ಕ್ಷಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಷಮೆಯು (ಕ್ಷಮಿಸುವಿಕೆ) ಒಂದು ಉದ್ದೇಶಪೂರ್ವಕ ಹಾಗೂ ಸ್ವಯಂಪ್ರೇರಿತ ಪ್ರಕ್ರಿಯೆ. ಈ ಪ್ರಕ್ರಿಯೆಯಿಂದ ಬಲಿಪಶುವು ಒಂದು ಅಪರಾಧದ ಕುರಿತ ಅನಿಸಿಕೆಗಳು ಮತ್ತು ದೃಷ್ಟಿಕೋನದಲ್ಲಿ ಬದಲಾವಣೆಗೆ ಒಳಗಾಗುತ್ತಾನೆ, ಸೇಡಿನಂತಹ ಋಣಾತ್ಮಕ ಭಾವನೆಗಳನ್ನು ಬಿಟ್ಟುಬಿಡುತ್ತಾನೆ, ಕಾನೂನಾತ್ಮಕವಾಗಿ ಅಥವಾ ನೈತಿಕವಾಗಿ ಎಷ್ಟೇ ಸಮರ್ಥನೀಯವಾಗಿದ್ದರೂ, ಅಪರಾಧಿಯಿಂದ ಪ್ರತಿಫಲವನ್ನು ಅಥವಾ ಅಪರಾಧಿಗೆ ಶಿಕ್ಷೆಯನ್ನು ವರ್ಜಿಸುತ್ತಾನೆ, ಮತ್ತು ಹೆಚ್ಚಿನ ಸಾಮರ್ಥ್ಯದಿಂದ ತಪ್ಪಿತಸ್ಥನಿಗೆ ಶುಭವನ್ನು ಬಯಸುತ್ತಾನೆ.[೧]

ಮನೋವೈಜ್ಞಾನಿಕ ಪರಿಕಲ್ಪನೆ ಮತ್ತು ಸದ್ಗುಣವಾಗಿ, ಕ್ಷಮೆಯ ಪ್ರಯೋಜನಗಳನ್ನು ಧಾರ್ಮಿಕ ಚಿಂತನೆ, ಸಮಾಜ ವಿಜ್ಞಾನಗಳು ಮತ್ತು ವೈದ್ಯವಿಜ್ಞಾನದಲ್ಲಿ ಅನ್ವೇಷಿಸಲಾಗಿದೆ. ಕ್ಷಮೆಯನ್ನು ಕೇವಲ ಕ್ಷಮಿಸುವ ವ್ಯಕ್ತಿಯ ಅನುಸಾರವಾಗಿ (ತಮ್ಮನ್ನು ತಾವು ಕ್ಷಮಿಸುವುದನ್ನು ಸೇರಿದಂತೆ), ಕ್ಷಮಿಸಲ್ಪಡುವ ವ್ಯಕ್ತಿಯ ಅನುಸಾರವಾಗಿ ಅಥವಾ ಕ್ಷಮಿಸುವವನು ಹಾಗೂ ಕ್ಷಮಿಸಲ್ಪಡುವವನ ನಡುವಿನ ಸಂಬಂಧದ ಅನುಸಾರವಾಗಿ ಪರಿಗಣಿಸಬಹುದು. ಬಹುತೇಕ ಸಂದರ್ಭಗಳಲ್ಲಿ, ಕ್ಷಮೆಯನ್ನು ಪುನಃಸ್ಥಾಪನಾತ್ಮಕ ನ್ಯಾಯದ ಯಾವುದೇ ನಿರೀಕ್ಷೆಯಿಲ್ಲದೆ, ಮತ್ತು ತಪ್ಪಿತಸ್ಥನ ಕಡೆಯಿಂದ ಯಾವುದೇ ಪ್ರತಿಕ್ರಿಯೆಯ ನಿರೀಕ್ಷೆಯಿಲ್ಲದೆ ನೀಡಲಾಗುತ್ತದೆ (ಉದಾಹರಣೆಗೆ, ಒಬ್ಬನು ಮೃತ ಅಥವಾ ಸಂಪರ್ಕರಹಿತ ವ್ಯಕ್ತಿಯನ್ನು ಕ್ಷಮಿಸಬಹುದು).

ಉಲ್ಲೇಖಗಳು[ಬದಲಾಯಿಸಿ]

  1. "American Psychological Association. Forgiveness: A Sampling of Research Results." (PDF). 2006. Archived from the original (PDF) on 2011-06-26. Retrieved 2009-02-07. {{cite web}}: Unknown parameter |dead-url= ignored (help)
"https://kn.wikipedia.org/w/index.php?title=ಕ್ಷಮೆ&oldid=892627" ಇಂದ ಪಡೆಯಲ್ಪಟ್ಟಿದೆ