallen ಮತ್ತು The Twilight Saga: New Moon ದಿ ಹಾಫ್‌-ಬ್ಲಡ್‌ ಪ್ರಿನ್ಸ್‌]] ಗಳನ್ನು ಸೋಲಿಸಿತು). ಚಿತ್ರ ನಿರೀಕ್ಷಿತ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯ ಗಳಿಸಿತು.[೧೫] ಎಪ್ರಿಲ್‌ನ ವಾರಾಂತ್ಯದಲ್ಲಿ ಇದು ಅತಿ ಹೆಚ್ಚು ಆರಂಭಿಕ ಗಳಿಕೆ ಮತ್ತು ಕಾರಿನ ಸುತ್ತ ಕಥೆ ಹೆಣೆಯಲಾಗಿರುವ ಅತಿ ಹೆಚ್ಚು ಗಳಿಕೆಯ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಯಿತು[೧೬]. ಈ ಹಿಂದಿನ ಕಾರಿಗೆ ಸಂಬಂಧಿಸಿದ ಅತಿ ಹೆಚ್ಚಿನ ಗಳಿಕೆ ಒಟ್ಟು $60.1 ದಶಲಕ್ಷವಾಗಿತ್ತು. 2009 ಜುಲೈ 19ರ ಅಂಕಿ ಅಂಶದ ಪ್ರಕಾರ ದೇಶೀಯವಾಗಿ ಈ ಚಿತ್ರವು ಒಟ್ಟು $155,064,265ರಷ್ಟು ಆದಾಯ ಗಳಿಸಿದ್ದು, ಜಗತ್ತಿನಾದ್ಯಂತ ಒಟ್ಟು $359,264,265ರಷ್ಟು ಆದಾಯ ಗಳಿಸಿದೆ (ಇದರ ಮೂಲಕ ಸಂಸ್ಥೆ ನಿರ್ಮಿಸಿದ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತು). ಕಾರುಗಳ ಪ್ರಕಾರದ ಚಿತ್ರಗಳ ಗಳಿಕೆಯಲ್ಲಿ ಈ ಚಿತ್ರ ಎರಡನೇ ಸ್ಥಾನ ಪಡೆದಿದೆ.[೧೭]


ವೀಡಿಯೊ ಬಿಡುಗಡೆ

[ಬದಲಾಯಿಸಿ]

2009ರ ಜುಲೈ 28ರಂದು DVD ಮತ್ತು ಬ್ಲೂ-ರೇಯಲ್ಲಿ ಫಾಸ್ಟ್‌ & ಫ್ಯೂರಿಯಸ್‌ ಬಿಡುಗಡೆಯಾಯಿತು.[೧೮] ಎರಡು ಡಿಸ್ಕ್‌ಗಳ DVDಯು ಈ ಕೆಳಗಿನವುಗಳನ್ನು ಒಳಗೊಂಡಿದೆ:

  • ಚಿತ್ರದ ಡಿಜಿಟಲ್ ಪ್ರತಿ
  • ಅಂಡರ್ ದಿ ಹುಡ್: ಮಸಲ್ ಕಾರ್ಸ್‌ ಆಂಡ್ ಇಂಪೋರ್ಟ್ಸ್‌
  • ಹೈ ಆಕ್ಟಾನ್‌ ಆಕ್ಷನ್‌: ದಿ ಸ್ಟಂಟ್ಸ್‌‌
  • ಶೂಟಿಂಗ್‌ ದಿ ಬಿಗ್‌ ರಿಗ್‌ ಹೀಸ್ಟ್‌
  • ಡ್ರೈವಿಂಗ್‌ ಸ್ಕೂಲ್ ವಿದ್‌ ವಿನ್‌ ಡೀಸಲ್‌
  • ಹಿಂದೆಂದೂ ನೋಡದ ಮ‌ೂಲ ಕಿರು ಚಿತ್ರ ಲಾಸ್‌ ಬಂಡೊಲರೊಸ್‌ , ಫಾಸ್ಟ್‌ & ಫ್ಯೂರಿಯಸ್‌ ನ ಆರಂಭದ ಘಟನೆಗಳನ್ನು ವಿವರಿಸುತ್ತದೆ. ಇದನ್ನು ವಿನ್‌ ಡೀಸೆಲ್‌ ಬರೆದು, ನಿರ್ದೇಶಿಸಿದ್ದಾನೆ. ಇದು ಮುಕ್ತ ಡೌನ್‌ಲೋಡ್‌ಗಾಗಿ iTunes ಮಳಿಗೆಗಳಲ್ಲಿ ಬಿಡುಗಡೆ ಮಾಡಲಾಯಿತು.


2009ರ ನವೆಂಬರ್‌ 1ರ ಅಂಕಿಅಂಶದ ಪ್ರಕಾರ 2,900,861 ಪ್ರತಿಯಷ್ಟು DVD ಮಾರಾಟವಾಗಿ, $47.82 ದಶಲಕ್ಷದಷ್ಟು ಆದಾಯ ಗಳಿಸಿದ್ದು, ಚಿತ್ರದ ಟಿಕೇಟ್ ಮಾರಾಟ ಸೇರಿದಂತೆ ಒಟ್ಟು ಚಿತ್ರ ವಿಶ್ವದಾದ್ಯಂತ $407,085,500ನಷ್ಟು ಆದಾಯ ಗಳಿಸಿದೆ.[೧೯]


ಚಿತ್ರದ ಉತ್ತರಭಾಗ

[ಬದಲಾಯಿಸಿ]

ಚಿತ್ರದ ಉತ್ತರಭಾಗ (ಸೀಕ್ವೆಲ್) ಅಭಿವೃದ್ಧಿ ಹಂತದಲ್ಲಿದೆ. ಆ ಬಗ್ಗೆ ಪೌಲ್ ವಾಕರ್‌ರು ಹೀಗೆ ಹೇಳಿದ್ದಾರೆ, "ನಾನು ಈ ಬಗ್ಗೆ ಯುನಿವರ್ಸಲ್‌ನ ಕಾರ್ಯನಿರ್ವಾಹಣಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ." ಮತ್ತು ಚಿತ್ರೀಕರಣವನ್ನು ಆಸ್ಟ್ರೇಲಿಯಾ ಅಥವಾ ಬ್ರೆಜಿಲ್‌ನಲ್ಲಿ ಮಾಡಲು ಸಲಹೆ ನೀಡಿದ್ದಾರೆ.[೨೦] ಇದಲ್ಲದೇ ನಟ ವಿನ್‌ ಡೀಸಲ್‌ ತಾನು ಐದನೇ ಮತ್ತು ಆರನೇ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸುವುದಾಗಿ ತಿಳಿಸಿದ್ದಾರೆ.[೨೧][೨೨]



ಇದನ್ನೂ ನೋಡಿ

[ಬದಲಾಯಿಸಿ]


ಉಲ್ಲೇಖಗಳು

[ಬದಲಾಯಿಸಿ]
  1. http://boxofficemojo.com/movies/?id=fastandthefurious4.htm
  2. "ಆರ್ಕೈವ್ ನಕಲು". Archived from the original on 2011-11-18. Retrieved 2010-01-07.
  3. Merrick (2008-03-06). "Another Familiar Face Is Returning For The New FAST AND THE FURIOUS Film!!". AintItCool.com. Retrieved 2008-03-09.
  4. Chris Beaumont (2008-03-07). "Michelle Rodriguez Joins Walker and Diesel for The Fast and the Furious 4". FilmSchoolRejects.com. Archived from the original on 2010-11-12. Retrieved 2008-03-09.
  5. 2009 ಮಾರ್ಚ್‌ 12ರಲ್ಲಿ ಮೋರ್ ಕಾರ್ಸ್ ಆಂಡ್ ಮೋರ್ ಆಕ್ಷನ್ ಇನ್ ಫಾಸ್ಟ್‌ & ಫ್ಯೂರಿಯಸ್‌ ಎಡ್ಮುಂಡ್ಸ್‌ ಇನ್ಸೈಡ್‌ಲೈನ್‌
  6. ದಿ ಎಫ್‌-ಬಾಂಬ್‌ ಡ್ರಾಪ್ಸ್‌ ಆನ್‌ ಫಾಸ್ಟ್‌ & ಫ್ಯೂರಿಯಸ್‌ ಎಡ್ಮುಂಡ್ಸ್‌ ಇನ್ಸೈಡ್‌ಲೈನ್‌ 13ನೇ ಮಾರ್ಚ್‌ 2009
  7. ೭.೦ ೭.೧ Dan Goldwasser (2009-02-24). "Brian Tyler scores fast and furious with Fast & Furious". ScoringSessions.com. Retrieved 2009-02-24. {{cite news}}: Check date values in: |date= (help)
  8. ರೋಟನ್‌ ಟೊಮಟೊಸ್‌ - ಫಾಸ್ಟ್‌ & ಫ್ಯೂರಿಯಸ್‌
  9. "Fast & Furious". Metacritic. Archived from the original on 2010-03-24. Retrieved 2010-01-07.
  10. Schwarzbaum, Lisa (2009-04-01). "Fast & Furious (2009)". Entertainment Weekly. Archived from the original on 2010-07-22. Retrieved 2010-01-07.
  11. Honeycutt, Kirk (2009-04-02). "Film Review: Fast & Furious". Hollywood Reporter. Archived from the original on 2009-04-05. Retrieved 2010-01-07.
  12. Sharkey, Betsy (April 3, 2009). "Video review: Fast & Furious". Los Angeles Times. Retrieved April 6, 2009. {{cite news}}: Italic or bold markup not allowed in: |publisher= (help)
  13. "Fast & Furious". Archived from the original on 2012-10-07. Retrieved 2021-08-29.
  14. "Daily Box Office for Friday, April 3, 2009". Box Office Mojo.
  15. Rich, Joshua (April 5, 2009). "Fast & Furious shatters box office records". Entertainment Weekly. Retrieved April 5, 2009.
  16. "ಆರ್ಕೈವ್ ನಕಲು". Archived from the original on 2010-02-27. Retrieved 2010-01-07.
  17. "Car films". Archived from the original on 2011-09-01. Retrieved 2010-01-07.
  18. "Blu-ray.com - Fast & Furious Blu-ray".
  19. [೧]
  20. "ಆರ್ಕೈವ್ ನಕಲು". Archived from the original on 2010-03-15. Retrieved 2010-01-07.
  21. "ಆರ್ಕೈವ್ ನಕಲು". Archived from the original on 2009-06-25. Retrieved 2010-01-07.
  22. http://www.eonline.com/uberblog/b118234_enough_in_tank_another_fast_furious.html


ಬಾಹ್ಯ ಕೊಂಡಿಗಳು

[ಬದಲಾಯಿಸಿ]


ಟೆಂಪ್ಲೇಟು:The Fast and the Furious

"https://kn.wikipedia.org/w/index.php?title=ಫಾಸ್ಟ್‌&oldid=1258629" ಇಂದ ಪಡೆಯಲ್ಪಟ್ಟಿದೆ