ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ | |
---|---|
![]() | |
Born | 4 ಜೂನ್ 1980 ಹಾಸನ, ಕರ್ನಾಟಕ, ಭಾರತ |
Nationality | ಭಾರತೀಯ |
Occupation | ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ |
Years active | 2014– |
Spouse(s) | ಲಿಖಿತ |
Relatives | ಶ್ರೀ ಮುರುಳಿ |
ಪ್ರಶಾಂತ್ ನೀಲ್ (ಜನನ 4 ಜೂನ್ 1980) ರವರು ಕನ್ನಡ ಚಿತ್ರರಂಗದಲ್ಲಿ ಕೆಲಸಮಾಡುವ ಚಲನಚಿತ್ರ ನಿರ್ದೇಶಕರು. ಶ್ರೀ ಮುರುಳಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಉಗ್ರಂ ಎಂಬ ಚಲನಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಬ್ಲಾಕ್ ಬಾಸ್ಟರ್ ನಲ್ಲಿ ಹಿಟ್ ಆಗಿ ಹೊರಹೊಮ್ಮಿತು. ನಂತರ 2018ರಲ್ಲಿ ಬಿಡುಗಡೆಯಾದ ಕೆ.ಜಿ.ಎಫ್: ಅಧ್ಯಾಯ 1 ಚಿತ್ರವನ್ನು ನಿರ್ದೇಶಿಸಿದರು. ಈ ಚಲನಚಿತ್ರವನ್ನು ಕನ್ನಡ ಭಾಷೆ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಡಬ್ ಮಾಡಿದ್ದಾರೆ.
ವೃತ್ತಿ ಜೀವನ[ಬದಲಾಯಿಸಿ]
ನೀಲ್ ರವರು ೪ ಜೂನ್ ೧೯೮೦ರಲ್ಲಿ ಹಾಸನದಲ್ಲಿ ಜನಿಸಿದರು. ನೀಲ್ ಅವರು ಚಲನಚಿತ್ರ ನಿರ್ದೇಶನದಲ್ಲಿ ತರಬೇತಿ ಪಡೆದಿದ್ದರು. ಶ್ರೀಮುರುಳಿ ಮತ್ತು ಹರಿಪ್ರಿಯಾ ನಟಿಸಿರುವ ಉಗ್ರಂ ಎಂಬ ಆಕ್ಷನ್ ಚಲನಚಿತ್ರವನ್ನು ನಿರ್ದೇಶಿಸಿದರು.[೧] ಈ ಚಲನಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಿತು. ನಂತರ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿರುವ ಕೆ.ಜಿ.ಎಫ್: ಅಧ್ಯಾಯ 1 ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.[೨] ೨೦೧೮ರಲ್ಲಿ ತೆರೆಗೆ ಬಂದ ಈ ಚಲನಚಿತ್ರ ಒಂದೇ ಸಮಯದಲ್ಲಿ ಐದು ಭಾಷೆಯಲ್ಲಿ ಬಿಡುಗೊಡೆಗೊಂಡಿದೆ. ಅವರ ಮುಂದಿನ ಚಲನಚಿತ್ರ ಕೆ.ಜಿ.ಎಫ್ ಅಧ್ಯಾಯ-೨.
ಫಿಲ್ಮೋಗ್ರಾಫಿ[ಬದಲಾಯಿಸಿ]
ವರ್ಷ | ಶೀರ್ಷಿಕೆ | ಟಿಪ್ಪಣಿ |
---|---|---|
2014 | ಉಗ್ರಂ | ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ, ಬ್ಲಾಕ್ ಬಾಸ್ಟರ್. |
2018 | ಕೆ.ಜಿ.ಎಫ್: ಅಧ್ಯಾಯ 1 [೩] | ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ, ಬ್ಲಾಕ್ ಬಾಸ್ಟರ್. |
2020 | ಕೆ.ಜಿ.ಎಫ್: ಅಧ್ಯಾಯ 2[೪] | ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ |
2021 | ಉಗ್ರಂ ವೀರಂ[೫] | ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ |
ಪ್ರಶಸ್ತಿ ಮತ್ತು ನಾಮನಿರ್ದೇಶನ[ಬದಲಾಯಿಸಿ]
ವರ್ಷ | ಅವಾರ್ಡ್ | ವರ್ಗ | ಚಲನಚಿತ್ರ | ಫಲಿತಾಂಶ |
---|---|---|---|---|
2015 | ಫಿಲ್ಮಫೇರ್ | ಅತ್ಯುತ್ತಮ ನಿರ್ದೇಶಕ | ಉಗ್ರಂ | ಗೆಲುವು |
ಸೈಮ | ಅತ್ಯುತ್ತಮ ಡೆಬ್ಯೂಟಂಟ್ ಡೈರೆಕ್ಟರ್ | ಗೆಲುವು | ||
2018 | ಫಿಲ್ಮಿಬೀಟ್ ಅವಾರ್ಡ್ | ಅತ್ಯುತ್ತಮ ನಿರ್ದೇಶಕ | ಕೆ.ಜಿ.ಎಫ್: ಅಧ್ಯಾಯ 1 | ಗೆಲುವು |
2019 | ಸಿಟಿ ಸೈನ್ ಅವಾರ್ಡ್ | ಗೆಲುವು | ||
ಜೀ ಕನ್ನಡ ಹೆಮ್ಮೆಯ ಕನ್ನಡಿಗ | ಗೆಲುವು | |||
ಸೈಮ | ಗೆಲುವು |
ಉಲ್ಲೇಖಗಳು[ಬದಲಾಯಿಸಿ]
- ↑ "I now have a team that decides the work I should do: Srimurali - Times of India". The Times of India. Retrieved 1 January 2020.
- ↑ "KGF director Prashanth Neel on working with Yash, film's core idea, and sequel plans- Entertainment News, Firstpost". Firstpost. 22 December 2018. Retrieved 1 January 2020.
- ↑ "KGF: Chapter 1 — Yash, director Prashanth Neel on their upcoming film, and taking cues from SS Rajamouli- Entertainment News, Firstpost". Firstpost. 16 December 2018. Retrieved 1 January 2020.
- ↑ "'KGF Chapter-2': Team commences the shoot in Cyanide hills - Times of India". The Times of India. Retrieved 1 January 2020.
- ↑ "'Ugramm Veeram' a sequel to 'Ugramm'? - Times of India". The Times of India. Retrieved 1 January 2020.