ವಿಷಯಕ್ಕೆ ಹೋಗು

ಪ್ರೇರಣಾ ಶ್ರೀಮಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೇರಣಾ ಶ್ರೀಮಾಲಿ ಅವರು ಜೈಪುರದ ಘರಾನಾದಲ್ಲಿ ಹಿರಿಯ ಕಥಕ್ ನರ್ತಕಿ. [] ರಾಜಸ್ಥಾನದ ಬನ್ಸ್ವಾರಾದಲ್ಲಿ ಜನಿಸಿದ ಪ್ರೇರಣಾ ಶ್ರೀಮಾಲಿ ಅವರು ಜೈಪುರದಲ್ಲಿ ಕುಂದನ್ ಲಾಲ್ ಗಂಗನಿ ಅವರಿಂದ ಕಥಕ್ ನೃತ್ಯದ ತರಬೇತಿ ಪಡೆದರು. ಮುಂದೆ ನವದೆಹಲಿಯ ಕಥಕ್ ಕೇಂದ್ರದಲ್ಲಿ ಕಂದನ್ ಲಾಲ್ ಗಂಗನಿ ಅವರ ಗರಡಿಯಲ್ಲಿ ಪಳಗಿದರು. ಹಲವಾರು ಅಂತರರಾಷ್ಟ್ರೀಯ ನೃತ್ಯ ಗೋಷ್ಠಿಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿರುವ ಪ್ರೇರಣಾ ಶ್ರೀಮಾಲಿ ಅವರು ಅನೇಕ ನಿರ್ಮಾಣಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಗಂಧರ್ವ ಮಹಾವಿದ್ಯಾಲಯ ಮತ್ತು ಶ್ರೀರಾಮ ಭಾರತೀಯ ಕಲಾ ಕೇಂದ್ರದಲ್ಲಿನ ಯುವ ನೃತ್ಯಗಾರರಿಗೆ ತರಬೇತಿ ನೀಡಿದ್ದಾರೆ. ೨೦೦೭ರಿಂದ ೨೦೦೯ರವರೆಗೆ ದೆಹಲಿಯ ಕಥಕ್ ಕೇಂದ್ರದ ದಾಖಲೆ ಸಂಗ್ರಹ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಮುಂದೆ ೨೦೧೨ರಿಂದ ೨೦೧೭ರವರೆಗೆ ನವದೆಹಲಿಯ ಕಥಕ್ ಕೇಂದ್ರದಲ್ಲಿ ಹಿರಿಯ ಗುರುಗಳಾಗಿ ಸೇವೆ ಸಲ್ಲಿಸಿರುವ ಅವರು, ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಪ್ರತಿಷ್ಠಾನದ ರಾಷ್ಟ್ರೀಯ ಏಕತಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಬಿಬಿಸಿ ನಿರ್ಮಾಣದ ದಿ ಫಾರ್ ಪೆವಿಲಿಯನ್ಸ್ ಚಲನಚಿತ್ರದಲ್ಲಿ ಅವರ ನೃತ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಕಥಕ್ ನೃತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಶ್ರೀಮತಿ ಪ್ರೇರಣಾ ಶ್ರೀಮಾಲಿ ಅವರಿಗೆ ೨೦೦೯ರ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು [] ನೀಡಿ ಗೌರವಿಸಲಾಗಿದೆ. ೨೦೨೧ರಲ್ಲಿ ಸ್ವಂತ ಸಂಸ್ಥೆ 'ಕಲಾವಾರ್ಟ್' ಪ್ರೇರಣಾ ಶ್ರೀಮಾಲಿ ಕಥಕ್ ಕೇಂದ್ರವನ್ನು ಆರಂಭಿಸಿರುವ ಅವರು, ಪ್ರಸ್ತುತ ರಾಜಸ್ಥಾನದ ಜೈಪುರದಲ್ಲಿ ನೆಲೆಸಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ೧೯೮೧ ಶೃಂಗಾರಮಣಿ ಸುರಸಿಂಗರ್ ಸಂಸದ್, ಬಾಂಬೆ
  • ೧೯೮೬ ಕಲಾಶ್ರೀ ಶ್ರೀ ಸಂಗೀತ ಭಾರತಿ, ಬಿಕಾನೆರ್
  • ೧೯೮೮ ಯುವರತ್ನ ಜೈಪುರ ಜೇಸೀಸ್, ಜೈಪುರ
  • ೧೯೮೯ ರಾಜಸ್ಥಾನ ಯುವ ರತ್ನ ರಾಜಸ್ಥಾನ ಯುವಜನ ಪ್ರವರಿತ್ತಿ ಸಮಾಜ, ಜೈಪುರ
  • ೧೯೮೯೯ ಶ್ರೀಕಾಂತ್ ವರ್ಮಾ ರಾಷ್ಟ್ರೀಯ ಪುರಸ್ಕಾರ ಭಾರತೀಯ ಕಲ್ಯಾಣ ಪರಿಷತ್, ನವದೆಹಲಿ
  • ೧೯೯೦ ಪ್ರಶಸ್ತಿ ತಾಮ್ರಪತ್ರ ರಾಜಸ್ಥಾನ ಸಮರೋಹ, ಜೈಪುರ
  • ೧೯೯೩ ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ
  • ೧೯೯೬ ಆಧಾರಶಿಲಾ ಪುರಸ್ಕಾರ ಗ್ರೂಪ್ ಆಫ್ ಜರ್ನಲಿಸ್ಟ್ಸ್, ರೈಟರ್ಸ್ ಮತ್ತು ಆರ್ಟಿಸ್ಟ್ಸ್, ದೆಹಲಿ
  • ೨೦೦೧ರ ರಾಷ್ಟ್ರೀಯ ಏಕತಾ ಪ್ರಶಸ್ತಿ ರಾಜೀವ್ ಗಾಂಧಿಯವರ 57 ನೇ ಜನ್ಮ ವಾರ್ಷಿಕೋತ್ಸವ
  • ೨೦೦೪ ರಜಾ ಪುರಸ್ಕಾರ ರಜಾ ಫೌಂಡೇಶನ್, ದೆಹಲಿ
  • ೨೦೦೮ ಕೇಶವ ಸ್ಮೃತಿ ಪ್ರಶಸ್ತಿ ಕಲಾಧರ್ಮಿ, ದೆಹಲಿ
  • ೨೦೧೦: ೧೦ವಿಮಲಾ ದೇವಿ ಸಮ್ಮಾನ್ ವಿಮಲಾ ದೇವಿ ಫೌಂಡೇಶನ್, ಅಯೋಧ್ಯೆ

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Anjana Rajan (2010-11-04). "The story so far…". The Hindu. Retrieved 2014-06-27.
  2. "List of Awardees". Sangeet Natak Akademi. Retrieved 2017-12-29.